Author: editor.udayarashmi@gmail.com

ವಿಜಯಪುರ: ಇಂದಿನ ದಿನಮಾನದಲ್ಲಿ ಮೊಬೈಲ್ ಬಳಕೆ ಅತ್ಯಗತ್ಯವಾಗಿದ್ದರೂ ಸಹ ಮಿತಬಳಕೆ ಮಾಡಬೇಕು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನಹರಿಸಿ ಉತ್ತಮ ಶಿಕ್ಷಣ ಪಡೆದು ಉತ್ತಮ ಸ್ಥಾನ ಪಡೆಯುವತ್ತ ಮುನ್ನುಗ್ಗಬೇಕು ಎಂದು ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ ಕಿವಿಮಾತು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನದಲ್ಲಿ ನಡೆಯುತ್ತಿರುವ ಶ್ರೀ ಶರಣ ಜ್ಯೋತಿ ವಿದ್ಯಾ ಸಂಸ್ಥೆಯ ಗ್ರಾಮಿಣ ಬಾಲಕಿಯರ ವಸತಿ ನಿಲಯದಲ್ಲಿ ಶನಿವಾರದಂದು ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾನು ಕೂಡ ವಿದ್ಯಾರ್ಥಿಯಾಗಿದ್ದಾಗ ವಸತಿ ನಿಲಯದಲ್ಲಿ ಇದ್ದು ಅಂದು ಆ ಕಾಲದಲ್ಲಿ ಮೊಬ್ಯಲಗಳ ಬಳಕೆ ಜಾಸ್ತಿಯಾಗಿರಲಿಲ್ಲ . ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಇದು ಹೆಚ್ಚಾಗಿದೆ .ಮೊಬ್ಯಲಗಳ ಬಳಕೆ ಎಷ್ಟು ಸುರಕ್ಷಿತವೊ ಅಷ್ಟೇ ಅಸುರಕ್ಷಿತವಾಗಿದೆ ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚಿನ ಗಮನ ಅಧ್ಯಯನದ ಕಡೆಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ದೇವಣಗಾಂವ, ಮಹಿಳಾ ಮಕ್ಕಳ ಅಧಿಕಾರಿ ದೀಪಾ ಕಾಳೆ ಮತ್ತು ಗಿರಿಜಾ ದೊಡಮನಿ.ವೈದ್ಯರಾದ ಅಮ್ರತಾ,ಜಯಶ್ರೀ,ಮತ್ತು…

Read More

ವಿಜಯಪುರ: ವಿಜಯಪುರದ ಸಿಕ್ಯಾಬ್ ಪದವಿಪುರ್ವ ಕಾಲೇಜ್‌ನಲ್ಲಿ ಇದೇ ಅ.೮ರಂದು ಐಎಎಸ್ & ಕೆಎಎಸ್ ಪೂರ್ವಭಾವಿ ತರಬೇತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಜರುಗಲಿದ್ದು, ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರದ ೨೦೦ ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ ೯ ರಿಂದ ಪರೀಕ್ಷೆ ಮುಕ್ತಾಯವಾಗುವರೆಗೆ ೧೪೪ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷೆಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಇತರರು ಮೊಬೈಲ್ ಫೋನ್ ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಿದೆ. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರದ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ ಸೆಂಟರ್‌ಗಳು, ಇಂಟರನೆಟ್ ಸೈಬರ್ ಕೆಫೆಗಳು, ಕೋಚಿಂಗ್ ಕೇಂದ್ರಗಳು ಪರೀಕ್ಷಾ ಅವಧಿಯಲ್ಲಿ ತೆರೆಯದಂತೆ ಆದೇಶಿಸಲಾಗಿದೆ.

Read More

ವಿಜಯಪುರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೆಟ್ರಿಕ್ ಪೂರ್ವ ಶಿಷ್ಯವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಹೊಸದಾಗಿ ಅರ್ಜಿ ಸಲ್ಲಿಸಬಯಸುವ ೧ನೇ ತರಗತಿಯಿಂದ ೧೦ನೇ ತರಗತಿ ವಿದ್ಯಾರ್ತಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮಂಜೂರಾತಿಗಾಗಿ https:ssp.karnataka.gov.in CxÀªÁ www.sw.kar.nic.in ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿ ವಿದ್ಯಾರ್ಥಿ ಹಾಗೂ ಪಾಲಕ-ಪೋಷಕರ ಆಧಾರ ಸಂಖ್ಯೆ, ಮೊಬೈಲ್ ಸಂಖ್ಯೆ ರಾಷ್ಟ್ರೀಕೃತ ಅಥವಾ ಪೋಸ್ಟ್ ಆಫೀಸ್‌ನಲ್ಲಿ ತೆರೆಸಿದ ಖಾತೆ ಸಂಖ್ಯೆ, (ಆಧಾರ ಸೀಡಿಂಗ್ ಮಾಡಿಸಿರಬೇಕು) ಹಾಗೂ ತಹಶೀಲ್ದಾರರಿಂದ ನೀಡಲಾದ ಆರ್.ಸಿ.ಸಂಖ್ಯೆ ಹೊಂದಿದ ಜಾತಿ ಹಾಗೂ ಆದಾಯ ಪ್ರಮಾಣ ಪತ್ರದೊಂದಿಗೆ ದಿನಾಂಕ : ೨೦-೧೦-೨೦೨೩ರೊಳಗೆ ಅರ್ಜಿ ಸಲ್ಲಿಸಿ ಪ್ರಿಂಟ್ ತೆಗೆದು ಹಾರ್ಡ ಕಾಫಿಯೊಂದಿಗೆ ದಾಖಲೆಗಳನ್ನು ಲಗತ್ತಿಸಿ ತಮ್ಮ ಶಾಲೆಯ ಮುಖ್ಯ ಶಿಕ್ಷಕರಿಗೆ ಸಲ್ಲಿಸಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ: ೦೮೩೫೨-೨೦೦೩೦೩ ಅಥವಾ ಮೊ: ೯೪೮೦೮೦೪೩೦೮೫ ಸಂಖ್ಯೆಗೆ ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ವಿಕಲಚೇತನರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಹೊಸದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ವೆಬ್‌ಸೈಟ್ https://ssp.postmatric.karnataka.gov.in/2324 sa/signin.aspx ಮೂಲಕ ಹಾಗೂ ನವೀಕರಣಕ್ಕಾಗಿ ವೆಬ್‌ಸೈಟ್https://ssp.postmatric.karnataka.gov.in /ಅಂ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ದಿನಾಂಕ : ೩೧-೧೦-೨೦೨೩ ಕೊನೆಯ ದಿನವಾಗಿದೆ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್ ಆವರಣ, ಕನಕದಾಸ ಬಡಾವಣೆ, ವಿಜಯಪುರ ದೂ: ೦೮೩೫೨-೭೯೬೦೬೦ಗೆ ಅಥವಾ ತಾಲೂಕಾ ಪಂಚಾಯತ್ ಕಾರ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ವಿಜಯಪುರ-ರವಿ ರಾಠೋಡ ಮೊ: ೯೦೩೫೫೫೩೩೩೭, ಇಂಡಿ-ಪರಶುರಾಮ ಭೊಸಲೆ ಮೊ: ೯೯೭೨೪೪೧೪೬೪, ಸಿಂದಗಿ- ಮುತ್ತುರಾಜ ಸಾತಿಹಾಳ ಮೊ: ೯೯೮೦೦೧೯೬೩೫, ಬಸವನಬಾಗೇವಾಡಿ- ಎಸ್.ಡಿ.ಬಿರಾದಾರ ಮೊ: ೮೭೨೨೧೩೫೬೬೦ ಹಾಗೂ ಮುದ್ದೇಬಿಹಾಳ-ಎಸ್.ಕೆ.ಘಾಟಿ ಮೊ: ೯೭೪೦೬೮೨೯೭೯ ಇವರನ್ನು ಸಂಪರ್ಕಿಸುವಂತೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಶನಿವಾರ ದಿಢೀರವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಹಾಗೂ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಕಾರ್ಯವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.ಅ.೭ರ ಶನಿವಾರ ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಕಲ್ಪಿಸಲಾಗುತ್ತಿರುವ ವೈದ್ಯೋಪಚಾರ ಕುರಿತು ರೋಗಿಗಳಿಂದ ಮಾಹಿತಿ ಪಡೆದುಕೊಂಡ ಅವರು, ಸಿಬ್ಬಂದಿಗಳ ಹಾಜರಾತಿಯನ್ನು ವೀಕ್ಷಣೆ ನಡೆಸಿ, ತಡವಾಗಿ ಬಂದ ಸಿಬ್ಬಂದಿಗಳ ಹಾಜರಾತಿನ್ನು ಗೈರುಹಾಜರಿ ಎಂದು ಪರಿಗಣಿಸಿ ಅಂತಹ ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಸ್ಥಳೀಯ ವೈದ್ಯಾಧಿಕಾರಿಗಳಿಗೆ ಹಾಗೂ ಸಹಾಯಕ ಆಡಳಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರುಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಅವರು, ಕಚೇರಿಯ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಚೇರಿ ಕಟ್ಟಡದ ಪ್ರವೇಶ ದ್ವಾರದಲ್ಲಿ ಇಡಲಾಗಿದ್ದ ಸಾಮಗ್ರಿಗಳನ್ನು ತಕ್ಷಣ ತೆರವುಗೊಳಿಸಬೇಕು. ಜಿಲ್ಲಾ ಮನೋರೋಗ ಘಟಕ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಹಳೆಯದಾಗಿರುವುದರಿಂದ ಈ ಘಟಕವನ್ನು ಅಡಕಿಗಲ್ಲಿಯಲ್ಲಿರುವ ಆಯುಷ್…

