ವಿಜಯಪರ: ಅಕ್ರಮ ಮಧ್ಯ ಮಾರಾಟ ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷದ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿಜಯಪುರ ಜಿಲ್ಲೆಯಲ್ಲಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ದಿನಸಿ ಅಂಗಡಿ ಕಿರಾಣಿ ಮತ್ತು ಪಾನ್ ಶಾಪ್ ಡಾಬಾಗಳಲ್ಲಿ ವಿಪರೀತವಾಗಿ ಮಧ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯ ಬಹುತೇಕ ಹೈಸ್ಕೂಲ್ ಮತ್ತು ಕಾಲೇಜು ಹಂತದ ವಿದ್ಯಾರ್ಥಿಗಳು ಮಧ್ಯ ವ್ಯಸನಿಗಳಾಗಿ ಪರಿವರ್ತನೆಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಅನುಮತಿ ಪಡೆದಿರುವ ಮತ್ತು ಪಡೆಯದಿರುವ ಬಹುತೇಕ ಮಧ್ಯದ ಅಂಗಡಿಗಳು ಬೆಳಗ್ಗೆ ೬ ಗಂಟೆಗೆ ಆರಂಭವಾಗುತ್ತವೆ. ಇದು ಶಾಲಾ ಮಕ್ಕಳ ಮೇಲೆ ತೀವ್ರ ತರಹದ ಪರಿಣಾಮವನ್ನು ಬೀರುತ್ತಿದೆ. ಬೆಳಗ್ಗೆ ಮಕ್ಕಳು ಶಾಲೆ ಟ್ಯೂಷನ್ ಸೇರಿದಂತೆ ವಿವಿಧ ರೀತಿಯ ಕಲಿಕಾ ಅಭ್ಯಾಸಗಳಿಗಾಗಿ ಹೊರಡುತ್ತಿರುವಾಗ ಮಧ್ಯದ ಅಂಗಡಿಗಳು ತೆರೆದಿರುವುದು ಮಧ್ಯ ಕುಡಿದು ಗಾಳಿಯಲ್ಲಿ ತೋರಾಡುತ್ತಿರುವ ದೃಶ್ಯಗಳು ಜಗಳಾಟದ ದೃಶ್ಯಗಳು ಮಕ್ಕಳ ಮನಸ್ಸಿನ ಮೇಲೆ ವಿಪರೀತವಾಗಿ ಪರಿಣಾಮವನ್ನು ಬೀರುತ್ತಿವೆ. ಇದು ಅವರ ಕಲಿಕಾ ಮೌಲ್ಯಗಳ ಮೇಲೆ ವ್ಯತರಿಕ್ತವಾದ ಪರಿಣಾಮವನ್ನು ಬೀರುತ್ತಿದೆ.
ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕರಿಂದ ಐದು ಅನಧಿಕೃತ ಮಧ್ಯ ಮಾರಾಟ ಮಾಡುವ ಡಾಬಾಗಳು ಇರುತ್ತವೆ. ಪ್ರತಿ ಅಂಗಡಿಯಿಂದ ತಿಂಗಳಿಗೆ ೨೫ ರಿಂದ ೩೦ ಸಾವಿರ ರೂಪಾಯಿ ಹಪ್ತಾ ವಸೂಲಿ ಮಾಡುತ್ತಾರೆ. ಆದ್ದರಿಂದ ಅಬಕಾರಿ ಇಲಾಖೆಯ ಅಧಿಕಾರಿಗಳ ಹಪ್ತಾ ವಸೂಲಿ ದಂಧೆಯನ್ನು ಮೋಟಕುಗೊಳಿಸಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುವ ಮಳಿಗೆಗಳು ಮತ್ತು ಡಾಬಾಗಳನ್ನು ಬಂದ್ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ರಾಕೇಶ ಇಂಗಳಗಿ, ಹಮೀದ ಇನಾಮ್ದಾರ್, ಪ್ರವೀಣ ಕನಸೆ, ವಿಕ್ರಮ ವಾಗ್ಮೊರೆ ಮತ್ತು ಶ್ರೀಶೈಲ ಮಠ ಮೈಬೂಬ್ ತಾಂಬೋಳಿ, ರಾಘವೇಂದ್ರ ಚಲವಾದಿ, ಸಾದಿಕ್ ಪಟವೆಗಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

