Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಜಯ್ ನುಡಿ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨ ‘ಪಕ್ಕದ ಮನೆ ಪದ್ಮ ಕೋಗಿಲೆ ತರ ಹಾಡುತ್ತಾಳೆ. ನೀನೂ ಇದ್ದಿಯಾ. ನಿನ್ನ ಗೆಳೆಯ ರವಿ ನೋಡು ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದವರೆಗೂ ಬಹುಮಾನ ಪಡೆದಿದ್ದಾನೆ. ಹಾಡು ಭಾಷಣ ಇರದಿದ್ದರೆ ಅಷ್ಟೇ ಹೋಯ್ತು ರಜನಿ ತರಹ ಕ್ಲಾಸಿಗೆ ರ‍್ಯಾಂಕ್ ಬರೋಕೆ ಆಗಲ್ಲ ಯಾವಾಗ ನೋಡಿದರೂ ಮನೆ ಮುಂದೆ, ಮೈದಾನದಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಆಡ್ತಿಯಾ ನಾಯಿ ಬಾಲ ಯಾವಾಗಲೂ ಡೊಂಕು ಅದನ್ನು ನೇರ ಮಾಡಲು ಸಾಧ್ಯವಿಲ್ಲ. ನಾ ಹೇಳಿದಾಗ ಮಾತ್ರ ಅಭ್ಯಾಸ ಮಾಡುತ್ತಿಯಾ.’ ಇದು ರಾಜುವಿನ ಅಪ್ಪ ಅವ್ವನ ಮಾತುಗಳು.ರಾಜುನಿಗೂ ಹೆತ್ತವರ ಮಾತುಗಳನ್ನು ಕೇಳಿ ಕೇಳಿ ರೋಸಿ ಹೋಗುತ್ತದೆ. ನಾನು ಆಟದಲ್ಲಿ ಮುಂದಿರೋದು ಇವರಿಗೆ ಕಾಣುವುದೇ ಇಲ್ಲ ಎಂದು ಗೊಣಗಿಕೊಳ್ಳುತ್ತಾನೆ. ಮನಸ್ಥಿತಿ ಸರಿ ಇರದಿದ್ದಾಗ ಹೌದಲ್ಲ ನನಗೆ ಚೆನ್ನಾಗಿ ಹಾಡೋಕೆ ಬರಲ್ಲ. ಭಾಷಣ ಮಾಡೋಕೆ ಬರಲ್ಲ. ಅಂಕ ಜಾಸ್ತಿ ಗಳಿಸಲು ಆಗಿಲ್ಲ. ನಾನು ಕೆಲಸಕ್ಕೆ ಬಾರದವನು ಎಂದೆನಿಸುತ್ತದೆ. ಇದು ಕೇವಲ ರಾಜುವಿನ ಆತಂಕದ…
Udayarashmi kannada daily newspaper
ಕಾರ್ಯನಿರತ ಪತ್ರಕರ್ತರ ಸಂಘ & ರಾಜ್ಯ ವಿತರಕರ ಒಕ್ಕೂಟದಿಂದ ಅಭಿನಂದನೆ ಬೆಂಗಳೂರು: ಪತ್ರಿಕಾ ವಿತರಕರು ಶ್ರಮಜೀವಿಗಳಾಗಿದ್ದು, ಅವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಹೊಸದಾಗಿ ಯೋಜನೆ ರೂಪಿಸಿ, ಅಪಘಾತದಲ್ಲಿ ಮೃತಪಟ್ಟ ಪತ್ರಿಕಾ ವಿತರಕರಿಗೆ 2 ಲಕ್ಷ ವೈದ್ಯಕೀಯ ನೆರವಿಗೆ 1 ಲಕ್ಷ ರೂ ನೆರವಿನ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.ಪತ್ರಿಕಾ ವಿತರಕರ ಸಮಸ್ಯೆಗೆ ಸ್ಪಂಧಿಸಿ ಯೋಜನೆಯನ್ನು ಜಾರಿಗೊಳಿಸಿದ್ದಕ್ಕಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ) ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅಸಂಘಟಿತ ವಲಯದಲ್ಲಿರುವ ಎಲ್ಲರಿಗೂ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದು, ಮೊದಲ ಹಂತವಾಗಿ ಪತ್ರಿಕಾ ವಿತರಕರಿಗೆ ಯೋಜನೆಯನ್ನು ಜಾರಿಗೆ ನೀಡಲಾಗಿದೆ ಎಂದರು.