ಇಂಡಿ: ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಡಾ ಎಂ ಎಂ ಪಡಶೆಟ್ಟಿ ಅವರು ವಿಮರ್ಶೆ,ಜಾನಪದ, ಸಂಶೋಧನೆ, ಗ್ರಂಥ ಸಂಪಾದನೆ, ಜೀವನ ಚರಿತ್ರೆ,ವೈಚಾರಿಕ ಲೇಖನಗಳ ಮೂಲಕ ಕನ್ನಡದ ಸಹೃದಯರಿಗೆ ದಣಿವರಿಯದ ಜಾನಪದ ತಜ್ಞರಾಗಿ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಶಿಕ್ಷಕ ವೈ ಜಿ ಬಿರಾದಾರ ಹೇಳಿದರು.
ಅವರು ಇಂಡಿಯ ಭೀಮಾಂತರಂಗ ಜಗಲಿ, ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಸಂಸ್ಥೆಯಿಂದ ಹಮ್ಮಿಕೊಂಡ ಉಪನ್ಯಾಸ ಮಾಲಿಕೆ-2 ರಲ್ಲಿ ಜಾನಪದ ವಿದ್ವಾಂಸ ಡಾ ಎಂ ಎಂ ಪಡಶೆಟ್ಟಿ:ಬದುಕು ಬರಹ ಕುರಿತು ಉಪನ್ಯಾಸ ನೀಡುತ್ತಾ ಈ ಮಾತುಗಳನ್ನು ಹೇಳಿದರು.
ಗಟ್ಟಿ ಸಾಹಿತ್ಯ ಸೃಷ್ಟಿಯ ಡಾ.ಎಂ ಎಂ ಪಡಶೆಟ್ಟಿ ಅವರು
ರೈತಾಪಿ ಕುಟುಂಬದಲ್ಲಿ ಜನಿಸಿ, ಸ್ವಯಂ ಪ್ರತಿಭೆ ಮತ್ತು ಪರಿಶ್ರಮಗಳಿಂದ ಸಾಧನೆಯ ಮೆಟ್ಟಿಲುಗಳನ್ನೇರಿದವರು. ಸರಳತೆ, ಪ್ರಾಮಾಣಿಕತೆ, ಸಹೃದಯತೆಗಳಂತಹ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ಅವರ ಆಸಕ್ತಿಯ ವ್ಯಾಪ್ತಿ ಜಾನಪದದಷ್ಟೆ ವಿಶಾಲವಾಗಿದೆ ಎಂದು ಹೇಳಿದರು.
ಸಿಂದಗಿಯಲ್ಲಿ ನೆಲೆ ಪ್ರಕಾಶನ ಆರಂಭಿಸಿದ ಅವರು ಗೆಳೆಯರ ಜೊತೆ ಬೆರೆತು ಸಾಹಿತ್ಯದ ಬೆಳಕನ್ನು ಸಾರಸ್ವತ ಲೋಕಕ್ಕೆ ನೀಡಿದವರು. ಕೆಲಸ ಮಾಡುತ್ತ ಮಾಡುತ್ತ ಬೆಳೆದು ನಿಂತವರು. ನಿರಂತರ ಕಷ್ಟ-ಕಾರ್ಯದಿಂದ ಮಾತ್ರ ಬೆಳವಣಿಗೆ ಎನ್ನುವುದನ್ನು ಸಾಧಿಸಿ ತೋರಿಸಿದ ಸಂಘಜೀವಿ ಅವರಾಗಿದ್ದರು ಎಂದು ಹೇಳಿದರು.
ವಿಜಯಪುರದ ವಿಮರ್ಶಕ ಮನು ಪತ್ತಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ ಚನ್ನಪ್ಪ ಕಟ್ಟಿ,ಡಾ ಎಂ ಎಂ ಪಡಶೆಟ್ಟಿ, ಗೀತಯೋಗಿ, ಸಿ ಎಂ. ಬಂಡಗರ ಲಿಂಗಪ್ಪ ಕಲಬುರ್ಗಿ, ರಾಚು ಕೊಪ್ಪ, ಸಂಗನಗೌಡ ಹಚಡದ, ಶ್ರೀಧರ ಹಿಪ್ಪರಗಿ, ಸಾಹೇಬಗೌಡ ಬಿರಾದಾರ, ಸಂತೋಷ ಜೇವರ್ಗಿ, ಸತೀಶ ಕುರುಂದವಾಡೆ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಶಿಕ್ಷಕ ಸಂತೋಷ ಬಂಡೆ ಸ್ವಾಗತಿಸಿ, ಪರಿಚಯಿಸಿದರು.
ಶಿಕ್ಷಕ ವೀರಣ್ಣ ದಸ್ತರೆಡ್ಡಿ ನಿರೂಪಿಸಿದರು. ಶಿಕ್ಷಕಿ ಬಿ ಸಿ ಭಗವಂತಗೌಡರ ವಂದಿಸಿದರು.
Related Posts
Add A Comment