ಬ್ರಹ್ಮದೇವನಮಡು: ವಿದ್ಯಾರ್ಥಿಗಳಿಗೆ ನಿರಂತರ ಓದು – ಬರಹವೇ ಮುಖ್ಯ ಕೆಲಸವಾಗಿದೆ. ಕಲಿಕೆಯ ದಿನಗಳಲ್ಲಿ ವಿವಿಧ ಶಾಖೆಗಳ ಜ್ಞಾನ ಪಡೆಯುವಲ್ಲಿ ಮನಸ್ಸು ಹಾತೊರೆಯುವಂತಿರಬೇಕು ಅಂದಾಗ ಮಾತ್ರ ವಿದ್ಯಾರ್ಥಿ ಜೀವನ ಸಾರ್ಥಕ ಪಡೆದುಕೊಳ್ಳುತ್ತದೆ ಎಂದು ಯುವ ಸಾಹಿತಿ ಸಂತೋಷ ನವಲಗುಂದ (ಮಳ್ಳಿ) ಹೇಳಿದರು.
ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಗೊಲ್ಲಾಳೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳಲು ಜ್ಞಾನ ಮತ್ತು ತಿಳುವಳಿಕೆ ಅಗತ್ಯವಾಗಿದೆ. ಅದರಲ್ಲೂ ವಿದ್ಯಾರ್ಥಿಗಳಾದವರು ನಿರಂತರ ಓದಿನ ಮೂಲಕ ಜ್ಞಾನ ಸಂಪಾದಿಸುವುದರೊಂದಿಗೆ ತಮ್ಮ ವಿದ್ಯಾರ್ಥಿ ಜೀವನವನ್ನು ಗುರು ಪರಂಪರೆ ಅಪ್ಪಿಕೊಳ್ಳುವಂತಾಗಬೇಕಿದೆ. ಯೌವನದ ದಿನಗಳಲ್ಲಿ ನಟಿ ನಟಿಯರಷ್ಟೇ ಅಲ್ಲದೇ ಮುಖ್ಯವಾಗಿ ರಾಷ್ಟ್ರನಾಯಕ ಭೋಸ್, ಭಗತ್ ಸಿಂಗ್, ಅಬ್ದುಲ್ ಕಲಾಂ, ಸಾಲು ಮರದ ತಿಮ್ಮಕ್ಕರಂತವರನ್ನು ರೋಲ್ ಮಾಡೆಲ್ ಆಗಿ ಕಾಣುವಂತೆ ಸಲಹೆ ನೀಡಿದರು.
ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ, ಕಾರ್ಯದರ್ಶಿ ಆರ್.ಬಿ.ಬಿರಾದಾರ ಮಾತನಾಡಿದರು.
ಈ ವೇಳೆ ಸಾಹಿತಿ ಸಂತೋಷ ನವಲಗುಂದ, ಸಿ.ಆರ್.ಪಿ.ಆರ್.ಎಸ್.ಬಿರಾದಾರ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಈ ವೇಳೆ ಕಾಲೇಜು ಪ್ರಾಂಶುಪಾಲ ವ್ಹಿ.ಡಿ.ಸಿಂದಗಿ, ಡಾ. ಎಸ್.ಡಿ.ಕುಂಬಾರ, ಸಿ.ಆರ್.ಪಿ. ಆರ್.ಎಸ್.ಬಿರಾದಾರ, ಸಂಸ್ಥೆ ನಿರ್ದೇಶಕ ಜಗದೀಶಗೌಡ ಬಿರಾದಾರ, ಜಿ.ಬಿ.ಲಮಾಣಿ, ಪಿ.ಎಸ್.ಹದಗಲ್, ಮಂಜುನಾಥ ತಳವಾರ, ಮಹೇಶ ಸೂರಪಗೊಂಡ, ಉಪನ್ಯಾಸಕರು, ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

