ಢವಳಗಿ: ಸಮೀಪದ ಲಿಂಗದಳ್ಳಿ ಗ್ರಾಮದ ಸಂಗಣ್ಣ ಬಸವಂತ್ರಾಯ ಮೇಟಿ ಮತ್ತು ನಾಗಪ್ಪ ಕನಕಪ್ಪ ಬಡಿಗೇರ ಅವರ ತಲಾ ಒಂದೊಂದು ಎತ್ತನ್ನು ಹಾಕಿ ಲಿಂಗದಳ್ಳಿ ಗ್ರಾಮದ ಬಸನಗೌಡ ಈರಣ್ಣ ಬಸರಕೋಡ ಮತ್ತು ಅನೀಲಗೌಡ B ಪಾಟೀಲ ಅವರ ಜಮೀನಿನಲ್ಲಿ ಹತ್ತಿ ಮತ್ತು ತೊಗರಿ ಬೆಳೆಯಲ್ಲಿ ನಸುಕಿನ ಜಾವ 5ರಿಂದ ಮಧ್ಯಾಹ್ನ 3ಗಂಟೆ 25 ನಿಮಷಗಳವರೆಗೆ 10ಗಂಟೆ 25ನಿಮಿಷದಲ್ಲಿ ಸುಮಾರು26 ಎಕರೆ ಜಮೀನನ್ನು ಒಂದೆ ಕುಂಟೆಯಿಂದ ಉಳುಮೆ ಮಾಡಿ ಅಗಾಧ ಸಾಧನೆ ಮಾಡಿವೆ.
ಎತ್ತಿನ ಮಾಲಿಕರು ಮತ್ತು ಸಾತ್ ನೀಡಿದ ಗ್ರಾಮದ ಯುವಕರು ಸಂತಸ ವ್ಯಕ್ತಪಡಿಸಿ ಎತ್ತುಗಳಿಗೆ ಮತ್ತು ತಾವುಗಳು ಪರಸ್ಪರ ಗುಲಾಲ ಎರಚಿಕೊಂಡು ಸಂಭ್ರಮಿಸಿದರು.
10ಗಂಟೆ 25 ನಿಮಿಷದಲ್ಲಿ ಗಂಟೆಯಲ್ಲಿ 26ಎಕರೆ ಹೊಲ ಉಳುಮೆ(ಹರಗಿದ್ದು) ಮಾಡಿದ ಸಾಧನೆ ಮಾಡಿದ ಎತ್ತುಗಳು ಟ್ರಾಕ್ಟರ್ ಮಷಿನ್ ಗೆ ನಾವೇನು ಕಡಿಮೆ ಇಲ್ಲ ಎಂಬಂತೆ ಕಟ್ಟುಮಸ್ತಾಗಿ ನಿಂತಿದ್ದವು. ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಹಲಗೆ ಬಡಿದು ಗ್ರಾಮದ ಆರಾಧ್ಯ ದೇವರಾದ ಮಾರುತೇಶ್ವರ, ಗ್ರಾಮದೇವತೆ ಮತ್ತು ಮರಗಮ್ಮದೇವಿ ದೇವಸ್ಥಾನಕ್ಕೆ ಹೋದರು.
ಗ್ರಾಮಸ್ಥರಾದ ಗಂಗಾಧರ ಮೇಟಿ, ಶಿವಪ್ಪ ತಳವಾರ, ಚಂದ್ರಶೇಖರ ಬಸರಕೋಡ, ಪರಮು ಅಂಬಿಗೇರ, ಹೆಮರಡ್ಡಿ ಬಿರಾದಾರ, ಕಲ್ಯಾಣಿ ಮಡಿವಾಳರ, ಮಾನೇಶ ಅಂಬಿಗೇರ, ಗುರುಪಾದ ಬಡಿಗೇರ, ಶಿವಪ್ಪ ಬಡಿಗೇರ, ರಾಜ ದೊಡಮನಿ, ಯಲ್ಲಪ್ಪ ಚಲವಾದಿ, ಮುದಕಪ್ಪ ಮಡಿವಾಳ, ಅಪ್ಪು ಮರಾಠಿ ಇದ್ದರು.
Related Posts
Add A Comment