ವಿಜಯಪುರ: ಜಿಲ್ಲೆಯ ಕೋಳೂರು ವಿದ್ಯುತ್ ಉಪ ಕೇಂದ್ರದಲ್ಲಿ ಹೊಸದಾಗಿ ೧೧೦ ಕೆ.ವಿ ಮುದ್ದೇಬಿಹಾಳ-ಹಿರೇ ಮುರಾಳ ಮಾರ್ಗದ ಗೋಪುರ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು, ಮಾರ್ಗ ಮುಕ್ತತೆ ತೆಗೆದುಕೊಳ್ಳಲಾಗುತ್ತಿದೆ. ೧೧೦ ಕೆ.ವಿ ಉಪಕೇಂದ್ರ ಹಿರೇ ಮುರಾಳ ಹಾಗೂ ೧೧೦ ಕೆ.ವಿ ಉಪ ಕೇಂದ್ರ ಮುದ್ದೇಬಿಹಾಳದಿಂದ ಹೊರ ಹೋಗುವ ೩೩ ಕೆ.ವಿ ಉಪ ಕೇಂದ್ರಗಳಾದ ಢವಳಗಿ, ತಂಗಡಗಿ ಹಾಗೂ ನಾಲತವಾಡ ಮಾರ್ಗಗಳಲ್ಲಿ ಮತ್ತು ಈ ಎಲ್ಲಾ ಉಪಕೇಂದ್ರಗಳಿಂದ ಹೊರ ಹೋಗುವ ಎಲ್ಲಾ ೧೧ ಕೆ.ವಿ ಮಾರ್ಗಗಳಿಗೆ ನಿರಂತರ ಜ್ಯೋತಿ ಮಾರ್ಗಗಳು, ನೀರು ಸರಬರಾಜು ಮಾರ್ಗಗಳು, ಕೃಷಿ ನೀರಾವರಿ ಮಾರ್ಗಗಳು, ಹಾಗೂ ಗ್ರಾಮಗಳಿಗೆ ಅ.೨೧ರ ಬೆಳಿಗ್ಗೆ ೬ ಗಂಟೆಯಿಂದ ಮದ್ಯಾಹ್ನ ೨ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಬಸವನ ಬಾಗೇವಾಡಿಯ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.