Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘಟನೆಯ ತಿಕೋಟಾ ತಾಲೂಕಾ ಘಟಕದ ಪದಾಧಿಕಾರಿಗಳು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ತಿಕೋಟಾ ತಾಲೂಕಿನ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಪದಾಧಿಕಾರಿಗಳು, ಸುಮಾರು ೮-೧೦ ವರ್ಷಗಳಿಂದ ತಿಕೋಟಾ ತಾಲೂಕಿನಲ್ಲಿ ೫೬ ಜನ ಬೆಳೆ ಸಮೀಕ್ಷೆದಾರರಾಗಿ ಕೆಲಸ ಮಾಡುತ್ತಾ ಬಂದಿರುವ ನಮಗೆ ಹಂಗಾಮುವಾರು ನಮ್ಮನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳದೇನೆ ಕನಿಷ್ಠ ವೇತನದ ನೀತಿ ಅಡಿಯಲ್ಲಿ ದಿನಗೂಲಿ ಕಾರ್ಮಿಕರನ್ನಾಗಿ ನೇಮಿಸಿಕೊಂಡು ವರ್ಷದ ೧೨ ತಿಂಗಳುಗಳ ಕಾಲ ಕೆಲಸವನ್ನು ನೀಡುವಂತೆ ಆಗ್ರಹಿಸಲಾಯಿತು.ಈ ವೇಳೆ ತಾಲೂಕಾ ಅಧ್ಯಕ್ಷರಾದ ಭಾಗೇಶ ಮಲಕಪ್ಪ ರಾಮತೀರ್ಥ ಅವರು ಮನವಿ ಪತ್ರವನ್ನು ಸಲ್ಲಿಸಿದರು.ವಿಶೇಷ ಅತಿಥಿಯಾಗಿ ಆಗಮಿಸಿದ ಸಂಘಟನೆಯ ರಾಜ್ಯ ಅಧ್ಯಕ್ಷ ಭೀಮಪ್ಪ ಲಕ್ಷ್ಮಣ ತಳವಾರ ಅವರು ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಬೆಳೆ ಸಮೀಕ್ಷೆದಾರರಾದ ನಾವು ೨೩,೭೨೦ ಜನ ಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಕೆಲಸಕ್ಕೆ ಸರ್ಕಾರ…

Read More

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸುತ್ತಿರುವ ಸೇತುವೆ ಕೆಳಗೆ ಹೊಲಗಳಿಗೆ ಹೋಗಲು ದಾರಿ ಮಾಡುವಂತೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಹೊರವಲಯದ ಬೆಂಗಳೂರ ಬೈಪಾಸಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿರುವುದರಿಂದ ಅಲ್ಲೊಂದು ಓವರ ಬ್ರೀಡ್ಜ ಮಾಡಬೇಕೆಂದು ಹಲವಾರು ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಸಂಸದರಾದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅದರ ಪ್ರತಿಫಲವಾಗಿ ಇಂದು ಓವರ್ ಬ್ರಿಡ್ಜ್ ಮಾಡಲಾಗುತ್ತಿದೆ. ಈ ಓವರ್ ಬ್ರಿಡ್ಜ್ ಕೆಳಗೆ ಅಂಡರ ಪಾಸ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ನಗರದ ಸಂಸದರಾದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡುತ್ತಾ, ಸಂಗಮೇಶ್ವರ ಆಸ್ಪರ್ತೆ ಹತ್ತಿರ ಅಂಡರ ಪಾಸ ಮಾಡಬೇಕು, ಇದರಿಂದ ಉತ್ನಾಳ ಗ್ರಾಮಕ್ಕೆ ನೇರವಾಗಿ ಹೋಗಲು ಅನುಕೂಲ ಆಗಲಿದೆ, ಜೊತೆಗೆ ವಾರ್ಡ ನಂಬರ ೨೧, ಇಬ್ರಾಹಿಂಪುರ, ಗಣೇಶ ನಗರ, ತ್ರೀಮೂರ್ತಿ ನಗರ, ಕಾಸಗೇರಿ, ಸಾಯಿ ಪಾರ್ಕ, ಮುರಾಣಕೇರಿ, ಮನಗೂಳಿ ಅಗಸಿ,…

