ಇಂಡಿ: ಹ್ಯಾಟ್ರಿಕ್ ಗೆಲುವು ಸಾಧಿಸಿದ ಲಿಂಬೆ ನಾಡಿನ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ 1.5 ಕೆಜಿ ಬೆಳ್ಳಿ ಖಡ್ಗ ಹಾಗೂ ವಾಲ್ಮೀಕಿ ಮಹರ್ಷಿ ಭಾವಚಿತ್ರ ನೀಡುವ ಮೂಲಕ ತಳವಾರ ಸಮಾಜದವರು ಸನ್ಮಾನಿಸಿ ಗೌರವಿಸಿದರು.
ಮಂಗಳವಾರ ತಾಲೂಕಿನ ಅಗರಖೇಡ ಗ್ರಾಮದಲ್ಲಿ, ಗ್ರಾಮಸ್ಥರು ಆಯೋಜಿಸಿರುವ ಶಾಸಕರ ಸನ್ಮಾನ ಕಾರ್ಯಕ್ರಮದಲ್ಲಿ ತಳವಾರ ಸಮಾಜದ ಹಿರಿಯ ಮುಖಂಡ ಭೀಮಣ್ಣ ಕೌಲಗಿ, ಸತ್ಯಪ್ಪ ತಳವಾರ, ವಿಜಯಕುಮಾರ್ ಕೌಲಗಿ, ಶಿವಪ್ಪ ತಳವಾರ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಳವಾರ ಸಮಾಜದ ಹಿರಿಯ ಮುಖಂಡ ಭೀಮಣ್ಣ ಕೌಲಗಿ ಮಾತಾನಾಡಿ, ಸುಮಾರು ವರ್ಷಗಳಿಂದ ಯಶವಂತರಾಯಗೌಡ ಪಾಟೀಲ ಅವರ ಮನೆತನ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದೇವೆ. ಅದಲ್ಲದೇ ನಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರದ ವಿಷಯದಲ್ಲೂ ಅತೀ ಹೆಚ್ಚಿನ ಸಹಾಯ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಇನ್ನು ಹ್ಯಾಟ್ರಿಕ್ ಗೆಲುವು ಸಾಧಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮಾತಾನಾಡಿ, ನನ್ನ ರಾಜಕಾರಣದಲ್ಲಿ ಈ ಸಮುದಾಯ ಪಾತ್ರ ಬಹಳ ದೊಡ್ಡದು, ಮರೆಯುವಂತಿಲ್ಲ. ನಮ್ಮ ತಂದೆಯವರ ಕಾಲದಿಂದಲೂ ಈ ಸಮುದಾಯ ರಾಜಕಾರಣಕ್ಕೆ ಸಹಕಾರ ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮ ಹೊನ್ನೂರ, ವಿಶ್ವನಾಥ ಕವಲಗಿ, ಪಿಂಟು ಸೊಲ್ಲಾಪುರ, ರಾಮಣ್ಣ ಕವಲಗಿ, ಸಂತೋಷ ಸೋಲಾಪುರ, ಚಂದ್ರಾಮ ತಳವಾರ, ಶ್ರೀನಾಥ ಕವಲಗಿ, ರಾಜಕುಮಾರ ಬ ತಳವಾರ, ಹೊನ್ನಪ ಕವಲಗಿ, ಶ್ರೀಶೈಲ ತಳವಾರ ಇನ್ನೂ ಅನೇಕ ಸಮುದಾಯದ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.
Related Posts
Add A Comment