Author: editor.udayarashmi@gmail.com

ಇಂಡಿ: ತಾಲೂಕಿನ ಹಿರೇಮಸಳಿ ಗ್ರಾಮದ ರೈತರು ಹಿರೆಮಸಳಿ ವಿದ್ಯುತ್ ಕಚೇರಿ ಎದುರು ನಿರಂತರ ವಿದ್ಯುತ್ ಪೂರೈಕೆ ಆಗ್ರಹಿಸಿ ಬುಧವಾರ ಪ್ರತಿಭಟನೆ ಮಾಡಿದರು.ಕರವೇ ಅಧ್ಯಕ್ಷ ಶಿವು ಮಲಕಗೊಂಡ ಮಾತನಾಡಿ, ಈ ಮೊದಲು ಹಗಲು ಹೊತ್ತಿನಲ್ಲಿ ಏಳು ಗಂಟೆ ನಿರಂತರ ವಿದ್ಯುತ್ ನೀಡುತ್ತಿದ್ದರು. ಈಗ ಹಗಲು ಹೊತ್ತು ೪ ಗಂಟೆ ಮತ್ತು ರಾತ್ರಿ ಹೊತ್ತು ೩ ಗಂಟೆ ವಿದ್ಯುತ್ ನೀಡುತ್ತಿದ್ದಾರೆ. ಅದೂ ಕೂಡ ನಿರಂತರವಾಗಿರುವದಿಲ್ಲ.ಬೆಳಗ್ಗೆ ೯ ಗಂಟೆಗೆ ಕೊಟ್ಟು ೧ ಗಂಟೆಗೆ ತೆಗೆಯುತ್ತಾರೆ. ಈ ಮಧ್ಯೆ ಹಲವಾರು ಬಾರಿ ವಿದ್ಯುತ್ ಕಟ್ ಮಾಡುತ್ತಾರೆ. ಹೀಗಾಗಿ ರೈತರು ಬೆಳೆಗಳಿಗೆ ನೀರು ಕೊಡಲು ಆಗುತ್ತಿಲ್ಲ ಎಂದರು.ಸಿದ್ದು ಕಲ್ಲೂರ, ನಬೀಲಾಲ ಸೌದಾಗರ ಮಾತನಾಡಿದರು.ಪ್ರತಿಭಟನೆಯಲ್ಲಿ ಗುರುರಾಜ ಲೋಣಿ, ರವಿ ರಾಯಜಿ, ಬಸವರಾಜ ಪಟ್ಟಣಶೆಟ್ಟಿ, ಅನೀಲ ಕಪಾಲಿ, ಮಲ್ಲನಗೌಡ ಪಾಟೀಲ, ಸಂಜು ಸೋಲಾಪುರ, ಸಂಜು ರಜಪೂತ, ನಬೀಲಾಲ ಜಮಾದಾರ, ಈರಪ್ಪ ಹಂಜಗಿ, ಕುಮಾರ ಭತಗುಣಕಿ ಮತ್ತಿತರಿದ್ದರು.ಜಿಲ್ಲೆಯ ಮತ್ತು ತಾಲೂಕಿನ ಅಧಿಕಾರಿಗಳು ಬರುವ ವರೆಗೆ ಪ್ರತಿಭಟನೆ ಮುಂದುವರೆಸುವದಾಗಿ ತಿಳಿಸಿದರು.ರೈತರು ಪ್ರತಿಭಟನಾ ಸ್ಥಳದ ಸಮೀಪವೇ…

