Author: editor.udayarashmi@gmail.com

ಬ್ರಹ್ಮದೇವನಮಡು: ಸಿಂದಗಿ ತಾಲೂಕು ಭೂ ನ್ಯಾಯ ಮಂಡಳಿ ನಾಮ ನಿರ್ದೇಶನ ಸದಸ್ಯರಾಗಿ ಸಾಸಾಬಾಳ ಗ್ರಾಮದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಮುದಿಗೌಡ ಭೀಮನಗೌಡ ಬಿರಾದಾರ ಅವರನ್ನು ನೇಮಕ ಮಾಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.

Read More

ವಿಜಯಪುರ: ಕರ್ನಾಟಕ ಸವಿತಾ ಸಮಾಜ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಕರ್ನಾಟಕ ಸವಿತಾ ಸಮಾಜ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ (ಹೊಸದು), ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರತಿ ಯೋಜನೆ ಹಾಗೂ ಸ್ವಯಂ ಉದ್ಯೋಗ ನೇರ ಸಾಲ (ಬ್ಯಾಂಕುಗಳ ಸಹಯೋಗದೊಂದಿಗೆ), ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದ್ದು, ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್‌ಜೀ ಜನಸ್ನೇಹಿ ಕೇಂದ್ರ ಮತ್ತು ನಾಗರಿಕರ ಸೇವಾ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟ್ಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ : ೦೩-೧೧-೨೦೨೩ ಕೊನೆಯ ದಿನವಾಗಿದೆ.ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆಯ ದಿನಾಂಕ ಇರುವುದಿಲ್ಲ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್: https://www.kssd.karnataka.gov.in ಹಾಗೂ ಸಹಾಯವಾಣಿ ಸಂಖ್ಯೆ: ೦೮೩೫೨-೨೫೮೧೨೫೮, ಮತ್ತು ಮೊ: ೮೦೫೦೭೭೦೦೦೪ ಸಂಪರ್ಕಿಸಬಹುದಾಗಿದೆ ಎಂದು…

Read More

ವಿಜಯಪುರ: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ (ಹೊಸದು), ಅರಿವು ಶೈಕ್ಷಣಿಕ ಸಾಲ ಯೋಜನೆ (ನವೀಕರಣ), ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಆರ್ಥಿಕ ನೆರವು, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಸ್ವಾವಲಂಬಿ ಸಾರತಿ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದ್ದು, ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್‌ಜೀ ಜನಸ್ನೇಹಿ ಕೇಂದ್ರ ಮತ್ತು ನಾಗರಿಕರ ಸೇವಾ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟ್ಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ : ೦೨-೧೧-೨೦೨೩ ಕೊನೆಯ ದಿನವಾಗಿದೆ. .ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆಯ ದಿನಾಂಕ ಇರುವುದಿಲ್ಲ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್: https://ambigaradevelopment.karnataka.gov.inಹಾಗೂ ಸಹಾಯವಾಣಿ ಸಂಖ್ಯೆ : ೦೮೦-೨೨೮೬೪೦೯೯, ಸಂಪರ್ಕಿಸಬಹುದಾಗಿದೆ…

Read More

ವಿಜಯಪುರ: ಕೇಂದ್ರ ಬರ ತಂಡ ಆಗಮನ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಗುರುವಾರ ಜಿಲ್ಲೆಯ ಹೊರ್ತಿ ಹಾಗೂ ಕಪನಿಂಬರಗಿ ಗ್ರಾಮಗಳಿಗೆ ಭೇಟಿ ನೀಡಿ, ಬರದಿಂದ ಹಾನಿಗೊಳಗಾದ ತೋಟಗಾರಿಕೆ ಬೆಳೆಗಳಾದ ಲಿಂಬೆ, ಈರುಳ್ಳಿ, ಮೆಣಸಿನಕಾಯಿ, ಕೃಷಿ ಬೆಳೆಗಳಾದ ಸಜ್ಜೆ, ಮೆಕ್ಕೆಜೋಳ ಬೆಳೆಗಳ ಕುರಿತು ಮಾಹಿತಿ ಪಡೆದುಕೊಂಡರು. ಕೋಳೂರಗಿ ಗ್ರಾಮದ ರೈತರೋರ್ವ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆ ಕಟಾವು ವೀಕ್ಷಿಸಿದರು.ಈ ಸಂದರ್ಭದಲ್ಲಿ ಕಪನಿಂಬರಗಿ ಕೆರೆ ವೀಕ್ಷಣೆ ಮಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಹುಲ್ ಭಾವಿದೊಡ್ಡಿ, ಕೃಷಿ ಇಲಾಖೆ ಉಪನಿರ್ದೇಶಕ ಪ್ರಕಾಶ ಚವ್ಹಾಣ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಜಯ್ ನುಡಿ – ವ್ಯಕ್ತಿತ್ವ ವಿಕಸನ ಮಾಲಿಕೆ ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ ಉಪನ್ಯಾಸಕರು, ಬೆಳಗಾವಿ ಗರ್ಭವತಿ ಜಿಂಕೆಯೊಂದು ಕಾಡಿನಲ್ಲಿ ತನ್ನ ಮಗುವಿಗೆ ಜನ್ಮ ನೀಡಲು ಸುರಕ್ಷಿತವಾದ ಸ್ಥಳವೊಂದನ್ನು ಹುಡುಕಿ ಇಟ್ಟಿತ್ತು. ಅದು ನದಿ ತೀರವಾಗಿತ್ತು. ಮತ್ತು ಮೆತ್ತನೆಯ ಹುಲ್ಲಿರುವ ಸಮತಟ್ಟಾದ ಜಾಗವಾಗಿತ್ತು. ಪ್ರಸವ ವೇದನೆ ಶುರುವಾದಾಗ ಆ ಜಾಗಕ್ಕೆ ಹೋಗುವ ಯೋಜನೆ ಹಾಕಿತ್ತು. ಅಂದುಕೊಂಡ ಶುಭ ಘಳಿಗೆ ಸನ್ನಿಹಿತವಾದಾಗ ನಿಧಾನವಾಗಿ ಹುಡುಕಿದ್ದ ಸುರಕ್ಷಿತ ಸ್ಥಳದತ್ತ ಹೆಜ್ಜೆ ಹಾಕಿತು. ಆ ಸ್ಥಳಕ್ಕೆ ಮುಟ್ಟುವಷ್ಟರಲ್ಲಿ ಜಿಂಕೆಗೆ ಪ್ರಸವ ವೇದನೆ ತಾಳದಾಯಿತು. ಅದೇ ಕ್ಷಣಕ್ಕೆ ಆಗಸದಲ್ಲಿ ಕಾರ್ಮೋಡಗಳು ದಟ್ಟವಾದವು. ಮಳೆ ಬಂದರೆ ಎಂದು ಜಿಂಕೆ ಚಿಂತೆಯಲ್ಲಿರುವಾಗಲೇ ಮಿಂಚಿನಿಂದ ಕಾಡಿನಲ್ಲಿ ಬೆಂಕಿ ಹತ್ತಿತು. ಭಯಗೊಂಡ ಜಿಂಕೆ ಆ ಸ್ಥಳದಿಂದ ದೂರ ಹೋಗಬೇಕೆಂದು ನಿರ್ಧರಿಸಿ ಹಿಂದಕ್ಕೆ ತಿರುಗಿತು. ಜಿಂಕೆ ಕಂಡ ದೃಶ್ಯ ಇನ್ನೂ ಅಪಾಯಕ್ಕೆ ಒಡ್ಡುವಂತಿತ್ತು. ಎಡಕ್ಕೆ ಬೇಟೆಗಾರನೊಬ್ಬ ಜಿಂಕೆಗೆ ಗುರಿಯಿಟ್ಟು ಬಾಣ ಹೂಡಿದ್ದ. ಆಘಾತಕ್ಕೊಳಗಾದ ಜಿಂಕೆ ಬಲಕ್ಕೆ ತಿರುಗಿದಾಗ ಹಸಿದ ಸಿಂಹ ತನ್ನ ಕಡೆ ಬರುತ್ತಿರುವುದು ಕಂಡಿತು. ಎಡಕ್ಕೆ…

