Author: editor.udayarashmi@gmail.com

ವಿಜಯಪುರ: ಅಬಕಾರಿ ಖಾತೆ ಸಚಿವರಾದ ಆರ್.ಬಿ.ತಿಮ್ಮಾಪುರ ಅವರು ನವೆಂಬರ್ ೭ ರಂದು ವಿಜಯಪುರ ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ನವೆಂಬರ್ ೭ರಂದು ಬೆಳಿಗ್ಗೆ ೮ ಗಂಟೆಗೆ ಮುಧೋಳದಿಂದ ಹೊರಟು ೧೧ ಗಂಟೆಗೆ ಆಲಮಟ್ಟಿಗೆ ಆಗಮಿಸಿ ಬಿಟಿಡಿಎ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ೩ ಗಂಟೆಗೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಆಲಮಟ್ಟಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ನ.೮ರಂದು ಬೆಳಿಗ್ಗೆ ೮ ಗಂಟೆಗೆ ಆಲಮಟ್ಟಿಯಿಂದ ಕೊಪ್ಪಳ ಜಿಲ್ಲೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ರೋಗಗಸ್ಥ ಜಾನುವಾರುಗಳಿಗೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಲಸಿಕೆ ನೀಡುವಂತೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಹೇಳಿದರು.ಅವರು ಶನಿವಾರ ಜಿಲ್ಲಾ ಪಶು ವೈಧ್ಯಕೀಯ ಪಾಲಿಕ್ಲಿನಿಕಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.ಪ್ರತಿ ದಿನ ಪಶು ವೈಧ್ಯಕೀಯ ಪಾಲಿಕ್ಲಿನಿಕಗೆ ಭೇಟಿ ನೀಡುವ ಸಾರ್ವಜನಿಕರು, ರೈತರ ಭೇಟಿ ಕುರಿತು ಮಾಹಿತಿ ಪಡೆದುಕೊಂಡರು. ಇಲ್ಲಿ ಜಾನುವಾರುಗಳಿಗೆ ಮತ್ತು ರೈತರಿಗೆ ನೀಡುವ ಚಿಕಿತ್ಸೆಗಳ ಕುರಿತು ಪರಿಶೀಲನೆ ನಡೆಸಿದ ಅವರು, ಸಂಸ್ಥೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು.ಈ ಪಾಲಿಕ್ಲಿನಿಕ್‌ದಿಂದ ಜಾನುವಾರುಗಳಿಗೆ ಸಿಗುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮತ್ತು ರೈತರಿಗೆ ತಲುಪುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಪಾಲಿಕ್ಲಿನಿಕ್ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ , ಪಾಲಿಕ್ಲಿನಿಕ್ ಉಪ ನಿರ್ದೇಶಕರಾದ ಡಾ. ಶಿವಕುಮಾರ ಹೊಳೆಪ್ಪಗೋ¼, ಪಶು ಪಾಲನಾ ಇಲಾಖೆಯ ಮುಖ್ಯ ಪಶು ವೈಧ್ಯಾಧಿಕಾರಿ ಡಾ. ಎಸ್.ಎಮ್.ಬಿರಾದಾರ, ಹಿರಿಯ ಪಶು…

