Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೇ.೧೩ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-೨ ಅನ್ನು ಜಿಲ್ಲೆಯ ೦೫ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷಾ ಕೇಂದ್ರಗಳ ೨೦೦ ಮೀ.ವ್ಯಾಪ್ತಿಯಲ್ಲಿನ ಝರಾಕ್ಸ ಅಂಗಡಿಗಳು, ಕಂಪ್ಯೂಟರ್ ಸೆಂಟರ್, ಸೈಬರ್ ಕೆಫೆಗಳು, ಕೋಚಿಂಗ್ ಕೇಂದ್ರಗಳು ಬೆಳಿಗ್ಗೆ ೮ ಗಂಟೆಯಿಂದ ಪರೀಕ್ಷೆ ಮುಕ್ತಾಯವಾಗುವವರೆಗೆ ತೆರೆಯದಂತೆ ಆದೇಶಿಸಿದೆ. ಪರೀಕ್ಷೆಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಇತರರು ಮೊಬೈಲ್ ಫೋನ್ ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Read More

ಆಕ್ಷೇಪಣೆ ಸಲ್ಲಿಸುವ ಅವಧಿ ಮೇ ೮ ರವರೆಗೆ ವಿಸ್ತರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯ ಸ್ಥಾನಗಳನ್ನು ಪ್ರಕರಣ ೫(೧) ರಂತೆ ನಿಗದಿಪಡಿಸಿ ದಿನಾಂಕ:೧೮-೦೪-೨೦೨೬ ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಹೊರಡಿಸಲಾದ ಕರಡು ಪ್ರಕಟಣೆಗೆ ಸಾರ್ವಜನಿಕರು ಆಕ್ಷೇಪಣೆಯನ್ನು ಸಲ್ಲಿಸುವ ಅವಧಿಯನ್ನು ಮೇ ೮ರಂದು ಸಂಜೆ ೫:೩೦ ಗಂಟೆಯವರೆಗೆ ವಿಸ್ತರಿಸಲಾಗಿದೆ.ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆಯ ಕುರಿತಂತೆ, ಸ್ವೀಕರಿಸಿದ ಆಕ್ಷೇಪಣೆ, ಅಹವಾಲುಗಳ ಅದಾಲತ್ ಮೇ ೧೩ರಂದು ಮಧ್ಯಾಹ್ನ ೨:೩೦ ರಿಂದ ಸಂಜೆ ೫ ರವರೆಗೆ ಬೆಂಗಳೂರಿನ ಬಹುಮಹಡಿಗಳ ಕಟ್ಟಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗೇಟ್-ನಂ-೨, ಎರಡನೇ ಮಹಡಿಯಲ್ಲಿ ನಡೆಯಲಿದೆ.ಜಿಲ್ಲೆಯ ಸಾರ್ವಜನಿಕರು ಈ ಅದಾಲತ್ ನಲ್ಲಿ ಭಾಗವಹಿಸಬಹುದಾಗಿದೆ. ಆಕ್ಷೇಪಣೆ ಮತ್ತು ಅಹವಾಲುಗಳನ್ನು ಸಲ್ಲಿಸಿದವರು ಅದಾಲತ್ ನಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ, ತಮ್ಮ ಆಧಾರ್, ಗುರುತಿನ ಚೀಟಿ ಅಥವಾ ಸರ್ಕಾರದಿಂದ ನೀಡಿರುವ ಭಾವಚಿತ್ರವುಳ್ಳ ಯಾವುದೇ ಗುರುತಿನ ಚೀಟಿಯ ಪ್ರತಿಯೊಂದಿಗೆ ಹಾಜರಾಗಬಹುದಾಗಿದೆ ಎಂದು ಪಂಚಾಯತ್ ರಾಜ್ ಇಲಾಖೆ ಪ್ರಕಟಣೆ ಹೊರಡಿಸಿದೆ ಎಂದು…

