Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಜಯ್ ನುಡಿ:ಜಯಶ್ರೀ ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ತುಂಬಾ ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಕಾರ್ಯದ ಮೇಲೆ ಕೇಂದ್ರೀಕರಿಸುವ ಮೆದುಳಿನ ಸಾಮರ್ಥ್ಯ ಹೆಚ್ಚು ಕಷ್ಟಕರವಾಗಿದೆ. ಒಂದು ಅಧ್ಯಯನದ ಪ್ರಕಾರ ಮೂರು ನಿಮಿಷಕ್ಕೊಮ್ಮೆ ವಿಚಿಲಿತರಾಗುತ್ತಿದ್ದೇವೆ. ತ್ವರಿತವಾಗಿ ನಿಗದಿತ ಸಮಯದಲ್ಲಿ ಗಮನವಿರಿಸಿ ಕೆಲಸ ಮಾಡುವುದು ಒಂದು ದೊಡ್ಡ ಸವಾಲಿನಂತೆ ಕಾಣುತ್ತದೆ. ಅಸಾಧ್ಯವೆಂದು ತೋರುತ್ತದೆ. ಆದಾಗ್ಯೂ ಮನಸ್ಸು ಮಾಡಿದರೆ ಅದೊಂದು ಕಠಿಣ ಕಾರ್ಯವೇನಲ್ಲ. ಅನಗತ್ಯ ವಿಷಯಗಳ ಕಡೆ ಗಮನ ಸೆಳೆಯುವ ಇಷ್ಟೆಲ್ಲ ಸಂಗತಿಗಳು ಇರುವಾಗಲೂ ಮಾಡುವ ಕೆಲಸದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವುದು ಉತ್ತಮ ಅಭ್ಯಾಸದಂತೆ ಬೆಳೆಸಿಕೊಳ್ಳುವುದಕ್ಕೆ ಕೆಲವು ಸಲಹೆಗಳು.ವಿಚಲಿತರಾಗದಿರಿಹಾಗೆ ನೋಡಿದರೆ ಪ್ರಪಂಚವು ಒಂದು ವಿಚಲಿತ ಸ್ಥಳ. ಹೀಗಾಗಿ ಸಾಮಾನ್ಯವಾಗಿ ಕೆಲಸ ಮಾಡುವಾಗ ಸುತ್ತಮುತ್ತಲ ವಾತಾವರಣವು ನಮ್ಮನ್ನು ವಿಚಲಿತಗೊಳಿಸುತ್ತದೆ. ನೂರಾರು ವಿಷಯಗಳು ಸುತ್ತಮುತ್ತಲೂ ನಡೆಯುತ್ತಿರುತ್ತವೆ. ಆದರೂ ಕೆಲಸದ ಮೇಲೆ ಹೇಗೆ ಗಮನ ಹರಿಸಬೇಕು? ನಿಮ್ಮ ಸಮಯವನ್ನು ವ್ಯರ್ಥ ಮಾಡುವ ನಿಮ್ಮ ಗೆಳೆಯರಿರಬಹುದು ಇಲ್ಲವೇ ಮನೆಯವರಿರಬಹುದು. ಕಛೇರಿಯಲ್ಲಿ ಸಹೋದ್ಯೋಗಿಗಳು ಸೆಲ್ ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ನೋಟಿಫಿಕೇಶನ್‌ಗಳು ಇರಬಹುದು. ಅಂತೆಯೇ…
ರಾಜ್ಯಮಟ್ಟದ ಪ್ರಥಮ ಶಿಕ್ಷಕ ಸಾಹಿತಿಗಳ ಸಮ್ಮೇಳನದ ಸರ್ವಾಧ್ಯಕ್ಷರಾದ ಹ.ಮ.ಪೂಜಾರಿ ಗುರುಗಳ ಕುರಿತ ವಿಶೇಷ ಲೇಖನ “ಬನ್ನಿ ನಮ್ಮ ಮಕ್ಕಳಿಗಾಗಿ ಜೀವಿಸಿ” ಎಂಬ ಪ್ರೋಬೆಲ್ ಅವರ ಮಾತನ್ನು ಅಕ್ಷರಶಃ ಅರಿತು ಆಚರಣೆಯಲ್ಲಿ ತಂದ ಅಪರೂಪದ ಆದರ್ಶ ಶಿಕ್ಷಕ ಸಾಹಿತಿ ಹ.ಮ. ಪೂಜಾರ ಗುರುಗಳು ಶಿಕ್ಷಕ ವೃತ್ತಿಯ ಶಿಖರ, ಸಾಹಿತಿಗಳ ತೊಟ್ಟಿಲು ವಿಜಯಪುರದ ಹಿರಿಯ ತಲೆಮಾರಿನ ಮಕ್ಕಳ ಸಾಹಿತಿಗಳ ಸಾಲಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಹ.ಮ. ಪೂಜಾರ ಗುರುಗಳು ವೃತ್ತಿಯಿಂದ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿ ವಿಶ್ರಾಂತ ಜೀವನ ನಡೆಸುತ್ತಿದ್ದು, ಪ್ರವೃತ್ತಿಯಿಂದ ಸಾಹಿತಿಯಾಗಿ ಅವಿಶ್ರಾಂತವಾಗಿ ಅಮೂಲ್ಯ ಕೃತಿಗಳನ್ನು ನೀಡುತ್ತಿದ್ದಾರೆ. ಇದೇ ಅಕ್ಟೋಬರ್-೧೨ ರಂದು ಬಾಗಲಕೋಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜರುಗಲಿರುವ ರಾಜ್ಯಮಟ್ಟದ ಪ್ರಥಮ ಶಿಕ್ಷಕ ಸಾಹಿತಿಗಳ ಸಮ್ಮೇಳನದ ಸರ್ವಾಧ್ಯಕ್ಷರ ಗೌರವ ಸ್ಥಾನ ಸಿಂದಗಿಯ ರಾಷ್ಟçಪ್ರಶಸ್ತಿ ಪುರಸ್ಕೃತ ಆದರ್ಶ ಶಿಕ್ಷಕ ಹ.ಮ. ಪೂಜಾರ ಗುರುಗಳಿಗೆ ಒಲಿದು ಬಂದಿದ್ದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಇದು ಅವರ ಶಿಕ್ಷಣ ಮತ್ತು ಸಾಹಿತ್ಯ ಸಾಧನೆಗೆ ಸಂದ ಗೌರವವಾಗಿದೆ. ಸೂಕ್ತ, ಸಮರ್ಥ…
ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಹುಮತದತ್ತ ಕಾಂಗ್ರೆಸ್ ಬೆಂಗಳೂರು: ವಿಜಯಪುರ ಮಹಾನಗರ ಪಾಲಿಕೆಯ 7 ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಬೆಂಗಳೂರಿನ ನಿವಾಸದಲ್ಲಿ ಬುಧವಾರ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ.ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯರಾದ ಅಶೋಕ ನ್ಯಾಮಗೌಡ, ವಿಮಲಾ ರಫೀಕ್ ಕಾನೆ, ಅಲ್ತಾಫ್ ಇಟಗಿ, ಜೆಡಿಎಸ್ ಸದಸ್ಯೆ ಸುಮಿತ್ರಾ ರಾಜು ಜಾದವ, ಎಂಐಎಂಐಎಂ ನ ಕೈಸರ್ ಇನಾಮದಾರ ಮತ್ತು ಸೂಫಿಯಾ ವಾಟಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪಾಲಿಕೆಯ ಮತ್ತೋರ್ವ ಸದಸ್ಯೆ ಕೂಡ ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದಾರೆ. ಆದರೆ, ಅವರು ಕಾರಣಾಂತರಗಳಿಂದ ಬಂದಿರಲಿಲ್ಲ.ಒಟ್ಟು 35 ಸದಸ್ಯರನ್ನು ಹೊಂದಿರುವ ಪಾಲಿಕೆಯಲ್ಲಿ 10 ಜನ ಕಾಂಗ್ರೆಸ್ ಸದಸ್ಯರಿದ್ದಾರೆ. ಈ ಸೇರ್ಪಡೆಯೊಂದಿಗೆ ಈಗ ಕಾಂಗ್ರೆಸ್ ಕಾರ್ಪೋರೇಟರ್ ಗಳ ಸಂಖ್ಯೆ 18ಕ್ಕೇರಿದೆ. ಅಲ್ಲದೇ, ತಲಾ ಇಬ್ಬರು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಕಾಂಗ್ರೆಸ್ ಸದಸ್ಯರ ಒಟ್ಟು ಸಂಖ್ಯೆ 22ಕ್ಕೆ ಏರಿದಂತಾಗಿದೆ. ಇದರಿಂದಾಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಂತಾಗಿದೆ. ಇದರಿಂದಾಗಿ ಸದ್ಯದಲ್ಲೇ ಮೇಯರ್ ಮತ್ತು ಉಪಮೇಯರ್…
