Author: editor.udayarashmi@gmail.com

ವಿಜಯಪುರ: ನಗರ ಮಹಾನಗರ ಪಾಲಿಕೆಯ ೨೧ನೇ ಅವಧಿಗೆ ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಗಳ ಆಯ್ಕೆಗೆ ಅಕ್ಟೋಬರ್ ೩೦ರಂದು ಚುನಾವಣೆ ನಡೆಸಲು ವಿಜಯಪುರ ಮಹಾನಗರ ಪಾಲಿಕೆ (ಚುನಾವಣೆ) ಅಧ್ಯಕ್ಷಾಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಸ್.ಬಿ.ಶೆಟ್ಟೆಣ್ಣವರ ಚುನಾವಣೆ ವೇಳಾಪಟ್ಟಿ ನಿಗದಿಗೊಳಿಸಿದ್ದಾರೆ.ಮಹಾಪೌರ ಸ್ಥಾನವು ಸಾಮಾನ್ಯ ವರ್ಗಕ್ಕೆ ಹಾಗೂ ಉಪ ಮಹಾಪೌರ ಸ್ಥಾನವು ಪರಿಶಿಷ್ಟ ಪಂಗಡ ವರ್ಗಕ್ಕೆ ಮೀಸಲಿರಿಸಿದೆ. ವಿಜಯಪುರ ಮಹಾನಗರ ಪಾಲಿಕೆ ಸಭಾಗೃಹದಲ್ಲಿ ಚುನಾವಣೆ ನಡೆಯಲಿದೆ.ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪಮಹಾಪೌರ ಆಯ್ಕೆಗೆ ಚುನಾವಣಾ ವೇಳಾಪಟ್ಟಿಯಂತೆ ಅಕ್ಟೋಬರ್ ೩೦ರಂದು ಬೆಳಿಗ್ಗೆ ೯ ರಿಂದ ೧೧ ಗಂಟೆಯರೆಗೆ ನಾಮಪತ್ರಗಳ ಸ್ವೀಕಾರ, ಮಧ್ಯಾಹ್ನ ೧ ಗಂಟೆಯ ನಂತರ ಸಭೆ ಆರಂಭಿಸಿ, ಪ್ರಮಾಣ ವಚನ, ಹಾಜರಾತಿ, ಕೋರಂ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿ ಘೋಷಣೆ, ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ, ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ, ಮತಗಳ ಏಣಿಕೆ ಹಾಗೂ ಫಲಿತಾಂಶ ಘೋಷಣೆ ಪ್ರಕ್ರಿಯೆಗಳು ಜರುಗಲಿವೆ ಎಂದು ಬೆಳಗಾವಿ…

Read More

ವಿಜಯಪುರ: ಕೈಮಗ್ಗ ಉತ್ಪನ್ನಗಳಿಂದ ತಯಾರಿಸಿದ ವಸ್ತುಗಳನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಸುವ ಮೂಲಕ ನೇಕಾರರನ್ನು ಪ್ರೋತ್ಸಾಹಿಸುವಂತೆ ಸಂಸದ ರಮೇಶ ಜಿಗಜಿಣಗಿ ಕರೆ ನೀಡಿದರು.ಗುರುವಾರ ನಗರದ ಕೆ.ಇ.ಬಿ ಕಲ್ಯಾಣ ಮಂಟಪದಲ್ಲಿ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ ಭಾರತ ಸರ್ಕಾರ, ನೇಕಾರರ ಸೇವಾ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕೈಮಗ್ಗ ಪ್ರದರ್ಶನ ಹಾಗೂ ಮಾರಾಟ ಮೇಳ-೨೦೨೩ ‘ತಾನಾ-ಬಾನಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಕೈಮಗ್ಗಗಳಿಂದ ತಯಾರಿಸಿದ ಉತ್ಪನ್ನಗಳು ಹೆಚ್ಚು ಬಾಳಿಕೆ ಹಾಗೂ ಉತ್ತಮ ಗುಣಮಟ್ಟದಿಂದ ಕೂಡಿರುತ್ತವೆ. ಸಾರ್ವಜನಿಕರು ಇಂತಹ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಸಬೇಕು ನೇಕಾರರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.ನೇಕಾರರನ್ನು ಪ್ರೋತ್ಸಾಹಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ, ನೇಕಾರರ ಉಜ್ವಲ ಭವಿಷ್ಯಕ್ಕಾಗಿ ಉತ್ಪನ್ನ ಹಾಗೂ ಆದಾಯ ಹೆಚ್ಚಿಸಲು ಸಹಾಯ ಸಹಕಾರ ನೀಡುವುದಾಗಿ ಹೇಳಿದರು.ಕೈಮಗ್ಗ ಪ್ರದರ್ಶನ ಹಾಗೂ ಮಾರಾಟ ಮೇಳವು ಅ.೧೯ ರಿಂದ ೨೫ರವೆಗೆ ನಡೆಯಲಿದ್ದು, ಈ ಮೇಳದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಮಳಿಗೆಗಳಿದ್ದು ಉತ್ತಮ ಗುಣಮಟ್ಟದ…

Read More

ಕೋಟಿ ವೃಕ್ಷ ಅಭಿಯಾನ ಅಂಗವಾಗಿ ವೃಕ್ಷೋತ್ಥಾನ ಹೆರಿಟೇಜ್ ರನ್ ಲಾಂಛನ ಅನಾವರಣ ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಕೋಟಿ ವೃಕ್ಷ ಅಭಿಯಾನ ಕಾರ್ಯಕ್ರಮ ಅಂಗವಾಗಿ ವೃಕ್ಷೋತ್ಥಾನ ಹೆರಿಟೇಜ್ ರನ್ ೨೦೨೩ರ ಲಾಂಛನ ಗುರುವಾರ ಅನಾವರಣಗೊಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಸೆಂಬರ್ ೨೪ ರಂದು ಐತಿಹಾಸಿಕ ವಿಜಯಪುರದಲ್ಲಿ ಅರಣ್ಯೀಕರಣ ಅಭಿವೃದ್ಧಿಪಡಿಸುವುದರ ಜೊತೆಗೆ ಸ್ಮಾರಕಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ವೃಕ್ಷೋಥಾನ್ ಹೆರಿಟೇಜ್ ರನ್-೨೦೨೩ಅನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.ಪರಿಸರ ರಕ್ಷಣೆ ಜೊತೆಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಮಹತ್ವ ಕುರಿತು ಪರಿಣಾಮಕಾರಿಯಾಗಿ ಪ್ರಚಾರಗೊಳಿಸಲಾಗುವುದು. ಐತಿಹಾಸಿಕ ಸ್ಮಾರಕಗಳ ಮಹತ್ವದ ಕುರಿತು ಜನರಲ್ಲಿ ಆಸಕ್ತಿ ಮೂಡಿಸಿ, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜನರಲ್ಲಿ ಮರ ಬೆಳೆಸುವ ಪರಿಸರ ಉಳಿಸುವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ಮಾರಕಗಳ ಸಂರಕ್ಷಣೆ ಮಹತ್ವ ಈ…

Read More

ವಿಜಯಪುರ: ಹಳದಿ ಬಣ್ಣದ ನಿನಾದದಲ್ಲಿ ನಾರಿಮಣಿಗಳು ತನ್ಮಯರಾಗಿ ನವರಾತ್ರಿ ಐದನೇ ದಿನದ ಖುಷಿ,ಸಂಭ್ರಮ ಹಂಚಿಕೊಂಡರು. ಹಳದಿ ನವಬಣ್ಣದ ಸೀರೆ ಮುಡಿಪಿನೊಂದಿಗೆ ಭಾವಮೊಗದ ಸೆಲ್ಫಿ ಪೋಟೋ ಕ್ಲಿಕಿಸಿಕೊಂಡು ಸಂತಸಗೊಂಡರು. ವಿಜಯಪುರ ಆಲಕುಂಟೆ ನಗರದ ಮಹಿಳೆಯರಾದ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಆರ್ಚನಾ ಮೋಹನ ಚವ್ಹಾಣ, ಪ್ರಿಯಾಂಕಾ ನಾಯಕ, ರೇಖಾ ಪವಾರ, ಜ್ಯೋತಿ, ಅಕ್ಷತಾ,ಶೃತಿ ಇತರರು ನವರಾತ್ರಿ ಉತ್ಸವದಂಗವಾಗಿ ಬಣ್ಣದ ಸೀರೆ ಉಡುಗೆಯಲ್ಲಿ ಗುರುವಾರ ನಲಿದು ಖುಷಿಪಟ್ಟರು.