Read More

ಉದಯರಶ್ಮಿ ದಿನಪತ್ರಿಕೆ ಅಥಣಿ: ಪಟ್ಟಣದ ಅಥಣಿ ಗೋಕಾಕ ರಸ್ತೆಯಲ್ಲಿರುವ ನಿಮ್ರಾ ಮಸೀದಿ ಹಾಗೂ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ನೂತನವಾಗಿ ವೈನ್ಸ್ ಮತ್ತು ಬಾರ್ ಆರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಇದಕ್ಕೆ ಅಂಜುಮನ್ ಸಂಸ್ಥೆ ಹಾಗೂ ಮುಸ್ಲಿಂ ಸಮಾಜದ ಬಾಂಧವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಬಾರದೆಂದು ಆಗ್ರಹಿಸಿ ತಹಸೀಲ್ದಾರ್, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.ಮದ್ಯದ ಅಂಗಡಿ ಅಥವಾ ಎಂ.ಎಸ್.ಐ.ಎಲ್ ಸ್ಥಾಪನೆಗೆ ಅಬಕಾರಿ ನಿಯಮಗಳ ಪ್ರಕಾರ ವಸತಿ ಪ್ರದೇಶ, ಧಾರ್ಮಿಕ ಸ್ಥಳ, ಆಸ್ಪತ್ರೆ ಹಾಗೂ ಶಾಲೆಗಳಿಂದ ಕನಿಷ್ಠ ೧೦೦ ಮೀಟರ್ ದೂರವಿರಬೇಕು. ಅಲ್ಲದೆ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ರಾಜ್ಯ ಹೆದ್ದಾರಿಯಿಂದಲೂ ನಿಗದಿತ ದೂರ ಕಾಯ್ದುಕೊಳ್ಳುವುದು ಕಡ್ಡಾಯ. ಆದರೆ, ಈಗ ಉದ್ದೇಶಿತ ಮದ್ಯದ ಅಂಗಡಿಯು ನಿಮ್ರಾ ಮಸೀದಿಯ ತೀರ ಹತ್ತಿರದಲ್ಲಿದ್ದು, ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದೆ. ಇದರ ಸುತ್ತಮುತ್ತ ದಟ್ಟವಾದ ವಸತಿ ಪ್ರದೇಶ ಹಾಗೂ ಶಾದಿ ಮಹಲ ಇರುವುದರಿಂದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.ಈ ಭಾಗದಲ್ಲಿ ಮದ್ಯದ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಸಿದ್ದನಾಥ ಗ್ರಾಮದಲ್ಲಿ ರೇಬೀಸ್ ಕಾಯಿಲೆಗೆ ತುತ್ತಾಗಿ 16 ವರ್ಷದ ಬಾಲಕ ಮೃತಪಟ್ಟ ಘಟನೆ ಸಂಭವಿಸಿದೆ.ಮೃತ ಬಾಲಕನನ್ನು ಅಪ್ಪು ದರಿಯಪ್ಪ ಕೋಳಮಲಿ ಎಂದು ಗುರುತಿಸಲಾಗಿದೆ.ಎರಡು ತಿಂಗಳ ಹಿಂದೆ ಅಪ್ಪುಗೆ ನಾಯಿ ಕಚ್ಚಿ ಕಾಲಿಗೆ ಗಾಯವಾಗಿತ್ತು. ಆದರೆ ಇಂಜಕ್ಷನ್‌ಗೆ ಹೆದರಿ ರೇಬೀಸ್ ಲಸಿಕೆ ಪಡೆಯಲಿಲ್ಲ. ಪಾಲಕರು ಸಹ ಸೂಕ್ತ ಗಮನ ಹರಿಸದೆ ಇರುವುದರಿಂದ ಸೋಂಕು ತೀವ್ರವಾಗಿ, ಕೊನೆಗೆ ಬಾಲಕನ ಸಾವಿಗೆ ಕಾರಣವಾಯಿತು ಎಂದು ತಿಳಿದುಬಂದಿದೆ.

Read More

ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ರಿಂದ ಎಂ.ಬಿ.ಬಿ.ಎಸ್ ಕಲಿಕೆಗೆ ಹಣಕಾಸು ನೆರವು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಆರ್ಥಿಕ ಸಮಸ್ಯೆಯಿಂದಾಗಿ ಸಂಕಷ್ಟದಲ್ಲಿದ್ದ ಇಬ್ಬರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಹಣಕಾಸು ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.ಶನಿವಾರ ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಇಬ್ಬರು ವಿದ್ಯಾರ್ಥಿಗಳಾದ ಆಲಮೇಲದ ವಿದ್ಯಾರ್ಥಿ ಉದಯಕುಮಾರ ನಾರಾಯಣಕರ ಮತ್ತು ರತ್ನಾಪುರದ ಮನೋಹರ ಹರಗೆ ಅವರ ಎಂ.ಬಿ.ಬಿ.ಎಸ್ ಕೋರ್ಸಿನ ಬೋಧನಾ ಶುಲ್ಕ, ಊಟ ಮತ್ತು ವಸತಿ (ಹಾಸ್ಟೇಲ್ ಮತ್ತು ಮೆಸ್)ಕ್ಕೆ ಅಗತ್ಯವಾಗಿರುವ ಹಣದ ಚೆಕ್ ನ್ನು ಸಚಿವರು ವಿತರಿಸಿದರು.ಬಳಿಕ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಶ್ರಮವಹಿಸಿ, ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ಶಿಕ್ಷಣಕ್ಕೆ ಅಗತ್ಯವಾಗಿರುವ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ಇದನ್ನು ಸದ್ಬಳಕೆ…