Read More

ವಿಜಯಪುರ: ಜಿಲ್ಲಾ ಆಸ್ಪತ್ರೆಯಲ್ಲಿ ೧೫ ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದವರನ್ನು ತೆರವುಗೊಳಿಸಿದ್ದರ ಕುರಿತು ಈ ಕಾರ್ಮಿಕರು ಹಾಗೂ ಭೀಮ್ ಸರಕಾರ ಸಂಘಟನೆ ಖಂಡಿಸಿದೆ.ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸುವ ಚಿಕ್ಕಲಕಿ ಎಂಟರಪ್ರೈಜಿಸ್ ಮೂಲಕ ಗಣೇಶ ಶ್ರೀನಿವಾಸ ಚಿಕ್ಕಲಕಿ ಎಂಬುವವರು ಈ ಕಾರ್ಮಿಕರಿಂದ ೫೦ ಸಾವಿರ ರೂ.ಗಳನ್ನು ಕೊಟ್ಟರೆ ಕೆಲಸಕ್ಕೆ ಬನ್ನಿ, ಇಲ್ಲವಾದರೆ ಬರಬೇಡಿ ಎಂದು ಹೇಳಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಇದನ್ನು ಪ್ರಶ್ನಿಸಿದರೆ ನನಗೆ ಟೆಂಡರ್ ಕೊಡಿಸಿದ ಸುನೀಲಗೌಡ ಬಿ. ಪಾಟೀಲ ಎಮ್.ಎಲ್.ಸಿ. ಯವರು ನನಗೆ ಹೇಳಿದ್ದಾರೆ. ಅದರಿಂದ ನಾನು ಕೇಳುತ್ತಿದ್ದೇನೆ ಎಂದು ನೇರವಾಗಿ ಹೇಳುತ್ತಾರೆ. ಇಷ್ಟೊಂದು ದುಡ್ಡು ಕೊಟ್ಟು ಕೆಲಸ ಮಾಡುವದು ಅಸಾಧ್ಯ ಎಂದು ಗುತ್ತಿಗೆ ಕೆಲಸಗಾರರು ಆರೋಪಿಸುತ್ತಿದ್ದಾರೆ. ನಾವು ಬಡವರು ನಮಗೆ ೬ ತಿಂಗಳಿಗೊಮ್ಮೆ ವೇತನ ಮಾಡುತ್ತಾರೆ. ತಿಂಗಳಿಗೆ ೧೧ ಸಾವಿರ ವೇತನ ಎಂದು ಹೇಳಿ ಕೇವಲ ೧೦ ಸಾವಿರ ವೇತನ ಕೊಡುತ್ತಾರೆ ನಾವೂ ಎಲ್ಲಿಂದ ೫೦ ಸಾವಿರ ಕೊಡುವುದು? ನಾವು…

Read More

ದೇವರಹಿಪ್ಪರಗಿ: ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಗೆ ನೀರು ಹರಿಸಿ ರೈತ ಸಮುದಾಯದ ನೆರವಿಗೆ ಧಾವಿಸುವಂತೆ ರೈತರು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲರಿಗೆ ಮನವಿ ಸಲ್ಲಿಸಿದರು.ಮತಕ್ಷೇತ್ರದ ಇಂಗಳಗಿ, ನಿವಾಳಖೇಡ, ಮುಳಸಾವಳಗಿ ಕಡ್ಲೇವಾಡ ಪಿಸಿಎಚ್, ಚಿಕ್ಕರೂಗಿ, ಗಂಗನಳ್ಳಿ ಗ್ರಾಮಗಳು ಸೇರಿದಂತೆ ಮತಕ್ಷೇತ್ರದ ರೈತರು ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್‌ಅಹ್ಮದ್ ಬೇಪಾರಿ ನೇತೃತ್ವದಲ್ಲಿ ವಿಜಯಪುರದ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಡಾ.ಪ್ರಭುಗೌಡ, ಬಶೀರ್ ಅಹ್ಮದ್ ಬೇಪಾರಿ ಹಾಗೂ ತಾಲ್ಲೂಕು ರೈತಸಂಘದ ಅಧ್ಯಕ್ಷ ಅಜೀಜ್ ಯಲಗಾರ ಮಾತನಾಡಿ, ಮತಕ್ಷೇತ್ರದ ಗಂಗನಳ್ಳಿ ಗ್ರಾಮದವರೆಗೆ ನೀರು ಸಂಪರ್ಕಿಸುವ ನಾಗಠಾಣ ಉಪಕಾಲುವೆಯಲ್ಲಿ ನೀರು ಹರಿಯದೇ ಇದ್ದು, ಈ ಕಾಲುವೆಯ ನೀರಿನ ಮೇಲೆ ಅವಲಂಬಿತವಾದ ಕೃಷಿಕರು ನೀರಿಗಾಗಿ ಪರಿತಪ್ಪಿಸುವಂತಾಗಿದೆ. ಚಿಮ್ಮಲಗಿ ಏತ ನೀರಾವರಿಯ ನಾಗಠಾಣ ಉಪಕಾಲುವೆಯಲ್ಲಿ ಸುಮಾರು ೧೪೬ ಕಿ.ಮೀ ನೀರು ಹರಿಯಬೇಕು. ಅದಕ್ಕಾಗಿ ತಕ್ಷಣವೇ ನೀರು ಹರಿಸಲು ಕ್ರಮಕೈಗೊಳ್ಳಲು ವಿನಂತಿಸಿದರು.ರೈತರ ಸಮಸ್ಯೆಯನ್ನು ಆಲಿಸಿದ ಸುನೀಲಗೌಡ ಪಾಟೀಲ ತಕ್ಷಣವೇ ಕೆಬಿಜೆಎನ್‌ಎಲ್…

Read More

ಇಂಡಿ: ಹ್ಯಾಟ್ರಿಕ್ ಗೆಲುವು ಸಾಧಿಸಿದ‌ ಲಿಂಬೆ ನಾಡಿನ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ 1.5 ಕೆಜಿ ಬೆಳ್ಳಿ ಖಡ್ಗ ಹಾಗೂ ವಾಲ್ಮೀಕಿ ಮಹರ್ಷಿ ಭಾವಚಿತ್ರ ನೀಡುವ ಮೂಲಕ ತಳವಾರ ಸಮಾಜದವರು ಸನ್ಮಾನಿಸಿ ಗೌರವಿಸಿದರು.ಮಂಗಳವಾರ ತಾಲೂಕಿನ‌ ಅಗರಖೇಡ ಗ್ರಾಮದಲ್ಲಿ, ಗ್ರಾಮಸ್ಥರು ಆಯೋಜಿಸಿರುವ ಶಾಸಕರ ಸನ್ಮಾನ ಕಾರ್ಯಕ್ರಮದಲ್ಲಿ ತಳವಾರ ಸಮಾಜದ ಹಿರಿಯ ಮುಖಂಡ ಭೀಮಣ್ಣ ಕೌಲಗಿ, ಸತ್ಯಪ್ಪ ತಳವಾರ, ವಿಜಯಕುಮಾರ್ ಕೌಲಗಿ, ಶಿವಪ್ಪ ತಳವಾರ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ತಳವಾರ ಸಮಾಜದ ಹಿರಿಯ ಮುಖಂಡ ಭೀಮಣ್ಣ ಕೌಲಗಿ ಮಾತಾನಾಡಿ, ಸುಮಾರು ವರ್ಷಗಳಿಂದ ಯಶವಂತರಾಯಗೌಡ ಪಾಟೀಲ ಅವರ ಮನೆತನ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದೇವೆ. ಅದಲ್ಲದೇ ನಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರದ ವಿಷಯದಲ್ಲೂ ಅತೀ ಹೆಚ್ಚಿನ‌‌ ಸಹಾಯ ಸಹಕಾರ ನೀಡಿದ್ದಾರೆ ಎಂದು ಹೇಳಿದರು.ಇನ್ನು ಹ್ಯಾಟ್ರಿಕ್ ಗೆಲುವು ಸಾಧಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರು‌ ಮಾತಾನಾಡಿ, ನನ್ನ ರಾಜಕಾರಣದಲ್ಲಿ ಈ ಸಮುದಾಯ ಪಾತ್ರ…