Read More

ಆಲಮಟ್ಟಿ: ದಸರಾ ಹಬ್ಬ,ನವರಾತ್ರಿ ಸಡಗರ ಎಲ್ಲೆಲ್ಲೂ ನಮ್ಮೊಳಗಿನ ಪೂಜ್ಯ ಭಕ್ತಿಭಾವದ ಪರಾಕಾಷ್ಠೆ ಮೆರೆಸಿದೆ. ಯಶಸ್ಸು ಖ್ಯಾತಿಯ ಸ್ಕಂದಮಾತೆ ದುರ್ಗಾದೇವಿಯ ಅವತಾರದಲೊಂದು. ಶಕ್ತಿ,ಬುದ್ದಿ, ಮನಃಶುದ್ಧಿ ಕರುಣಿಸುವ ದಿವ್ಯತೆ ಹೊಂದಿರುವ ಪ್ರತೀತಿ ಹಿನ್ನೆಲೆಯಲ್ಲಿ ನವರಾತ್ರಿ ಐದನೇ ದಿನದಂದು ವೈಭವೋಪೇತದಿಂದ ಪೂಜಿತೆಗೊಳ್ಳುತ್ತಾಳೆ. ಇಲ್ಲಿನ ಸಂತೋಷ ಯಶವಂತ ಮರಡಿ ಪರಿವಾರ ಕುಟುಂಬದಲ್ಲಿ ಐದನೇ ದಿನದ ನವರಾತ್ರಿ ರಂಗಿನ ಪೂಜಾ ಕೈಂಕರ್ಯ ವಿಶೇಷವಾಗಿತ್ತು. ಹೆಣ್ಣು ಮಕ್ಕಳು ನವೋಲ್ಲಾಸದಿ ದುರ್ಗಾಮಾತೆಯನ್ನು ಆರಾಧಿಸಿ ಆಲಮಟ್ಟಿಯಲ್ಲಿನ ದೇವದೇವತೆಗಳ ದೇಗುಲಕ್ಕೆ ತೆರಳಿ ಪೂಜಿಸಿದರು, ನಮಿಸಿ ಅನಂತ ಧನ್ಯತೆ, ನಮ್ಯತೆ ತೋರಿದರು. ಕೇಸರಿ ಕಲರ್ ಕೋಡ್ ಮರಡಿ ಪರಿವಾರದಲ್ಲಿ ಗುರುವಾರ ಮೊಳಕೆಯೊಡೆದ್ದಿತ್ತು. ಕೇಸರಿ ಬಣ್ಣ ಕನಸಿನ ಹೊನ್ನ ಎನ್ನುವಂತೆ ಎಲ್ಲರೂ ಕೇಸರಿ ಕಲರ್ ಡ್ರೀಮ್ ನಲ್ಲಿ ನವರಸದೊಂದಿಗೆ ನಗೆ ಚೆಲ್ಲಿ ಖುಷಿಪಟ್ಟರು.

