ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಬಸವ ಇಂಟರ್ನ್ಯಾಷನಲ್ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿ ಕುಮಾರ್ ಮೊಮ್ಮದ್ ಜಿಶಾನ್ ಸೂರಜ್ ರಿಸಾಲ್ದಾರ್ ಇವರು ಕರ್ನಾಟಕ ರಾಜ್ಯದ ಪರವಾಗಿ ಗೋವಾ ರಾಜ್ಯದಲ್ಲಿ ಯುಥ್ ಗೇಮ್ಸ್ ಇಂಡಿಯಾ ಹಮ್ಮಿಕೊಂಡಿರುವ ರಾಷ್ಟ್ರೀಯ ಮಟ್ಟದ ಅಂಡರ್ ೧೦ ನಲ್ಲಿ ಅಥ್ಲೇಟಿಕ್ ಸ್ಪರ್ಧೆ ೧೦೦ ಮೀಟರ್ ಓಟದಲ್ಲಿ ೧೫ ಸೆಕೆಂಡ್ ನಲ್ಲಿ ಓಟವನ್ನು ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಕರ್ನಾಟಕದ ಪರವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೊಹಮ್ಮದ್ ಜಿಶಾನ್ ಸೂರಜ್ ರಿಸಾಲ್ದಾರ್ ಈಗ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಮುಂದೆ ನೇಪಾಳದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾರತಪರವಾಗಿ ಜೀಶಾನ್ ಪ್ರತಿನಿಧಿಸಲಿದ್ದಾರೆ. ಅಲ್ಲಿ ಏಷಿಯಾ ಖಂಡದ ಎಲ್ಲಾ ರಾಷ್ಟ್ರಗಳು ಭಾಗವಹಿಸುತ್ತಿದ್ದು, ಅಲ್ಲಿಯೂ ಕೂಡ ಜಿಶಾನ್ ಗೆಲುವು ಸಾಧಿಸಲಿ ಎಂದು ನಗರದ ಜನತೆ ಹಾರೈಸಿದ್ದಾರೆ.