Read More

ವಿಜಯಪುರ: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ, ಕರ್ನಾಟಕ ಭೋವಿ ಅಭಿವೃದ್ದಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ವತಿಯಿಂದ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ನೇರಸಾಲ ಯೋಜನೆ, ಉದ್ಯಮಶೀಲತಾ ಅಭಿವೃದ್ದಿ ಯೋಜನೆ, (ಮೈಕ್ರೋ ಕ್ರೆಡಿಟ್ ಫೈನಾನ್ಸ್), ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಪ್ರೇರಣಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಅರ್ಜಿ ಸಲ್ಲಿಸಲು ದಿನಾಂಕ : ೨೯-೧೧-೨೦೨೩ ಕೊನೆಯ ದಿನಾಂಕವಾಗಿದ್ದು, ಆಸಕ್ತರು ಸೇವಾ ಸಿಂಧು ಪೋರ್ಟ್ಲ್‌ನಲ್ಲಿ https://sevasindhu.karnataka.gov.in ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಬಿಎಲ್‌ಡಿಇ ಸಂಸ್ಥೆಯ ಎವ್ಹಿಎಸ್ ಆರ್ಯುವೇದ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ನವೆಂಬರ್ ೧೮ ರಂದು ನಗರದ ಬಿಎಲ್‌ಡಿಇ ಸಂಸ್ಥೆಯ ಎವ್ಹಿಎಸ್ ಆರ್ಯುವೇದ ಮಹಾವಿದ್ಯಾಲಯದ ವಾಗ್ಭಟ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ಯುವ ಜನೋತ್ಸವದಲ್ಲಿ ಜಾನಪದ ನೃತ್ಯ (ಗುಂಪು), ಜನಪದ ಗೀತೆ (ಗುಂಪು), ಜಾನಪದ ನೃತ್ಯ, ಜಾನಪದ ಗೀತೆ, ಕಥೆ ಬರೆಯುವುದು, ಪೋಸ್ಟರ್ ಮೇಕಿಂಗ್, ಘೊಷಣೆ, ಛಾಯಾಚಿತ್ರಣ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಛಿಸುವ ೨೯ ವರ್ಷದೊಳಗಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಯುವಜನ ಸಂಘಗಳ ಸದಸ್ಯರು ತಮ್ಮ ಹೆಸರನ್ನು ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಕೆ, ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ, ವಿಜಯಪುರ ಕಚೇರಿಯಲ್ಲಿ ದಿನಾಂಕ : ೧೫-೧೧-೨೦೨೩ರೊಳಗಾಗಿ ನೊಂದಾಯಿಸಿಕೊಳ್ಳಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ: ೦೮೩೫೨-೨೫೧೦೮೫, ಮೊ:೯೪೮೦೮೮೬೫೫೫ ಸಂಖ್ಯೆಗೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲೆಯಲ್ಲಿರುವ ಪಟಾಕಿ ಮಾರಾಟ ಮಳಿಗೆ, ದಾಸ್ತಾನುಗಳಿಗೆ ಭೇಟಿ ನಿಡಿ, ಮಳಿಗೆಗಳಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮ ಹಾಗೂ ಮಳಿಗೆಗಳಲ್ಲಿ ಹಸಿರು(ಗ್ರೀನ್) ಪಟಾಕಿ ಮಾತ್ರ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಮಳಿಗೆಗಳಲ್ಲಿ ಗ್ರೀನ್ ಪಟಾಕಿ ಮಾರಾಟ ಮಾಡಲು ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿ ಲೈಸನ್ಸ್ ಪಡೆಯದೇ ಪಟಾಕಿ ಮಾರಾಟ ಮಾಡುವವರ ಮೇಲೆ ಪ್ರಕರಣದ ದಾಖಲಿಸುವಂತೆ ಹಾಗೂ ಅನಧಿಕೃತ ಪಟಾಕಿ ಮಾರಾಟ ಮಾಡದಂತೆ ಕ್ರಮ ವಹಿಸಲು ಅವರು ಅಧಿಕಾರಿಗಳಿಗೆ ಸೂಚಿಸಿದರು.ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಳಿಗೆ, ದಾಸ್ತಾನಿನ ಸ್ಥಳಗಳಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ದೀಪಾವಳಿ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ಪಟಾಕಿ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡುವ ಸಂದರ್ಭದಲ್ಲಿ ಪರಿಶೀಲಿಸಿಕೊಂಡು ಯಾವುದೇ ರೀತಿಯಿಂದ ಸಾರ್ವಜನಿಕರಿಗೆ ತೊಂದರೆ, ಹಾನಿಯಾಗದಂತೆ…

Read More

ವಿಜಯಪುರ: ನಗರದ ಸಿದ್ದೇಶ್ವರ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಸಂಗನಬಸವ ಶಿಶುನಿಕೇತನ ಶಾಲೆಯ ವಿದ್ಯಾರ್ಥಿಗಳು ನವೆಂಬರ್ 2 ರಂದು ಲೊಯಲಾ ಸ್ಕೂಲ್, ಸಿಂದಗಿ ಇವರ ಸಹಯೋಗದಲ್ಲಿ ನಡೆದಿರುವ ಅಂತರ ಶಾಲಾ ಕ್ರೀಡಾಕೂಟದಲ್ಲಿ ಬಾಲಕಿಯರ ಖೋ – ಖೋ ಸ್ಪರ್ಧೆಯಲ್ಲಿ ಶ್ರೇಯಾ ಬಬಲೇಶ್ವರ , ಹೇಮಾ ಪಾಟೀಲ್, ನಿವೇದಿತಾ ಎಂ, ಅಪೂರ್ವ ಬಿರಾದಾರ್, ಸ್ನೇಹ ಮುದ್ನೂರ, ಪ್ರತಿಮಾ ಸುಗಂಧಿ, ಅಪೂರ್ವ ಪೂಜಾರಿ, ಅನುಪ್ರಿಯಾ ಬಿರಾದಾರ್, ಸ್ನೇಹ ಬಡಿಗೇರ್, ರಚನಾ ಅಳದಿ, ಸಂಪ್ರೀತಿ ಕಣಿಮಣಿ , ವೈಷ್ಣವಿ ಕರಲಗಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.ಚದುರಂಗ ಸ್ಪರ್ಧೆಯಲ್ಲಿ ಅನು ಭಾವಿಕಟ್ಟಿ ದ್ವಿತೀಯ ಸ್ಥಾನ ಹಾಗೂ ಬಾಲಕಿಯರ ಕಬಡ್ಡಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಈ ಸಾಧನೆಯನ್ನು ಕೊಂಡಾಡಿದ ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ, ನೋಮನಿ ಛೇರ್ಮನ್ ಸಂಗನಗೌಡ ನಾಡಗೌಡ್, ಚಂದ್ರಶೇಖರ್ ಯವೂರ್, ಸದಾನಂದ ದೇಸಾಯಿ, ಅನಿಲ್ ಸಬರದ, ಡಾಕ್ಟರ್ ಹೆಚ್ ವೆಂಕಟೇಶ್ ಹಾಗೂ ಪ್ರಾಂಶುಪಾಲರಾದ ಶ್ರೀಮತಿ ವಿಜಯಲಕ್ಷ್ಮಿ ಪಟ್ಟೇದ, ಉಪ ಪ್ರಾಂಶುಪಾಲೆ ಶ್ರೀಮತಿ ಶ್ರೀದೇವಿ…

Read More

ವಿಜಯಪುರ: ತಿಕೋಟಾ ತಾಲೂಕನ್ನು ಬರಪೀಡಿತ ಎಂದು ರಾಜ್ಯ ಸರಕಾರ ಘೋಷಣೆ ಮಾಡಿರುವುದನ್ನು ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ ಸ್ವಾಗತಿಸಿದ್ದು, ಸಚಿವ ಎಂ. ಬಿ. ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಬರಪೀಡಿತ ತಾಲೂಕು ಘೋಷಣೆ ಮಾಡಲು ಅಗತ್ಯವಿರುವ ಮಾನದಂಡಗಳ ಬಗ್ಗೆ ಅರಿವಿಲ್ಲದ ಕೆಲವರು ಸುಳ್ಳು ಆರೋಪ ಮಾಡಿ, ತಮ್ಮ‌ಅಜ್ಞಾನ ಪ್ರದರ್ಶಿಸುತ್ತ ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಿದ್ದರು. ಅಲ್ಲದೇ, ಬಿಜೆಪಿಯ ರಾಜ್ಯಾಧ್ಯಕ್ಷರೂ ಕೂಡ ಈ ಮಾನದಂಡಗಳ ಬಗ್ಗೆ ತಿಳಿದುಕೊಳ್ಳದೇ ಬರ ಅಧ್ಯಯನಕ್ಕೆ ಎಂದು ಪ್ರಚಾರ ಪಡೆಯಲು ಭೇಟಿ ನೀಡಿದ್ದರು. ಆದರೆ, ರಾಜ್ಯಾಧ್ಯಕ್ಷರು ತಮ್ಮ ತಂಡದೊಂದಿಗೆ ಪ್ರವಾಸ ಕೈಗೊಂಡು ತಮ್ಮ ಮನೆ ತಲುಪುವ ಮೊದಲೇ ರಾಜ್ಯ ಸರಕಾರ ತಿಕೋಟಾ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಇನ್ನು ಮುಂದಾದರೂ ಕೀಳು ರಾಜಕಾರಣ ಮಾಡುವವರು ಯಾವುದೇ ಮಾನದಂಡ ಘೋಷಣೆ ಮಾಡಲು ಅಗತ್ಯವಿರುವ ಮಾನದಂಡಗಳ ಬಗ್ಗೆ ತಿಳಿದುಕೊಂಡು ಮಾತನಾಡಬೇಕೇ ಹೊರತು ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪ ಮಾಡತ್ತ ತಿರುಗಬಾರದು ಎಂದು ಸಿದ್ದು ಗೌಡನವರ ಕಿವಿಮಾತು‌ ಹೇಳಿದ್ದಾರೆ.ತಿಕೋಟಾ ಬರಪೀಡಿತ…

Read More

ವಿಜಯಪುರ: ತಿಕೋಟಾ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಈ ಮುಂಚೆ ವಿಜಯಪುರ ಜಿಲ್ಲೆಯ ತಿಕೋಟಾ ಹೊರತು ಪಡಿಸಿ ಉಳಿದ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸತತವಾಗಿ ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗೆ ತಿಕೋಟಾ ತಾಲೂಕಿನಲ್ಲಿ ಎದುರಾಗಿರುವ ಬರ ಬರ ಪರಿಸ್ಥಿತಿ ಕುರಿತು ಅಗತ್ಯ ದಾಖಲೆಗಳ‌ ಸಮೇತ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದರು. ಅಲ್ಲದೇ, ಬರಪೀಡಿತ ತಾಲೂಕು ಘೋಷಣೆಗೆ ಪರಿಗಣಿಸಲಾಗುವ ಮಾನದಂಡಗಳಿಗೆ ತಿಕೋಟಾ ತಾಲೂಕು ಅರ್ಹವಾಗಿರುವ ಕುರಿತು ಗಮನ ಸೆಳೆದಿದ್ದರು. ಮುಂಗಾರು ಹಂಗಾಮಿನಲ್ಲಿ ಕೇವಲ‌ ಒಂದು ತಿಂಗಳು ವಾಡಿಕೆಗಿಂತ ಸ್ವಲ್ಪ ಹೆಚ್ಚಿನ ಮಳೆಯಾಗಿದ್ದು ಉಳಿದ ಅವಧಿಯಲ್ಲಿ ಮಳೆಯ ಕೊರತೆಯಾಗಿರುವ ಕುರಿತು ದಾಖಲೆ ಸಮೇತ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದರು. ಅಲ್ಲದೇ, ಮಳೆಯ ಕೊರತೆಯಿಂದ ಬಿತ್ತನೆ, ಸಧ್ಯದ ಬೆಳೆಯ ಪರಿಸ್ಥಿತಿ, ಅಂತರ್ಜಲಮಟ್ಟ ಕುಸಿತ, ತೇವಾಂಶ ಕೊರತೆ, ಇದರಿಂದ ಕೃಷಿ ಮತ್ತು…

Read More

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ ಆ ಮನೆಯ ಮಗು ಒಂದೇ ಸಮನೆ ರಚ್ಚೆ ಹಿಡಿದು ಅಳುತ್ತಿತ್ತು. ಹಡೆದ ತಾಯಿ ಕಂಗಾಲಾಗಿದ್ದರೆ, ಅವಳ ತಾಯಿ ಹಸುಗೂಸಿನ ಅಳುವಿಗೆ ಏನು ಮಾಡಬೇಕೆಂದು ತೋಚದೆ ಕಾಲು ಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದಳು. ಮೂಲೆಯಲ್ಲಿ ಎಲೆ ಅಡಿಕೆ ಮೆಲ್ಲುತ್ತಾ ಕುಳಿತಿದ್ದ ಪಕ್ಕದ ಮನೆಯ ಅಜ್ಜಿ … ಅಯ್ಯ ಹಾಲು ಕುಡಿದು ಜೀರ್ಣ ಆಗಿಲ್ಲ ಕೂಸಿಗೆ… ಒಂದೀಟು ಅಜ್ವಾನ ತಿಂದು ಕೂಸಿನ ಹೊಟ್ಟೆ ಮೇಲೆ ಊದು ಎಂದು ಹೇಳಿದಳು. ಕೂಡಲೇ ಎಚ್ಚೆತ್ತ ಕೂಸಿನ ಅಜ್ಜಿ ಅಡುಗೆ ಮನೆಯಲ್ಲಿದ್ದ ಅಜ್ವಾನದ ಡಬ್ಬದಿಂದ ಮೂರು ಬೆರಳಿಗೆ ಬರುವಷ್ಟು ಅಜಿವಾನವನ್ನು ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿದು ತಿಂದು ಮಗುವಿನ ಹೊಕ್ಕುಳಿನ ಬಳಿ ಜೋರಾಗಿಊದಿದಳು. ಒಂದೆರಡು ನಿಮಿಷಗಳಲ್ಲಿ ಮಗುವಿನ ಅಳು ಶಾಂತವಾಗಿ ನಂತರ ನಿದ್ರಿಸಲಾರಂಭಿಸಿತು. ಅಚ್ಚರಿಯೇನಲ್ಲ..ನಮ್ಮ ಅಡುಗೆ ಮನೆಯಲ್ಲಿಯೇ ನಮ್ಮ ಅಜೀರ್ಣತೆಗೆ ಬೇಕಾದ ಹಲವಾರು ಮನೆ ಮದ್ದುಗಳಿವೆ, ಜೀರಿಗೆ, ಅಜಿವಾನ ಶುಂಠಿ, ಮಜ್ಜಿಗೆ ಇನ್ನೂ ಹತ್ತು ಹಲವು. ಕೆಲವೆಡೆ ಓಂ ಕಾಳು ಎಂದು ಕೂಡ…

