ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದಲ್ಲಿರುವ ಬಿಸಿಎಂ ಹೆಣ್ಣುಮಕ್ಕಳ ವಸತಿ ನಿಲಯಕ್ಕೆ ತಾಲೂಕು ಕಲ್ಯಾಣಾಧಿಕಾರಿ ಶಿವಲೀಲಾ ಕೊಣ್ಣೂರ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಕೆಲವು ದಿನಗಳ ಹಿಂದೆ ಇಲ್ಲಿನ ವಿದ್ಯಾರ್ಥಿಗಳು ಗುಣಮಟ್ಟದ ಅಹಾರ ಹಾಗೂ ವಸತಿ ನಿಲಯದಲ್ಲಿ ಸೇವೆಯಲ್ಲಿರುವ ಅಡುಗೆಯವರ ಪೈಕಿ ಒಬ್ಬರ ಮೇಲೆ ಕೆಲವು ಆರೋಪಗಳನ್ನು ಹೊರಿಸಿ ಅವರನ್ನು ಕೂಡಲೇ ಬದಲಾಯಿಸುವಂತೆ ಆಗ್ರಹಿಸಿ ವಿದ್ಯಾರ್ಥಿ ಪರಿಷತ್ ನ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅಧಿಕಾರಿ ಶಿವಲೀಲಾ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ಭೋಜನಾಲಯದಲ್ಲಿ ಅಡುಗೆ ಸಹಾಯಕಿಯರು ಡ್ರೆಸ್ ಹಾಕಿಕೊಳ್ಳದ ಹಿನ್ನೆಲೆಯಲ್ಲಿ ಕೂಡಲೇ ಇಲಾಖೆ ನೀಡಿದ ಡ್ರೆಸ್ ಹಾಕಿಕೊಂಡು ಅಡುಗೆ ಮಾಡಬೇಕು ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಗುಣಮಟ್ಟದ ಊಟ ನೀಡಿ ಜತೆಗೆ ಶುಚಿತ್ವ ಕಾಪಾಡುವಂತೆ ಮೇಲ್ವಿಚಾರಕರಿಗೆ ಸೂಚಿಸಿದರು. ಕೆಲವು ವಿಚಾರಗಳಿಗಾಗಿ ವಾರ್ಡನ ಇಂದುಮತಿ ಚವ್ಹಾಣರನ್ನ ತರಾಟೆಗೆ ತೆಗದುಕೊಂಡರಲ್ಲದೇ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ.
ಈ ವೇಳೆ ತಾಲೂಕು ವಿಸ್ತರಣಾಧಿಕಾರಿ ಉಮೇಶ ಮಾಟೂರ, ವಾರ್ಡನ್ ಇಂದುಮತಿ ಚೌವ್ಹಾಣ, ಅಡುಗೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
“ನಮ್ಮ ಮನವಿಗೆ ವಾರ್ಡನ್ ಇಂದುಮತಿ ಚವ್ಹಾಣ ಎಲ್ಲಾ ರೀತಿಯಲ್ಲಿ ಸ್ಪಂದಿಸಿದ್ದಾರೆ. ಆದರೆ ಅಡುಗೆ ಮಾಡುವ ಸವಿತಾ ದೊಡಮನಿ ನಮ್ಮನ್ನ ಗುರಿಯಾಗಿಸಿಕೊಂಡು ತೊಂದರೆ ನೀಡುವುದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬ್ಯಾಗ್ ಹೊರೆಸಿ ಮನೆಗೆ ಕಳುಹಿಸುವದಾಗಿ ಹೆದರಿಕೆ ಹಾಕುತ್ತಾರೆ. ಹಬ್ಬದ ರಜಾ ದಿನಗಳಲ್ಲಿ ನಮ್ಮನ್ನು ಮನೆಗೆ ತೆರಳುವಂತೆ ಪೀಡಿಸುತ್ತಾರೆ” ಎಂದೆಲ್ಲ ಪರಿಶೀಲನೆಗೆ ಬಂದ ಅಧಿಕಾರಿ ಶಿವಲೀಲಾ ಕೊಣ್ಣೂರ ಮುಂದೆ ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡರು.
Subscribe to Updates
Get the latest creative news from FooBar about art, design and business.
ವಸತಿ ನಿಲಯಕ್ಕೆ ತಾಲೂಕು ಕಲ್ಯಾಣಾಧಿಕಾರಿ ಶಿವಲೀಲಾ ಕೊಣ್ಣೂರ ಭೇಟಿ-ಪರಿಶೀಲನೆ
Related Posts
Add A Comment