ಪಾಸ್ ಪೋರ್ಟ್ ಚಿತ್ರಗಳದ್ದು ಒಂದು ಕತೇನೆ. ಎದಕೋ ಬೇಕಾಗಿರ್ತವೆ ‘ತಕ್ಕೋತೀವಿ’, ಪ್ರತಿ ಸಲ ಒಂದೊಂದು ನಮೂನಿ ಬರರ್ತವೆ. ಹಂಗೇ ಇಟ್ಕೋತೀವಿ. ಆರೇಳು ವರ್ಷಗಳ ಹಿಂದೆ ‘ತಕ್ಕೊಂಡ’ ಈ ಚಿತ್ರ ಈಗಲೂ ನಂಗೆ ಇಷ್ಟ.**ಮೊದ್ಲೆಲ್ಲ ಫೋಟೊ ತಕ್ಕೊಂಡ ಮ್ಯಾಲ ‘ತೊಳೀಬೇಕ್ರಿ’, ಇನ್ನು ಪ್ರಿಂಟ್ ಆಗಿಲ್ಲ ಅಂತ ಸ್ಟುಡಿಯೋಗೆ ಎಡತಾಕಿಸುತ್ತಿದ್ದರು. ಹೆಂಗ್ ಬಂದಾವೋ ಎಂದು ಚಡಪಡಿಸಿ ಕಾಯ್ತಿದ್ದೆವು. ಈಗೇನಿಲ್ಲ. ಇನ್ನೂ ನಾವು ಸರಿಯಾಗಿ ನಿಂತೇ ಇರಲ್ಲ, ಕ್ಲಿಕ್ ಅನಿಸಿ, ಸಣ್ಣ ಮಶೀನದಾಗ ಸರ್ರಂತ ಪ್ರಿಂಟ್ ತಗದೇ ಬಿಡ್ತಾರ. ಹೆಂಗ್ ಯಾಕ ಫೋಟೊ ಬರ್ಲಿ, ಅದನ್ನ ಬೇಕಾದಕಡೀಗಿ ‘ಅಲ್ಲೇ ಮೆತ್ತೋ’ ಗಡಿಬಿಡೀಲಿ ನಾವಿರ್ತೀವಿ. ಹೆಂಗ್ ಬಂದದ ನೋಡೋಕೆ ಹೋಗಲ್ಲ. ಅರ್ಜಿ ತುಂಬಬೇಕು!**ಮೊದಲು ಫೋಟೊಗ್ರಾಫರ್ ತನ್ನ ಕ್ಯಾಮರಾ ಸಜ್ಜು ಮಾಡ್ಕೊಳ್ಳೋಕೆ ಐದು ನಿಮಿಷ ಮಾಡ್ತಿದ್ದ. ಅಷ್ಟೊತ್ರಲ್ಲಿ ನಾವು ಒಳಗ ಕನ್ನಡಿ ಮುಂದ ನಿಂತು ಚಂದಗೆ ಹಿಕ್ಕೊಂಡು, ಪೌಡರ್ ಹಚಗೋಂಡು ಟ್ರಿಮ್ ಆಗ್ತಿದ್ದೆವು. ಆತ ಬೇಸರಿಸದೇ ಎರಡುಮೂರು ಸರ್ತಿ ಕ್ಲಿಕ್ ಮಾಡಿ, ಪ್ರೀತಿಯಿಂದ ಫೋಟೊ ತಗೀತಿದ್ದ.. ನಗ್ತಿದ್ದ.**ಆದ್ರ ಈಗ…
ಬೆಂಗಳೂರು: ಅತ್ತಿಬೆಲೆ ಪ್ರಕರಣದಲ್ಲಿ ತಹಶೀಲ್ದಾರ್, ಇನ್ಸ್ ಪೆಕ್ಟರ್ ಮತ್ತು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಅಮಾನತಿಗೆ ಸಿಎಂ ಸೂಚನೆ ನೀಡಿದ್ದಾರೆ.ಪ್ರಕರಣದ ಸಂಬಂಧ ಇಂದು ಸಭೆ ನಡೆಸಿದ ಸಿಎಂ, ಈ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳೂ ಎಲ್ಲ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.ಅತ್ತಿಬೆಲೆ ಪಟಾಕಿ ದುರಂತ ಪ್ರಕರಣದಲ್ಲಿ ಗೋಡೌನ್‌ಗೆ ಅನುಮತಿ ನೀಡಿರಲಿಲ್ಲ. ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು ಎಂಬ ಮಾಹಿತಿಯನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದಿದ್ದಾರೆ. ರಾಜ್ಯದೆಲ್ಲೆಡೆ, ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋಡೌನ್‌ಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಸಿಎಂ ಸೂಚಿಸಿದರು.
ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪಾವಳಿಗೆ ಹಸಿರು ಪಟಾಕಿ ಸಿಡಿಸಲು ಅವಕಾಶ | ಸುಪ್ರೀಂ ಕೋರ್ಟ್ ಆದೇಶ ಪಾಲನೆ ಕಡ್ಡಾಯ | ಇನ್ಮುಂದೆ ಪ್ರತಿ ವರ್ಷ ಲೈಸನ್ಸ್ ನವೀಕರಣ ಬೆಂಗಳೂರು: ಗಣೇಶ ಹಬ್ಬ, ಮದುವೆ ಸಮಾರಂಭ ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪಟಾಕಿ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಅತ್ತಿಬೆಲೆ ಪಟಾಕಿ ದುರಂತ ಹಿನ್ನೆಲೆಯಲ್ಲಿ ಮಂಗಳವಾರ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಚರ್ಚಿಸಿದ ಮುಖ್ಯಮಂತ್ರಿ, ದೀಪಾವಳಿ ಸಮೀಪವೇ ಬರುತ್ತಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದೆ ಎಂದು ತಿಳಿಸಿದರು.ಪಟಾಕಿ ಸಿಡಿಸುವಾಗ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದೆಲ್ಲೆಡೆ ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋದಾಮುಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಸೂಚಿಸಲಾಗಿದೆ…
ಢವಳಗಿ: ಸಮೀಪದ ಲಿಂಗದಳ್ಳಿ ಗ್ರಾಮದ ಸಂಗಣ್ಣ ಬಸವಂತ್ರಾಯ ಮೇಟಿ ಮತ್ತು ನಾಗಪ್ಪ ಕನಕಪ್ಪ ಬಡಿಗೇರ ಅವರ ತಲಾ ಒಂದೊಂದು ಎತ್ತನ್ನು ಹಾಕಿ ಲಿಂಗದಳ್ಳಿ ಗ್ರಾಮದ ಬಸನಗೌಡ ಈರಣ್ಣ ಬಸರಕೋಡ ಮತ್ತು ಅನೀಲಗೌಡ B ಪಾಟೀಲ ಅವರ ಜಮೀನಿನಲ್ಲಿ ಹತ್ತಿ ಮತ್ತು ತೊಗರಿ ಬೆಳೆಯಲ್ಲಿ ನಸುಕಿನ ಜಾವ 5ರಿಂದ ಮಧ್ಯಾಹ್ನ 3ಗಂಟೆ 25 ನಿಮಷಗಳವರೆಗೆ 10ಗಂಟೆ 25ನಿಮಿಷದಲ್ಲಿ ಸುಮಾರು26 ಎಕರೆ ಜಮೀನನ್ನು ಒಂದೆ ಕುಂಟೆಯಿಂದ ಉಳುಮೆ ಮಾಡಿ ಅಗಾಧ ಸಾಧನೆ ಮಾಡಿವೆ.ಎತ್ತಿನ ಮಾಲಿಕರು ಮತ್ತು ಸಾತ್ ನೀಡಿದ ಗ್ರಾಮದ ಯುವಕರು ಸಂತಸ ವ್ಯಕ್ತಪಡಿಸಿ ಎತ್ತುಗಳಿಗೆ ಮತ್ತು ತಾವುಗಳು ಪರಸ್ಪರ ಗುಲಾಲ ಎರಚಿಕೊಂಡು ಸಂಭ್ರಮಿಸಿದರು.10ಗಂಟೆ 25 ನಿಮಿಷದಲ್ಲಿ ಗಂಟೆಯಲ್ಲಿ 26ಎಕರೆ ಹೊಲ ಉಳುಮೆ(ಹರಗಿದ್ದು) ಮಾಡಿದ ಸಾಧನೆ ಮಾಡಿದ ಎತ್ತುಗಳು ಟ್ರಾಕ್ಟರ್ ಮಷಿನ್ ಗೆ ನಾವೇನು ಕಡಿಮೆ ಇಲ್ಲ ಎಂಬಂತೆ ಕಟ್ಟುಮಸ್ತಾಗಿ ನಿಂತಿದ್ದವು. ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಹಲಗೆ ಬಡಿದು ಗ್ರಾಮದ ಆರಾಧ್ಯ ದೇವರಾದ ಮಾರುತೇಶ್ವರ, ಗ್ರಾಮದೇವತೆ ಮತ್ತು ಮರಗಮ್ಮದೇವಿ ದೇವಸ್ಥಾನಕ್ಕೆ ಹೋದರು.ಗ್ರಾಮಸ್ಥರಾದ ಗಂಗಾಧರ…
ವಿಜಯಪುರ: ನಗರದ ಕಂದಗಲ್ಲ ಹಣಮಂತ್ರಾಯ ರಂಗಮಂದಿರದಲ್ಲಿ ಪ್ರಕಾಶ ಮಠ ನೇತೃತ್ವದ ಸನ್ಲೈಟ್ ಮೇಲೋಡಿಸ್ ಮತ್ತು ಶರಣು ಸಬರದರವರ ಜಿಲ್ಲಾ ಯುವ ಪರಿಷತ್ ಆಯೋಜನೆಯಲ್ಲಿ ನಡೆಸಲಾದ ಸ್ವರ ಸಂಭ್ರಮ ಸಂಗೀತ ಕಾರ್ಯಕ್ರಮ ನಗರದ ಸಾವಿರಾರು ಜನ ಸಂಗೀತಾಸಕ್ತರ ಹರ್ಷೋದ್ಘಾರದೊಂದಿಗೆ ಯಶಸ್ವಿಯಾಗಿ ನೆರವೇರಿತು.ಬೆಂಗಳೂರಿನ ಪ್ರಸಿದ್ಧ ಖಾಸಗಿ ವಾಹಿನಿಯ ಮುಖ್ಯ ಕಲಾವಿದರಾದ ರೇಮೋ ಹಾಗೂ ಸಂಗೀತ ನಿರ್ದೇಶಕಿ ಮಾನಸಾ ಹೊಳ್ಳ ನೇತೃತ್ವದಲ್ಲಿ ೯ ಜನ ಮಹಿಳೆಯರ ಸಂಗೀತ ತಂಡದಿಂದ ಸ್ವರ ಸಂಭ್ರಮ ಕಾರ್ಯಕ್ರಮ ೩ ಗಂಟೆಗಳ ಕಾಲ ಕಿಕ್ಕಿರಿದು ತುಂಬಿದ ರಂಗ ಮಂದಿರದ ಸಂಗೀತಾಸಕ್ತರು ಕುಣಿದು ಕುಪ್ಪಳಿಸುವಂತೆ ಮಾಡಿತು.ಗೌರಾಬಾಯಿ ಶಿರಡೋಣ, ಶ್ರೀದೇವಿ ಉಮೇಶ ಕಾರಜೋಳ, ಮಲ್ಲಮ್ಮಾ ಯಾಳವಾರ, ಎ.ಪಿ.ಎಂ.ಸಿ ಪಿ.ಎಸ್.ಐ ಜ್ಯೋತಿ ಪೋಳ, ಮಂಜುಳಾ ಕಾಳಗಿ ಮತ್ತು ಸ್ಮೀತಾ ಪಾಟೀಲ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.ಸಂಗೀತಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಐತಿಹಾಸಿಕ ವಿಜಯಪುರದಲ್ಲಿ ಆಗಾಗ ಸಂಗೀತ ಕಾರ್ಯಕ್ರಮ ನಡೆಸಿ ಬೇಸತ್ತ ಮನಸ್ಸುಗಳಿಗೆ ಮನರಂಜನೆ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಸಂಸ್ಥೆಯವರು…
ವಿಜಯಪುರ: ಮತದಾರ ಪಟ್ಟಿಗಳನ್ನು ತಿದ್ದುಪಡಿ ಮಾಡುವಂತೆ ಆಗ್ರಹಿಸಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿ ವತಿಯಿಂದ ಜಿಲ್ಲಾ ಚುನಾವಣಾಧಿಕಾರಿಗಳು, ವಿಜಯಪುರ ಇವರಿಗೆ ಮನವಿ ಸಲ್ಲಿಸಲಾಯಿತು.