ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ತಾವರಖೇಡ ಗ್ರಾಮದಲ್ಲಿ ಮೃತಪಟ್ಟ ಮಂಗನ ಶವ ಸಂಸ್ಕಾರವನ್ನು ಗ್ರಾಮಸ್ಥರು ವಿಧಿ ವಿಧಾನಗಳೊಂದಿಗೆ ನೆರವೇರಿಸಿದ ಘಟನೆ ಶನಿವಾರ ನಡೆದಿದೆ.
ಗ್ರಾಮದಲ್ಲಿ ಮಂಗವೊಂದು ಅಸಸ್ಥಗೊಂಡಿದ್ದನ್ನು ಗಮನಿಸಿದ ಗ್ರಾಮಸ್ಥರು ಅದನ್ನು ಕೂಡಲೆ ವಾಹನ ಮೂಲಕ ಆಲಮೇಲ ಸರ್ಕಾರಿ ಪಶು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಸಹಿತ ಚಿಕಿತ್ಸೆ ಫಲಕಾರಿಯಾಗದೆ ಜ.24 ಶನಿವಾರ ಮೃತಪಟ್ಟಿದೆ.
ಗ್ರಾಮಸ್ಥರು ಮಂಗನ ಅಂತ್ಯ ಸಂಸ್ಕಾರವನ್ನು ವಾದ್ಯಮೇಳದೊಂದಿಗೆ, ಪಟಾಕಿ ಸುಡುತ್ತಾ, ಭಜನೆ ಮಾಡುತ್ತಾ ಗ್ರಾಮಸ್ಥರು ಜೈ ಶ್ರೀ ರಾಮ್, ಜೈ ಹನುಮಾನ್ ಎಂದು ಘೋಷಣೆ ಕೂಗುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಎತ್ತಿನ ಬಂಡಿಯ ಮೇಲೆ ಮೆರವಣಿಗೆ ಮಾಡುತ್ತ ಭೀಮಾ ನದಿಯ ದಂಡೆಯಲ್ಲಿರುವ ಹಳೆ ತಾವರಖೇಡ ಗ್ರಾಮದಿಂದ ಹೊಸ ಪುನರ್ವಸತಿ ಕೇಂದ್ರದಲ್ಲಿ ಮಂಗನ ಅಂತ್ಯಕ್ರಿಯೆಯನ್ನು ವೇ.ಗುರುಮೋರ್ತಯ್ಯ ಹಿರೇಮಠ್ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು.
ಗ್ರಾಮದ ಯುವಕರು ಹಿರಿಯರು ತಾಯಂದಿರು ಅಂತ್ಯಕ್ರಿಯೆ ಯಲ್ಲಿ ಬಾಗಿಯಾಗಿದ್ದರು. ಅಂತ್ಯಕ್ರಿಯೆಗೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.

