ಬಸವನಬಾಗೇವಾಡಿ: ಪಟ್ಟಣದ ಓಂ ನಗರ, ಗೌರಿ-ಶಂಕರ ದೇವಸ್ಥಾನ, ಮಹಾರಾಜರ ಮಠ, ವಿವೇಕಾನಂದ ಗಲ್ಲಿ, ಅಗಸಿ ಒಳಗಡೆ, ಹಳೆಪಲ್ಲೇದ ಕಟ್ಟಿ, ಗುರ್ಜಿ ಕಟ್ಟಿ ಸೇರಿದಂತೆ ವಿವಿಧೆಡೆ ಬುಧವಾರ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಶಿವಾನಂದ ಪಾಟೀಲ ಪರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಮತಯಾಚಿಸಿದರು.
ಶಾಸಕ ಶಿವಾನಂದ ಪಾಟೀಲರು ಕಳೆದ ಒಂದು ದಶಕದ ಅವಧಿಯಲ್ಲಿ ಮತಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ, ಪಟ್ಟಣದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ, ಸಿದ್ದರಾಮಯ್ಯ ಸರ್ಕಾರದ ಅವಽಯಲ್ಲಿ ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಸೇರಿದಂತೆ ಕಾಂಗ್ರೆಸ್ ಸರ್ಕಾರ ಮಾಡಿರುವ ಜನಪರ ಯೋಜನೆಗಳ ಬಗ್ಗೆ ಮತಬಾಂಧವರಿಗೆ ತಿಳಿಸುವ ಜೊತೆಗೆ ಮತಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಶಿವಾನಂದ ಪಾಟೀಲರಿಗೆ ಮತ ನೀಡುವಂತೆ ಮುಖಂಡರು ಮನವಿ ಮಾಡಿಕೊಂಡರು.
ಮತ ಯಾಚನೆಯಲ್ಲಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಮುಖಂಡರಾದ ಸುಭಾಸ ಚಿಕ್ಕೊಂಡ, ಸಂಗಯ್ಯ ಕಾಳಹಸ್ತೇಶ್ವರಮಠ, ಶಂಕರಗೌಡ ಬಿರಾದಾರ, ವಿಶ್ವನಾಥ ಹಾರಿವಾಳ,ಎಂ.ಜಿ.ಆದಿಗೊಂಡ, ಜಟ್ಟಿಂಗರಾಯ ಮಾಲಗಾರ, ಅಜೀಜ ಬಾಗವಾನ, ಉದಯಕುಮಾರ ಮಾಂಗಲೇಕರ, ಬಸವರಾಜ ರಾಯಗೊಂಡ, ವಿಶ್ವನಾಥ ನಿಡಗುಂದಿ, ಶೇಖರಗೌಡ ಪಾಟೀಲ, ಸಂಕನಗೌಡ ಪಾಟೀಲ, ಮಹಾಂತೇಶ ಹಂಜಗಿ, ಭದ್ರು ಮಣ್ಣೂರ, ಬಸವರಾಜ ಚೌರಿ, ಅಪ್ಪು ವಾಡೇದ, ಸಂಜೀವ ಕಲ್ಯಾಣಿ, ಮುದುಕು ಬಸರಕೋಡ, ಮೀರಾಸಾಬ ಕೊರಬು, ಮಹಾಂತೇಶ ಸಾಸಾಬಾಳ, ಮಹೇಶ ಬೆಕಿನಾಳ,ಪ್ರವೀಣ ಪೂಜಾರಿ, ಅನಿಲ ಪವಾರ,ತಮ್ಮಣ್ಣ ಕಾನಾಗಡ್ಡಿ, ವಿದ್ಯಾನಂದ ಹಿರೇಮಠ, ಸಂಗಣ್ಣ ಕೊಟ್ರಶೆಟ್ಟಿ, ಜಗದೇವಿ ಗುಂಡಳ್ಳಿ, ಜ್ಯೋತಿ ಕುಂಬಾರ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment