ಮುದ್ದೇಬಿಹಾಳ: ಲಿಖಿತ ದೂರಿನ ಆಧಾರದ ಮೇಲೆ ೩೦ಸಾವಿರ ಲಂಚದ ಹಣ ಪಡೆಯುತ್ತಿದ್ದ ವೇಳೆ ಪಿಡಿಓ ಮತ್ತು ತಾಂತ್ರಿಕ ಸಹಾಯಕನನ್ನು ಲೋಕಾಯುಕ್ತರರು ರೆಡ್ ಹ್ಯಾಂಡ್ ಹಿಡಿದಿದ್ದಾರೆ.
ತಾಲೂಕಿನ ತಂಗಡಗಿ ಗ್ರಾ.ಪಂ ನ ಪಿಡಿಓ ಬಸವರಾಜ ತಾಳಿಕೋಟಿ ಮತ್ತು ತಾಂತ್ರಿಕ ಸಹಾಯಕ ಪ್ರಸನ್ನ ಶೆಟ್ಟರ ಲೋಕಾಯುಕ್ತರ ಬಲೆಗೆ ಬಿದ್ದಿರುವ ಅಧಿಕಾರಿಗಳು. ಶುಕ್ರವಾರ ವಿಜಯಪುರದ ಕಚೇರಿಯಲ್ಲಿ ದಾಖಲಾಗಿದ್ದ ದೂರಿನ ಅನ್ವಯ ಶನಿವಾರ ದಾಳಿಗೆ ಮುಂದಾಗಿದ್ದು ಹಣ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ.
೨೦೨೦-೨೧ ನೇ ಸಾಲಿನಲ್ಲಿ ತಾಲೂಕಿನ ತಂಗಡಗಿ ಗ್ರಾಮ ಪಂಚಾಯತ ನ ಕಂಪೌಂಡ್ ನ ಗೋಡೆ ಕಟ್ಟಡಕ್ಕೆ ಸಂಬಂಧಿಸಿದ ಬಿಲ್ ಮಂಜೂರು ಮಾಡಲು ೩೫ಸಾವಿರ ರೂ ಬೇಡಿಕೆ ಇಟ್ಟಿದ್ದು ಈ ಪೈಕಿ ೩೦ಸಾವಿರ ಲಂಚದ ಹಣ ಸ್ವೀಕರಿಸುವಾಗ ಯಶಸ್ವಿಯಾಗಿ ಟ್ರ್ಯಾಪ್ ಮಾಡಿ ಆರೋಪಿತರನ್ನು ದಸ್ತಗಿರಿ ಮಾಡಿರುವದಾಗಿ ಲೋಕಾಯುಕ್ತ ಪ್ರಕಟಣೆ ತಿಳಿಸಿದೆ. ಈ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್‌ಗಳಾದ ಆನಂದ ಟಕ್ಕಣ್ಣವರ, ಆನಂದ ಡೋಣಿ ಸಿಬ್ಬಂದಿಗಳಾದ ಸಂತೋಷ ಅಮರಖೇಡ, ಮಹೇಶ ಪೂಜಾರಿ, ಈರಣ್ಣ ಕನ್ನೂರ, ಆನಂದ ಪಡಶೆಟ್ಟಿ, ಸಾಬು ಮುಂಜೆ, ಎಸ್.ಎಂ.ಬಳಗಾನೂರ, ಮದನಸಿಂಗ ರಜಪೂತ, ಮಾಳಪ್ಪ ಸಾಲಗೊಂಡ, ಸಂತೋಷ ಚೌವ್ಹಾಣ ಹಾಗೂ ವಸೀಮ ಅಕ್ಕಲಕೋಟ ಇದ್ದರು.
Subscribe to Updates
Get the latest creative news from FooBar about art, design and business.
ಮುದ್ದೇಬಿಹಾಳ: ಲೋಕಾಯುಕ್ತರ ಬಲೆಗೆ ಪಿಡಿಓ ಮತ್ತು ತಾಂತ್ರಿಕ ಸಹಾಯಕ
Related Posts
Add A Comment