Read More

ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​! | ಗುರುವಾರ ರಾಜೀನಾಮೆ ನೀಡುವುದು ಬಹುತೇಕ ಖಚಿತ | ಕೊನೆಗೂ ಗೊಂದಲಕ್ಕೆ ತೆರೆ ಎಳೆದ ಕೈ ಹೈಕಮಾಂಡ್ ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಗೊಂದಲಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ತೆರೆ ಎಳೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.ಈ ಕುರಿತು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಸುಳಿವು ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.ನಿನ್ನೆ ದೆಹಲಿಯ ಇಂದಿರಾ ಭವನದಲ್ಲಿ ನಡೆದ ಹೈವೋಲ್ಟೇಜ್ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಚರ್ಚಿಸಿದ್ದು, ಅಧಿಕಾರ ಹಂಚಿಕೆ ಸೂತ್ರದಂತೆ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ನಾಳೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದು, ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಇಂದು ಎಕ್ಸ್ ನಲ್ಲಿ ಮಹತ್ವದ ಪೋಸ್ಟ್​ ಹಂಚಿಕೊಂಡಿದ್ದು, ಇದು ರಾಜೀನಾಮೆ…

Read More

ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾ ಘಟಕವು ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದರಗಳಲ್ಲಿ ಆಗುತ್ತಿರುವ ಗಣನೀಯ ಹೆಚ್ಚಳವನ್ನು ತೀವ್ರವಾಗಿ ಖಂಡಿಸಿದೆ.ಈ ಕುರಿತು ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಮಾಧ್ಯಮದವರೊಂದಿಗೆ ಮಾತನಾಡುತ್ತ “ಈ ಅನಪೇಕ್ಷಿತ ಬೆಲೆ ಏರಿಕೆಯು ಸಾಮಾನ್ಯ ಜನರ ಜೀವನದ ಮೇಲೆ ಭಾರಿ ಹೊರೆಯನ್ನು ಹೇರಿದೆ ಎಂದು ಆಮ್ ಆದ್ಮಿ ಪಾರ್ಟಿ ಅಭಿಪ್ರಾಯಪಟ್ಟಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಸಂಬಂಧ ಮನವಿ ಪತ್ರ ಸಲ್ಲಿಸುವ ಮೂಲಕ ಪಾರ್ಟಿ ಈ ವಿಷಯವನ್ನು ಗಂಭೀರವಾಗಿ ಎತ್ತಿ ಹಿಡಿದಿದೆ” ಎಂದು ಅವರು ಹೇಳಿದರು.”ಈ ಬೆಲೆ ಏರಿಕೆಯ ಪರಿಣಾಮಗಳು ತುಂಬಾ ಅಪಾಯಕಾರಿವಾಗಿದ್ದು ಜನರನ್ನ ಮೇಲೆ ಬರೆ ಏಳದಂತಾಗಿದೆ.ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ರಸ್ತೆ ಸಾರಿಗೆ ವೆಚ್ಚ ಹೆಚ್ಚಾಗುತ್ತೆ, ಅದರ ಜೊತೆಗೆ ಎಲ್ಲಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೃಜನಾತ್ಮಕ ಬೋಧನೆ ಮತ್ತು ಕಲಿಕಾ ಕಾರ್ಯತಂತ್ರಗಳು ಕುರಿತು ಒಂದು ದಿನದ ಕಾರ್ಯಾಗಾರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ನಡೆಯಿತು.ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(ಸಿಬಿಎಸ್ಇ) ಶಾಲೆ ಮತ್ತು ಶ್ರೀ ಬಿ. ಎಂ ಪಾಟೀಲ್ ಪಬ್ಲಿಕ್(ಐಸಿಎಸ್ಇ) ಶಾಲೆಯ ಶಿಕ್ಷಕರಿಗಾಗಿ ಆಯೋಜಿಸಲಾದ ಈ‌ ಕಾರ್ಯಾಗಾರವನ್ನು ಶೈಕ್ಷಣಿಕ ಸಂಯೋಜಕಿ ದೀಪಾ ಜಂಬೂರೆ ಉದ್ಘಾಟಿಸಿದರು.ಜಾಗೃತ ಮನಸ್ಥಿತಿ ಮತ್ತು ಭೋದನೆ ತಂತ್ರಗಳು ವಿಷಯ ಕುರಿತು ವಿಷಯದ ಕುರಿತು ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ (ಸಿಬಿಎಸ್) ಶಾಲೆಯ ಉಪಪ್ರಾಚಾರ್ಯೆ ವಸುಧಾ ನಾರ್ವೇಕರ ಉಪನ್ಯಾಸ ನೀಡಿದರು.ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ (ಐಸಿಎಸ್ಇ) ಶಾಲೆಯ ಪ್ರಾಚಾರ್ಯ ವಿಕ್ರಮ ನಾರ್ವೇಕರ ಅವರು ಸೃಜನಾತ್ಮಕ ಬೋಧನೆ ಮತ್ತು ಕಲಿಕೆಯ ಕಾರ್ಯತಂತ್ರಗಳು ವಿಷಯದ ಕುರಿತು ಮಾತನಾಡಿ ಮನಸ್ಸಿನ ಏಕಾಗ್ರತೆ, ಶಾಂತ ಮನೋಭಾವ ಹಾಗೂ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂವಹನ ನಡೆಸುವ ವಿಧಾನಗಳ ಕುರಿತು ಶಿಕ್ಷಕರಿಗೆ ತರಬೇತಿ ನೀಡಿದರು.ಈ ತರಬೇತಿಯಲ್ಲಿ…

