ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಮ ಪಂಚಾಯತನ ಪಿಡಿಓ ಬಸವರಾಜ ತಾಳಿಕೋಟಿ ಮೇಲೆ ಲೋಕಾಯುಕ್ತರಿಗೆ ದೂರು ನೀಡಿದ ವ್ಯಕ್ತಿಯನ್ನು ಮೊದಲು ತನಿಖೆ ನಡೆಸಬೇಕು ಎಂದು ಡಿಎಸ್‌ಎಸ್ ಮುಖಂಡ ಹರೀಶ ನಾಟೇಕಾರ ಹೇಳಿದರು
ಪಟ್ಟಣದ ತಾ.ಪಂ ನ ಕಾರ್ಯಾಲಯದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ ವ್ಯಕ್ತಿ ನಮ್ಮ ಸಮುದಾಯಯದ ಅಧಿಕಾರಿಗಳನ್ನು ಟಾರ್ಗೇಟ್ ಮಾಡುತ್ತಾರೆ. ತಮಗೆ ಹಣ ನೀಡುವಂತೆ ದುಂಬಾಲು ಬೀಳುತ್ತಾರೆ. ತಮ್ಮ ಬೇಡಿಕೆ ಪೂರೈಕೆಯಾಗದಿದ್ದಾಗ ಇಂಥದ್ದೊಂದು ಟ್ರ್ಯಾಪ್ ಮಾಡಿಸಲು ಮುಂದಾಗುತ್ತಾರೆ. ಇವರ ಮೇಲೆ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವದಾಗಿ ತಿಳಿಸಿದರು.
ಈ ವೇಳೆ ಪ್ರಮುಖರಾದ ಪ್ರಶಾಂತ ಕಾಳೆ, ಬಸವರಾಜ ಪೂಜಾರಿ, ರಾಜು ತಂಗಡಗಿ, ದೇವರಾಜ ಹಂಗರಗಿ ಮತ್ತೀತರರು ಮಾತನಾಡಿ, ಈ ಹಿಂದೆ ನಡೆದ ಕೆಲವು ಪ್ರಕರಣಗಳ ಪೈಕಿ ಇದೇ ವ್ಯಕ್ತಿ ದೂರು ನೀಡಿದ್ದು ಅಧಿಕಾರಿಗಳನ್ನು ಹೆದರಿಸುವ ಉದ್ದೇಶ ಇದಾಗಿದೆ. ತಂಗಡಗಿ ಗ್ರಾ.ಪಂ ಗೆ ಬರುವ ಪಿಡಿಓ ಗಳನ್ನು ತಮ್ಮ ಕಂಟ್ರೋಲ ನಲ್ಲಿ ಇಟ್ಟುಕೊಳ್ಳಬೇಕೆನ್ನು ಆಸೆ ಇವರದು. ಹಾಗಾಗಿ ದೂರುದಾರನ ಮೇಲೆ ತನಿಖೆಯಾಗಬೇಕು ಎಂದರು.
ಈ ವೇಳೆ ಪ್ರಕಾಶ ಸರೂರ, ಮಲ್ಲು ಚಲವಾದಿ, ಸಿದ್ದು ಚಲವಾದಿ, ಪ್ರಕಾಶ ಹಾದಿಮನಿ, ಶರಣು ಮಾದರ ಸೇರಿದಂತೆ ಮತ್ತೀತರರು ಇದ್ದರು.
ಲೋಕಾಯುಕ್ತರಿಗೆ ದೂರು ನೀಡಿದ ವ್ಯಕ್ತಿಯ ತನಿಖೆಗೆ ಡಿಎಸ್ಸೆಸ್ ಆಗ್ರಹ
Related Posts
Add A Comment