Read More

ಇಂಡಿ: ಸರ್ಕಾರಿ ಶಾಲಾ ಮಕ್ಕಳಿಗೆ ಸೇರಬೇಕಿದ್ದ ಹಾಲಿನ ಪುಡಿಯನ್ನು ಅಕ್ರಮವಾಗಿ ಸಾಗಾಟ ಹಿನ್ನೆಲೆಯಲ್ಲಿ, ಗ್ರಾಮೀಣ ಠಾಣಾ ಸಿಪಿಐ ಎಮ್ ಎಮ್ ಡಪ್ಪಿನ ನೇತೃತ್ವದಲ್ಲಿ ಪೊಲೀಸರು ದಾಳಿಗೈದು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ತಾಲ್ಲೂಕಿನ ಅಥರ್ಗಾ ಗ್ರಾಮದಲ್ಲಿ ಸುಮೀತ ಸಾತಪುತೆ, ನಿಶಾಂತ ಕಲಶೆಟ್ಟಿ, ದುಂಡಪ್ಪ ಗಂಗನಹಳ್ಳಿ ಬಂಧಿತ ಆರೋಪಿಗಳು. ಇನ್ನು ಆರೋಪಿಗಳಿಂದ 30 ಕೆಜಿಯ 66 ಪ್ಲಾಸ್ಟಿಕ್ ಬ್ಯಾಗ್, 20 ಕೆಜಿಯ ಒಂದು ಬ್ಯಾಗ್ ಹಾಗೂ ಒಂದು ಪಿಕ್ ಆಫ್ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಎಮ್ ಎಚ್ ಯರಗುದ್ರಿ ಇದ್ದರು.ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ವಿಜಯಪುರ: ಸರ್ಕಾರದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೊತ್ಸಾಹಕ ಸೊಸೈಟಿ ಬೆಂಗಳೂರು ವತಿಯಿಂದ ಡಿಎಸ್‌ಟಿ-ಪಿಹೆಚ್‌ಡಿ ಕಾರ್ಯಕ್ರಮದಡಿ ಶಿಷ್ಯವೇತನ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ೨೦೨೩-೨೪ನೇ ಸಾಲಿನಲ್ಲಿ ಶಿಷ್ಯವೇತನ ಪಡೆಯಲು ವಿಜ್ಞಾನ ಮತ್ತು ಇಂಜಿನೀಯರಿಂಗ್ ವಿಷಯಗಳಲ್ಲಿ ಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ-ಸಂಸ್ಥೆ- ಕಾಲೇಜುಗಳಲ್ಲಿ ಪಿಹೆಚ್‌ಡಿ ಪದವಿಗೆ ಈಗಾಗಲೇ ನೋಂದಾಯಿರಾಗಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ : ೩೦-೧೦-೨೦೨೩ ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸುವ ಲಿಂಕ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ ಎಂದು ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸುವ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆಯನ್ನು ಅ.೧೩ ರಂದು ಸಂಜೆ ೪ ಗಂಟೆಗೆ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಒಂದನೇ ಮಹಡಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೆಂಗಳೂರು ಇವರ ವತಿಯಿಂದ ಅಂಗವಿಕಲರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿ, ಸಂಸ್ಥೆ, ಹಾಗೂ ವಿಶೇಷ ಶಾಲೆಗಳಲ್ಲಿ ೧೫ ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸಿದ/ ಸಲ್ಲಿಸುತ್ತಿರುವ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ-ಸಲ್ಲಿಸುತ್ತಿರುವ ವ್ಯಕ್ತಿ, ಸಂಸ್ಥೆ ಹಾಗೂ ವಿಶೇಷ ಶಿಕ್ಷಕರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ: ೨೫-೧೦-೨೦೨೩ ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳು, ವಿಜಯಪುರ, ಕನಕದಾಸ ಬಡಾವಣೆ, ಜಿಲ್ಲಾ ಪಂಚಾಯತ ಆವರಣ, ದೂರವಾಣಿ ಸಂಖ್ಯೆ ೦೮೩೫೨-೭೯೬೦೬೦ ಗೆ ಅಥವಾ www.dwdsc.kar.nic.in ಗೆ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ಹ ಧೈವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ದೇವರಹಿಪ್ಪರಗಿ: ರಾಷ್ಟ್ರವಿರೋಧಿ, ಧರ್ಮವಿರೋಧಿ ಘಾತಕ ಶಕ್ತಿಗಳ ವಿರುದ್ಧ ಹಾಗೂ ಹಿಂದೂ ಧರ್ಮದ ಜಾಗೃತಿಗಾಗಿ ಇಂಥ ಜಾಗರಣ ರಥಯಾತ್ರೆಗಳು ಅಗತ್ಯವಾಗಿವೆ ಎಂದು ಜಡೇಮಠದ ಜಡೇಸಿದ್ಧೇಶ್ವರ ಶ್ರೀಗಳು ಹೇಳಿದರು.ಪಟ್ಟಣದಲ್ಲಿ ಮಂಗಳವಾರ ಆಗಮಿಸಿದ ಶೌರ್ಯ ಜಾಗರಣ ರಥಯಾತ್ರೆಗೆ ಸಾಂಪ್ರದಾಯಿಕ ಸ್ವಾಗತ ಕೋರಿ, ಪೂಜೆ ಸಲ್ಲಿಸಿ ಮಾತನಾಡಿದರು.ವಿಶ್ವ ಹಿಂದೂ ಪರಿಷದ್ ೬೦ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ರಾಷ್ಟ್ರಾದ್ಯಂತ ಆಯೋಜಿಸಿರುವ ಶೌರ್ಯ ಜಾಗರಣ ರಥಯಾತ್ರೆ ಅತ್ಯಂತ ಮಹತ್ವವಾಗಿದೆ. ಇಂದು ದೇಶದಲ್ಲಿ ನಕ್ಸಲೈಟ್, ಮತಾಂತರ ಸೇರಿದಂತೆ ಹೆಚ್ಚುತ್ತಿರುವ ದೇಶವಿರೋಧಿ ಕೃತ್ಯಗಳನ್ನು ತಡೆಗಟ್ಟಲು ಹನುಮಾನ ಅವತಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ದೊರಕಿದ್ದಾರೆ. ಅವರ ಮಾರ್ಗದರ್ಶನದಲ್ಲಿ ದೇಶದ ಯುವಜನತೆ ಒಂದಾಗಿ ದೇಶದ ಉನ್ನತಿಗಾಗಿ ಮುಂದಾಗಬೇಕು ಎಂದರು.ವಿಶ್ವ ಹಿಂದೂ ಪರಿಷದ್ ವಿಭಾಗ ಸತ್ಸಂಗ ಪ್ರಮುಖ ಶ್ರೀಮಂತ ದುದ್ದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ತಾಲ್ಲೂಕು ಅಧ್ಯಕ್ಷ ಶ್ರೀಧರ ನಾಡಗೌಡ, ಸಂಗಪ್ಪ ತಡವಲ್, ಎಸ್.ಎನ್.ಬಸವರೆಡ್ಡಿ, ವೆಂಕಟೇಶ ಕುಲಕರ್ಣಿ, ಬಂಡೆಪ್ಪ ದಿಂಡವಾರ, ಶಾಂತಪ್ಪ ಪಡನೂರ, ಸೋಮಶೇಖರ ಹಿರೇಮಠ, ವಿಠ್ಠಲ ಯಂಕಂಚಿ, ಚಿದಾನಂದ ಕುಂಬಾರ ವಸ್ತ್ರದ, ಕುಮಾರಸ್ವಾಮಿ ಹಿರೇಮಠ,…

