ದೇವರ ಹಿಪ್ಪರಗಿ: ಶರಣರ ನಾಡಿನ ನಾಡದೇವಿಯ ೮ನೇ ವರ್ಷದ ಉತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಭಕ್ತಿ ಭಾವದೊಂದಿಗೆ ವಿಜ್ರಂಭಣೆಯಿಂದ ಜರುಗಿತು.
ಪಟ್ಟಣದ ಬುದ್ನಿ ಓಣಿಯಲ್ಲಿ ದಿ:೧೯ ರಿಂದ ೨೪ ರವರೆಗೆ ಪ್ರತಿಷ್ಠಾಪನೆಗೊಳ್ಳುತ್ತಿರುವ ನಾಡದೇವಿ ಮಹೋತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಗುರುವಾರ ಮದ್ಯಾನ್ಹ ಇಂಡಿ ರಸ್ತೆಯ ಕೆ.ಇ.ಬಿಯಿಂದ ಪ್ರಾರಂಭಗೊಂಡು, ಅಂಬೇಡ್ಕರ ವೃತ್ತ, ಮೊಹರೆ ವೃತ್ತ ಮಾರ್ಗವಾಗಿ ಮೇನ್ ಬಜಾರ್ , ಪತ್ತಾರಕಟ್ಟೆಯ ಮೂಲಕ ಪ್ರತಿಷ್ಠಾಪನೆಯ ಸ್ಥಳ ತಲುಪಿತು.
ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹಾಗೂ ಬಿಜೆಪಿ ಯುವಧುರೀಣ ಸಂಗನಗೌಡ ಪಾಟೀಲ (ಸಾಸನೂರ) ಉತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಸ್ಥಳೀಯ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಮಳೆಗಾಲದ ಅಭಾವ ಹಾಗೂ ಪ್ರಖರ ಬಿಸಿಲಿನ ಕಾರಣ ಮೆರವಣಿಗೆ ಈ ಬಾರಿ ಸರಳವಾಗಿ ಕಂಡು ಬಂತು. ಅಬ್ಬರದ ಡಿಜೆ ಸಂಗೀತದ ನಡುವೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನೋಡುಗರ ಗಮನ ಸೆಳೆದರು.
ಉತ್ಸವ ಸಮೀತಿ ಅಧ್ಯಕ್ಷ ಕಲ್ಮೇಶ ಬುದ್ನಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ್ ಗಡೇದ, ಕಾಶೀನಾಥ ಹಿರೇಮಠ, ಸೋಮು ದೇವೂರ, ವೀರೇಶ ಬುದ್ನಿ, ಚೇತನ ಇಂಡಿ, ಪವನ ಬುದ್ನಿ, ಶಂಕರಗೌಡ ಪಾಟೀಲ, ವೀರೇಶ ಭಾಸುತ್ಕರ್, ನಿಂಗು ನಾಗರಳ್ಳಿ, ಚಂದ್ರಶೇಖರ ದಾನಗೊಂಡ, ಮಹೇಶ ಯಾಳಗಿ ಸೇರಿದಂತೆ ಪ್ರಮುಖರು ಇದ್ದರು.
Related Posts
Add A Comment