Read More

ಇಂದು (ಮೇ.28, ಗುರುವಾರ) ಬಕ್ರೀದ್ ಹಬ್ಬದ ನಿಮಿತ್ತ ಈ ವಿಶೇಷ ಲೇಖನ ಲೇಖನ- ಮಲಿಕ್ ಎಲ್. ಜಮಾದಾರಉಪನ್ಯಾಸಕರುವಿಜಯಪುರ.ಮೊ: 9743129744 ಉದಯರಶ್ಮಿ ದಿನಪತ್ರಿಕೆ ಇಸ್ಲಾಂ ಧರ್ಮದ ಪ್ರವಾದಿಗಳಲ್ಲಿ ಒಬ್ಬರಾದ ಇಬ್ರಾಹಿಂ(ಅಸ)ತಮ್ಮ ಮಗ ಇಸ್ಮಾಯಿಲ್(ಅಸ)ರನ್ನು ಸೃಷ್ಟಿಕರ್ತನಾದ ಅಲ್ಹಾಹನಿಗೆ ಬಲಿ ಕೊಡಲು ಮುಂದಾ ದಿನವನ್ನೆ “ಬಕ್ರೀದ್ ಅಥವಾ ಬಲಿದಾನದ ಹಬ್ಬ ವೆಂದು” ಆಚರಿಸಲಾಗುವುದು.• ಹಜ್ ಯಾತ್ರೆ ವಿಶೇಷಈದ್ ಅಲ್-ಅಧಾವನ್ನು ಸಾಮಾನ್ಯವಾಗಿ ಎರಡು ಈದ್ ಹಬ್ಬಗಳ ಪವಿತ್ರವೆಂದು ಪರಿಗಣಿಸಲಾಗಿದೆ, ಈದ್ ಅಲ್-ಫಿತರ್‌ನ ಸುಮಾರು ಎರಡು ತಿಂಗಳ ನಂತರ ಮೆಕ್ಕಾಗೆ ವಾರ್ಷಿಕ ಹಜ್ ಯಾತ್ರೆಯ ಕೊನೆಯಲ್ಲಿ ನಡೆಯುತ್ತದೆ. ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್ ಪ್ರಕಾರ ಎರಡೂ ರಜಾದಿನಗಳ ದಿನಾಂಕಗಳು ಪ್ರತಿ ವರ್ಷ ಒಂದೇ ಆಗಿರುತ್ತವೆ. ಪಾಶ್ಚಾತ್ಯ ೩೬೫-ದಿನಗಳ ಗ್ರೆಗೋರಿಯನ್ ಕ್ಯಾಲೆಂಡರ್ ಸುಮಾರು ೧೧ ದಿನಗಳು ಉದ್ದವಾಗಿದೆ, ಪ್ರತಿ ವರ್ಷ ದಿನಾಂಕಗಳು ಬದಲಾಗುತ್ತವೆಪಶ್ಚಿಮ ಸೌದಿ ಅರೇಬಿಯಾದಲ್ಲಿ ಇಸ್ಲಾಂನ ಪವಿತ್ರ ನಗರವಾದ ಮೆಕ್ಕಾಗೆ ವಾರ್ಷಿಕ ಹಜ್ ಯಾತ್ರೆಯ ಅಂತಿಮ ದಿನದಂದು ಈದ್ ಅಲ್-ಅಧಾವನ್ನು ಆಚರಿಸಲಾಗುತ್ತದೆ. ಎಲ್ಲಾ ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಐದು…

