ಸಿಂದಗಿ: ಜಿಪಂ ಸಿಇಒ ಅವರ ಆದೇಶದಂತೆ ತಿಂಗಳ ಪ್ರತಿ ೩ನೆಯ ಶನಿವಾರಂದು ತಾಲೂಕಿನ ಪ್ರತಿ ಅಂಗನವಾಡಿಯಲ್ಲಿ ಪಾಲಕರ ಸಭೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ ತಿಳಿಸಿದ್ದಾರೆ.
ತಾಲೂಕಿನ ಖಾನಾಪೂರ ತೋಟದ ವಸ್ತಿ ಅಂಗನವಾಡಿಯಲ್ಲಿ ಹಮ್ಮಿಕೊಂಡ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಅಂಗನವಾಡಿಗಳಲ್ಲಿ ಮಕ್ಕಳ ಆರೋಗ್ಯ, ಶೈಕ್ಷಣಿಕ ಸುಧಾರಣೆ, ಅಪೌಷ್ಠಿಕತೆ ನಿವಾರಣೆ ಸೇರಿದಂತೆ ಮಕ್ಕಳ ಸರ್ವತೋಮುಖ ಬೆಳವಣಿಗೆಯ ದೃಷ್ಠಿಯೊಂದಿಗೆ ಸಮುದಾಯ ಪಾಲ್ಗೋಳ್ಲುವಿಕೆಯ ದೆಸೆಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ವಲಯ ಮೇಲ್ವಿಚಾರಕಿ ಸೇರಿದಂತೆ ಪಾಲಕರು ಮತ್ತು ಮಕ್ಕಳಿದ್ದರು.
Related Posts
Add A Comment