ಇಂಡಿ: ಗ್ರಂಥಾಲಯ ಜ್ಞಾನದ ಬುತ್ತಿಯನ್ನು ತುಂಬಿಸಿಕೊಳ್ಳುವ ದೇಗುಲ. ಆದ್ರೆ ಆ ದೇಗುಲವೀಗ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯವೋ ಅನುದಾನದ ಕೊರತೆಯೋ ಜ್ಞಾನ ಮಂದಿರವಿಗ ಓದುಗರಿಲ್ಲದೆ ಬಡವಾಗಿದೆ. ತುರ್ತಾಗಿ ವಿಶೇಷ ಅನುದಾನ ಅಡಿಯಲ್ಲಿ ಹೊಸದೊಂದು ಗ್ರಂಥಾಲಯ ನಿರ್ಮಿಸಬೇಕೆಂದು ಕಂದಾಯ ಉಪವಿಭಾಗ ಕಾರ್ಯಾಲಯದಲ್ಲಿ ಶಿರಸ್ತೆದಾರ ಶ್ರೀಕಾಂತ್ ಪೂಜಾರಿ ಅವರಿಗೆ ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘದಿಂದ ಮನವಿ ಸಲ್ಲಿಸಿದರು.
ಪಟ್ಟಣದ ಅಂಚೆ ಕಛೇರಿ ಹತ್ತಿರವಿರುವ ಗ್ರಂಥಾಲಯ ಸಂಪೂರ್ಣ ಶೀತಲ ವ್ಯವಸ್ಥೆಯಲ್ಲಿದ್ದು, ಕೊಳೆತ ಗಬ್ಬೆದ್ದು ವಾಕರೀಕೆ ತರುವ ಸ್ಥಿತಿಯಲ್ಲಿದೆ. ಈಗಾಗಲೇ ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಇಲಾಖೆಯವರ ಗಮನಕ್ಕೆ ತಂದರೂ, ಅದಲ್ಲದೇ ತಾಲೂಕು ಅಧಿಕಾರಿ ತಹಶಿಲ್ದಾರ ಅವರ ಗಮನಕ್ಕೂ ತಂದರೂ ಯಾವುದೇ ಪರಿಹಾರ ಕಂಡಿಲ್ಲ. ಹಾಗಾಗಿ ಕೂಡಲೇ ನೂತನ ಗ್ರಂಥಾಲಯ ನಿರ್ಮಿಸಿ, ಸ್ಪರ್ಧಾತ್ಮಕ ವಿಧ್ಯಾರ್ಥಿಗಳಿಗೆ, ಸಾಹಿತ್ಯಗಳಿಗೆ ಹಾಗೂ ಓದುಗರಿಗೆ ಮತ್ತು ತಾಲೂಕು ಪಟ್ಟಣದ ಜನ ಸಾಮನ್ಯರಿಗೆ ಓದಿನ ಹಸಿವು ನಿಗಿಸುವ ಕಾರ್ಯವಾಗಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ, ಉಗ್ರವಾದ ಹೋರಾಟ, ಪ್ರತಿಭಟನೆಗೆ ಮುಂದಾಗಬೇಕಾಗುತ್ತೆದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಜಗುರು ದೇವರ, ಕಾರ್ಯದರ್ಶಿ
ಸಿದ್ದರಾಮ ಗೊರನಾಳ, ಪ್ರತೀಕ ಬೆನೂರ, ಸ್ವರೂಪ ಸಿಂದೆ, ಮುತ್ತು ಸಿಂದಗಿ, ಪ್ರತೀಕ ಬಿರಾದಾರ, ಸಚೀನ ಗಿರಣಿವಡ್ಡರ್, ಸ್ವಸ್ತಿಕ ಗಳೇದ, ಅನೀಲ ರಾಠೋಡ,ಕೀರಣ ಮಹೇಂದ್ರಕರ, ಶರಣಬಸಪ್ಪ ವಾಗೆ, ವಿಶ್ವನಾಥ ದೇಸಾಯಿ, ಆನಂದ ದೇವರ, ವಿಶಾಲ ಮಹಾಜನಶೆಟ್ಟಿ, ರತನ ಹಲವಾಯಿ, ಆಕಾಶ ಕಾಳೆ, ಅಂಬೀರಿಷ ಕುಂಬಾರ, ಸಂತೋಷ ಬಿರಾದಾರ, ಸಾಯಬಣ್ಣ ಗೊರನಾ ಸೇರಿದಂತೆ ಅನೇಕರಿದ್ದರು.
Related Posts
Add A Comment