ಸಿಂದಗಿ: ಶಿಕ್ಷಕನಾಗ ಬಯಸುವ ಪ್ರಶಿಕ್ಷಣಾರ್ಥಿಗಳಿಗೆ ತಾಳ್ಮೆ ಹಾಗೂ ಸಂಯಮ ಮುಖ್ಯ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪೂಜ್ಯನೀಯ ಸ್ಥಾನವನ್ನು ನೀಡಿದ್ದಾರೆ. ಅಂತಹ ಸ್ಥಾನದಲ್ಲಿರುವ ನಾವುಗಳು ವಿದ್ಯಾರ್ಥಿಗಳ ಬದುಕಿನಲ್ಲಿ ಜ್ಞಾನ ಎಂಬ ಬೆಳಕನ್ನು ಚೆಲ್ಲಬೇಕು ಎಂದು ಪದ್ಮರಾಜ ಬಿ.ಈಡಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜೆ.ಸಿ.ನಂದಿಕೋಲ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಜೆ.ಹೆಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ೨೦೨೩-೨೪ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಗನವಾಡಿಯಿಂದ ಪದವಿಯವರೆಗೆ ಒಂದು ಕಲಿಕೆಯಾದರೆ ೨ ವರ್ಷದ ಈ ಬಿ.ಈಡಿ ತರಬೇತಿ ಶಿಕ್ಷಣವು ಭಿನ್ನ ಹಾಗೂ ಸೃಜನಾತ್ಮಕತೆಯಿಂದ ಕೂಡಿರುತ್ತದೆ. ವೃತ್ತಿ ಜೀವನ ಆರಂಭಿಸುವ ಪ್ರಶಿಕ್ಷಣಾರ್ಥಿಗಳು ಸಮಾಜದಲ್ಲಿ ಪ್ರೀತಿ ಮತ್ತು ಚಾರಿತ್ರ್ಯವನ್ನು ಕಾಯ್ದುಕೊಂಡರೆ ಕಾಯಕದ ಮಹತ್ವವನ್ನು ಗುರುತಿಸಿದಂತೆ. ಶಿಕ್ಷಕ ಎಂಬ ವೃತ್ತಿ ಒಂದು ಹುದ್ದೆಯಲ್ಲ ಸುಂದರ ಸಮಾಜದ ಸೃಷ್ಠಿಕರ್ತನ ಕಾಯಕ ಎಂದರು.
ಈ ವೇಳೆ ಪ್ರಾಚಾರ್ಯ ಬಿ.ಎಮ್.ಹುರಕಡ್ಲಿ ಮಾತನಾಡಿ, ಶಿಕ್ಷಕನು ಓರ್ವ ಮಾರ್ಗದರ್ಶಕ ಆತನ ಕಲಿಕೆ ನಿರಂತರವಾಗಿರುತ್ತದೆ. ಕೋವಿಡ್ ಸಮಯದಲ್ಲಿನ ಆನ್‌ಲೈನ್ ಶಿಕ್ಷಣದಿಂದ ಬಹಳಷ್ಟು ತಾಪತ್ರಯವನ್ನು ಪ್ರಶಿಕ್ಷಾಣಾರ್ಥಿಗಳ ಜತೆಗೆ ಉಪನ್ಯಾಸಕರು ಕೂಡಾ ಅನುಭವಿಸಿದ್ದರು ಅಂತಹ ಕಾಲದಲ್ಲಿ ನಾವೆಲ್ಲ ಬದುಕಿದ್ದೇ ಹೆಚ್ಚು ಎಂದರು.
ಇದೇ ಸಂದರ್ಭದಲ್ಲಿ ಅಂತಿಮ ವರ್ಷದ ಪ್ರಶಿಕ್ಷಣಾರ್ಥಿಗಳಾದ ಯಲ್ಲಾಲಿಂಗ ನಾಗರಾಳ, ಗೀತಾ ಪಟ್ಟಣಶೆಟ್ಟಿ, ಸಹನಾ ತಳಕೇರಿ, ಶಿವು ದ್ಯಾಮಗೊಂಡ, ಗುರುರಾಜ ಮಠ ಅನಿಸಿಕೆಯನ್ನು ಹಂಚಿಕೊಂಡರು.
ಈ ವೇಳೆ ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಎಸ್.ಬಿ.ಅಂಕಲಗಿ, ಪ್ರಾಚಾರ್ಯ ಬಿ.ಎಮ್.ಹುರಕಡ್ಲಿ, ಪ್ರಶಿಕ್ಷಣಾರ್ಥಿ ಪ್ರತಿನಿಧಿ ಯಲ್ಲಾಲಿಂಗ ನಾಗರಾಳ, ಉಪನ್ಯಾಸಕರಾದ ಎಸ್.ಎಸ್.ಬಿರಾದಾರ, ಸರೋಜಿನಿ ಹಿರೇಮಠ, ಸಿದ್ದಲಿಂಗ ಕಿಣಗಿ, ಪ್ರದೀಪ ಕತ್ತಿ, ಎಸ್.ಹೆಚ್. ಜಹಾಗೀರದಾರ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