Read More

ಮುದ್ದೇಬಿಹಾಳ: ಲಿಖಿತ ದೂರಿನ ಆಧಾರದ ಮೇಲೆ ೩೦ಸಾವಿರ ಲಂಚದ ಹಣ ಪಡೆಯುತ್ತಿದ್ದ ವೇಳೆ ಪಿಡಿಓ ಮತ್ತು ತಾಂತ್ರಿಕ ಸಹಾಯಕನನ್ನು ಲೋಕಾಯುಕ್ತರರು ರೆಡ್ ಹ್ಯಾಂಡ್ ಹಿಡಿದಿದ್ದಾರೆ.ತಾಲೂಕಿನ ತಂಗಡಗಿ ಗ್ರಾ.ಪಂ ನ ಪಿಡಿಓ ಬಸವರಾಜ ತಾಳಿಕೋಟಿ ಮತ್ತು ತಾಂತ್ರಿಕ ಸಹಾಯಕ ಪ್ರಸನ್ನ ಶೆಟ್ಟರ ಲೋಕಾಯುಕ್ತರ ಬಲೆಗೆ ಬಿದ್ದಿರುವ ಅಧಿಕಾರಿಗಳು. ಶುಕ್ರವಾರ ವಿಜಯಪುರದ ಕಚೇರಿಯಲ್ಲಿ ದಾಖಲಾಗಿದ್ದ ದೂರಿನ ಅನ್ವಯ ಶನಿವಾರ ದಾಳಿಗೆ ಮುಂದಾಗಿದ್ದು ಹಣ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ.೨೦೨೦-೨೧ ನೇ ಸಾಲಿನಲ್ಲಿ ತಾಲೂಕಿನ ತಂಗಡಗಿ ಗ್ರಾಮ ಪಂಚಾಯತ ನ ಕಂಪೌಂಡ್ ನ ಗೋಡೆ ಕಟ್ಟಡಕ್ಕೆ ಸಂಬಂಧಿಸಿದ ಬಿಲ್ ಮಂಜೂರು ಮಾಡಲು ೩೫ಸಾವಿರ ರೂ ಬೇಡಿಕೆ ಇಟ್ಟಿದ್ದು ಈ ಪೈಕಿ ೩೦ಸಾವಿರ ಲಂಚದ ಹಣ ಸ್ವೀಕರಿಸುವಾಗ ಯಶಸ್ವಿಯಾಗಿ ಟ್ರ್ಯಾಪ್ ಮಾಡಿ ಆರೋಪಿತರನ್ನು ದಸ್ತಗಿರಿ ಮಾಡಿರುವದಾಗಿ ಲೋಕಾಯುಕ್ತ ಪ್ರಕಟಣೆ ತಿಳಿಸಿದೆ. ಈ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್‌ಗಳಾದ ಆನಂದ ಟಕ್ಕಣ್ಣವರ, ಆನಂದ ಡೋಣಿ ಸಿಬ್ಬಂದಿಗಳಾದ ಸಂತೋಷ ಅಮರಖೇಡ, ಮಹೇಶ ಪೂಜಾರಿ, ಈರಣ್ಣ ಕನ್ನೂರ, ಆನಂದ ಪಡಶೆಟ್ಟಿ, ಸಾಬು ಮುಂಜೆ, ಎಸ್.ಎಂ.ಬಳಗಾನೂರ,…