Read More

ವಿಜಯಪುರ: ಜಿಲ್ಲೆಯ ಕೋಳೂರು ವಿದ್ಯುತ್ ಉಪ ಕೇಂದ್ರದಲ್ಲಿ ಹೊಸದಾಗಿ ೧೧೦ ಕೆ.ವಿ ಮುದ್ದೇಬಿಹಾಳ-ಹಿರೇ ಮುರಾಳ ಮಾರ್ಗದ ಗೋಪುರ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು, ಮಾರ್ಗ ಮುಕ್ತತೆ ತೆಗೆದುಕೊಳ್ಳಲಾಗುತ್ತಿದೆ. ೧೧೦ ಕೆ.ವಿ ಉಪಕೇಂದ್ರ ಹಿರೇ ಮುರಾಳ ಹಾಗೂ ೧೧೦ ಕೆ.ವಿ ಉಪ ಕೇಂದ್ರ ಮುದ್ದೇಬಿಹಾಳದಿಂದ ಹೊರ ಹೋಗುವ ೩೩ ಕೆ.ವಿ ಉಪ ಕೇಂದ್ರಗಳಾದ ಢವಳಗಿ, ತಂಗಡಗಿ ಹಾಗೂ ನಾಲತವಾಡ ಮಾರ್ಗಗಳಲ್ಲಿ ಮತ್ತು ಈ ಎಲ್ಲಾ ಉಪಕೇಂದ್ರಗಳಿಂದ ಹೊರ ಹೋಗುವ ಎಲ್ಲಾ ೧೧ ಕೆ.ವಿ ಮಾರ್ಗಗಳಿಗೆ ನಿರಂತರ ಜ್ಯೋತಿ ಮಾರ್ಗಗಳು, ನೀರು ಸರಬರಾಜು ಮಾರ್ಗಗಳು, ಕೃಷಿ ನೀರಾವರಿ ಮಾರ್ಗಗಳು, ಹಾಗೂ ಗ್ರಾಮಗಳಿಗೆ ಅ.೨೧ರ ಬೆಳಿಗ್ಗೆ ೬ ಗಂಟೆಯಿಂದ ಮದ್ಯಾಹ್ನ ೨ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಬಸವನ ಬಾಗೇವಾಡಿಯ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

Read More

ವಿಜಯಪರ: ಅಕ್ರಮ ಮಧ್ಯ ಮಾರಾಟ ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷದ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ವಿಜಯಪುರ ಜಿಲ್ಲೆಯಲ್ಲಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ದಿನಸಿ ಅಂಗಡಿ ಕಿರಾಣಿ ಮತ್ತು ಪಾನ್ ಶಾಪ್ ಡಾಬಾಗಳಲ್ಲಿ ವಿಪರೀತವಾಗಿ ಮಧ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯ ಬಹುತೇಕ ಹೈಸ್ಕೂಲ್ ಮತ್ತು ಕಾಲೇಜು ಹಂತದ ವಿದ್ಯಾರ್ಥಿಗಳು ಮಧ್ಯ ವ್ಯಸನಿಗಳಾಗಿ ಪರಿವರ್ತನೆಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಅನುಮತಿ ಪಡೆದಿರುವ ಮತ್ತು ಪಡೆಯದಿರುವ ಬಹುತೇಕ ಮಧ್ಯದ ಅಂಗಡಿಗಳು ಬೆಳಗ್ಗೆ ೬ ಗಂಟೆಗೆ ಆರಂಭವಾಗುತ್ತವೆ. ಇದು ಶಾಲಾ ಮಕ್ಕಳ ಮೇಲೆ ತೀವ್ರ ತರಹದ ಪರಿಣಾಮವನ್ನು ಬೀರುತ್ತಿದೆ. ಬೆಳಗ್ಗೆ ಮಕ್ಕಳು ಶಾಲೆ ಟ್ಯೂಷನ್ ಸೇರಿದಂತೆ ವಿವಿಧ ರೀತಿಯ ಕಲಿಕಾ ಅಭ್ಯಾಸಗಳಿಗಾಗಿ ಹೊರಡುತ್ತಿರುವಾಗ ಮಧ್ಯದ ಅಂಗಡಿಗಳು ತೆರೆದಿರುವುದು ಮಧ್ಯ ಕುಡಿದು ಗಾಳಿಯಲ್ಲಿ ತೋರಾಡುತ್ತಿರುವ ದೃಶ್ಯಗಳು ಜಗಳಾಟದ ದೃಶ್ಯಗಳು ಮಕ್ಕಳ ಮನಸ್ಸಿನ ಮೇಲೆ ವಿಪರೀತವಾಗಿ ಪರಿಣಾಮವನ್ನು ಬೀರುತ್ತಿವೆ. ಇದು ಅವರ ಕಲಿಕಾ ಮೌಲ್ಯಗಳ ಮೇಲೆ ವ್ಯತರಿಕ್ತವಾದ ಪರಿಣಾಮವನ್ನು ಬೀರುತ್ತಿದೆ.ಜಿಲ್ಲೆಯ…

Read More

ದೇವರ ಹಿಪ್ಪರಗಿ: ಶರಣರ ನಾಡಿನ ನಾಡದೇವಿಯ ೮ನೇ ವರ್ಷದ ಉತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಭಕ್ತಿ ಭಾವದೊಂದಿಗೆ ವಿಜ್ರಂಭಣೆಯಿಂದ ಜರುಗಿತು.ಪಟ್ಟಣದ ಬುದ್ನಿ ಓಣಿಯಲ್ಲಿ ದಿ:೧೯ ರಿಂದ ೨೪ ರವರೆಗೆ ಪ್ರತಿಷ್ಠಾಪನೆಗೊಳ್ಳುತ್ತಿರುವ ನಾಡದೇವಿ ಮಹೋತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಗುರುವಾರ ಮದ್ಯಾನ್ಹ ಇಂಡಿ ರಸ್ತೆಯ ಕೆ.ಇ.ಬಿಯಿಂದ ಪ್ರಾರಂಭಗೊಂಡು, ಅಂಬೇಡ್ಕರ ವೃತ್ತ, ಮೊಹರೆ ವೃತ್ತ ಮಾರ್ಗವಾಗಿ ಮೇನ್ ಬಜಾರ್ , ಪತ್ತಾರಕಟ್ಟೆಯ ಮೂಲಕ ಪ್ರತಿಷ್ಠಾಪನೆಯ ಸ್ಥಳ ತಲುಪಿತು.ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹಾಗೂ ಬಿಜೆಪಿ ಯುವಧುರೀಣ ಸಂಗನಗೌಡ ಪಾಟೀಲ (ಸಾಸನೂರ) ಉತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಸ್ಥಳೀಯ ಶ್ರೀಗಳು ಸಾನಿಧ್ಯ ವಹಿಸಿದ್ದರು.ಮಳೆಗಾಲದ ಅಭಾವ ಹಾಗೂ ಪ್ರಖರ ಬಿಸಿಲಿನ ಕಾರಣ ಮೆರವಣಿಗೆ ಈ ಬಾರಿ ಸರಳವಾಗಿ ಕಂಡು ಬಂತು. ಅಬ್ಬರದ ಡಿಜೆ ಸಂಗೀತದ ನಡುವೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನೋಡುಗರ ಗಮನ ಸೆಳೆದರು.ಉತ್ಸವ ಸಮೀತಿ ಅಧ್ಯಕ್ಷ ಕಲ್ಮೇಶ ಬುದ್ನಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ,…