ಸದುದ್ದೇಶಕ್ಕಾಗಿ ರೂಪಿಸಿರುವ ಯೋಜನೆ ದುರ್ಬಳಕೆ ಆಗಬಾರದು. ನಿಜವಾದ ಪತ್ರಿಕಾ ವಿತರಕರಿಗೆ ನೆರವಾಗುವಂತೆ ಮಾಡಲು ಸರ್ಕಾರ ನೀತಿ ನಿಯಮಾವಳಿ ರೂಪಿಸಲಿದ್ದು, ಅದಕ್ಕಾಗಿ ನಿಮ್ಮೆಲ್ಲರ ಸಹಕಾರವೂ ಮುಖ್ಯವಾಗಿದೆ ಎಂದರು.ಯೋಜನೆಯನ್ನು ಜಾರಿಗೆ ನೀಡಲು ಸಿಎಂ ಸಿದ್ದರಾಮಯ್ಯ…
ಆಲಮಟ್ಟಿ: ಕವನಗಳು ಕನ್ನಡದ ಕಳೆಯನ್ನು ಹೆಚ್ಚಿಸುತ್ತವೆ. ನೊಂದವರ ಪಾಲಿನ ಆಶಾದ್ವನಿಯಾಗಿರಬೇಕೆಂದು ನಿಡಗುಂದಿ ತಹಶೀಲ್ದಾರ ಎ.ಬಿ.ಅಮರವಾಡಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಗಳವಾರ ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ನಿಡಗುಂದಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕವನ ವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸತ್ತಂತಿರುವರನ್ನು ಬಡಿದೆಬ್ಬಿಸುವಂತಿರಬೇಕು. ಓದುವವರ ಮನಸ್ಸನ್ನು ಸೊರೆಗೊಳ್ಳುವಂತಿರಬೇಕು. ಮುಖ್ಯವಾಗಿ ಸಮಾಜಮುಖಿಯಾಗಿ ಮೌಲ್ಯವನ್ನು ಎತ್ತಿ ತೋರಿಸುವಂತಿರಬೇಕೆಂದರು.ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ವಿ ಶಾಂತಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳು ಮಾತೃಭಾಷೆಯಲ್ಲಿ ಪಾಂಡಿತ್ಯ ಪಡೆಯಬೇಕು. ಮಾತು ವೈರಿಗಳ ಮುಂದೆ ಗತ್ತಿನಂತೀರಬೇಕು. ಹೆದರಿಸುವವರ ಮುಂದೆ ಕತ್ತಿಯಂತಿರಬೇಕು. ಆತ್ಮೀಯರ ಮುಂದೆ ಮುತ್ತಿನಂತಿರಬೇಕು. ಹಿರಿಯರ ಮುಂದೆ ಹತ್ತಿಯಂತಿರಬೇಕು. ಕವನಗಳ ಅಥ೯ ಎಲ್ಲರಿಗೂ ತಿಳಿಯುವ ಹಾಗಿರಬೇಕೆಂದರು.ಮುಖ್ಯ ಅತಿಥಿಯಾದ ಗ್ರಾಮೀಣ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಿದ್ರಾಮಪ್ಪ ನಾಗಠಾಣ ಮಾತನಾಡಿ, ಕನ್ನಡ ಅನ್ನದ ಭಾಷೆಯಾಗಿರುತ್ತದೆ. ಆಡಳಿತ ಭಾಷೆಯಾಗಿರುತ್ತದೆ. ಜಾನಪದ ಕವಿಗಳು ವಿದ್ಯಾಭ್ಯಾಸ ಮಾಡದಿದ್ದರೂ ಅನುಭವ ಜ್ಞಾನ ಅಪಾರವಾಗಿತ್ತು ಎಂದರು.ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ…
ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳ ಸದ್ದು | ಚುನಾವಣೆ ಆಯೋಗದ ಎಚ್ಚರಿಕೆ ಹೈದರಾಬಾದ: ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳ ಹವಾ ಎಬ್ಬಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿದೆ. ಕರ್ನಾಟಕ ರಾಜ್ಯದ ಮಾದರಿಯಲ್ಲಿ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್, ಅದಕ್ಕೆ ಸಂಬಂಧಿಸಿಂತೆ ತೆಲುಗು ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿತ್ತು. ಇದಕ್ಕೆ ಚುನಾವಣೆ ಆಯೋಗ ತಡೆ ನೀಡಿದ್ದಲ್ಲದೇ ಕಾಂಗ್ರೆಸ್ ಗೆ ಎಚ್ಚರಿಕೆ ಸಹ ನೀಡಿದೆ.ಕರ್ನಾಟಕದಂತೆ ತೆಲಂಗಾಣ ವಿಧಾನಸಭಾ ಚುನಾವಣೆಗೂ ಮುನ್ನ ಆರು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಇದಕ್ಕೆ ಸಂಬಂಧಿಸಿದಂತೆ ತೆಲುಗಿನ ಸಾಕ್ಷಿ, ಆಂಧ್ರಜ್ಯೋತಿ, ಈ ನಾಡು ಪತ್ರಿಕೆಗಳಲ್ಲಿ ಮೊದಲ ಪೇಜಿನಲ್ಲಿ ದೊಡ್ಡ ಜಾಹೀರಾತುಗಳನ್ನು ನೀಡಿತ್ತು. ಕರ್ನಾಟಕದ ಹಣ ತೆಲಂಗಾಣದಲ್ಲಿ ಪೋಲಾಗುತ್ತಿದೆ ಎಂದು ಕಾಂಗ್ರೆಸ್ ನಡೆಯನ್ನು ಬಿಜೆಪಿ ವಿರೋಧಿಸಿತ್ತು.ಕರ್ನಾಟಕ ರಾಜ್ಯದ ಸಚಿವರನ್ನು ತೆಲಂಗಾಣದಲ್ಲಿ ಚುನಾವಣೆಗಾಗಿ ನಿಯೋಜಿಸಿರುವ ಪಕ್ಷ ಮತ್ತು ಸಿಎಂ ಸಿದ್ದರಾಮಯ್ಯ ಅವರು, ಇದೀಗ ಇಲ್ಲಿನ ಜನರ ತೆರಿಗೆ ಹಣದಲ್ಲಿ ತೆಲುಗು ರಾಜ್ಯದಲ್ಲಿ ಜಾಹೀರಾತು ನೀಡಿವೆ. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ನಾಟಕವನ್ನು ಆರ್ಥಿಕವಾಗಿ…
ಡಿಕೆ ಶಿವಕುಮಾರ್ ವಿರುದ್ದಸಿಬಿಐ ತನಿಖೆ ವಾಪಸ್ | ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪದ ಯತ್ನ ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಅನುಮತಿ ವಾಪಸ್ ಪಡೆಯಲು ಮುಂದಾಗಿರುವ ರಾಜ್ಯ ಸರ್ಕಾರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಸರ್ಕಾರದ ನಡೆಯನ್ನು ಪ್ರಶ್ನಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ವಿಚಾರಣೆಯನ್ನು ನಿಷ್ಪಲಗೊಳಿಸಲು ಯತ್ನಿಸಲಾಗುತ್ತಿದೆ. ಸಿಬಿಐ ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಈ ಹಂತದಲ್ಲಿ ಸರ್ಕಾರದ ಕ್ರಮ ಕಾನೂನುಬಾಹಿರವಾಗಿದೆ. ಸಿಬಿಐ ತನಿಖೆಯನ್ನು ಮೊಟಕುಗೊಳಿಸುವ ಉದ್ದೇಶ ಹೊಂದಿದ್ದು, ಈ ಮೂಲಕ ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪದ ಯತ್ನ ನಡೆದಿದೆ. ಹೀಗಾಗಿ ಸರ್ಕಾರದ ಕ್ರಮಕ್ಕೆ ಸೀಮಿತವಾಗಿ ತಮ್ಮ ವಾದ ಆಲಿಸಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ.
ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಸಂಪತ್ತಕುಮಾರ ಬಳೂಳಗಿಡದ ಅಭಿಮತ ಮುದ್ದೇಬಿಹಾಳ: ಸಂವಿಧಾನ ದಿನಾಚರಣೆಯ ದಿನದಂದು ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮತ್ತು ಸಂವಿಧಾನಕ್ಕೆ ಗೌರವಿಸದೇ, ಪ್ರತಿಯೊಬ್ಬ ಭಾರತೀಯ ತಮ್ಮ ಆತ್ಮದಲ್ಲಿ ಉಸಿರು ಇರುವವರೆಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಅಂದಾಗ ಮಾತ್ರ ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಿರ್ಮೂಲನೆಯಾಗಿ ಸಮಾನತೆ ಕಾಣಲು ಸಾಧ್ಯ ಎಂದು ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಳಗಿಡದ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.ಸ್ವತಂತ್ರಪೂರ್ವ ಭಾರತದಲ್ಲಿ ಜಾತೀಯತೆ, ಅಸ್ಪೃಶ್ಯತೆ ತಾಂಡವವಾಡುತ್ತಿತ್ತು. ಸಂವಿಧಾನ ಸಮರ್ಪಣೆಯಾದ ನಂತರ ಕ್ರಮೇಣ ಕಡಿಮೆಯಾಗುತ್ತಾ ಬಂದಿದೆ. ಸಂವಿದಾನವನ್ನು ಪ್ರತಿಯೊಬ್ಬ ಜಾತಿ ಜನಾಂಗದವರೂ ಅಪ್ಪಿಕೊಳ್ಳುವಂಥದ್ದು. ಬಾರತದ ಪ್ರತಿಯೊಬ್ಬ ಪ್ರಜೆಯೂ ದೇಶಾಭಿಮಾನ, ಸೈನಿಕಾಭಿಮಾನ ಮತ್ತು ಸಂವಿಧಾನಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮತ್ತು ಹಿರಿಯ ನ್ಯಾಯವಾದಿ ಎಂ.ಎಚ್.ಹಾಲಣ್ಣವವರ…
ವೀಣಾಂತರಂಗ- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ ಅದೊಂದು ಮಧ್ಯಮ ವರ್ಗದ, ತಂದೆ-ತಾಯಿ, ಎರಡು ಗಂಡು ಒಂದು ಹೆಣ್ಣು ಮಗು ಇರುವ ಪುಟ್ಟ ಸಂಸಾರ. ಇಬ್ಬರು ಗಂಡು ಮಕ್ಕಳಿಗಿಂತ ತಂದೆಗೆ ಹೆಣ್ಣುಮಗಳ ಮೇಲೆ ಅಪಾರ ಪ್ರೀತಿ. ಹೈಸ್ಕೂಲಿಗೆ ಬಂದ ಗಂಡು ಮಕ್ಕಳು ಪರಸ್ಪರ ಜಗಳ ಮಾಡುತ್ತಿರುವಾಗ ತಂದೆ ಮಕ್ಕಳನ್ನು ಸಮಾಧಾನಪಡಿಸಿದರು. ಇಬ್ಬರೂ ಮಕ್ಕಳು ಅವನು ಮುದ್ದಿನ ಮಗ ಅದಕ್ಕೆ ಅವನಿಗೆ ನೀವು ಏನೂ ಹೇಳುವುದಿಲ್ಲ ಎಂದು ಪರಸ್ಪರ ದೋಷಾರೋಪಣೆ ಹೊರಿಸಿದರು. ಉತ್ತರವಾಗಿ ತಂದೆ ಅತ್ಯಂತ ಸಮಾಧಾನದಿಂದ ನೀವಿಬ್ಬರೂ ನನ್ನೆರಡು ಕಣ್ಣುಗಳಿದ್ದಂತೆ ಎಂದು ಹೇಳಿದರು. ಹಾಗಾದರೆ ನಾನು?? ಎಂದು ಅಲ್ಲಿಯೇ ಜಗಳ ನೋಡುತ್ತಿದ್ದ ಪುಟ್ಟ ಮಗಳು ಅಸುರಕ್ಷತಾ ಭಾವದಿಂದ ಕೇಳಿದಳು. ಕೂಡಲೇ ಎಚ್ಚೆತ್ತ ತಂದೆ ನೀನು ನನ್ನ ಹೃದಯ ಮಗು, ನಿನಗೆ ನೋವಾದರೆ ನನಗೂ ನೋವಾಗುತ್ತದೆ ಎಂದು ಹೇಳಿದರು. ಅದೇ ಕೊನೆ ಆ ಅಣ್ಣ ತಮ್ಮಂದಿರು ಎಂದೂ ತಮ್ಮ ತಂಗಿಯೊಂದಿಗೆ ಕಿತ್ತಾಡುವುದಾಗಲಿ ಕಿರಿಕಿರಿ ಮಾಡುವುದಾಗಲಿ ಮಾಡಲಿಲ್ಲ. ಆಕೆಯನ್ನು ಮಗುವಿನಂತೆ ಪೊರೆದರು. ಇಂದು ಅವರಿಲ್ಲದಿದ್ದರೂ…
