ಆಲಮಟ್ಟಿ: ದಸರಾ ಹಬ್ಬ,ನವರಾತ್ರಿ ಸಡಗರ ಎಲ್ಲೆಲ್ಲೂ ನಮ್ಮೊಳಗಿನ ಪೂಜ್ಯ ಭಕ್ತಿಭಾವದ ಪರಾಕಾಷ್ಠೆ ಮೆರೆಸಿದೆ.
ಯಶಸ್ಸು ಖ್ಯಾತಿಯ ಸ್ಕಂದಮಾತೆ ದುರ್ಗಾದೇವಿಯ ಅವತಾರದಲೊಂದು. ಶಕ್ತಿ,ಬುದ್ದಿ, ಮನಃಶುದ್ಧಿ ಕರುಣಿಸುವ ದಿವ್ಯತೆ ಹೊಂದಿರುವ ಪ್ರತೀತಿ ಹಿನ್ನೆಲೆಯಲ್ಲಿ ನವರಾತ್ರಿ ಐದನೇ ದಿನದಂದು ವೈಭವೋಪೇತದಿಂದ ಪೂಜಿತೆಗೊಳ್ಳುತ್ತಾಳೆ.
ಇಲ್ಲಿನ ಸಂತೋಷ ಯಶವಂತ ಮರಡಿ ಪರಿವಾರ ಕುಟುಂಬದಲ್ಲಿ ಐದನೇ ದಿನದ ನವರಾತ್ರಿ ರಂಗಿನ ಪೂಜಾ ಕೈಂಕರ್ಯ ವಿಶೇಷವಾಗಿತ್ತು. ಹೆಣ್ಣು ಮಕ್ಕಳು ನವೋಲ್ಲಾಸದಿ ದುರ್ಗಾಮಾತೆಯನ್ನು ಆರಾಧಿಸಿ ಆಲಮಟ್ಟಿಯಲ್ಲಿನ ದೇವದೇವತೆಗಳ ದೇಗುಲಕ್ಕೆ ತೆರಳಿ ಪೂಜಿಸಿದರು, ನಮಿಸಿ ಅನಂತ ಧನ್ಯತೆ, ನಮ್ಯತೆ ತೋರಿದರು.
ಕೇಸರಿ ಕಲರ್ ಕೋಡ್ ಮರಡಿ ಪರಿವಾರದಲ್ಲಿ ಗುರುವಾರ ಮೊಳಕೆಯೊಡೆದ್ದಿತ್ತು. ಕೇಸರಿ ಬಣ್ಣ ಕನಸಿನ ಹೊನ್ನ ಎನ್ನುವಂತೆ ಎಲ್ಲರೂ ಕೇಸರಿ ಕಲರ್ ಡ್ರೀಮ್ ನಲ್ಲಿ ನವರಸದೊಂದಿಗೆ ನಗೆ ಚೆಲ್ಲಿ ಖುಷಿಪಟ್ಟರು.
Related Posts
Add A Comment