ದೇವರಹಿಪ್ಪರಗಿ: ರಾಷ್ಟ್ರವಿರೋಧಿ, ಧರ್ಮವಿರೋಧಿ ಘಾತಕ ಶಕ್ತಿಗಳ ವಿರುದ್ಧ ಹಾಗೂ ಹಿಂದೂ ಧರ್ಮದ ಜಾಗೃತಿಗಾಗಿ ಇಂಥ ಜಾಗರಣ ರಥಯಾತ್ರೆಗಳು ಅಗತ್ಯವಾಗಿವೆ ಎಂದು ಜಡೇಮಠದ ಜಡೇಸಿದ್ಧೇಶ್ವರ ಶ್ರೀಗಳು ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಆಗಮಿಸಿದ ಶೌರ್ಯ ಜಾಗರಣ ರಥಯಾತ್ರೆಗೆ ಸಾಂಪ್ರದಾಯಿಕ ಸ್ವಾಗತ ಕೋರಿ, ಪೂಜೆ ಸಲ್ಲಿಸಿ ಮಾತನಾಡಿದರು.
ವಿಶ್ವ ಹಿಂದೂ ಪರಿಷದ್ ೬೦ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ರಾಷ್ಟ್ರಾದ್ಯಂತ ಆಯೋಜಿಸಿರುವ ಶೌರ್ಯ ಜಾಗರಣ ರಥಯಾತ್ರೆ ಅತ್ಯಂತ ಮಹತ್ವವಾಗಿದೆ. ಇಂದು ದೇಶದಲ್ಲಿ ನಕ್ಸಲೈಟ್, ಮತಾಂತರ ಸೇರಿದಂತೆ ಹೆಚ್ಚುತ್ತಿರುವ ದೇಶವಿರೋಧಿ ಕೃತ್ಯಗಳನ್ನು ತಡೆಗಟ್ಟಲು ಹನುಮಾನ ಅವತಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ದೊರಕಿದ್ದಾರೆ. ಅವರ ಮಾರ್ಗದರ್ಶನದಲ್ಲಿ ದೇಶದ ಯುವಜನತೆ ಒಂದಾಗಿ ದೇಶದ ಉನ್ನತಿಗಾಗಿ ಮುಂದಾಗಬೇಕು ಎಂದರು.
ವಿಶ್ವ ಹಿಂದೂ ಪರಿಷದ್ ವಿಭಾಗ ಸತ್ಸಂಗ ಪ್ರಮುಖ ಶ್ರೀಮಂತ ದುದ್ದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲ್ಲೂಕು ಅಧ್ಯಕ್ಷ ಶ್ರೀಧರ ನಾಡಗೌಡ, ಸಂಗಪ್ಪ ತಡವಲ್, ಎಸ್.ಎನ್.ಬಸವರೆಡ್ಡಿ, ವೆಂಕಟೇಶ ಕುಲಕರ್ಣಿ, ಬಂಡೆಪ್ಪ ದಿಂಡವಾರ, ಶಾಂತಪ್ಪ ಪಡನೂರ, ಸೋಮಶೇಖರ ಹಿರೇಮಠ, ವಿಠ್ಠಲ ಯಂಕಂಚಿ, ಚಿದಾನಂದ ಕುಂಬಾರ ವಸ್ತ್ರದ, ಕುಮಾರಸ್ವಾಮಿ ಹಿರೇಮಠ, ಚೇತನ ಇಂಡಿ, ಸಾಯಬಣ್ಣ ಸದಯ್ಯನಮಠ, ಶಿವು ಅತನೂರ, ರಾಜಶೇಖರ ಒಂಟೆತ್ತೀನ್, ಪ್ರಶಾಂತ ಹೊನ್ನುಟಗಿ, ರೇವಂತ ಬಿರಾದಾರ , ಶಿವು ಕೋಟಿನ್, ಶಿವಲಿಂಗ ಬೂದಿಹಾಳ ಇದ್ದರು.
Related Posts
Add A Comment