ವಿಜಯಪುರ: ನಗರದ ಕಂದಗಲ್ಲ ಹಣಮಂತ್ರಾಯ ರಂಗಮಂದಿರದಲ್ಲಿ ಪ್ರಕಾಶ ಮಠ ನೇತೃತ್ವದ ಸನ್ಲೈಟ್ ಮೇಲೋಡಿಸ್ ಮತ್ತು ಶರಣು ಸಬರದರವರ ಜಿಲ್ಲಾ ಯುವ ಪರಿಷತ್ ಆಯೋಜನೆಯಲ್ಲಿ ನಡೆಸಲಾದ ಸ್ವರ ಸಂಭ್ರಮ ಸಂಗೀತ ಕಾರ್ಯಕ್ರಮ ನಗರದ ಸಾವಿರಾರು ಜನ ಸಂಗೀತಾಸಕ್ತರ ಹರ್ಷೋದ್ಘಾರದೊಂದಿಗೆ ಯಶಸ್ವಿಯಾಗಿ ನೆರವೇರಿತು.
ಬೆಂಗಳೂರಿನ ಪ್ರಸಿದ್ಧ ಖಾಸಗಿ ವಾಹಿನಿಯ ಮುಖ್ಯ ಕಲಾವಿದರಾದ ರೇಮೋ ಹಾಗೂ ಸಂಗೀತ ನಿರ್ದೇಶಕಿ ಮಾನಸಾ ಹೊಳ್ಳ ನೇತೃತ್ವದಲ್ಲಿ ೯ ಜನ ಮಹಿಳೆಯರ ಸಂಗೀತ ತಂಡದಿಂದ ಸ್ವರ ಸಂಭ್ರಮ ಕಾರ್ಯಕ್ರಮ ೩ ಗಂಟೆಗಳ ಕಾಲ ಕಿಕ್ಕಿರಿದು ತುಂಬಿದ ರಂಗ ಮಂದಿರದ ಸಂಗೀತಾಸಕ್ತರು ಕುಣಿದು ಕುಪ್ಪಳಿಸುವಂತೆ ಮಾಡಿತು.
ಗೌರಾಬಾಯಿ ಶಿರಡೋಣ, ಶ್ರೀದೇವಿ ಉಮೇಶ ಕಾರಜೋಳ, ಮಲ್ಲಮ್ಮಾ ಯಾಳವಾರ, ಎ.ಪಿ.ಎಂ.ಸಿ ಪಿ.ಎಸ್.ಐ ಜ್ಯೋತಿ ಪೋಳ, ಮಂಜುಳಾ ಕಾಳಗಿ ಮತ್ತು ಸ್ಮೀತಾ ಪಾಟೀಲ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.
ಸಂಗೀತಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಐತಿಹಾಸಿಕ ವಿಜಯಪುರದಲ್ಲಿ ಆಗಾಗ ಸಂಗೀತ ಕಾರ್ಯಕ್ರಮ ನಡೆಸಿ ಬೇಸತ್ತ ಮನಸ್ಸುಗಳಿಗೆ ಮನರಂಜನೆ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಸಂಸ್ಥೆಯವರು ಪ್ರಾಯೋಜಕತ್ವವನ್ನು ನೀಡಿ ನಮ್ಮನ್ನು ಪ್ರೋತ್ಸಾಹಿಸಿ ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ್ದಾರೆ ಎಂದು ಆಯೋಜಕರಾದ ಪ್ರಕಾಶ ಮಠ ಮತ್ತು ಶರಣು ಸಬರದ ಜಿಲ್ಲಾ ಯುವ ಪತಿಷತ್ ಅದ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment