ವಿಜಯಪುರ: ಜಿಲ್ಲಾ ಆಸ್ಪತ್ರೆಯಲ್ಲಿ ೧೫ ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದವರನ್ನು ತೆರವುಗೊಳಿಸಿದ್ದರ ಕುರಿತು ಈ ಕಾರ್ಮಿಕರು ಹಾಗೂ ಭೀಮ್ ಸರಕಾರ ಸಂಘಟನೆ ಖಂಡಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸುವ ಚಿಕ್ಕಲಕಿ ಎಂಟರಪ್ರೈಜಿಸ್ ಮೂಲಕ ಗಣೇಶ ಶ್ರೀನಿವಾಸ ಚಿಕ್ಕಲಕಿ ಎಂಬುವವರು ಈ ಕಾರ್ಮಿಕರಿಂದ ೫೦ ಸಾವಿರ ರೂ.ಗಳನ್ನು ಕೊಟ್ಟರೆ ಕೆಲಸಕ್ಕೆ ಬನ್ನಿ, ಇಲ್ಲವಾದರೆ ಬರಬೇಡಿ ಎಂದು ಹೇಳಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಇದನ್ನು ಪ್ರಶ್ನಿಸಿದರೆ ನನಗೆ ಟೆಂಡರ್ ಕೊಡಿಸಿದ ಸುನೀಲಗೌಡ ಬಿ. ಪಾಟೀಲ ಎಮ್.ಎಲ್.ಸಿ. ಯವರು ನನಗೆ ಹೇಳಿದ್ದಾರೆ. ಅದರಿಂದ ನಾನು ಕೇಳುತ್ತಿದ್ದೇನೆ ಎಂದು ನೇರವಾಗಿ ಹೇಳುತ್ತಾರೆ. ಇಷ್ಟೊಂದು ದುಡ್ಡು ಕೊಟ್ಟು ಕೆಲಸ ಮಾಡುವದು ಅಸಾಧ್ಯ ಎಂದು ಗುತ್ತಿಗೆ ಕೆಲಸಗಾರರು ಆರೋಪಿಸುತ್ತಿದ್ದಾರೆ. ನಾವು ಬಡವರು ನಮಗೆ ೬ ತಿಂಗಳಿಗೊಮ್ಮೆ ವೇತನ ಮಾಡುತ್ತಾರೆ. ತಿಂಗಳಿಗೆ ೧೧ ಸಾವಿರ ವೇತನ ಎಂದು ಹೇಳಿ ಕೇವಲ ೧೦ ಸಾವಿರ ವೇತನ ಕೊಡುತ್ತಾರೆ ನಾವೂ ಎಲ್ಲಿಂದ ೫೦ ಸಾವಿರ ಕೊಡುವುದು? ನಾವು ಈ ಕೆಲಸವಿಲ್ಲದೇ ಈಗ ಪರಿತಪಿಸುತ್ತಿದ್ದೇವೆ ಎಂದು ಗುತ್ತಿಗೆ ಕೆಲಸಗಾರರು ದೂರಿದರು.
ಇದಕ್ಕೆ ಜಿಲ್ಲಾ ಭೀಮ್ ಸರಕಾರ ಸಂಘಟನೆ ಅಧ್ಯಕ್ಷ ಪರಶುರಾಮ ಮು. ಚಲವಾದಿ, ಜಿಲ್ಲಾ ಉಪಾಧ್ಯಕ್ಷ ಸೋಮಲಿಂಗ ರಣದೇವಿ ಈ ಗುತ್ತಿಗೆದಾರರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಎಮ್.ಎಲ್.ಸಿ. ಸುನೀಲಗೌಡ ಪಾಟೀಲ ಮನೆ ಮುಂದೆ ಧರಣಿ ಕುಳಿತು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ನಗರ ಅಧ್ಯಕ್ಷ ಸುಖದೇವ ಅರ್ಜುನ ಚಲವಾದಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Related Posts
Add A Comment