Read More

ಇಂಡಿ: ಗ್ರಂಥಾಲಯ ಜ್ಞಾನದ ಬುತ್ತಿಯನ್ನು ತುಂಬಿಸಿಕೊಳ್ಳುವ ದೇಗುಲ. ಆದ್ರೆ ಆ ದೇಗುಲವೀಗ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯವೋ ಅನುದಾನದ ಕೊರತೆಯೋ ಜ್ಞಾನ ಮಂದಿರವಿಗ ಓದುಗರಿಲ್ಲದೆ ಬಡವಾಗಿದೆ. ತುರ್ತಾಗಿ ವಿಶೇಷ ಅನುದಾನ ಅಡಿಯಲ್ಲಿ ಹೊಸದೊಂದು ಗ್ರಂಥಾಲಯ ನಿರ್ಮಿಸಬೇಕೆಂದು ಕಂದಾಯ ಉಪವಿಭಾಗ ಕಾರ್ಯಾಲಯದಲ್ಲಿ ಶಿರಸ್ತೆದಾರ ಶ್ರೀಕಾಂತ್ ಪೂಜಾರಿ ಅವರಿಗೆ ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘದಿಂದ ಮನವಿ ಸಲ್ಲಿಸಿದರು.ಪಟ್ಟಣದ ಅಂಚೆ ಕಛೇರಿ ಹತ್ತಿರವಿರುವ ಗ್ರಂಥಾಲಯ ಸಂಪೂರ್ಣ ಶೀತಲ ವ್ಯವಸ್ಥೆಯಲ್ಲಿದ್ದು, ಕೊಳೆತ ಗಬ್ಬೆದ್ದು ವಾಕರೀಕೆ ತರುವ ಸ್ಥಿತಿಯಲ್ಲಿದೆ. ಈಗಾಗಲೇ ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಇಲಾಖೆಯವರ ಗಮನಕ್ಕೆ ತಂದರೂ, ಅದಲ್ಲದೇ ತಾಲೂಕು ಅಧಿಕಾರಿ ತಹಶಿಲ್ದಾರ ಅವರ ಗಮನಕ್ಕೂ ತಂದರೂ ಯಾವುದೇ ಪರಿಹಾರ ಕಂಡಿಲ್ಲ. ಹಾಗಾಗಿ ಕೂಡಲೇ ನೂತನ ಗ್ರಂಥಾಲಯ ನಿರ್ಮಿಸಿ, ಸ್ಪರ್ಧಾತ್ಮಕ ವಿಧ್ಯಾರ್ಥಿಗಳಿಗೆ, ಸಾಹಿತ್ಯಗಳಿಗೆ ಹಾಗೂ ಓದುಗರಿಗೆ ಮತ್ತು ತಾಲೂಕು ಪಟ್ಟಣದ ಜನ ಸಾಮನ್ಯರಿಗೆ ಓದಿನ ಹಸಿವು ನಿಗಿಸುವ ಕಾರ್ಯವಾಗಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ, ಉಗ್ರವಾದ ಹೋರಾಟ, ಪ್ರತಿಭಟನೆಗೆ ಮುಂದಾಗಬೇಕಾಗುತ್ತೆದೆ ಎಂದು…

Read More

ಇಂಡಿ :ವಾಲ್ಮೀಕಿ ಮಹರ್ಷಿ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದ್ದು ಎಂದು ತಳವಾರ ಪರಿವಾರ ಸಮಾಜ ಸೇವಾ ಸಂಘದ ಪ.ಕಾರ್ಯದರ್ಶಿ ಹುಚ್ಚಪ್ಪ ತಳವಾರ ಹೇಳಿದರು.ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ವೃತ್ತವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಹರ್ಷಿ ವಾಲ್ಮೀಕಿ ಅವರು, ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಸತತ ಪರಿಶ್ರಮವಿದ್ದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ಯುವ ನಾಯಕ ಸೋಮು ಜಮಾದಾರ ಮಾತನಾಡಿದರು.ಈ ಸಂದರ್ಭದಲ್ಲಿ ರೇವಣ್ಣ ಹತ್ತಳ್ಳಿ , ಶಿವಶರಣ ನಾಟೀಕಾರ , ಲಕ್ಷ್ಮಣ ನಾಟೀಕಾರ, ಸಿದ್ರಾಮ ಜಮಾದಾರ, ಪಂಡಿತ್ ವಾಲಿಕಾರ, ಸುರೇಶ ಡ್ಯಾಬೇರಿ, ನಾಗು, ಸಿದ್ದು ಬಿರಾದಾರ, ಭಾಗಪ್ಪ ಪೂಜಾರಿ, ವಿಠಲ ಅಂಗಡಿ, ಅಪ್ಪು ಖೇಡ, ಅನಿಲ್ ಕೋಳಿ ಹಣಮಂತ ವಾಲಿಕಾರ, ಬಸು ವಾಲಿಕಾರ, ಪರಸು ಕೋಳಿ, ಸಂಜು ವಾಲಿಕಾರ ಸೇರಿದಂತೆ…

Read More