Read More

ಸಿಂದಗಿ: ಪುರಸಭೆ ಕಾರ್ಯಾಲಯ ಸಿಂದಗಿ ೨೦೨೩-೨೪ನೇ ಸಾಲಿನ ೧೫ನೆಯ ಹಣಕಾಸು ಕ್ರೀಯಾಯೋಜನೆಗೆ ಸ್ಥಳೀಯ ಶಾಸಕ ಅಶೋಕ ಮನಗೂಳಿ ಒತ್ತಡದ ಮೇರೆಗೆ ಮಾಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ಪುರಸಭೆ ಸದಸ್ಯರ ಪ್ರತಿನಿಧಿ ಬಸವರಾಜ ಸಜ್ಜನ ಆರೋಪಿಸಿದ್ದಾರೆ.ಶಾಸಕರು ತಮ್ಮ ಚುನಾವಣೆಯ ಭರವಸೆಗಳನ್ನು ಅವರ ಅನುದಾನ ಬಳಕೆಯಿಂದ ಮಾಡಲಿ. ಪುರಸಭೆಯ ಅನುದಾನದ ಭೂಮಿಪೂಜೆಗೆ ಆಸಕ್ತಿ ಹೊಂದಿರುವ ಶಾಸಕರು ಬಿಟ್ಟಿ ಭಾಗ್ಯ ಯೋಜನೆಯಿಂದ ಕಂಗಾಲಾದ ಸರ್ಕಾರದಲ್ಲಿ ಯಾವುದೇ ಕಾಮಗಾರಿಯಾಗುತ್ತಿಲ್ಲ. ಅದಕ್ಕಾಗಿ ಪುರಸಭೆಯ ಸದಸ್ಯರ ಅನುದಾನದಲ್ಲಿ ಶಾಸಕರು ತಮಗೆ ಬೇಕಾದಂತೆ ಕ್ರಿಯಾಯೋಜನೆ ಮಾಡಲು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಯಶಸ್ವಿಯಾಗಿದ್ದಾರೆ. ಮುಖ್ಯಾಧಿಕಾರಿಗಳಿಗೆ ಕೇಳಿದರೆ ದೊಡ್ಡವರ ಕೈವಾಡ ಎಂದು ಗಾಳಿಗೆ ತೂರಿದಂತೆ ಹೇಳುತ್ತಾರೆ ಎಂದು ದೂರಿದರು.ತಮ್ಮ ಬೆಂಬಲಿಗರ ವಾರ್ಡುಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಶಾಸಕರು ಕಾರ್ಯ ನಿರ್ವಹಿಸುತ್ತ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಅವರ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಸಾಮಾನ್ಯ ಸಭೆ ಕರೆಯದೇ ಸದಸ್ಯರ ಗಮನಕ್ಕೆ ತಾರದೇ ೧೫ನೆಯ ಹಣಕಾಸು ಯೋಜನೆಯ ಕೆಲವೊಂದು ವಾರ್ಡುಗಳಿಗೆ ಮಾತ್ರ ಕ್ರೀಯಾಯೋಜನ ಮಾಡಿಸಿ ಮಂಜೂರಾತಿ ಮಾಡಿಸಿದ್ದು,…

Read More

ದೇವರ ಹಿಪ್ಪರಗಿ: ರಾಜ್ಯದಲ್ಲಿ ಸರ್ಕಾರ ಪಟಾಕಿಯನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿ ಪಟ್ಟಣದ ವಿವಿಧ ವ್ಯಾಪಾರ ಮಳಿಗೆಗಳಿಂದ ಪಟಾಕಿಗಳನ್ನು ವಶಪಡಿಸಿಕೊಂಡರು. ಪಟ್ಟಣದಲ್ಲಿ ಬುಧವಾರ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಹಾಗೂ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಮೇನ್ ಬಜಾರ ಹಾಗೂ ಮೊಹರೆ ಹಣಮಂತ್ರಾಯ ವೃತ್ತದಲ್ಲಿಯ ವಿವಿಧ ವ್ಯಾಪಾರ ಮಳಿಗೆಗಳಿಗೆ ತೆರಳಿ ಅಲ್ಲಿ ಸಂಗ್ರಹಿಸಲಾಗಿದ್ದ ಸುಮಾರು ೫೦ ಸಾವಿರ ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡರು. ಜೊತೆಗೆ ಮಳಿಗೆಗಳ ಮಾಲೀಕರಿಗೆ ಸುಮಾರು ೨೦ ಸಾವಿರ. ರೂಗಳ ದಂಡ ವಿಧಿಸಿದರು,ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಮುಖ್ಯಾಧಿಕಾರಿ ಮಾತನಾಡಿ, ಪಟ್ಟಣದ ಯಾವುದೇ ವ್ಯಾಪಾರ ಮಳಿಗೆಗಳಲ್ಲಿ ಪರವಾನಿಗೆ ಇಲ್ಲದೆ ಪಟಾಕಿ ಮಾರಾಟ ಮಾಡಿದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು, ಸರ್ಕಾರದ ಆದೇಶ ಕಡ್ಡಾಯವಾಗಿ ಎಲ್ಲರೂ ಪಾಲಿಸಲೇಬೇಕು ಮಾರಾಟ ಮಾಡಲು ನಮ್ಮ ಕಚೇರಿಯಿಂದ ಯಾವುದೇ ಅಂಗಡಿಗೆ ಇಲ್ಲಿಯವರೆಗೆ ಪರವಾನಿಗೆ ನೀಡಿಲ್ಲ, ಅದಾಗ್ಯೂ ಯಾವುದೇ ಪ್ರಭಾವಿ ವ್ಯಕ್ತಿ ಪರವಾನಿಗೆ ಇಲ್ಲದೆ ಪಟಾಕಿ ಮಾರಾಟ…

Read More

ಜಯ್ ನುಡಿ:ಜಯಶ್ರೀ ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ತುಂಬಾ ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಕಾರ್ಯದ ಮೇಲೆ ಕೇಂದ್ರೀಕರಿಸುವ ಮೆದುಳಿನ ಸಾಮರ್ಥ್ಯ ಹೆಚ್ಚು ಕಷ್ಟಕರವಾಗಿದೆ. ಒಂದು ಅಧ್ಯಯನದ ಪ್ರಕಾರ ಮೂರು ನಿಮಿಷಕ್ಕೊಮ್ಮೆ ವಿಚಿಲಿತರಾಗುತ್ತಿದ್ದೇವೆ. ತ್ವರಿತವಾಗಿ ನಿಗದಿತ ಸಮಯದಲ್ಲಿ ಗಮನವಿರಿಸಿ ಕೆಲಸ ಮಾಡುವುದು ಒಂದು ದೊಡ್ಡ ಸವಾಲಿನಂತೆ ಕಾಣುತ್ತದೆ. ಅಸಾಧ್ಯವೆಂದು ತೋರುತ್ತದೆ. ಆದಾಗ್ಯೂ ಮನಸ್ಸು ಮಾಡಿದರೆ ಅದೊಂದು ಕಠಿಣ ಕಾರ್ಯವೇನಲ್ಲ. ಅನಗತ್ಯ ವಿಷಯಗಳ ಕಡೆ ಗಮನ ಸೆಳೆಯುವ ಇಷ್ಟೆಲ್ಲ ಸಂಗತಿಗಳು ಇರುವಾಗಲೂ ಮಾಡುವ ಕೆಲಸದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವುದು ಉತ್ತಮ ಅಭ್ಯಾಸದಂತೆ ಬೆಳೆಸಿಕೊಳ್ಳುವುದಕ್ಕೆ ಕೆಲವು ಸಲಹೆಗಳು.ವಿಚಲಿತರಾಗದಿರಿಹಾಗೆ ನೋಡಿದರೆ ಪ್ರಪಂಚವು ಒಂದು ವಿಚಲಿತ ಸ್ಥಳ. ಹೀಗಾಗಿ ಸಾಮಾನ್ಯವಾಗಿ ಕೆಲಸ ಮಾಡುವಾಗ ಸುತ್ತಮುತ್ತಲ ವಾತಾವರಣವು ನಮ್ಮನ್ನು ವಿಚಲಿತಗೊಳಿಸುತ್ತದೆ. ನೂರಾರು ವಿಷಯಗಳು ಸುತ್ತಮುತ್ತಲೂ ನಡೆಯುತ್ತಿರುತ್ತವೆ. ಆದರೂ ಕೆಲಸದ ಮೇಲೆ ಹೇಗೆ ಗಮನ ಹರಿಸಬೇಕು? ನಿಮ್ಮ ಸಮಯವನ್ನು ವ್ಯರ್ಥ ಮಾಡುವ ನಿಮ್ಮ ಗೆಳೆಯರಿರಬಹುದು ಇಲ್ಲವೇ ಮನೆಯವರಿರಬಹುದು. ಕಛೇರಿಯಲ್ಲಿ ಸಹೋದ್ಯೋಗಿಗಳು ಸೆಲ್ ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ನೋಟಿಫಿಕೇಶನ್‌ಗಳು ಇರಬಹುದು. ಅಂತೆಯೇ…