Read More

ಚಡಚಣದ ಎಸ್.ಬಿ.ಐ. ಬ್ಯಾಂಕ್ ದರೋಡೆ ಪ್ರಕರಣ | ಶನಿವಾರದ ಬ್ಯಾಂಕ್ ವಹಿವಾಟು ಸ್ಥಗಿತ | ಚಿನ್ನ ಅಥವಾ ಹಣ ಈವರೆಗೆ ಮರಳಿ ನೀಡದ್ದಕ್ಕೆ ಸ್ಥಳೀಯರ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಚಡಚಣ: ಕಳೆದ ವರ್ಷ ಸೆ.16ರಂದು ಇಡಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಸ್ಥಳೀಯ ಎಸ್.ಬಿ.ಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕನಲ್ಲಿ ಚಿನ್ನ ಅಡವು ಇಟ್ಟ ಗ್ರಾಹಕರಿಗೆ ಬ್ಯಾಂಕ್ ಇದುವರೆಗೆ ಯಾವದೇ ರೀತಿಯ ಚಿನ್ನ ಅಥವಾ ಹಣ ಮರಳಿ ನೀಡದೇ ಇರುವ ಹಿನ್ನಲೆಯಲ್ಲಿ ದಿನಂಪ್ರತಿ ಬ್ಯಾಂಕ್ಗೆ ಅಲೆದಾಟ ನಡೆಸಿ ರೋಷಹೋದ ಗ್ರಾಹಕರು, ಶನಿವಾರ ಬೆಳಗ್ಗೆ 11:30ರ ಸುಮಾರಿಗೆ ಬ್ಯಾಂಕ್ಗೆ ಮುತ್ತಿಗೆ ಹಾಕಿ ಬ್ಯಾಂಕ್ ಬಂದ್ ಮಾಡಿದ ಘಟನೆ ನಡೆದಿದೆ.ಬೆಳಿಗ್ಗೆ ಬ್ಯಾಂಕ್‌ಗೆ ಬಂದ ಗ್ರಾಹಕ ಆರ್.ಕೆ.ಭೈರಗೊಂಡ ತಾವು ಅಡವು ಇಟ್ಟ ಚಿನ್ನದ ಕುರಿತು ಶಾಖಾ ವ್ಯವಸ್ಥಾಪಕರಿಗೆ ವಿಚಾರಿಸಿದಾಗ ವ್ಯವಸ್ಥಾಪಕ ಸರಿಯಾದ ಮಾಹಿತಿ ನೀಡದ ಕಾರಣ ಅಲ್ಲಿ ಇದ್ದ ಎಲ್ಲ ಗ್ರಾಹಕರು ಬ್ಯಾಂಕ್ ಬಂದ ಮಾಡಿಸಿ, ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.ನಂತರ ಸ್ಥಳಕ್ಕಾಗಮಿಸಿದ ಚಡಚಣ ಪಿ.ಎಸ್.ಐ.…

Read More

ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಇದೇ ದಿ.೮ ರಂದು ದರಬಾರ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ರೈತ ಜನಜಾಗೃತಿ ಸಮಾವೇಶ ಸಂಘಟಿಸಲಾಗಿದ್ದು, ಆಲಮಟ್ಟಿಯ ಲಾಲ್ ಬಹೂದ್ದೂರ ಶಾಸ್ತ್ರಿ ಆಣೆಕಟ್ಟನ್ನು ೫೧೯.೬೦ ಮೀಟರ ದಿಂದ ೫೨೪.೨೫೬ ಮೀಟರ್ ಕ್ಕೆ ಎತ್ತರಿಸಿ ಅದಕ್ಕೆ ಬೇಕಾಗುವ ಸಂಪೂರ್ಣ ಭೂ ಪರಿಹಾರ, ಪುರ್ನವಸತಿ, ಕಲ್ಪಿಸಿ ೫ ಜಿಲ್ಲೆಗಳಿಗೆ ಸಮಗ್ರ ನೀರಾವರಿ ಮಾಡುವುದು ಹಾಗೂ ಮುಳವಾಡ ಸೇರಿದಂತೆ ವಿವಿಧ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ಅನೇಕ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಈ ನಾಡಿನಲ್ಲಿ ರೈತರಿಗೆ ಎಲ್ಲಾ ಕ್ಷೇತ್ರದಲ್ಲಿ ಎಲ್ಲಾ ಪ್ರಕಾರದ ಅನ್ಯಾಯಗಳಾಗುತ್ತಾ ಬಂದಿವೆ, ಅದನ್ನು ತಡೆಯಬೇಕಾದರೆ ರೈತರೆಲ್ಲರೂ ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಗುರ್ಲಾಪುರದಲ್ಲಿ ನಡೆದ ಹೋರಾಟದ ಮೂಲಕ…

