ದೇವರಹಿಪ್ಪರಗಿ: ರಾಷ್ಟಿçÃಯ ಪಕ್ಷಗಳಿಂದ ಜನಸಾಮಾನ್ಯರು ಬೇಸತ್ತು ಹೋಗಿದ್ದು, ಈ ಸಲ ಕನ್ನಡಿಗರ ಪಕ್ಷ ಜೆಡಿಎಸ್‌ಗೆ ಅಧಿಕಾರ ನೀಡಲಿದ್ದು, ನನಗೆ ಬೆಂಬಲಿಸಿ ಆಶೀರ್ವಾದ ಮಾಡಬೇಕೆಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮನವಿ ಮಾಡಿದರು.
ದೇವರಹಿಪ್ಪರಗಿ ಮತಕ್ಷೇತ್ರದ ಕೆರುಟಗಿ, ಕುದರಗೊಂಡ, ತಿಳಗೂಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಅನುಕಂಪದ ಅಲೆ ಈ ಸಲ ಹೆಚ್ಚಾಗಿದ್ದು, ಮತದಾರ ಪ್ರಭುಗಳು ಸ್ವಯಂಪ್ರೇರಿತರಾಗಿ ಕೈಯಿಂದ ಖರ್ಚು ಮಾಡಿಕೊಂಡು ನನ್ನ ಪ್ರಚಾರ ಮಾಡುತ್ತಿದ್ದಾರೆ. ಈ ಋಣ ತೀರಿಸಲು ಸಾಧ್ಯವಿಲ್ಲ. ಕಳೆದೆರಡು ವಿಧಾನಸಭಾ ಚುನಾವಣೆಯಲ್ಲಿ ಪರಾಭಗೊಂಡರೂ ನಿಮ್ಮ ಮನೆ ಮಗನಾಗಿ ಸೇವೆ ಸಲ್ಲಿಸಿದ್ದೇನೆ.ಹಗಲು ರಾತ್ರಿ ಕಾಲಿಗೆ ಚಕ್ರ ಕಟ್ಟಿಕೊಂಡವರAತೆ ಸಂಚರಿಸಿ ತಮ್ಮ ಅನುವುತನುವುನಲ್ಲಿ ಭಾಗವಹಿಸಿದ್ದೇನೆ ಎಂಬ ತೃಪ್ತಿ ನನಗಿದೆ. ಅದಕ್ಕಾಗಿಯೇ ಇಂತಹ ಚುನಾವಣಾ ಸಮಯದಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಅದ್ಧೂರಿ ಸ್ವಾಗತ ನೀಡಿ ಗೌರವಿಸುತ್ತಿರುವುದು ನೋಡಿದರೆ ಯಾವ ಜನ್ಮದ ಪುಣ್ಯವೋ ಎನ್ನುವಂತಾಗಿದೆ. ಎಲ್ಲ ಸಮಾಜದವರು ಸಮಾನ ದೃಷ್ಠಿಯಿಂದ ಕಂಡು ನನಗೆ ಅಭಯ ಹಸ್ತ ನೀಡುತ್ತಿದ್ದಾರೆ. ಯಾವುದೇ ಜಾತಿ ಮತ ಪಂಥ ಆಮೀಷಗಳಿಗೆ ಬಲಿಯಾಗದೆ ಕನ್ನಡಿಗರ ಸ್ವಾಭಿಮಾನದ ಜೆಡಿಎಸ್ ಗೆಲ್ಲಿಸಲು ಶ್ರಮಿಸಬೇಕು. ಕುಮಾರಸ್ವಾಮಿಯವರು ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದು, ಪ್ರತಿ ಮನೆಯ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದಾರೆ. ಈ ರಾಜ್ಯದಲ್ಲಿ ಬ್ರಷ್ಟಾಚಾರ ರಹಿತ ಸುಭದ್ರ ಆಡಳಿತಕ್ಕಾಗಿ ಜೆಡಿಎಸ್ ಬೆಂಬಲಿಸಬೇಕು. ಅದರಂತೆ ಕ್ಷೇತ್ರದಲ್ಲಿ ನನಗೆ ಬೆಂಬಲ ನೀಡಿ ಆಶಿರ್ವದಿಸಬೇಕೆಂದು ಮನವಿ ಮಾಡಿದರು.
ಇದಕ್ಕೂ ಮುಂಚೆ ಗ್ರಾಮದಲ್ಲಿ ಪ್ರವೇಶವಾದ ತಕ್ಷಣ ವಿವಿಧ ವಾಧ್ಯ ವೈಭವಗಳೊಂದಿಗೆ ಸುಮಂಗಲೆಯರು ಆರತಿ ಬೆಳಗಿ ಭರಮಾಡಿಕೊಂಡರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾರರನ್ನು ಮನವಿ ಮಾಡಿಕೊಳ್ಳಲಾಯಿತು.
ಜೆಡಿಎಸ್ ಅಧ್ಯಕ್ಷ ಸಾಯಬಣ್ಣ ಬಾಗೇವಾಡಿ, ಪ್ರಮುಖರಾದ ಸಂಗನಗೌಡ ಬಿರಾದಾರ, ನಿತ್ಯಾನಂದ ಕತ್ತಿ, ಆಕಾಶ ಬೂದಿಹಾಳ, ಬಸವರಾಜ ಕುಂಬಾರ, ನವನಾಥ ರಾಠೋಡ, ದೇವಪ್ಪ ದೊಡಮನಿ, ಉಮೇಶ ಇಂಗಳಗಿ, ಸಿದ್ದು ಬಿರಾದಾರ ಶರಣು ಡೋಣೂರ ಸೇರಿದಂತೆ ಜೆಡಿಎಸ್ ಪದಾಧಿಕಾರಿಗಳು, ಕಾರ್ಯಕರ್ತರು ಸಾರ್ವಜನಿಕರು ಪಾಲ್ಗೊಂಡಿದ್ದರು
ಕನ್ನಡಿಗರ ಪಕ್ಷ ಜೆಡಿಎಸ್ ಗೆ ಈ ಬಾರಿ ಅಧಿಕಾರ ನೀಡಿ :ರಾಜುಗೌಡ
Related Posts
Add A Comment