Author: editor.udayarashmi@gmail.com

ಇಂಡಿ: ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಡಾ ಎಂ ಎಂ ಪಡಶೆಟ್ಟಿ ಅವರು ವಿಮರ್ಶೆ,ಜಾನಪದ, ಸಂಶೋಧನೆ, ಗ್ರಂಥ ಸಂಪಾದನೆ, ಜೀವನ ಚರಿತ್ರೆ,ವೈಚಾರಿಕ ಲೇಖನಗಳ ಮೂಲಕ ಕನ್ನಡದ ಸಹೃದಯರಿಗೆ ದಣಿವರಿಯದ ಜಾನಪದ ತಜ್ಞರಾಗಿ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಶಿಕ್ಷಕ ವೈ ಜಿ ಬಿರಾದಾರ ಹೇಳಿದರು.ಅವರು ಇಂಡಿಯ ಭೀಮಾಂತರಂಗ ಜಗಲಿ, ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಸಂಸ್ಥೆಯಿಂದ ಹಮ್ಮಿಕೊಂಡ ಉಪನ್ಯಾಸ ಮಾಲಿಕೆ-2 ರಲ್ಲಿ ಜಾನಪದ ವಿದ್ವಾಂಸ ಡಾ ಎಂ ಎಂ ಪಡಶೆಟ್ಟಿ:ಬದುಕು ಬರಹ ಕುರಿತು ಉಪನ್ಯಾಸ ನೀಡುತ್ತಾ ಈ ಮಾತುಗಳನ್ನು ಹೇಳಿದರು.ಗಟ್ಟಿ ಸಾಹಿತ್ಯ ಸೃಷ್ಟಿಯ ಡಾ.ಎಂ ಎಂ ಪಡಶೆಟ್ಟಿ ಅವರುರೈತಾಪಿ ಕುಟುಂಬದಲ್ಲಿ ಜನಿಸಿ, ಸ್ವಯಂ ಪ್ರತಿಭೆ ಮತ್ತು ಪರಿಶ್ರಮಗಳಿಂದ ಸಾಧನೆಯ ಮೆಟ್ಟಿಲುಗಳನ್ನೇರಿದವರು. ಸರಳತೆ, ಪ್ರಾಮಾಣಿಕತೆ, ಸಹೃದಯತೆಗಳಂತಹ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ಅವರ ಆಸಕ್ತಿಯ ವ್ಯಾಪ್ತಿ ಜಾನಪದದಷ್ಟೆ ವಿಶಾಲವಾಗಿದೆ ಎಂದು ಹೇಳಿದರು.ಸಿಂದಗಿಯಲ್ಲಿ ನೆಲೆ ಪ್ರಕಾಶನ ಆರಂಭಿಸಿದ ಅವರು ಗೆಳೆಯರ ಜೊತೆ ಬೆರೆತು ಸಾಹಿತ್ಯದ ಬೆಳಕನ್ನು ಸಾರಸ್ವತ ಲೋಕಕ್ಕೆ ನೀಡಿದವರು. ಕೆಲಸ ಮಾಡುತ್ತ ಮಾಡುತ್ತ ಬೆಳೆದು ನಿಂತವರು. ನಿರಂತರ…

Read More

ಕೊಲ್ಹಾರ: ದೇಶದ ರಕ್ಷಣೆಯಲ್ಲಿ ನಮ್ಮ ಪ್ರಾಣ ತ್ಯಾಗ ಮಾಡಿದ ಯೋಧರ ನೆನಪಿನಲ್ಲಿ ನನ್ನ ಮಣ್ಣು ನನ್ನ ದೇಶ ಕಳಸ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಾ ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿಗಳು ಆರ್ ಎಸ್ ಪಾಟೀಲ್ ಹೇಳಿದರು.ಪಟ್ಟಣದ ತಾಲ್ಲೂಕ ಪಂಚಾಯಿತಿ ಆವರಣದಲ್ಲಿ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕ ಪಂಚಾಯಿತಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ, ನನ್ನ ದೇಶ ನನ್ನ ಮಣ್ಣು ಕಾರ್ಯಕ್ರಮದ ನಿಮಿತ್ತ ಪ್ರತಿ ಗ್ರಾಮ ಪಂಚಾಯತಿಯಿಂದ ಮಣ್ಣು ಸೇರಿ ವಿವಿಧ ಕಾರ್ಯಕ್ರಮಗಳನ್ನು ತಾಲೂಕು ಮಟ್ಟದಲ್ಲಿ ಹಾಗೂ ಗ್ರಾ.ಪಂ.ಮಟ್ಟದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆಯವರ ನಿರ್ದೇಶನದಂತೆ ಹಾಗೂ ತಾಲೂಕ ಪಂಚಾಯಿತಿ ಕಾರ್ಯನಿವಾಹಕ ಅಧಿಕಾರಿ ಎಫ್.ಹೆಚ್.ಪಠಾಣರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.ಈ ಸಮಯದಲ್ಲಿ ತಾಲೂಕು ಕಂದಾಯ ಇಲಾಖೆಯ ಕೃಷ್ಣಾ ಗುಡೂರ, ಕೃಷಿ ಇಲಾಖೆಯ ಅಧಿಕಾರಿ ಪೂರೋಹಿತ, ಶಿಶು ಅಭಿವೃದ್ಧಿ ಅಧಿಕಾರಿಗಳು, ಅಂಚೆ…

Read More

ಕೊಲ್ಹಾರ: ಕೆನೆ ಮೊಸರಿನ ಖ್ಯಾತಿಯ ಕೊಲ್ಹಾರದ ಆರಾಧ್ಯದೇವ ಹಣಮಂತ ದೇವರ ದರ್ಶನವನ್ನು ಪಾಟ್ನಾ ಹೈಕೋರ್ಟಿನ ನ್ಯಾಯಮೂರ್ತಿಗಳು ಪಡೆದುಕೊಳ್ಳಲು ಶನಿವಾರ ಆಗಮಿಸಿದ್ದರು.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಾಟ್ನಾ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಪವನಕುಮಾರ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಶನಿವಾರ ದಿವಸ ಬೆಳಿಗ್ಗೆ ಆಗಮಿಸಿ ಒಂದು ಘಂಟೆಯ ಕಾಲ ದೇವರಿಗೆ ಅಭಿಷೇಕವನ್ನು ಮಾಡಿಸಿ ಮಹಾಮಂಗಳಾರತಿ ಪೂಜೆಯನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಪವನಕುಮಾರ, ಮಳೆರಾಜು, ಬಾಬು ಕೇಶವ ಮತ್ತು ಕುಟುಂಬ ಸದಸ್ಯರು ದೇವರ ದರ್ಶನವನ್ನು ಪಡೆದುಕೊಂಡರು.ಅರ್ಚಕರಾದ ಮಲ್ಲಿಕಾರ್ಜುನ ಹೂಗಾರ ಆಡಳಿತ ಮಂಡಳಿಯ ಸಂಗನಬಸಪ್ಪ ಗಾಣಿಗೇರ, ಸಂಕಪ್ಪ ಕಾಖಂಡಕಿ, ಬಸಪ್ಪ ಚೌದರಿ, ಸಂಗಪ್ಪ ಕ ಗಣಿ, ಪ್ರಭುಕುಮಾರ ಗಣಿ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Read More

ಇಂಡಿ: ತಾಲ್ಲೂಕಿನ ಹಿರೇಮಸಳಿ ಗ್ರಾಮದ ಇಂದಿರಾನಗರದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಚರಂಡಿ ವ್ಯವಸ್ಥೆಯಿಲ್ಲ, ಶೌಚಾಲಯವಿಲ್ಲ, ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಹೀಗೆ ಮೂಲಭೂತ ಸೌಲಭ್ಯಗಳಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಸಾಕಷ್ಟು ಸಲ ಮನವಿ ಪತ್ರ ಸಲ್ಲಿಸಿದರೂ ಕೂಡಾ ಯಾವದೇ ಪ್ರಯೋಜನವಾಗಿಲ್ಲ ಎಂದು ಅಲ್ಲಿಯ ನಿವಾಸಿಗಳಾದ ಸೈಫನ್ ಚಟ್ಟರಕಿ, ರಸೂಲ ನಾಟೀಕಾರ, ಶಾಬುದ್ದೀನ ಜೇಟಗಿ, ಶ್ರೀಶೈಲ ತಳವಾರ, ಅನೀಲ ಕಪಾಲಿ ಹಾಗೂ ಕೆಆರೆಸ್ ಪಕ್ಷದ ಪದಾಧಿಕಾರಿಗಳು ಆರೋಪಿಸಿದ್ದಾರೆ.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸದಿದ್ರೆ ಶೀಘ್ರದಲ್ಲಿಯೇ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Read More

ಇಂಡಿ: ಅಸ್ವಚ್ಚತೆಯ ಕಾರಣದಿಂದ ಸಾಂಕ್ರಾಮಿಕ ರೋಗಗಳಿಗೆ ಅನೇಕರು ತುತ್ತಾಗುತ್ತಿದ್ದಾರೆ. ಆದ್ದರಿಂದ ಎಲ್ಲರೂ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಸುನಂದಾ ಅಂಬಲಗಿ ಹೇಳಿದರು.ಶನಿವಾರ ತಾಲೂಕಿನ ಹಂಜಗಿ ಗ್ರಾಮದಲ್ಲಿ ವಿಶ್ವ ಕೈ ತೊಳೆಯುವ ದಿನ ಅರಿವು ಮೂಡಿಸುವ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.ಕೈಗಳು ತೋಳೆಯುವುದರಿಂದ ಸೋಂಕು ಮತ್ತು ರೋಗಗಳನ್ನು ತಡೆಯಬಹುದು. ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಕೈ ತೊಳೆಯುವದು ಬಹಳ ಪ್ರಮುಖವಾಗಿದೆ.ಸಾರ್ವಜನಿಕ ಸ್ಥಳಗಳಲ್ಲಿರುವ ವಸ್ತುಗಳು ಮುಟ್ಟಿದಾಗ ಆಗಾಗ ಕಣ್ಣು, ಮೂಗು, ಬಾಯಿ ಸ್ಪರ್ಶಿಸುತ್ತದ್ದರೆ ಅಡುಗೆ ಮಾಡುವ ಮೊದಲು ಶೌಚಾಲಯಕ್ಕೆ ಹೋಗಿ ಬಂದ ನಂತರ ಸೇಹಿತರಿಗೆ ಹ್ಯಾಂಡಶೇಖ ಕೊಟ್ಟ ಬಳಿಕ ಕೈ ತೊಳೆಯಬೇಕು ಇಲ್ಲವಾದರೆ ವೈರಾಣು ಇರುವ ಕೈಗಳಿಂದ ಮೂಗು, ಬಾಯಿ ಮುಟ್ಟಿಕೊಳ್ಳುವುದರಿಂದ ಶೀತ, ಮನಂಜೆಟಿಸ್, ಹೆಪಟೈಟಸ್, ಮತ್ತು ಅತೀ ಸಾರದಂತಹ ತೀವ್ರತರವಾದ ಸೋಂಕು ಹರಡಬಹುದು ಜೊತೆಗೆ ಇತರರಿಗೂ ವೈರಾಣು ಹರಡಿಸುತ್ತದೆ.ಕೈಗಳು ತೋಳೆಯುವುದರಿಂದ ಶೇಕಡಾ ೪೦ ರಷ್ಟು ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಯಬಹುದು. ಶೇಕಡಾ ೫೭ರಷ್ಟು ಜಠರ ಕರುಳಿನ ಸಮಸ್ಯೆಯನ್ನು ತಡೆಯಬಹುದು. ಉಸಿರಾಟದ…