Read More

ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಪಿ.ರಾಜೀವ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಿತ್ರದುರ್ಗದಲ್ಲಿ ನಡೆಯಲಿರುವ ಮೇ.೯ ರಂದು ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವದಲ್ಲಿ ವಿಜಯಪುರ ಜಿಲ್ಲೆಯಿಂದ ೧೮ ರಿಂದ ೨೦ ಸಾವಿರ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಪಿ. ರಾಜೀವ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ವಿಷಯಕ್ಕೆ ಹೋರಾಟ ಮಾಡಿದರೂ ಅಧಿಕಾರ ದೊರಕಿದಾಗ ಆ ಹೋರಾಟದ ಆಶಯಗಳನ್ನು ಈಡೇರಿಸುವ ಮೂಲಕ ಧೀಮಂತವಾಗಿ ಆಡಳಿತ ನಡೆಸಿದ ಮಹಾನ್ ನೇತಾರ ಬಿ.ಎಸ್. ಯಡಿಯೂರಪ್ಪ, ಅವರು ನಾಡು ಕಂಡ ಶ್ರೇಷ್ಠ ಹೋರಾಟಗಾರ, ಹೀಗಾಗಿ ಅವರನ್ನು ಹೃದಯಸ್ಪರ್ಶಿಯಾಗಿ ಅಭಿನಂದಿಸುವ ದೃಷ್ಟಿಯಿಂದ ಅಭಿಮಾನಿಗಳೆಲ್ಲರೂ ಸೇರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮನೋತ್ಸವ ಹೆಸರಿನಲ್ಲಿ ಚಿತ್ರದುರ್ಗದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ, ವಿಜಯಪುರ ಜಿಲ್ಲೆಯಿಂದಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು, ಈ ಹಿನ್ನೆಲೆಯಲ್ಲಿ ಎಲ್ಲ ಮತಕ್ಷೇತ್ರಗಳ ಪ್ರಮುಖರ ಸಭೆ ನಡೆಸಲಾಗಿದ್ದು, ವಿಜಯಪುರ ಜಿಲ್ಲೆಯಿಂದ ೨೦ ಸಾವಿರ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ರಾಜೀವ ತಿಳಿಸಿದರು.ಭಾಗ್ಯ ಲಕ್ಷ್ಮಿ, ಮಕ್ಕಳಿಗೆ…

Read More

ಲೇಖನ.- ಡಾ ಶಶಿಕಾಂತ ಪಟ್ಟಣರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ 12ನೇ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣನವರು ಸಾರಿದ ಬಸವ ತತ್ವವು ಮಾನವೀಯತೆ, ಸಮಾನತೆ ಮತ್ತು ಕಾಯಕ ನಿಷ್ಠೆಯ ಮೇಲೆ ನಿಂತಿದೆ. ಇದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ, ಇಡೀ ಮನುಕುಲಕ್ಕೆ ಅನ್ವಯಿಸುವ ಜೀವನ ಮಾರ್ಗವಾಗಿದೆ. ಇಂತಹ ಅಪೂರ್ವವಾದ ಸಮಾನತೆಯ ಆಂದೋಲನವನ್ನು ಮುಂದಿನ ಜನಾಂಗಕ್ಕೆ ಒಯ್ದ ಕೆಲವೇ ಕೆಲವು ಶಿವಯೋಗ ಸಾಧಕರಲ್ಲಿ ಸಜ್ಜಲ ಗುಡ್ಡದ ಶರಣಮ್ಮ.ಸಜ್ಜಲಗುಡ್ಡದ ಶರಣಮ್ಮನವರು (ಕ್ರಿ.ಶ. 1878- 1981) ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಸಜ್ಜಲಗುಡ್ಡದಲ್ಲಿ ನೆಲೆಸಿದ್ದ ಒಬ್ಬ ಶ್ರೇಷ್ಠ ಶಿವಶರಣೆ ಮತ್ತು ಮಹಿಳಾ ಸಂತರು. ಇವರನ್ನು ಭಕ್ತರು ಶ್ರದ್ಧಾಭಕ್ತಿಯಿಂದ “ಸಜ್ಜಲಶ್ರೀ ಶರಣಮ್ಮ ತಾಯಿ” ಎಂದು ಕರೆಯುತ್ತಾರೆ.ಜೀವನದ ಹಿನ್ನೆಲೆ ಜನ್ಮ: ಇವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಲಿಂಗಣ್ಣ ಮತ್ತು ಲಿಂಗಮ್ಮ ಹಾಲುಮತದ ದಂಪತಿಗಳ ಮಗಳಾಗಿ ಜನಿಸಿದರು.ಮೂಲ ಹೆಸರು: ಇವರ ಬಾಲ್ಯದ ಹೆಸರು ಯಮುನಮ್ಮ.ವೈರಾಗ್ಯ: ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು, ಬಡತನ…