Read More

ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಮ ಪಂಚಾಯತನ ಪಿಡಿಓ ಬಸವರಾಜ ತಾಳಿಕೋಟಿ ಮೇಲೆ ಲೋಕಾಯುಕ್ತರಿಗೆ ದೂರು ನೀಡಿದ ವ್ಯಕ್ತಿಯನ್ನು ಮೊದಲು ತನಿಖೆ ನಡೆಸಬೇಕು ಎಂದು ಡಿಎಸ್‌ಎಸ್ ಮುಖಂಡ ಹರೀಶ ನಾಟೇಕಾರ ಹೇಳಿದರುಪಟ್ಟಣದ ತಾ.ಪಂ ನ ಕಾರ್ಯಾಲಯದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ ವ್ಯಕ್ತಿ ನಮ್ಮ ಸಮುದಾಯಯದ ಅಧಿಕಾರಿಗಳನ್ನು ಟಾರ್ಗೇಟ್ ಮಾಡುತ್ತಾರೆ. ತಮಗೆ ಹಣ ನೀಡುವಂತೆ ದುಂಬಾಲು ಬೀಳುತ್ತಾರೆ. ತಮ್ಮ ಬೇಡಿಕೆ ಪೂರೈಕೆಯಾಗದಿದ್ದಾಗ ಇಂಥದ್ದೊಂದು ಟ್ರ್ಯಾಪ್ ಮಾಡಿಸಲು ಮುಂದಾಗುತ್ತಾರೆ. ಇವರ ಮೇಲೆ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವದಾಗಿ ತಿಳಿಸಿದರು.ಈ ವೇಳೆ ಪ್ರಮುಖರಾದ ಪ್ರಶಾಂತ ಕಾಳೆ, ಬಸವರಾಜ ಪೂಜಾರಿ, ರಾಜು ತಂಗಡಗಿ, ದೇವರಾಜ ಹಂಗರಗಿ ಮತ್ತೀತರರು ಮಾತನಾಡಿ, ಈ ಹಿಂದೆ ನಡೆದ ಕೆಲವು ಪ್ರಕರಣಗಳ ಪೈಕಿ ಇದೇ ವ್ಯಕ್ತಿ ದೂರು ನೀಡಿದ್ದು ಅಧಿಕಾರಿಗಳನ್ನು ಹೆದರಿಸುವ ಉದ್ದೇಶ ಇದಾಗಿದೆ. ತಂಗಡಗಿ ಗ್ರಾ.ಪಂ ಗೆ ಬರುವ ಪಿಡಿಓ ಗಳನ್ನು ತಮ್ಮ ಕಂಟ್ರೋಲ ನಲ್ಲಿ…