ಮತದಾರರ ಪಟ್ಟಿಯಲ್ಲಿ ಅನೇಕ ಹೆಸರುಗಳು ಕಾಣೆಯಾಗಿದ್ದು, ಕೆಲವು ಮತದಾರರ ಹೆಸರುಗಳನ್ನು ಸರಿಯಾಗಿ ಬರೆಯಲಾಗಿಲ್ಲ. ಮತದಾರ ಪಟ್ಟಿಯಲ್ಲಿ ಹೆಸರುಗಳ ಮೊದಲ ಅಥವಾ ಮಧ್ಯದ ಮತ್ತು ಕೊನೆಯ ಹೆಸರು ತಪ್ಪಾಗಿರುತ್ತವೆ. ಕೆಲವು ಮತದಾರರ ಹೆಸರುಗಳು ಅವರು ವಾಸಿಸುವ ಪ್ರದೇಶದಲ್ಲಿ ಇರುವದಿಲ್ಲ. ಅವರು ಬೇರೆ ವೇಳಾಸದಲ್ಲಿ ವಾಸವಾಗಿರುತ್ತಾರೆ. ಮತದಾನಕ್ಕೆ ಗೈರು ಹಾಜರಾದವರ ಮತವನ್ನು ಬೇರೊಬ್ಬರು ಮತ ಚಲಾಯಿಸುತ್ತಿದ್ದಾರೆ. ಕೆಲವು ಮತದಾರರ ಹೆಸರುಗಳು ೧ ಕ್ಕಿಂತ ಹೆಚ್ಚು ಮತಕ್ಷೇತ್ರದಲ್ಲಿ ಇರುತ್ತವೆ. ಚುನಾವಣಾ ಕರ್ತವ್ಯಕ್ಕೆ ಸ್ಥಳೀಯರ ಬದಲಿಗೆ ಹೊರಗಿನವರನ್ನು ನಾಮನಿರ್ದೇಶನ ಮಾಡಬೇಕು. ಇದರಿಂದ ಬೂತ ಮಟ್ಟದಿಂದ ಮೇಲಿನವರೆಗೆ ಪ್ರಭಾವ ಬೀರುವ ಪ್ರಶ್ನೆ ಬರುವದಿಲ್ಲ . ಕೆಲವು ರಾಜಕಾರಣಿಗಳು ತಮ್ಮ ಶಿಕ್ಷಣ ಸಂಸ್ಥೆಗಳನ್ನು ಮತ್ತು ಸಹಕಾರ ಸಂಘದ ನೌಕರರನ್ನು ಪ್ರಚಾರದ ಸಲುವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಖರ್ಚು ವೆಚ್ಚವನ್ನು ಚುನಾವಣಾ ಆಯೋಗ ಗಂಭೀರವಾಗಿ…
ವಿಜಯಪುರ: ನಗರದ ಅಥಣಿ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇದೇ ದಿ.೧೨ ರಂದು ಬೆಳಿಗ್ಗೆ ೧೦ ಕ್ಕೆ ಬೀದಿ ಬದಿ ವ್ಯಾಪರಸ್ಥರಿಗಾಗಿ ಪಿ.ಎಂ. ಸ್ವನಿಧೀ ಯೋಜನೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.ಮಾಜಿ ಸಚಿವ ಹಾಗೂ ಯೋಜನೆಯ ರಾಜ್ಯ ಸಂಚಾಲಕ ಎಸ್.ಎ. ರಾಮದಾಸ್, ಸಂಸದ ರಮೇಶ ಜಿಗಜಿಣಗಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಬಿಜೆಪಿ ನಗರ ಮಂಡಳ ಅಧ್ಯಕ್ಷ ಮಳುಗೌಡ ಪಾಟೀಲ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಲಿದ್ದಾರೆ. ಈ ಯೋಜನೆಯ ಲಾಭ ಪಡೆದುಕೊಳ್ಳಬಯಸುವವರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ವಿವಿಧ ಪೂರಕ ದಾಖಲೆಗಳನ್ನು ತರಬೇಕು, ಹೆಚ್ಚಿನ ಮಾಹಿತಿಗಾಗಿ ಕಿರಣ ಪಾಟೀಲ (೯೯೧೬೪೫೯೯೯), ಬಸವರಾಜ ಬೈಚಬಾಳ ೯೯೦೨೯೯೭೫೨೭, ಸಚಿನ್ ಬೊಂಬಳೆ ೯೮೮೬೪೪೦೧೬೬ ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