Read More

ಲೇಖನ.- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮನದ ಮನ್ಮಥನಿಗೆಇಬ್ಬರೂ ಕೂಡಿ ಕಳೆದ ಆ ಕ್ಷಣಗಳು ನನ್ನ ಪಾಲಿನ ಅಮೂಲ್ಯ ಆಸ್ತಿ. ಸವಿ ನೆನಪುಗಳ ಸುಳಿಯಲ್ಲಿ ಸಿಲುಕಿ ಮನಸ್ಸು ಇಂದು ಅಕ್ಷರಗಳ ರೂಪದಲ್ಲಿ ನಿನಗೆ ಸನಿಹವಾಗಲು ಬಯಸುತ್ತಿದೆ. ಈ ಪತ್ರದ ಪ್ರತಿಯೊಂದು ಸಾಲು ನನ್ನ ಹೃದಯ ಬಡಿತವ ಮಿಡಿತವ ಹೇಳುತಿವೆ. ಇದು ನಿನಗಾಗಿ ಮಿಡಿಯುವ ಎದೆಯ ಪಿಸುಮಾತುತುಂಟಾಟದಲ್ಲಿ ನಿನ್ನ ತುಂಟ ನಗುವಿನ ಅಲೆಗಳು ನನ್ನ ಹೃದಯದ ವೀಣೆಯನ್ನು ಮೇಲಿಂದ ಮೇಲೆ ಮೀಟದೇ ಇರುತ್ತಿರಲಿಲ್ಲ. ನೀನಾಡುತ್ತಿದ್ದ ಕವಿ ಮಾತುಗಳು ಹೃದಯದ ದಡಕ್ಕೆ ಅಲೆಗಳಂತೆ ಅಪ್ಪಳಿಸುವುದನ್ನು ನನ್ನಿಂದ ಮರೆಯಲು ಸಾಧ್ಯವಾಗುತ್ತಿಲ್ಲ. ಈರ್ವರೂ ಹುಡುಗಾಟದಿಂದ ಒಬ್ಬರಿಗೊಬ್ಬರು ಕಾಲೆಳೆಯುತ್ತ ಕಳೆದ ಸಂತೋಷ ವಿವರಿಸಲು ಪದಗಳೇ ಸಿಗುತ್ತಿಲ್ಲ. ಹಗಲಿನ ಪ್ರತಿ ಕ್ಷಣದಲ್ಲೂ ನೀನೇ ಆವರಿಸಿರುವೆ. ರಾತ್ರಿ ಹಾಸಿಗೆಗೆ ಹೋಗಿ ಕಣ್ಮುಚ್ಚುವುದೇ ತಡ ನಿನ್ನ ಕುಡಿ ನೋಟದ ನೋಟ ಮತ್ತೆ ಮತ್ತೆ ಕಣ್ತೆರಸುತ್ತದೆ. ಕಣ್ರೆಪ್ಪೆಗಳನ್ನು ಅಂಟಿಸದAತೆ ಕಾಡುತ್ತದೆ. ಆ ನಿನ್ನ ಕಾಂತಿ ತುಂಬಿದ ಕಂಗಳಲ್ಲಿ ನನ್ನ ಪ್ರಪಂಚವನ್ನು ಕಂಡುಕೊಂಡಿರುವೆ.…

Read More