- ಮಲ್ಲಿಕಾಜು೯ನ ಎನ್. ಕೆಂಭಾವಿ
ಬ್ರಹ್ಮದೇವನಮಡು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ, ಕಂಬನಿ ಮಿಡಿದ ಹಿರಿಯರು, ಮತ್ತೆ ಹುಟ್ಟಿ ಬಾ ಎಂದ ಗ್ರಾಮಸ್ಥರು.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆಯಿಂದ ಕಂಡು ಬಂದ ದೃಶಗಳಿವು. ಗ್ರಾಮದ ಪೋಲಿಸ್ ಪೇದೆ ಚಾಲಕ ಸೊಮನಗೌಡ ಚೌಧರಿ (೩೨) ಮಂಗಳವಾರ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ತಿಳಿದ ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿತ್ತು. ಗ್ರಾಮದಲ್ಲಿ ಸೂತಕದ ವಾತಾವರಣವಿತ್ತು. ನಮ್ಮೂರಿನ ಹೆಮ್ಮೆಯ ಪುತ್ರ ಮರಳಿ ಮರಲಿಲ್ಲ ಎಂದು ಎಲ್ಲರೂ ಕಣ್ಣೀರಿಟ್ಟಿದ್ದರು. ಮಂಗಳೂರು ನಗರ ಪೋಲಿಸ್ ಕಮಿಷನರೇಟ್ ನಲ್ಲಿ ವಯರ್ ಲೆಸ್ ವಿಭಾಗದ ಇನ್ಸಸ್ಪೆಕ್ಟರ್ ವಾಹನಕ್ಕೆ ಚಾಲಕರಾಗಿ ಕತ೯ವ್ಶದಲ್ಲಿರುವಾಗಲೇ ಮಂಗಳವಾರ ಸೊಮನಗೌಡ ಮೃತಪಟ್ಟಿದ್ದರು. ಅಲ್ಲಿಂದ ಗುರುವಾರ ಬೆಳಗ್ಗೆ ೬ಕ್ಕೆ ಪೋಲಿಸನ ಪ್ರಾಥಿ೯ವ ಶರೀರ ಗ್ರಾಮಕ್ಕೆ ಬಂದು ತಲುಪಿತು. ಮಗನ ಕಳೆಬರಹವನ್ನು ನೋಡುತ್ತಿದ್ದಂತೆ ತಂದೆ ತಾಯಿ, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಗ್ರಾಮದಿಂದ ಅಂತಿಮ ಸಂಸ್ಕಾರ ನಡೆಯುವ ಸ್ಥಳದವರೆಗೆ ಪೋಲಿಸ್ ಪೇದೆ ಸೊಮನಗೌಡನ ಪ್ರಾಥಿ೯ವ ಶರೀರದ ಮೆರವಣಿಗೆ ನಡೆಯಿತು. ಸಶಸ್ತ್ರ ಮೀಸಲು ಪಡೆಯವರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದಾಗ ಸಕಲ ಸಕಾ೯ರಿ ಗೌರವಗಳೊಂದಿಗೆ ಅಂತ್ಶಕ್ರಿಯೆ ನಡೆಸಲಾಯಿತು.
ಅಂತ್ಶ ಸಂಸ್ಕಾರದಲ್ಲಿ ಮಂಗಳೂರಿನ ಪಿಎಸ್ ಐ ರಮೇಶ ಬಿರಾದಾರ, ಕಲಕೇರಿ ಪೋಲಿಸ್ ಠಾಣೆಯ ಎಎಸ್ ಆಯ್ ಎಸ್.ಡಿ.ಭಾವಿಕಟ್ಟಿ, ಸಿಂದಗಿ ಎಪಿಎಂಸಿ ಮಾಜಿ ಅಧ್ಶಕ್ಷ ಹಳ್ಳೆಗೌಡ ಚೌಧರಿ, ಗುರುನಾಥರಡ್ಡಿ ಚೌಧರಿ, ಮಾಂತಗೌಡ ಚೌಧರಿ, ಸುರೇಶಗೌಡ ಕುರಕಳ್ಳಿ, ಪತ್ರಕತ೯ ಮಲ್ಲು ಕೆಂಭಾವಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