Read More

ಅಥಣಿಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ಅಥಣಿ: ಚಲವಾದಿ (ಬಲಗೈ) ಸಮುದಾಯ ನೌಕರರ ಸಂಘ ಅಥಣಿ ಇವರ ವತಿಯಿಂದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬುಧವಾರ ನಗರದಲ್ಲಿ ಜರುಗಿತುಈ ವೇಳೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಪಿಎಸ್ ಅಧಿಕಾರಿ ರವಿಂದ್ರ ಗಡಾದಿ ಅವರು, ವಿದ್ಯಾರ್ಥಿಗಳು ಅಂಕ ಗಳಿಕೆ ಮಾಡುವುದು ಮುಖ್ಯ ಆದರೆ ಅಂಕಗಳ ಜೊತೆಗೆ ಜ್ಞಾನ ಸಂಸ್ಕಾರ ಮತ್ತು ಸಮಾಜದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು ಶಿಕ್ಷಣವು ನಮ್ಮ ಬದುಕನ್ನು ಮಾತ್ರವಲ್ಲ ಇಡೀ ಸಮಾಜವನ್ನು ಬದಲಾಯಿಸುವ ಶಕ್ತಿ ಹೊಂದಿದೆ ಡಾ. ಬಿ.ಆರ್ ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ ಸಂಘಟನೆ ಹೋರಾಟ ಈ ಮೂರು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಗುರಿ ಮುಟ್ಟಲು ಸಾಧ್ಯ ಎಂದು ಕಿವಿಮಾತು ಹೇಳಿದ ಅವರು,ನಮ್ಮ…

Read More

ವಿಜಯಪುರ ಲೋಕಸಭೆ ಸಂಸದರಾದ ರಮೇಶ ಜಿಗಜಿಣಗಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಸರ್ಕಾರವು 2025-26ನೇ ಹಣಕಾಸು ವರ್ಷದಲ್ಲಿ ವಿಜಯಪುರಕ್ಕೆ ವಿವಿಧ ನಿರ್ಣಾಯಕ ಮೂಲಸೌಕರ್ಯ ಯೋಜನೆಗಳಿಗಾಗಿ ಆರ್ ಐಡಿ ನಬಾರ್ಡ್ ನಡಿ 153 ಕೋಟಿ ರೂ. ಮಂಜೂರು ಮಾಡಿದೆ ಎಂದು ಸಂಸದರಾದ ರಮೇಶ ಜಿಗಜಿಣಗಿ ಅವರು ತಿಳಿಸಿದ್ದಾರೆ.ಈ ಕುರಿತು ಬುಧವಾರ ಪ್ರಕಟಣೆ ನೀಡಿರುವ ಅವರು, 2025-26ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಭಿವೃದ್ಧಿಗಾಗಿ ಕಡಿಮೆ ವೆಚ್ಚದ ಸಾಲ ಸಹಾಯವಾಗಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ ವಿಜಯಪುರ ಜಿಲ್ಲೆಗೆ 153.5 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದವರು ತಿಳಿಸಿದ್ದಾರೆ.ಇಂಡಿ ತಾಲ್ಲೂಕಿನಲ್ಲಿ ಕೈಗಾರಿಕಾ-ಆಧಾರಿತ ಡಿಪ್ಲೊಮಾ, ಪೋಸ್ಟ್-ಡಿಪ್ಲೊಮಾ ಮತ್ತು ಎಂ.ಟೆಕ್ ಕಾರ್ಯಕ್ರಮಗಳನ್ನು ನೀಡಲು ಜಿಲ್ಲಾ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಲು 70 ಕೋಟಿ ಮೌಲ್ಯದ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ವಿದ್ಯಾರ್ಥಿಗಳು ಟೂಲ್ ಮತ್ತು ಡೈ ತಯಾರಿಕೆ, ಮೆಕಾಟ್ರಾನಿಕ್ಸ್ ಮತ್ತು ಸಿಎಡಿ, ಸಿಎಎಂ, ಸಿಎಎ ಹಾಗೂ ಎಐ…