Read More

ಬ್ರಹ್ಮದೇವನಮಡು: ವಿದ್ಯಾರ್ಥಿಗಳಿಗೆ ನಿರಂತರ ಓದು – ಬರಹವೇ ಮುಖ್ಯ ಕೆಲಸವಾಗಿದೆ. ಕಲಿಕೆಯ ದಿನಗಳಲ್ಲಿ ವಿವಿಧ ಶಾಖೆಗಳ ಜ್ಞಾನ ಪಡೆಯುವಲ್ಲಿ ಮನಸ್ಸು ಹಾತೊರೆಯುವಂತಿರಬೇಕು ಅಂದಾಗ ಮಾತ್ರ ವಿದ್ಯಾರ್ಥಿ ಜೀವನ ಸಾರ್ಥಕ ಪಡೆದುಕೊಳ್ಳುತ್ತದೆ ಎಂದು ಯುವ ಸಾಹಿತಿ ಸಂತೋಷ ನವಲಗುಂದ (ಮಳ್ಳಿ) ಹೇಳಿದರು.ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಗೊಲ್ಲಾಳೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳಲು ಜ್ಞಾನ ಮತ್ತು ತಿಳುವಳಿಕೆ ಅಗತ್ಯವಾಗಿದೆ. ಅದರಲ್ಲೂ ವಿದ್ಯಾರ್ಥಿಗಳಾದವರು ನಿರಂತರ ಓದಿನ ಮೂಲಕ ಜ್ಞಾನ ಸಂಪಾದಿಸುವುದರೊಂದಿಗೆ ತಮ್ಮ ವಿದ್ಯಾರ್ಥಿ ಜೀವನವನ್ನು ಗುರು ಪರಂಪರೆ ಅಪ್ಪಿಕೊಳ್ಳುವಂತಾಗಬೇಕಿದೆ. ಯೌವನದ ದಿನಗಳಲ್ಲಿ ನಟಿ ನಟಿಯರಷ್ಟೇ ಅಲ್ಲದೇ ಮುಖ್ಯವಾಗಿ ರಾಷ್ಟ್ರನಾಯಕ ಭೋಸ್, ಭಗತ್ ಸಿಂಗ್, ಅಬ್ದುಲ್ ಕಲಾಂ, ಸಾಲು ಮರದ ತಿಮ್ಮಕ್ಕರಂತವರನ್ನು ರೋಲ್ ಮಾಡೆಲ್ ಆಗಿ ಕಾಣುವಂತೆ ಸಲಹೆ ನೀಡಿದರು.ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ, ಕಾರ್ಯದರ್ಶಿ ಆರ್.ಬಿ.ಬಿರಾದಾರ ಮಾತನಾಡಿದರು.ಈ ವೇಳೆ ಸಾಹಿತಿ ಸಂತೋಷ ನವಲಗುಂದ, ಸಿ.ಆರ್.ಪಿ.ಆರ್.ಎಸ್.ಬಿರಾದಾರ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.ಈ ವೇಳೆ ಕಾಲೇಜು ಪ್ರಾಂಶುಪಾಲ ವ್ಹಿ.ಡಿ.ಸಿಂದಗಿ,…

Read More