ದೇವರ ಹಿಪ್ಪರಗಿ: ರಾಜ್ಯದಲ್ಲಿ ಸರ್ಕಾರ ಪಟಾಕಿಯನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿ ಪಟ್ಟಣದ ವಿವಿಧ ವ್ಯಾಪಾರ ಮಳಿಗೆಗಳಿಂದ ಪಟಾಕಿಗಳನ್ನು ವಶಪಡಿಸಿಕೊಂಡರು.
ಪಟ್ಟಣದಲ್ಲಿ ಬುಧವಾರ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಹಾಗೂ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಮೇನ್ ಬಜಾರ ಹಾಗೂ ಮೊಹರೆ ಹಣಮಂತ್ರಾಯ ವೃತ್ತದಲ್ಲಿಯ ವಿವಿಧ ವ್ಯಾಪಾರ ಮಳಿಗೆಗಳಿಗೆ ತೆರಳಿ ಅಲ್ಲಿ ಸಂಗ್ರಹಿಸಲಾಗಿದ್ದ ಸುಮಾರು ೫೦ ಸಾವಿರ ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡರು. ಜೊತೆಗೆ ಮಳಿಗೆಗಳ ಮಾಲೀಕರಿಗೆ ಸುಮಾರು ೨೦ ಸಾವಿರ. ರೂಗಳ ದಂಡ ವಿಧಿಸಿದರು,
ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಮುಖ್ಯಾಧಿಕಾರಿ ಮಾತನಾಡಿ, ಪಟ್ಟಣದ ಯಾವುದೇ ವ್ಯಾಪಾರ ಮಳಿಗೆಗಳಲ್ಲಿ ಪರವಾನಿಗೆ ಇಲ್ಲದೆ ಪಟಾಕಿ ಮಾರಾಟ ಮಾಡಿದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು, ಸರ್ಕಾರದ ಆದೇಶ ಕಡ್ಡಾಯವಾಗಿ ಎಲ್ಲರೂ ಪಾಲಿಸಲೇಬೇಕು ಮಾರಾಟ ಮಾಡಲು ನಮ್ಮ ಕಚೇರಿಯಿಂದ ಯಾವುದೇ ಅಂಗಡಿಗೆ ಇಲ್ಲಿಯವರೆಗೆ ಪರವಾನಿಗೆ ನೀಡಿಲ್ಲ, ಅದಾಗ್ಯೂ ಯಾವುದೇ ಪ್ರಭಾವಿ ವ್ಯಕ್ತಿ ಪರವಾನಿಗೆ ಇಲ್ಲದೆ ಪಟಾಕಿ ಮಾರಾಟ ಮಾಡಿದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಎಎಸ್‌ಐ ಕೆ.ಎಚ್.ಉಪ್ಪಾರ, ಸಿಬ್ಬಂದಿ ಅಕ್ಷಯ ಹಿರೇಮಠ, ಮಾರ್ತಾಂಡ ಗುಡಿಮನಿ ಸೇರಿದಂತೆ ಪೌರಕಾರ್ಮಿಕ ಸಿಬ್ಬಂದಿ ಇದ್ದರು.
Related Posts
Add A Comment