ಸಿಂದಗಿ: ಪುರಸಭೆ ಕಾರ್ಯಾಲಯ ಸಿಂದಗಿ ೨೦೨೩-೨೪ನೇ ಸಾಲಿನ ೧೫ನೆಯ ಹಣಕಾಸು ಕ್ರೀಯಾಯೋಜನೆಗೆ ಸ್ಥಳೀಯ ಶಾಸಕ ಅಶೋಕ ಮನಗೂಳಿ ಒತ್ತಡದ ಮೇರೆಗೆ ಮಾಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ಪುರಸಭೆ ಸದಸ್ಯರ ಪ್ರತಿನಿಧಿ ಬಸವರಾಜ ಸಜ್ಜನ ಆರೋಪಿಸಿದ್ದಾರೆ.
ಶಾಸಕರು ತಮ್ಮ ಚುನಾವಣೆಯ ಭರವಸೆಗಳನ್ನು ಅವರ ಅನುದಾನ ಬಳಕೆಯಿಂದ ಮಾಡಲಿ. ಪುರಸಭೆಯ ಅನುದಾನದ ಭೂಮಿಪೂಜೆಗೆ ಆಸಕ್ತಿ ಹೊಂದಿರುವ ಶಾಸಕರು ಬಿಟ್ಟಿ ಭಾಗ್ಯ ಯೋಜನೆಯಿಂದ ಕಂಗಾಲಾದ ಸರ್ಕಾರದಲ್ಲಿ ಯಾವುದೇ ಕಾಮಗಾರಿಯಾಗುತ್ತಿಲ್ಲ. ಅದಕ್ಕಾಗಿ ಪುರಸಭೆಯ ಸದಸ್ಯರ ಅನುದಾನದಲ್ಲಿ ಶಾಸಕರು ತಮಗೆ ಬೇಕಾದಂತೆ ಕ್ರಿಯಾಯೋಜನೆ ಮಾಡಲು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಯಶಸ್ವಿಯಾಗಿದ್ದಾರೆ. ಮುಖ್ಯಾಧಿಕಾರಿಗಳಿಗೆ ಕೇಳಿದರೆ ದೊಡ್ಡವರ ಕೈವಾಡ ಎಂದು ಗಾಳಿಗೆ ತೂರಿದಂತೆ ಹೇಳುತ್ತಾರೆ ಎಂದು ದೂರಿದರು.
ತಮ್ಮ ಬೆಂಬಲಿಗರ ವಾರ್ಡುಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಶಾಸಕರು ಕಾರ್ಯ ನಿರ್ವಹಿಸುತ್ತ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಅವರ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಸಾಮಾನ್ಯ ಸಭೆ ಕರೆಯದೇ ಸದಸ್ಯರ ಗಮನಕ್ಕೆ ತಾರದೇ ೧೫ನೆಯ ಹಣಕಾಸು ಯೋಜನೆಯ ಕೆಲವೊಂದು ವಾರ್ಡುಗಳಿಗೆ ಮಾತ್ರ ಕ್ರೀಯಾಯೋಜನ ಮಾಡಿಸಿ ಮಂಜೂರಾತಿ ಮಾಡಿಸಿದ್ದು, ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ಹುನ್ನಾರ ನಡೆದಿದೆ. ವಾರ್ಡಿನ ಮತದಾರ ಪ್ರಭುಗಳಿಗೆ ಯಾವ ರೀತಿ ಉತ್ತರ ಹೇಳಬೇಕು ಎಂಬುದು ಸದಸ್ಯರಿಗೆ ತಿಳಿಯುತ್ತಿಲ್ಲ. ಈ ವೈಯಕ್ತಿಕ ಕ್ರಿಯಾ ಯೋಜನೆಯನ್ನು ರದ್ದು ಮಾಡಿ ಎಲ್ಲಾ ವಾರ್ಡುಗಳಿಗೆ ಸಮನಾಗಿ ಕೆಲಸಗಳನ್ನು ಹಂಚಿಕೆ ಮಾಡಿ ಕ್ರೀಯಾಯೋಜನೆ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಬಿಜೆಪಿ ಮುಖಂಡ ಪುರಸಭೆ ಸದಸ್ಯರ ಪ್ರತಿನಿಧಿ ಬಸವರಾಜ ಸಜ್ಜನ, ಪುರಸಭೆ ಸದಸ್ಯ ಮಹಾಂತಗೌಡ ಬಿರಾದಾರ, ಹಾಗು ಹನ್ನೊಂದನೆ ವಾರ್ಡಿನ ಸದಸ್ಯರ ಪ್ರತಿನಿಧಿ ಗಿರೀಶ ನಾಗೂರ ಶಾಸಕರ ವರ್ತನೆಗೆ ಕುರಿತು ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment