ವಿಜಯಪುರ: ನಗರದ ಸಿದ್ದೇಶ್ವರ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಸಂಗನಬಸವ ಶಿಶುನಿಕೇತನ ಶಾಲೆಯ ವಿದ್ಯಾರ್ಥಿಗಳು ನವೆಂಬರ್ 2 ರಂದು ಲೊಯಲಾ ಸ್ಕೂಲ್, ಸಿಂದಗಿ ಇವರ ಸಹಯೋಗದಲ್ಲಿ ನಡೆದಿರುವ ಅಂತರ ಶಾಲಾ ಕ್ರೀಡಾಕೂಟದಲ್ಲಿ ಬಾಲಕಿಯರ ಖೋ – ಖೋ ಸ್ಪರ್ಧೆಯಲ್ಲಿ ಶ್ರೇಯಾ ಬಬಲೇಶ್ವರ , ಹೇಮಾ ಪಾಟೀಲ್, ನಿವೇದಿತಾ ಎಂ, ಅಪೂರ್ವ ಬಿರಾದಾರ್, ಸ್ನೇಹ ಮುದ್ನೂರ, ಪ್ರತಿಮಾ ಸುಗಂಧಿ, ಅಪೂರ್ವ ಪೂಜಾರಿ, ಅನುಪ್ರಿಯಾ ಬಿರಾದಾರ್, ಸ್ನೇಹ ಬಡಿಗೇರ್, ರಚನಾ ಅಳದಿ, ಸಂಪ್ರೀತಿ ಕಣಿಮಣಿ , ವೈಷ್ಣವಿ ಕರಲಗಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಚದುರಂಗ ಸ್ಪರ್ಧೆಯಲ್ಲಿ ಅನು ಭಾವಿಕಟ್ಟಿ ದ್ವಿತೀಯ ಸ್ಥಾನ ಹಾಗೂ ಬಾಲಕಿಯರ ಕಬಡ್ಡಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಈ ಸಾಧನೆಯನ್ನು ಕೊಂಡಾಡಿದ ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ, ನೋಮನಿ ಛೇರ್ಮನ್ ಸಂಗನಗೌಡ ನಾಡಗೌಡ್, ಚಂದ್ರಶೇಖರ್ ಯವೂರ್, ಸದಾನಂದ ದೇಸಾಯಿ, ಅನಿಲ್ ಸಬರದ, ಡಾಕ್ಟರ್ ಹೆಚ್ ವೆಂಕಟೇಶ್ ಹಾಗೂ ಪ್ರಾಂಶುಪಾಲರಾದ ಶ್ರೀಮತಿ ವಿಜಯಲಕ್ಷ್ಮಿ ಪಟ್ಟೇದ, ಉಪ ಪ್ರಾಂಶುಪಾಲೆ ಶ್ರೀಮತಿ ಶ್ರೀದೇವಿ ಕನಾಳ. ಮಹೇಶ್ ಸಂಬನ್ನಿ ಹಾಗೂ ದೈಹಿಕ ಶಿಕ್ಷಕರಾದ ಚನಬಸು ಬಣಜಿಗೇರ. ಪ್ರವೀಣ್ ಕುಮಾರ್ ವಠಾರ, ಅರುನಾ ಮಾಲಿಂಗಪುರ್, ಕವಿತಾ, ಸಂತೋಷ್ ಶಿವಣಗಿ ಮುತ್ತು ಮಾದರ್, ಹಾಗೂ ಎಲ್ಲ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.
Related Posts
Add A Comment