ವಿಜಯಪುರ: ಮತದಾರ ಪಟ್ಟಿಗಳನ್ನು ತಿದ್ದುಪಡಿ ಮಾಡುವಂತೆ ಆಗ್ರಹಿಸಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿ ವತಿಯಿಂದ ಜಿಲ್ಲಾ ಚುನಾವಣಾಧಿಕಾರಿಗಳು, ವಿಜಯಪುರ ಇವರಿಗೆ ಮನವಿ ಸಲ್ಲಿಸಲಾಯಿತು.
ಮತದಾರರ ಪಟ್ಟಿಯಲ್ಲಿ ಅನೇಕ ಹೆಸರುಗಳು ಕಾಣೆಯಾಗಿದ್ದು, ಕೆಲವು ಮತದಾರರ ಹೆಸರುಗಳನ್ನು ಸರಿಯಾಗಿ ಬರೆಯಲಾಗಿಲ್ಲ. ಮತದಾರ ಪಟ್ಟಿಯಲ್ಲಿ ಹೆಸರುಗಳ ಮೊದಲ ಅಥವಾ ಮಧ್ಯದ ಮತ್ತು ಕೊನೆಯ ಹೆಸರು ತಪ್ಪಾಗಿರುತ್ತವೆ. ಕೆಲವು ಮತದಾರರ ಹೆಸರುಗಳು ಅವರು ವಾಸಿಸುವ ಪ್ರದೇಶದಲ್ಲಿ ಇರುವದಿಲ್ಲ. ಅವರು ಬೇರೆ ವೇಳಾಸದಲ್ಲಿ ವಾಸವಾಗಿರುತ್ತಾರೆ. ಮತದಾನಕ್ಕೆ ಗೈರು ಹಾಜರಾದವರ ಮತವನ್ನು ಬೇರೊಬ್ಬರು ಮತ ಚಲಾಯಿಸುತ್ತಿದ್ದಾರೆ. ಕೆಲವು ಮತದಾರರ ಹೆಸರುಗಳು ೧ ಕ್ಕಿಂತ ಹೆಚ್ಚು ಮತಕ್ಷೇತ್ರದಲ್ಲಿ ಇರುತ್ತವೆ. ಚುನಾವಣಾ ಕರ್ತವ್ಯಕ್ಕೆ ಸ್ಥಳೀಯರ ಬದಲಿಗೆ ಹೊರಗಿನವರನ್ನು ನಾಮನಿರ್ದೇಶನ ಮಾಡಬೇಕು. ಇದರಿಂದ ಬೂತ ಮಟ್ಟದಿಂದ ಮೇಲಿನವರೆಗೆ ಪ್ರಭಾವ ಬೀರುವ ಪ್ರಶ್ನೆ ಬರುವದಿಲ್ಲ . ಕೆಲವು ರಾಜಕಾರಣಿಗಳು ತಮ್ಮ ಶಿಕ್ಷಣ ಸಂಸ್ಥೆಗಳನ್ನು ಮತ್ತು ಸಹಕಾರ ಸಂಘದ ನೌಕರರನ್ನು ಪ್ರಚಾರದ ಸಲುವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಖರ್ಚು ವೆಚ್ಚವನ್ನು ಚುನಾವಣಾ ಆಯೋಗ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇದನ್ನು ತಪ್ಪಿಸಬೇಕು. ಸರಕಾರಿ ನೌಕರರ ಅಂಚೆ ಮತಗಳು ಹೆಚ್ಚಿನ ಪ್ರಮಾಣದಲ್ಲಿ ತಿರಸ್ಕೃತವಾಗುತ್ತಿದ್ದು, ಅದನ್ನು ತಪ್ಪಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಿ. ಕೆಂಗನಾಳ, ಉಪಾಧ್ಯಕ್ಷರಾದ ನಿಹಾದ್ ಅಹ್ಮದ ಗೋಡಿಹಾಳ, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಎಮ್. ಕನ್ನೂರ, ನಾರಾಯಣ ಸಂಸ್ಥಾಪಕ, ಯೂನುಸ ಇನಾಮದಾರ, ಸಯ್ಯದ ಅಮಜದಪಾಶ್ಯಾ ಜಾಗೀರದಾರ, ಶಬ್ಬೀರ ಎನ್. ಜಹಗೀರದಾರ, ವಿನಾಯಕ ಆಲಬಾಳ ಇನ್ನಿತರರು ಉಪಸ್ಥಿತರಿದ್ದರು.
Related Posts
Add A Comment