Author: editor.udayarashmi@gmail.com

ಹೆಸರಾಂತ ನಾಟಕರಾದ ಹಂದಿಗನೂರು ಸಿದ್ದರಾಮಪ್ಪ ಟ್ರಸ್ಟ್ ಆರಂಭಕ್ಕೆ ಒತ್ತಾಯ | ಜಿಲ್ಲಾಧಿಕಾರಿ ಡಾ.ಆನಂದ್. ಕೆ ಅವರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ನಾಟಕ ಬರಹಗಾರ ಕವಿಗಳ ಸಂಘ ವಿಜಯಪುರ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಡಾ.ಆನಂದ್. ಕೆ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಪದಾಧಿಕಾರಿಗಳು, ಜಿಲ್ಲೆಯ ಹೆಸರಾಂತ ನಾಟಕರಾದ ಹಂದಿಗನೂರು ಸಿದ್ದರಾಮಪ್ಪ ಟ್ರಸ್ಟ್ ಸರ್ಕಾರದ ವತಿಯಿಂದ ಪ್ರಾರಂಭಿಸಬೇಕು. ಈ ಟ್ರಸ್ಟಿನ ಮೂಲಕ ಅವರ ಬದುಕು ಬರಹ ಹಾಗೂ ನಾಟಕದ ಮೂಲಕ ಸಮಾಜದ ಪರಿವರ್ತನೆಗೆ ಅವರ ಕೊಡುಗೆಗಳು ಏನು? ಎಂಬುವದರ ಕುರಿತು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಈ ಟ್ರಸ್ಟಿನ ಮೂಲಕವಾಗಿ ಆಗುತ್ತದೆ. ಕಳೆದ ವರ್ಷ ಬಾಗಲಕೋಟೆ ಜಿಲ್ಲೆಯಲ್ಲಿ ಬಿ ಬಿ ದತ್ತರಿಗಿ ಯವರ ಟ್ರಸ್ಟ ಪ್ರಾರಂಭವಾಗಿದೆ. ಅದೇ ರೀತಿ ಬಿಜಾಪುರದ ಹೆಸರಾಂತ ನಾಟಕರರಾದ ಹಂದಿಗನೂರು ಸಿದ್ದರಾಮಪ್ಪ ಟ್ರಸ್ಟ್ ಪ್ರಾರಂಭಿಸಬೇಕು ಹಾಗೂ ವಿಜಯಪುರದ ರಾಣಿ ಚೆನ್ನಮ್ಮ ರಂಗಮಂದಿರ ನೂತನ ಕಟ್ಟಡದೊಂದಿಗೆ ಪುನ ಪ್ರಾರಂಭವಾಗಬೇಕು.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಿ ಕೆ ಶಿವಕುಮಾರ್ ಅವರೇ ಎಸ್ ಐ ಆರ್ ಪ್ರಕ್ರಿಯೆ ನಡೆಸುವುದರಿಂದ ರಾಜ್ಯದ ಜನತೆಗೆ ಯಾವುದೇ ತೊಂದರೆ ಇಲ್ಲ. ಆದರೂ ಕೂಡ ತಾವು ಕಾಂಗ್ರೆಸ್ ಪಕ್ಷದ ವತಿಯಿಂದ ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದೀರಿ ಎಂದು ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ್ ಅಣ್ಣಿಗೇರಿ ಕುಟುಕಿದ್ದಾರೆ.