ಕೊಲ್ಹಾರ: ಕೆನೆ ಮೊಸರಿನ ಖ್ಯಾತಿಯ ಕೊಲ್ಹಾರದ ಆರಾಧ್ಯದೇವ ಹಣಮಂತ ದೇವರ ದರ್ಶನವನ್ನು ಪಾಟ್ನಾ ಹೈಕೋರ್ಟಿನ ನ್ಯಾಯಮೂರ್ತಿಗಳು ಪಡೆದುಕೊಳ್ಳಲು ಶನಿವಾರ ಆಗಮಿಸಿದ್ದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಾಟ್ನಾ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಪವನಕುಮಾರ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಶನಿವಾರ ದಿವಸ ಬೆಳಿಗ್ಗೆ ಆಗಮಿಸಿ ಒಂದು ಘಂಟೆಯ ಕಾಲ ದೇವರಿಗೆ ಅಭಿಷೇಕವನ್ನು ಮಾಡಿಸಿ ಮಹಾಮಂಗಳಾರತಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಪವನಕುಮಾರ, ಮಳೆರಾಜು, ಬಾಬು ಕೇಶವ ಮತ್ತು ಕುಟುಂಬ ಸದಸ್ಯರು ದೇವರ ದರ್ಶನವನ್ನು ಪಡೆದುಕೊಂಡರು.
ಅರ್ಚಕರಾದ ಮಲ್ಲಿಕಾರ್ಜುನ ಹೂಗಾರ ಆಡಳಿತ ಮಂಡಳಿಯ ಸಂಗನಬಸಪ್ಪ ಗಾಣಿಗೇರ, ಸಂಕಪ್ಪ ಕಾಖಂಡಕಿ, ಬಸಪ್ಪ ಚೌದರಿ, ಸಂಗಪ್ಪ ಕ ಗಣಿ, ಪ್ರಭುಕುಮಾರ ಗಣಿ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
Related Posts
Add A Comment