Read More

ರಾಜ್ಯಮಟ್ಟದ ಪ್ರಥಮ ಶಿಕ್ಷಕ ಸಾಹಿತಿಗಳ ಸಮ್ಮೇಳನದ ಸರ್ವಾಧ್ಯಕ್ಷರಾದ ಹ.ಮ.ಪೂಜಾರಿ ಗುರುಗಳ ಕುರಿತ ವಿಶೇಷ ಲೇಖನ “ಬನ್ನಿ ನಮ್ಮ ಮಕ್ಕಳಿಗಾಗಿ ಜೀವಿಸಿ” ಎಂಬ ಪ್ರೋಬೆಲ್ ಅವರ ಮಾತನ್ನು ಅಕ್ಷರಶಃ  ಅರಿತು ಆಚರಣೆಯಲ್ಲಿ ತಂದ ಅಪರೂಪದ ಆದರ್ಶ ಶಿಕ್ಷಕ ಸಾಹಿತಿ ಹ.ಮ. ಪೂಜಾರ ಗುರುಗಳು ಶಿಕ್ಷಕ ವೃತ್ತಿಯ ಶಿಖರ, ಸಾಹಿತಿಗಳ ತೊಟ್ಟಿಲು ವಿಜಯಪುರದ ಹಿರಿಯ ತಲೆಮಾರಿನ ಮಕ್ಕಳ ಸಾಹಿತಿಗಳ ಸಾಲಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಹ.ಮ. ಪೂಜಾರ ಗುರುಗಳು ವೃತ್ತಿಯಿಂದ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿ ವಿಶ್ರಾಂತ ಜೀವನ ನಡೆಸುತ್ತಿದ್ದು, ಪ್ರವೃತ್ತಿಯಿಂದ ಸಾಹಿತಿಯಾಗಿ ಅವಿಶ್ರಾಂತವಾಗಿ ಅಮೂಲ್ಯ ಕೃತಿಗಳನ್ನು ನೀಡುತ್ತಿದ್ದಾರೆ. ಇದೇ ಅಕ್ಟೋಬರ್-೧೨ ರಂದು ಬಾಗಲಕೋಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜರುಗಲಿರುವ ರಾಜ್ಯಮಟ್ಟದ ಪ್ರಥಮ ಶಿಕ್ಷಕ ಸಾಹಿತಿಗಳ ಸಮ್ಮೇಳನದ ಸರ್ವಾಧ್ಯಕ್ಷರ ಗೌರವ ಸ್ಥಾನ ಸಿಂದಗಿಯ ರಾಷ್ಟçಪ್ರಶಸ್ತಿ ಪುರಸ್ಕೃತ ಆದರ್ಶ ಶಿಕ್ಷಕ ಹ.ಮ. ಪೂಜಾರ ಗುರುಗಳಿಗೆ ಒಲಿದು ಬಂದಿದ್ದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಇದು ಅವರ ಶಿಕ್ಷಣ ಮತ್ತು ಸಾಹಿತ್ಯ ಸಾಧನೆಗೆ ಸಂದ ಗೌರವವಾಗಿದೆ. ಸೂಕ್ತ, ಸಮರ್ಥ…

Read More