Read More

ಲೇಖನ- ಡಾ ಶಶಿಕಾಂತ ಪಟ್ಟಣರಾಮದುರ್ಗ – ಪುಣೆಮೊ: 9552002338 ಉದಯರಶ್ಮಿ ದಿನಪತ್ರಿಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ದಿನಾಂಕ 12 ಏಪ್ರಿಲ್ 2026 ರಂದು ಶ್ರೀ ಪ್ರಸನ್ನ ರಾಮಚಂದ್ರ ಗೆದ್ದೆನ್ನವರ ಇವರ ದತ್ತಿ ಉಪನ್ಯಾಸವು ಒಂದು ಗೊಂದಲದ ಗೂಡನ್ನು ಸೃಷ್ಟಿಸಿ ಹಲವು ಅನುಮಾನ ಸಂದೇಹಗಳನ್ನು ಹುಟ್ಟು ಹಾಕಿದ ಪ್ರಸಂಗ ಉಪನ್ಯಾಸಕ ವಾಸುದೇವ ಬಡಿಗೇರ್ ಮತ್ತು ಅಧ್ಯಕ್ಷರಾದ ನಿವೃತ್ತ ಕನ್ನಡ ಪ್ರಾಧ್ಯಾಪಕ ಶ್ಯಾಮಸುಂದರ ಕೊಚ್ಚಿ ಅವರಿಂದ ಜರುಗಿತು.ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಬೇರೆ ಎನ್ನುವ ಕಳೆದ ಹನ್ನೇರಡು ವರುಷಗಳ ನಿರಂತರ ಹೋರಾಟಕ್ಕೆ ಈ ಇಬ್ಬರೂ ಮಹನೀಯರು ಮತ್ತೆ ಹಲವು ಅನೇಕ ಗೊಂದಲ ವಿವಾದಗಳನ್ನು ಸೃಷಿಸಿದ್ದು ಒಂದು ಅರ್ಥದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಂತಹ 136 ವರ್ಷಗಳ ಹಳೆಯದಾದ ಇಂತಹ ಸಾಂಸ್ಕೃತಿಕ ಸಾಹಿತಿಕ ವೇದಿಕೆಗಳಲ್ಲಿ ಅತ್ಯಂತ ವಿವಾದಗಳನ್ನು ಹುಟ್ಟು ಹಾಕಿದ ರೀತಿ ಖಂಡನೀಯವಾದದ್ದು. ಇಂತಹ ಕಾರ್ಯಕ್ರಮಗಳು ವ್ಯಕ್ತಿಗಳ ಅಧ್ಯಯನಶೀಲತೆಯನ್ನು ಹೆಚ್ಚಿಸಬೇಕೆ ಹೊರತು ಸಂದೇಹ ಅನುಮಾನಗಳನ್ನು ಹುಟ್ಟು ಹಾಕುವುದಲ್ಲ.ದೇವರ ದಾಸಿಮಯ್ಯ ಜೇಡರ ದಾಸಿಮಯ್ಯ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಅವನಿಗೆ ದೊಡ್ಡ ಭತ್ತದ ಗದ್ದೆಯಿತ್ತು. ಆ ಗದ್ದೆಯಲ್ಲಿ ಒಂದು ಗುಬ್ಬಚ್ಚಿ ತನ್ನ ಮರಿಗಳೊಂದಿಗೆ ಗೂಡು ಕಟ್ಟಿ ವಾಸಿಸುತ್ತಿತ್ತು. ಕೆಲವು ದಿನಗಳ ನಂತರ ಗದ್ದೆಯಲ್ಲಿನ ಭತ್ತದ ಬೆಳೆ ಸಂಪೂರ್ಣವಾಗಿ ಕಟಾವಿಗೆ ಬಂದಿತು. ಒಂದು ದಿನ ರೈತ ಗದ್ದೆಯ ಬಳೆ ಬಂದು ‘ಬೆಳೆ ಚೆನ್ನಾಗಿ ಬಂದಿದೆ. ನಾಳೆ ನನ್ನ ನೆರೆಹೊರೆಯವರನ್ನು ಕರೆದು ಬೆಳೆ ಕಟಾವು ಮಾಡಲು ಹೇಳುತ್ತೇನೆ.’ ಎಂದ. ಇದನ್ನು ಕೇಳಿದ ಮರಿ ಗುಬ್ಬಚ್ಚಿಗಳು ಹೆದರಿ,’ ತಾಯಿ ಗುಬ್ಬಚ್ಚಿ ಬಂದ ತಕ್ಷಣ ‘ಅಮ್ಮಾ ನಾಳೆ ರೈತ ತನ್ನ ನೆರೆಹೊರೆಯವರನ್ನು ಕರೆದುಕೊಂಡು ಬಂದು ಬೆಳೆ ಕಟಾವು ಮಾಡಿಸುತ್ತಾನಂತೆ ನಾವು ಬೇರೆ ಕಡೆಹೋಗೋಣ’ ಎಂದವು. ಅದಕ್ಕೆ ತಾಯಿ ಗುಬ್ಬಚ್ಚಿ, ವiಕ್ಕಳೆ, ಹೆದರಬೇಡಿ ನಾಳೆ ಕಟಾವು ಆಗುವುದಿಲ್ಲ.’ ಎಂದಿತು. ತಾಯಿ ಹೇಳಿದಂತೆಯೇ ಮರುದಿನ ಬೆಳೆ ಕಟಾವು ಆಗಲಿಲ್ಲ. ಕೆಲವು ದಿನಗಳ ನಂತರ ರೈತ ಮತ್ತೆ ಬಂದು, ‘ನೆರೆಹೊರೆಯವರು ಬರಲಿಲ್ಲ. ನಾಳೆ ನನ್ನ ಮಕ್ಕಳನ್ನು…

Read More