ವಿಜಯಪುರ: ಇಂದಿನ ದಿನಮಾನದಲ್ಲಿ ಮೊಬೈಲ್ ಬಳಕೆ ಅತ್ಯಗತ್ಯವಾಗಿದ್ದರೂ ಸಹ ಮಿತಬಳಕೆ ಮಾಡಬೇಕು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನಹರಿಸಿ ಉತ್ತಮ ಶಿಕ್ಷಣ ಪಡೆದು ಉತ್ತಮ ಸ್ಥಾನ ಪಡೆಯುವತ್ತ ಮುನ್ನುಗ್ಗಬೇಕು ಎಂದು ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ ಕಿವಿಮಾತು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನದಲ್ಲಿ ನಡೆಯುತ್ತಿರುವ ಶ್ರೀ ಶರಣ ಜ್ಯೋತಿ ವಿದ್ಯಾ ಸಂಸ್ಥೆಯ ಗ್ರಾಮಿಣ ಬಾಲಕಿಯರ ವಸತಿ ನಿಲಯದಲ್ಲಿ ಶನಿವಾರದಂದು ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಕೂಡ ವಿದ್ಯಾರ್ಥಿಯಾಗಿದ್ದಾಗ ವಸತಿ ನಿಲಯದಲ್ಲಿ ಇದ್ದು ಅಂದು ಆ ಕಾಲದಲ್ಲಿ ಮೊಬ್ಯಲಗಳ ಬಳಕೆ ಜಾಸ್ತಿಯಾಗಿರಲಿಲ್ಲ . ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಇದು ಹೆಚ್ಚಾಗಿದೆ .ಮೊಬ್ಯಲಗಳ ಬಳಕೆ ಎಷ್ಟು ಸುರಕ್ಷಿತವೊ ಅಷ್ಟೇ ಅಸುರಕ್ಷಿತವಾಗಿದೆ ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚಿನ ಗಮನ ಅಧ್ಯಯನದ ಕಡೆಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ದೇವಣಗಾಂವ, ಮಹಿಳಾ ಮಕ್ಕಳ ಅಧಿಕಾರಿ ದೀಪಾ ಕಾಳೆ ಮತ್ತು ಗಿರಿಜಾ ದೊಡಮನಿ.ವೈದ್ಯರಾದ ಅಮ್ರತಾ,ಜಯಶ್ರೀ,ಮತ್ತು ಶಾವಕ್ಕ ಅವರು ಉಪಸ್ಥಿತರಿದ್ದರು.
Related Posts
Add A Comment