Read More

ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದಲ್ಲಿರುವ ಬಿಸಿಎಂ ಹೆಣ್ಣುಮಕ್ಕಳ ವಸತಿ ನಿಲಯಕ್ಕೆ ತಾಲೂಕು ಕಲ್ಯಾಣಾಧಿಕಾರಿ ಶಿವಲೀಲಾ ಕೊಣ್ಣೂರ ಭೇಟಿ ನೀಡಿ ಪರಿಶೀಲಿಸಿದರು.ಕಳೆದ ಕೆಲವು ದಿನಗಳ ಹಿಂದೆ ಇಲ್ಲಿನ ವಿದ್ಯಾರ್ಥಿಗಳು ಗುಣಮಟ್ಟದ ಅಹಾರ ಹಾಗೂ ವಸತಿ ನಿಲಯದಲ್ಲಿ ಸೇವೆಯಲ್ಲಿರುವ ಅಡುಗೆಯವರ ಪೈಕಿ ಒಬ್ಬರ ಮೇಲೆ ಕೆಲವು ಆರೋಪಗಳನ್ನು ಹೊರಿಸಿ ಅವರನ್ನು ಕೂಡಲೇ ಬದಲಾಯಿಸುವಂತೆ ಆಗ್ರಹಿಸಿ ವಿದ್ಯಾರ್ಥಿ ಪರಿಷತ್ ನ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅಧಿಕಾರಿ ಶಿವಲೀಲಾ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ಭೋಜನಾಲಯದಲ್ಲಿ ಅಡುಗೆ ಸಹಾಯಕಿಯರು ಡ್ರೆಸ್ ಹಾಕಿಕೊಳ್ಳದ ಹಿನ್ನೆಲೆಯಲ್ಲಿ ಕೂಡಲೇ ಇಲಾಖೆ ನೀಡಿದ ಡ್ರೆಸ್ ಹಾಕಿಕೊಂಡು ಅಡುಗೆ ಮಾಡಬೇಕು ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಗುಣಮಟ್ಟದ ಊಟ ನೀಡಿ ಜತೆಗೆ ಶುಚಿತ್ವ ಕಾಪಾಡುವಂತೆ ಮೇಲ್ವಿಚಾರಕರಿಗೆ ಸೂಚಿಸಿದರು. ಕೆಲವು ವಿಚಾರಗಳಿಗಾಗಿ ವಾರ್ಡನ ಇಂದುಮತಿ ಚವ್ಹಾಣರನ್ನ ತರಾಟೆಗೆ ತೆಗದುಕೊಂಡರಲ್ಲದೇ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ.ಈ ವೇಳೆ ತಾಲೂಕು ವಿಸ್ತರಣಾಧಿಕಾರಿ ಉಮೇಶ ಮಾಟೂರ, ವಾರ್ಡನ್…

Read More

ಸಿಂದಗಿ: ಮಹಿಳೆಯರು ಸಾಮಾಜಿಕವಾಗಿ ಸಬಲೀಕರಣ ಹೊಂದಿದಾಗ ಆರ್ಥಿಕ ಸದೃಡತೆ ಸಾಧಿಸಲು ಸಾಧ್ಯ ಎಂದು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಆಪ್ತಸಮಾಲೋಚಕಿ ಸುಜಾತ ಕಲಬುರಗಿ ಹೇಳಿದರು.ಪಟ್ಟಣದ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಕ್ಷೇತ್ರ ಅಧ್ಯಯನಕ್ಕಾಗಿ ಭೇಟಿ ನೀಡಿದ ಸ್ವ ಸಹಾಯ ಮಹಿಳಾ ಸಂಘಗಳಿಗೆ ಮಾಹಿತಿ ನೀಡಿದ ಅವರು, ಮಹಿಳೆಯರು ಸಬಲೀಕರಣ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಈ ದಿಸೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯು ಅನೇಕ ಜನಜಾಗೃತಿ ಯೋಜನೆಗಳನ್ನು ಮಹಿಳೆಯರಿಗಾಗಿ ಹಮ್ಮಿಕೊಳ್ಳುತ್ತಿದೆ. ಮಹಿಳಾ ಸಂಘಟನೆಯ ಮೂಲಕ ಮಹಿಳೆಯರು ಆತ್ಮವಿಶ್ವಾಸದ ಮೂಲಕ ಸ್ವಯಂ ಉದ್ಯೋಗವನ್ನು ಮೆಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ಮಹಿಳೆಯರಲ್ಲಿರುವ ಭಯ, ಹಿಂದೆ ಸರೆಯುವು ಮನೋಭಾವ ದೂರವಾಗಿ ಆತ್ಮಸ್ಥೆರ್ಯ ಹೊಂದಲು ಸಾಧ್ಯ ಎಂದು ತಿಳಿಸಿದರು.ಇದೇ ವೇಳೆ ತಾಲೂಕಾ ಎಸ್.ಕೆ.ಡಿ.ಆರ್.ಡಿ. ಪಿ ಯ ಅಧಿಕಾರಿ ದೇವಿಕಾ ತೆಲಂಗ, ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಹಾಗೂ ಸ್ವ ಸಹಾಯ ಮಹಿಳಾ ಸಂಘದ ಸದಸ್ಯರು ಇದ್ದರು.

