ಉದಯರಶ್ಮಿ ದಿನಪತ್ರಿಕೆ
ಸೊಲ್ಲಾಪುರ: ಅಕ್ಕಲಕೋಟ ಪ್ರದೇಶವು ಕನ್ನಡದ ಅಸ್ಮಿತೆಯನ್ನು ಇನ್ನೂ ಉಳಸಿಕೊಂಡಿದೆ, ಕನ್ನಡ ನುಡಿಕಟ್ಟುವ ಕೆಲಸ ಗಡಿಭಾಗದಲ್ಲಿ ಖೇಡಗಿ ಸಂಸ್ಥೆ ಮಾಡುತ್ತಿದೆ ಎಂದು ಸಿಂದಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ರಮೇಶ ಕತ್ತಿ ಶ್ಲಾಘಿಸಿದರು.
ಅವರು ಅಕ್ಕಲಕೋಟ ಪಟ್ಟಣದ ಸಿ.ಬಿ.ಖೇಡಗಿ ಕಾಲೇಜು ಕನ್ನಡ ವಿಭಾಗ ಹಾಗೂ ಪಿ.ಎಂ.ಉಷಾ ಪ್ರಾಯೋಜಕತ್ವದಲ್ಲಿ ಗುರುವಾರ ಹಮ್ಮಿಕೊಂಡ ‘ ಕನ್ನಡ ಭಾಷೆ’ ಕಾರ್ಯಾಗಾರದ ಉದ್ಘಾಟನೆ ಹಾಗೂ ವಿಶೇಷ ಉಪನ್ಯಾಸ ನೀಡಿದರು.
ಎರಡು ಸಾವಿರ ವರ್ಷಗಳಿಂದಲೂ ಕನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತ, ಇಂದುಜಾಗತಿಕ ಮಟ್ಟದಲ್ಲಿಯೂ ಬೂಕರ್ ಪ್ರಶಸ್ತಿ ಪಡೆಯುವ ಮೂಲಕ ತನ್ನ ಸ್ಥಾನ ಗಟ್ಟಿಯಾಗಿಸಿದೆ, ಅಂತುಹುದೇ ಕೆಲಸವನ್ನು ಇಲ್ಲಿನ ಸಂಸ್ಥೆ ಮಾಡುತ್ತಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಹಾಗೂ ಕನ್ನಡದ ವಿಭಾಗದ ಮುಖ್ಯಸ್ಥ ಪ್ರೊ. ಗುರುಲಿಂಗಪ್ಪ ಧಬಾಲೆ ‘ಕನ್ನಡ ನುಡಿಯನ್ನು ಅಕ್ಕಲಕೋಟ ಭಾಗದಲ್ಲಿ ಇನ್ನೂ ನಿರರ್ಗಳವಾಗಿ ಮಾತನಾಡುವವರಿದ್ದಾರೆ, ಗಡಿನಾಡಿನಲ್ಲಿ ಕನ್ನಡ ಕಲಿಸುವ, ಶೋಧಿಸುವ ಪ್ರಕ್ರಿಯೆ ಕಳೆದ ೩೦ ವರ್ಷಗಳಿಂದಲೂ ನಮ್ಮಅಧ್ಯಯನ ಕೇಂದ್ರ ಮಾಡುತ್ತಿದೆ, ನಿರಂತರ ಕನ್ನಡ ಕಾರ್ಯಕ್ರಮಗಳನ್ನು ಸಂಘಟಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಶಿಬಿರದ ಸಂಚಾಲಕ
ಡಾ. ಗುರುಸಿದ್ಧಯ್ಯಾ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ’ ಮೂರುದಿನಗಳಬಕಾರ್ಯಾಗರದ ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ನೀಡಿದರು.
ವಿಜಯಪುರದ ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಕತ್ತಿ ವೇದಿಕೆಯಲ್ಲಿದ್ದರು. ವಿವಿಧ ವಿಭಾಗದ ಪ್ರಾಧ್ಯಾಪಕರು ಭಾಗವಹಿಸಿದ್ದರು.
ಅತಿಥಿ ಉಪನ್ಯಾಸಕಿ ಚನ್ನಮ್ಮ ಕಲಶೆಟ್ಟಿ ಸ್ವಾಗತಿಸಿದರು. ಅಧ್ಯಾಪಕಿ ಪೂಜಾ ಡಬರೆ ನಿರೂಪಿಸಿದರು. ಪ್ರೊ. ಜಿ.ಎಸ್.ಸ್ವಾಮಿ ವಂದಿಸಿದರು

