ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಸಿದ್ದನಾಥ ಗ್ರಾಮದಲ್ಲಿ ರೇಬೀಸ್ ಕಾಯಿಲೆಗೆ ತುತ್ತಾಗಿ 16 ವರ್ಷದ ಬಾಲಕ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತ ಬಾಲಕನನ್ನು ಅಪ್ಪು ದರಿಯಪ್ಪ ಕೋಳಮಲಿ ಎಂದು ಗುರುತಿಸಲಾಗಿದೆ.
ಎರಡು ತಿಂಗಳ ಹಿಂದೆ ಅಪ್ಪುಗೆ ನಾಯಿ ಕಚ್ಚಿ ಕಾಲಿಗೆ ಗಾಯವಾಗಿತ್ತು. ಆದರೆ ಇಂಜಕ್ಷನ್‌ಗೆ ಹೆದರಿ ರೇಬೀಸ್ ಲಸಿಕೆ ಪಡೆಯಲಿಲ್ಲ. ಪಾಲಕರು ಸಹ ಸೂಕ್ತ ಗಮನ ಹರಿಸದೆ ಇರುವುದರಿಂದ ಸೋಂಕು ತೀವ್ರವಾಗಿ, ಕೊನೆಗೆ ಬಾಲಕನ ಸಾವಿಗೆ ಕಾರಣವಾಯಿತು ಎಂದು ತಿಳಿದುಬಂದಿದೆ.

