ಇಂಡಿ :ವಾಲ್ಮೀಕಿ ಮಹರ್ಷಿ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದ್ದು ಎಂದು ತಳವಾರ ಪರಿವಾರ ಸಮಾಜ ಸೇವಾ ಸಂಘದ ಪ.ಕಾರ್ಯದರ್ಶಿ ಹುಚ್ಚಪ್ಪ ತಳವಾರ ಹೇಳಿದರು.
ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ವೃತ್ತವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಅವರು, ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಸತತ ಪರಿಶ್ರಮವಿದ್ದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಯುವ ನಾಯಕ ಸೋಮು ಜಮಾದಾರ ಮಾತನಾಡಿದರು.
ಈ ಸಂದರ್ಭದಲ್ಲಿ ರೇವಣ್ಣ ಹತ್ತಳ್ಳಿ , ಶಿವಶರಣ ನಾಟೀಕಾರ , ಲಕ್ಷ್ಮಣ ನಾಟೀಕಾರ, ಸಿದ್ರಾಮ ಜಮಾದಾರ, ಪಂಡಿತ್ ವಾಲಿಕಾರ, ಸುರೇಶ ಡ್ಯಾಬೇರಿ, ನಾಗು, ಸಿದ್ದು ಬಿರಾದಾರ, ಭಾಗಪ್ಪ ಪೂಜಾರಿ, ವಿಠಲ ಅಂಗಡಿ, ಅಪ್ಪು ಖೇಡ, ಅನಿಲ್ ಕೋಳಿ ಹಣಮಂತ ವಾಲಿಕಾರ, ಬಸು ವಾಲಿಕಾರ, ಪರಸು ಕೋಳಿ, ಸಂಜು ವಾಲಿಕಾರ ಸೇರಿದಂತೆ ಹಲವರಿದ್ದರು.
Related Posts
Add A Comment