ಸಿಂದಗಿ: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳು ಸರ್ವತೋಮುಖ ಬೆಳವಣಿಗೆ ಹೊಂದಬೇಕಾದರೆ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಎನ್. ಕೋರವಾರ ಹೇಳಿದರು.
ಪಟ್ಟಣದ ಜೇವರಗಿ ರಸ್ತೆಯಲ್ಲಿರುವ ಲೋಯಲ್ ಶಾಲೆಯಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ವತಿಯಿಂದ ಹಮ್ಮಿಕೊಂಡ ಚಿಣ್ಣರ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ದೇಹ ಸದೃಡವಾಗಿರಬೇಕಾದರೆ ಅವರು ಪೌಷ್ಠಿಕ ಆಹಾರ ಪಡೆಯಬೇಕು. ಅಜ್ಜ ಅಜ್ಜಿ ಹೇಳುವ ಕಥೆಗಳನ್ನು ಕೇಳಬೇಕು. ಮಗುವಿಗೆ ೬ತಿಂಗಳಿಂದ ೩ವರ್ಷದವರೆಗೆ ಸಮಯಕ್ಕನುಸಾರವಾಗಿ ಚುಚ್ಚುಮದ್ದು ಲಸಿಕೆಯನ್ನು ಹಾಕಿಸಬೇಕು. ಅದರಿಂದ ಮಗುವಿನ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದರು.
ಈ ವೇಳೆ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ನೀರಿಕ್ಷಕ ವಿಶ್ವನಾಥ ಕೊರವಾರ, ಮಲಕಪ್ಪ ಹಲಗಿ, ರಾಜೀವ ಕುರಿಮನಿ, ವಿಜಯ ಭಂಟನೂರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದ ಸರಕಾರಿ ಶಾಲೆಯ ಮಕ್ಕಳು, ಸಂಸ್ಥೆಯ ಸಿಬ್ಬಂದಿ ಹಾಗೂ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