Read More

ಮುದ್ದೇಬಿಹಾಳ: ಜೈನ ಎನ್ನುವುದು ಒಂದು ಜಾತಿಯಲ್ಲ ಅದೊಂದು ನಿಜವಾದ ಸಂಸ್ಕಾರವಂತ ಮನುಷ್ಯ ಧರ್ಮ. ಪರೋಪಕಾರ, ದಾನ- ಧರ್ಮ ಮಾಡುವುದರಲ್ಲಿ ಜೈನ ಸಮಾಜವು ಮುಂಚೂಣಿಯಲ್ಲಿದೆ. ಪ್ರತಿಯೊಬ್ಬರೂ ಪರರಿಗೆ ಸಹಾಯ, ನೆರವು ನೀಡುವ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲೆಯ ಜೈನ ಮಠ ಹೊಂಬುಜದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪಾರ್ಶ್ವನಾಥ ಭಗವಾನರ ಹಾಗೂ ಮಹಾಮಾತೆ ಪದ್ಮಾವತಿ ದೇವಸ್ಥಾನದ ನೂತನ ಯಾತ್ರಿ ನಿವಾಸ ಹೊಸ ಕಟ್ಟಡದ ಕಾರ್ಯಾಲಯ ಸಭಾಮಂಟಪದ ಉದ್ಘಾಟನೆ ಹಾಗೂ ದಾನಿಗಳಿಗೆ  ಗೌರವ ಸನ್ಮಾನ ಹಾಗೂ ಧರ್ಮಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಅಹಿಂಸಾ ತತ್ವವನ್ನು ಬೋಧನೆ ಮಾಡಿ ಅಹಿಂಸಾ ತತ್ವದಲ್ಲೇ ಧರ್ಮವನ್ನು ಕಟ್ಟಿ ಇಡೀ ಪ್ರಪಂಚಕ್ಕೆ ಸಾತ್ವಿಕ ತತ್ವ ಉಪದೇಶಗಳನ್ನು ನೀಡಿದ ಕೀರ್ತಿ ಜೈನ ಧರ್ಮಕ್ಕಿದೆ. ಜೈನ ಧರ್ಮದವರು ಬೌದ್ಧಿಕವಾಗಿ ಬಲಶಾಲಿಗಳಾಗಿದ್ದು, ಸಂಸ್ಕಾರ ಹಾಗೂ ಧಾರ್ಮಿಕ ವಿದ್ಯೆಯ ಮೂಲಕ ಸಂಪೂರ್ಣ ಸಾಕ್ಷರತೆ ಹೊಂದಿದ ಹೆಗ್ಗಳಿಕೆ ಹೊಂದಿದೆ. ಜೈನ ವಿದ್ಯಾಲಯ ಹಾಗೂ ಜೈನ ಮಂದಿರಗಳ ಜೀರ್ಣೋದ್ದಾರ…

Read More