ಮಂಗಳವಾರ ಈ ಕುರಿತು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ ಅವರು, ಇತ್ತೀಚೆಗೆ ನಡೆದ 5 ರಾಜ್ಯದ ಚುನಾವಣೆಗಳಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ನಡೆಸಿತ್ತು, ಅದರಲ್ಲಿ ಕೇರಳದಲ್ಲಿ ಕಾಂಗ್ರೆಸ್ ಹಾಗೂ ತಮಿಳುನಾಡಿನಲ್ಲಿ ಟಿ ವಿ ಕೆ ವಿಜಯ್ ಅವರ ಪಕ್ಷ ಗೆದ್ದಿಲ್ಲವೇ? ಇದು ಕೇವಲ ಮತದಾನ ಪ್ರಕ್ರಿಯೆಗೆ ಮಾತ್ರ ಸಂಬಂಧಿಸಿದ್ದು. ಸರಕಾರಿ ಸೌಲಭ್ಯಗಳು, ಉಚಿತ ಯೋಜನೆಗಳು, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಇತರೆ ಯಾವುದಕ್ಕೂ ಇದರಿಂದ ತೊಂದರೆ ಇಲ್ಲ, ಕಾರಣ ಜನತೆಗೆ ತಪ್ಪು ಮಾಹಿತಿ ನೀಡಬೇಡಿ ಎಂದು ರಾಘವ್ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ರೇವತಗಾಂವ: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮರವೊಂದು ಸೋಮವಾರ ಬೀಸಿದ ಬಿರುಗಾಳಿಗೆ ಧರೆಗುರುಳಿ ಬಿದ್ದಿದೆ.ಶಾಲೆಗಳಿಗೆ ರಜೆ ಇರುವ ಹಿನ್ನಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.ಮಂಗಳವಾರದಂದು ಶಾಲಾ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಮರವನ್ನು ತೆರವುಗೊಳಿಸುವ ಮೂಲಕ ಶಾಲಾ ಪ್ರಾರಂಭೋತ್ಸವದ ಮುನ್ನ ಶಾಲಾ ಅವರಣವನ್ನು ಈ ಸಂದರ್ಭದಲ್ಲಿ ಸ್ವಚ್ಛಗೊಳಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಸುಗಮ ಸಂಗೀತಕ್ಕೆ ಶಾಂತಿ ವೃದ್ಧಿ ಮಾಡುವ ಶಕ್ತಿಇದೆ ತಂತ್ರಜ್ಞಾನ ಯುಗದಲ್ಲಿ ತಮ್ಮ ಸಂಗೀತ, ಜಾನಪದ ಮತ್ತು ನಾಟಕದ ಮೂಲಕ ಗ್ರಾಮೀಣ ಭಾಗದಲ್ಲಿ ಯುವಕರಿಗೆ ಜ್ಞಾನ ತುಂಬುತ್ತಿರುವ ಶ್ರೀಭಾಗ್ಯವಂತಿ ಸಂಸ್ಕೃತಿ ನಾಟ್ಯ ಕಲಾ ಸಂಘದವರ ಕಾರ್ಯ ಶ್ಲಾಘನೀಯಾವದುದ್ದು ಎಂದು ಜೇರಟಗಿ ವೀರಕ್ತ ಮಠದ ಮಹಾಂತ ಸ್ವಾಮಿಗಳು ಹೇಳಿದರು.ಸಮೀಪದ ಕುಳೇಕುಮಟಗಿ ಗ್ರಾಮದ ಶ್ರೀರಾಮಗಿರಿ ಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಭಾಗ್ಯವಂತಿ ಕಲಾ ನಾಟ್ಯ ಸಂಘ ಹಮ್ಮಿಕೊಂಡ ಸಂಗೀತ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯುವಕರಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆ ಸಂಗೀತ, ಸಂಸಾರಿಕ ನಾಟಕ, ಪ್ರವಚನ, ಪುರಾಣ, ಜಾನಪದಗಳು ನಸಿಸಿ ಹೋಗುತ್ತಿವೆ ಸಂಗೀತಕ್ಕೆ ಜೀವನದ ಶೈಲಿಯನ್ನೇ ಬದಲಾಯಿಸುವ ಶಕ್ತಿ ಇದೆ, ಯುವಕರು ಶಿಕ್ಷಣದ ಅವಶ್ಯಕತೆ ಮಾತ್ರ ಮೊಬೈಲ್ ಮೊಬೈಲ್ ಬಳಸಬೇಕು ತಮಗೆ ಸಿಕ್ಕಿರುವ ಸಮಯದಲ್ಲಿ ಒಳ್ಳೆಯ ಸಂಗೀತ ಕೇಳಬೇಕು ವಚನಗಳು ಓದಬೇಕು ಹಾಗೂ ಸಂಸಾರಿಕ ನಾಟಕದ ಪುಸ್ತಕಗಳನ್ನು ಕೂಡಾ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ವಿಜಯಪುರ ನಗರ ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಸಿಂದಗಿ ತಾಲೂಕು ಹಾಗೂ ನಗರ ವಲಯದ ಸಮಸ್ತ ಶಿಕ್ಷಕರ ಪರವಾಗಿ ಗೌರವ ಸನ್ಮಾನ ನಡೆಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ನಗರ ವಲಯದ ನೂತನ ಅಧ್ಯಕ್ಷ ಸಯ್ಯದ ಜುಬೇರ ಕೆರೂರ, ಹಲವಾರು ವರ್ಷಗಳಿಂದ ಶಿಕ್ಷಕರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತ ಬಂದಿರುವೆ. ಅದಕ್ಕಾಗಿ ಹೊಸ ಜವಾಬ್ದಾರಿ ದೊರೆತಿದ್ದು, ಮುಂಬರುವ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಿ ಕಾರ್ಯ ನಿರ್ವಹಿಸುತ್ತೇನೆ ಎಂದರು.ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಿಂದಗಿ ತಾಲೂಕು ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಯು ಐ ಶೇಖ, ಶಿಕ್ಷಕರ ಸಮಸ್ಯೆಗಳಿಗೆ ಸದಾ ದ್ವನಿಯಾಗಿ ಸಂಘ ಕಾರ್ಯ ನಿರ್ವಹಿಸಬೇಕು. ಈ ಸಲ ಆಯ್ಕೆಯಾದ ನೂತನ ಪದಾಧಿಕಾರಿಗಳೆಲ್ಲರು ಕ್ರೀಯಾಶೀಲರಾಗಿದ್ದು, ಉತ್ತಮ ಕಾರ್ಯ ನಿರ್ವಹಣೆ ಮಾಡುವ ಭರವಸೆಯಿದೆ. ಅಧಿಕಾರ ಸಿಕ್ಕಾಗ ಉತ್ತಮ ಸೇವೆ ಮಾಡುವ ಗುರಿ ಹೊಂದಿರಬೇಕು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಶುಭ ಕೋರಿದರು.ನೂತನ ಪದಾಧಿಕಾರಿಗಳಾದ…

Read More

ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಒಂದು ದಟ್ಟವಾದ ಕಾಡಿನಲ್ಲಿ ಸಿಂಹಗಳ ಸುಂದರವಾದ ಕುಟುಂಬವೊಂದು ವಾಸಿಸುತ್ತಿತ್ತು. ಪ್ರತೀ ದಿನವೂ ತನ್ನ ಕುಟುಂಬದ ಸದಸ್ಯರಿಗೆ ಅಗತ್ಯವಿರುವ ಆಹಾರವನ್ನು ಗಂಡು ಸಿಂಹವೇ ಬೇಟೆಯಾಡಿ ತಂದು ಎಲ್ಲಾ ಸದಸ್ಯರಿಗೂ ನೀಡುತ್ತಿತ್ತು. ಗಂಡು ಸಿಂಹವು ಪ್ರತೀ ದಿನ ಬೇಟೆಯಾಡಿ ಮಾಂಸವನ್ನು ತಂದರೆ ಹೆಣ್ಣು ಸಿಂಹವು ಬೇಟೆಯನ್ನು ಹಂಚಿ ಎಲ್ಲಾ ಸದಸ್ಯರಿಗೂ ನೀಡುತ್ತಿತ್ತು. ಒಂದು ದಿನ ಸುಂದರವಾದ ಸಂಸಾರದಲ್ಲಿ ಅಪಸ್ವರ ಎದುರಾಯಿತು. ಗಂಡು ಸಿಂಹ ಮತ್ತು ಹೆಣ್ಣು ಸಿಂಹ ಇಬ್ಬರ ನಡುವೆ ಯಾರು ಮೇಲು ಎಂಬ ಚರ್ಚೆಯು ಪ್ರಾರಂಭವಾಯಿತು. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಮರದ ಮೇಲೆ ಕುಳಿತು ಸಿಂಹಗಳ ಜಗಳವನ್ನು ಗಮನಿಸಿದ ರಣಹದ್ದೊಂದು ಎರಡು ಸಿಂಹಗಳ ಪೈಕಿ ಯಾರು ಮೇಲೆಂದು ನಿರ್ಧರಿಸಲು ಒಂದು ಉಪಾಯವನ್ನು ಹೇಳಿಕೊಟ್ಟಿತು. ಅದೇನೆಂದರೆ ಪ್ರತಿ ದಿನವೂ ಬೇಟೆಯನ್ನು ಹಿಡಿಯಲು ಗಂಡು ಸಿಂಹವು ಹೋದರೆ, ಈ ಬಾರಿ ಹೆಣ್ಣು…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಕೆಲವು ಮಕ್ಕಳು ಪರೀಕ್ಷೆಯ ಕೊನೆಯ ನಿಮಿಷದವರೆಗೂ ಪುಸ್ತಕದಲ್ಲಿ ಮುಳುಗಿರುತ್ತಾರೆ. ಪರೀಕ್ಷೆಯಲ್ಲಿ ಈ ಪ್ರಶ್ನೆ ಕೇಳಬಹುದು ಆ ಪ್ರಶ್ನೆ ಕೇಳಬಹುದು ಎಂದು ಆತಂಕದಿಂದ ಓದುತ್ತಲೇ ಇರುತ್ತಾರೆ. ಅವರು ನೂರಕ್ಕೆ 95ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವುದು ಅಷ್ಟೇನೂ ದೊಡ್ಡ ವಿಷಯವಲ್ಲ.. ನೂರು ಪಡೆದರೂ ಅಚ್ಚರಿಯಿಲ್ಲ.ಮತ್ತೆ ಕೆಲವು ಮಕ್ಕಳು ಶಾಲೆಯಲ್ಲಿ ಶಿಕ್ಷಕರು ಹೇಳಿದಷ್ಟನ್ನು ಮಾತ್ರ ಕೇಳಿರುತ್ತಾರೆ ಹಾಗೂ ಓದಿರುತ್ತಾರೆ. ಮನೆಯಲ್ಲಿ ಕೂಡ ಅವರು ಅಷ್ಟಾಗಿ ಓದುವುದಿಲ್ಲವಾದರೂ ಕೂಡ ಅತಿ ಹೆಚ್ಚು ಅಂಕಗಳನ್ನು ಗಳಿಸುತ್ತಾರೆ. ಪರೀಕ್ಷೆ ನಾಳೆ ಇದೆ ಎನ್ನುವಾಗ ಕೂಡ ಅತ್ಯಂತ ಆರಾಮಾಗಿ ಉಂಡು ತಿಂದು ನಕ್ಕು ನಲಿದು ಪರೀಕ್ಷೆಗೆ ಹೊರಡುತ್ತಾರೆ. ಉಳಿದವರು ಅವರನ್ನು ನೋಡಿ ಅದು ಹೇಗೆ ಸಾಧ್ಯ ಎಂದು ಆಶ್ಚರ್ಯ ಪಟ್ಟರೆ ಇವರು ಅದಕ್ಕೂ ಕೂಡ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಸಂತೋಷವಾಗಿರುತ್ತಾರೆ. ಹಾಗಾದರೆ ಅತಿಯಾದ ಓದು ಹಾಗೂ ಅಂಕ ಗಳಿಕೆಗೆ ಸಂಬಂಧವಿಲ್ಲವೇ ಎಂದರೆ ತಜ್ಞ ಮನೋವಿಜ್ಞಾನಿಗಳು ಖಂಡಿತವಾಗಿಯೂ ಇಲ್ಲ…

Read More

ಉದಯರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿನ ಪ್ರಯಾಣಿಕರ ಅನುಕೂಲಕ್ಕಾಗಿ ಅಥಣಿಯಿಂದ ಪುಣೆ ಹಾಗೂ ಅಥಣಿಯಿಂದ ಕೊಲ್ಲಾಪುರ ಮಾರ್ಗವಾಗಿ ನೂತನ ಬಸ್ ಸೇವೆಗಳನ್ನು ಪ್ರಾರಂಭಿಸಲಾಗಿದ್ದು, ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಇಂದು ಹಸಿರು ನಿಶಾನೆ ತೋರಿಸುವ ಮೂಲಕ ಸೇವೆಗೆ ಚಾಲನೆ ನೀಡಿದರು.ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, ಅಥಣಿ ತಾಲೂಕಿನ ಜನತೆ ಉದ್ಯೋಗ, ಶಿಕ್ಷಣ ಹಾಗೂ ವೈದ್ಯಕೀಯ ಚಿಕಿತ್ಸೆಗಾಗಿ ಪುಣೆ ಮತ್ತು ಕೊಲ್ಲಾಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಸಾರ್ವಜನಿಕರ ದೀರ್ಘಕಾಲದ ಬೇಡಿಕೆಯನ್ನು ಪರಿಗಣಿಸಿ, ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಈ ಹೊಸ ಬಸ್ ಮಾರ್ಗಗಳನ್ನು ಆರಂಭಿಸಲಾಗಿದೆ. ಈ ಸೇವೆಯು ವಿದ್ಯಾರ್ಥಿಗಳು, ಉದ್ಯೋಗಸ್ಥರು ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ,ಎಂದು ತಿಳಿಸಿದರು.ಅಲ್ಲದೆ, ತಾಲೂಕಿನ ಅಭಿವೃದ್ಧಿಯ ದೃಷ್ಟಿಯಿಂದ ಸಾರಿಗೆ ಸಂಪರ್ಕ ಅತ್ಯಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ದಿನಾಲು ಅಥಣಿಯಿಂದ ಶಿರಸಿ ವರೆಗೆ ಬಸ್ ಸೇವೆ ಒದಗಿಸಲು ಹಾಗೂ…

Read More

ಉದಯರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ 85%ಕ್ಕಿಂತ ಅಧಿಕ ಅಂಕ ಪಡೆದ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಹಲ್ಯಾಳದ ರೈತ ಸಭಾ ಭವನದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, ಗ್ರಾಮೀಣ ಭಾಗದ ಮಕ್ಕಳು ಪ್ರತಿಭೆಯಲ್ಲಿ ಯಾರಿಗೂ ಕಡಿಮೆ ಇಲ್ಲ ಸರಿಯಾದ ಪ್ರೋತ್ಸಾಹ ಸಿಕ್ಕರೆ ಸಾಕು ನಮ್ಮ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ 85%ಕ್ಕಿಂತ ಹೆಚ್ಚು ಅಂಕ ಪಡೆದ ಈ 2000 ಮಕ್ಕಳು ನಮ್ಮ ತಾಲೂಕಿನ ಹೆಮ್ಮೆ ಇವರ ಅಂಕ ಮಾತ್ರ ಮುಖ್ಯವಲ್ಲ ಮುಂದೆ ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ ಬೆಳೆಯಬೇಕು ನಿಮ್ಮ ಮುಂದಿನ ಶಿಕ್ಷಣಕ್ಕೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಥಣಿ ಕ್ಷೇತ್ರದಲ್ಲಿ…

Read More