ಸಿಂದಗಿ: ಪಟ್ಟಣದ ಪದ್ಮರಾಜ ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಶಿಕ್ಷಕರ ಸಹ ಪಠ್ಯ ಚಟುವಟಿಕೆಯಲ್ಲಿ ಪಟ್ಟಣದ ವಿದ್ಯಾನಗರದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಆದರ್ಶ ಶಿಕ್ಷಕ ಹಾಗೂ ಸ್ಕೌಟ್ ಮತ್ತು ಗೈಡ್ಸ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಸೋಮಾಪೂರ ಅವರುತಾಲೂಕು ಮಟ್ಟದ ಶಿಕ್ಷಕರ ಸಹ ಪಠ್ಯ ಚಟುವಟಿಕೆಯ ವಿಜ್ಞಾನ ರಸ ಪ್ರಶ್ನೆ ಕಾಯ೯ಕ್ರಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಬಂದು ಜಿಲ್ಲೆಗೆ ಆಯ್ಕೆಯಾಗಿರುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದ ಶಿಕ್ಷಣ ಸಂಯೋಜಕ ಆನಂದ ಮಾಡಗಿ, ಸುಧೀರ ಕಮತಗಿ ಸಾಹೇಬಗೌಡ ಬಿರಾದಾರ, ಹಾಗೂ ಎಸ್.ಎಂ.ಬಿರಾದಾರ ಅಭಿನಂದನ ಪತ್ರ ನೀಡಿ ಗೌರವಿಸಿದರು.ಶಿಕ್ಷಕ ಬಸವರಾಜ ಸೋಮಪೂರ ಅವರಿಗೆ ಶಿಕ್ಷಕ ಸಾಹಿತಿ ಬಸವರಾಜ ಅಗಸರ ಅಭಿನಂದಿಸಿದ್ದಾರೆ.
ಕೋರವಾರ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ ಜಯಂತ್ಯೋತ್ಸವ ದೇವರಹಿಪ್ಪರಗಿ: ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆಯಿಟ್ಟು ವೀರ ಮರಣವನ್ನಪ್ಪಿದ ಮೈಸೂರ ಹುಲಿ ಟಿಪ್ಪುಸುಲ್ತಾನ್ ನಮಗೆಲ್ಲ ಮಾದರಿಯಾಗಿದ್ದಾರೆ. ಇವರ ಧೈರ್ಯ ಶೌರ್ಯ ದೇಶಪ್ರೇಮ, ಸಾಮಾಜಿಕ ಕಳಕಳಿ ನಮಗೆ ಮಾರ್ಗದರ್ಶನವಾಗಿದೆ ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.ಸಮೀಪದ ಕೋರವಾರ ಗ್ರಾಮದಲ್ಲಿ ಹಮ್ಮಿಕೊಂಡ ಹಜರತ್ ಟಿಪ್ಪು ಸುಲ್ತಾನರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕಾಗಿ ಮಡಿದವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಸಮಾಜ ಸುಧಾರಣೆಯ ಜೊತೆಗೆ ಉತ್ತಮ ಆಡಳಿತ ನೀಡಿದ ಟಿಪ್ಪು ಸುಲ್ತಾನ ಅವರು ನಿತ್ಯ ಸ್ಮರಣಿಯರಾಗಿದ್ದಾರೆ. ಇವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಾಗೋಣ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿಎಸ್‌ಎಸ್ ಪ್ರಮುಖ ವೈ ಸಿ ಮಯೂರ, ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ ಮಾತನಾಡಿದರು. ಪಿಕೆಪಿಎಸ್ ಅಧ್ಯಕ್ಷ ಸಂಗಮೇಶ ಛಾಯಾಗೋಳ, ಜೆಡಿಎಸ್ ಪ್ರದಾನ ಕಾರ್ಯದರ್ಶಿ ಶೇಖರಗೌಡ ಪಾಟೀಲ ಸೇರಿದಂತೆ ಮತ್ತೀತರರು ಮಾತನಾಡಿದರು.ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ ಯಲಗಾರ, ಗ್ರಾಪಂ ಮಾಜಿ…