Read More

ಮಂಡ್ಯ ಮ.ನಾ.ಉಡುಪ ಅದೊಂದು ರಾಜ್ಯ. ಅಲ್ಲೊಬ್ಬ ರಾಜನಿದ್ದ. ಆತ ಪ್ರತಿದಿನವೂ ಬ್ರಾಹ್ಮಣರಿಗೆ ಶ್ರದ್ಧೆಯಿಂದ ಅನ್ನಸಂತರ್ಪಣೆ ನಡೆಸುತ್ತಿದ್ದ .ಒಂದು ದಿನ, ಬಯಲು ಪ್ರದೇಶವೊಂದರಲ್ಲಿ , ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು . ಮೇಲೆ ಆಕಾಶದಲ್ಲಿ ಗಿಡುಗವೊಂದು, ಸತ್ತ ಹಾವನ್ನು, ಎತ್ತಿಕೊಂಡು ಹೋಗುತ್ತಿತ್ತು. ಆ ಸತ್ತ ಹಾವಿನ ಬಾಯಿಯಿಂದ ಒಂದು ಬಿಂದು ವಿಷ , ರಾಜ ಹಂಚುತ್ತಿದ್ದ ಆಹಾರದ ಮೇಲೆ ಬಿದ್ದಿತು. ಹೀಗಾದದ್ದು ಯಾರಿಗೂ ಗೊತ್ತಾಗಲಿಲ್ಲ. ರಾಜ ಆಹಾರ ಹಂಚುವುದನ್ನು ಮುಂದುವರಿಸಿದ .ರಾಜನಿಂದ ವಿಷದ ಆಹಾರವನ್ನು ಪಡೆದ ಒಬ್ಬ ಬ್ರಾಹ್ಮಣ ಸತ್ತು ಹೋದ. ರಾಜ ಈ ಘಟನೆಯಿಂದ ತುಂಬಾ ನೊಂದುಕೊಂಡ.ಈಗ, ಕರ್ಮಫಲದ ಹಂಚಿಕೆ ಮಾಡುವ ಚಿತ್ರಗುಪ್ತನಿಗೆ ಒಂದು ಸಂಧಿಗ್ಧವುಂಟಾಯಿತು. ಈ ಘಟನೆಯಲ್ಲಿ ಬ್ರಾಹ್ಮಣನ ಸಾವಿನ ಪಾಪದ ಫಲವನ್ನು , ಯಾರ ಲೆಕ್ಕಕ್ಕೆ ಬರೆಯುವುದೆಂದು, ಅವನಿಗೆ ತಿಳಿಯಲಿಲ್ಲ. ಅದು ಗಿಡುಗನ ತಪ್ಪಲ್ಲ. ಯಾಕೆಂದರೆ ಅದು ತನ್ನ ಆಹಾರವನ್ನು ತೆಗೆದುಕೊಂಡು ಹೋಗುತ್ತಿತ್ತು. ಸತ್ತ ಹಾವಿನ ತಪ್ಪಂತೂ ಖಂಡಿತಾ ಅಲ್ಲ. ರಾಜನ ತಪ್ಪೂ ಆಗಿರಲು ಸಾಧ್ಯವಿಲ್ಲ. ರಾಜನಿಗೆ ಆಹಾರದ ಮೇಲೆ ವಿಷ…

Read More