Read More

ಇಂಡಿ: ಪಟ್ಟಣದ ಗುರುಕಿರಣ ಝಳಕಿ ಅಂಡರ್ ೧೪ ರ ಕ್ರಿಕೆಟ್ ಆಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ಚಿದಾನಂದಗೌಡ ಬಿರಾದಾರ ಈತನಿಗೆ ಕ್ರಿಕೆಟ್ ತರಬೇತಿ ನೀಡಿದ್ದಾರೆ. ಗುರುಕಿರಣ ಸಾಧನೆಗೆ ಶಿಕ್ಷಕಿ ತಾಯಿ ಸರೋಜಿನಿ ಮಾವಿನಮರದ, ತಂದೆ ಶಿಕ್ಷಕ ಲಕ್ಷ್ಮಣ ಝಳಕಿ ಸೇರಿದಂತೆ ಗುಲಬರ್ಗಾ ವಿಭಾಗದ ಟೀಮ್ ಮ್ಯಾನೇಜರ ಸಂತೋಷ ಕೊಬಾಳ್ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಇಂಡಿ: ನಿವೃತ್ತ ನೌಕರರು ಪಿಂಚಣಿ ಪಡೆಯುವವರು ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣ ಪತ್ರ ನೀಡುವದು ಕಡ್ಡಾಯವಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಇಂಡಿ ಶಾಖೆಯ ಮುಖ್ಯ ಪ್ರಭಂದಕ ಬಿ.ಜೆ.ರಾಮಸ್ವಾಮಿ ಹೇಳಿದರು.ಪಟ್ಟಣದ ಎಸ್ ಬಿಐ ಶಾಖೆಯಲ್ಲಿ ನಿವೃತ್ತ ನೌಕರರ ಪಿಂಚಣಿ ಕುರಿತು ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.ರವಿ ತಳವಾರ ಮತ್ತು ಪರಶುರಾಮ ತೆನೆಹಳ್ಳಿ ಮಾತನಾಡಿ, ನವೆಂಬರ್ ತಿಂಗಳಲ್ಲಿ ಪಿಂಚಣಿದಾರರು ಲಾಯಿಫ್ ಸರ್ಟೀಫಿಕೇಟ ನೀಡುವದು, ಯುನೋ ಆಫ್ ಉಪಯೋಗಿಸಿಕೊಂಡು ಡಿಜಿಟಲ್ ಎಲ್ಲ ಸೌಲಭ್ಯ ಪಡೆದುಕೊಳ್ಳಬಹುದು ಮತ್ತು ಬ್ಯಾಂಕಿಗೆ ಹಣ ಪಡೆಯಲು ಬರದೇ ಎಟಿಎಂ ಸೌಲಭ್ಯ ಪಡೆಯಲು ಹೇಳಿದರು.ಪಿಂಚಣಿದಾರರಾದ ನಿವೃತ್ತ ಪ್ರಾಚಾರ್ಯ ಎಸ್.ಡಿ.ಬೆಳಕಿಂಡಿ, ಎಸ್.ಆರ್.ಮೂರಮನ, ಡಿ.ಎ.ಲಮಾಣಿ, ಸಿದ್ದಪ್ಪ ಬಗಲಿ, ಟಿ.ಎಸ್.ರಾಠೋಡ, ಎ.ಎಚ್.ಚವ್ಹಾಣ, ಪಿ.ಎಸ್.ಸಾಲಕ್ಕಿ, ಟಿ.ಡಿ.ಅರಬ, ಎಂ.ಪಿ.ಬಿರಾದಾರ, ಪಿ.ಎನ್.ಸೋನವನೆ ಮತ್ತಿತರಿದ್ದರು.

Read More

ಸಿಂದಗಿ: ಜಿಪಂ ಸಿಇಒ ಅವರ ಆದೇಶದಂತೆ ತಿಂಗಳ ಪ್ರತಿ ೩ನೆಯ ಶನಿವಾರಂದು ತಾಲೂಕಿನ ಪ್ರತಿ ಅಂಗನವಾಡಿಯಲ್ಲಿ ಪಾಲಕರ ಸಭೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ ತಿಳಿಸಿದ್ದಾರೆ.ತಾಲೂಕಿನ ಖಾನಾಪೂರ ತೋಟದ ವಸ್ತಿ ಅಂಗನವಾಡಿಯಲ್ಲಿ ಹಮ್ಮಿಕೊಂಡ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಅಂಗನವಾಡಿಗಳಲ್ಲಿ ಮಕ್ಕಳ ಆರೋಗ್ಯ, ಶೈಕ್ಷಣಿಕ ಸುಧಾರಣೆ, ಅಪೌಷ್ಠಿಕತೆ ನಿವಾರಣೆ ಸೇರಿದಂತೆ ಮಕ್ಕಳ ಸರ್ವತೋಮುಖ ಬೆಳವಣಿಗೆಯ ದೃಷ್ಠಿಯೊಂದಿಗೆ ಸಮುದಾಯ ಪಾಲ್ಗೋಳ್ಲುವಿಕೆಯ ದೆಸೆಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಈ ವೇಳೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ವಲಯ ಮೇಲ್ವಿಚಾರಕಿ ಸೇರಿದಂತೆ ಪಾಲಕರು ಮತ್ತು ಮಕ್ಕಳಿದ್ದರು.

Read More

ಸಿಂದಗಿ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸಿಂದಗಿ ತಾಲೂಕಾಧ್ಯಕ್ಷರನ್ನಾಗಿ ಜಿಲಾನಿ ಮುಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಜಗದೀಶ ಸೂರ್ಯವಂಶಿ ತಿಳಿಸಿದ್ದಾರೆ.ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ತಾಯಿ ಶ್ರೀ ಭುವನೇಶ್ವರಿ ಹಾಗೂ ಈ ನಾಡಿನ ಸೇವೆಯನ್ನು ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಅವರ ಆದೇಶದ ಮೇರೆಗೆ ಜಿಲಾನಿ ಮುಲ್ಲಾ ಅವರನ್ನು ತಾಲೂಕಾಧ್ಯಕ್ಷರನ್ನಾಗಿ ಜಿಲ್ಲಾಧ್ಯಕ್ಷ ಜಗದೀಶ ಸೂರ್ಯವಂಶಿ ಆದೇಶ ಹೊರಡಿಸಿದ್ದಾರೆ.

Read More