Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾ ಘಟಕ, ತಾಲೂಕು ಘಟಕದಿಂದ ಭಾನುವಾರ ಪುರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ ಅವರನ್ನು ಸನ್ಮಾನಿಸಿ ಶುಭಕೋರಲಾಯಿತು.ಈ ಸಂದರ್ಭದಲ್ಲಿ ಅದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕವಲಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸೊಸಾಯಿಟಿಯ ಅಧ್ಯಕ್ಷ ಹೊನ್ನಪ್ಪ ಗೊಳಸಂಗಿ, ಸೊಸಾಯಿಟಿಯ ನಿರ್ದೇಶಕರಾದ ಶಿವು ಮಡಿಕೇಶ್ವರ, ಮಲ್ಲಿಕಾರ್ಜುನ ರಾಜನಾಳ, ಶಿಕ್ಷಕರಾದ ಸಿದ್ದು ಬಾಗೇವಾಡಿ, ಎಸ್.ಬಿ.ಮುತ್ತಗಿ, ಬಸವರಾಜ ಚಿಂಚೋಳಿ, ಕೋಟ್ರೇಶ ಹೆಗ್ಡಾಳ, ಎಂ.ಬಿ.ತೋಟದ, ಎಂ.ವ್ಹಿ.ಗಬ್ಬೂರ, ಚಿದಾನಂದ ಹೂಗಾರ, ಜಿ.ಎಸ್.ಪಾಟೀಲ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಅಬ್ಬರದ ಗಾಳಿಯೊಂದಿಗೆ ಸಿಡಿಲು-ಮಿಂಚಿನೊಂದಿಗೆ ಕೆಲ ಹೊತ್ತು ಮಳೆ ಬರುವ ಮೂಲಕ ಬಿರುಬಿಸಿಲಿನಿಂದ ಬೇಸತ್ತಿದ್ದ ಜನತೆಗೆ ಮಳೆ ತಂಪರೆಯಿತು. ಪಟ್ಟಣದಲ್ಲಿ ಸಂಜೆ ಆರಂಭವಾದ ಮಳೆ ರಾತ್ರಿ ಎಂಟು ಗಂಟೆಯವರೆಗೂ ಅಬ್ಬರದ ಗಾಳಿ, ಗುಡುಗು-ಸಿಡಿಲಿನೊಂದಿಗೆ ಮಳೆ ಸುರಿಯಿತು. ವಿದ್ಯುತ್ ವ್ಯತ್ಯಯವಾಗಿತ್ತು. ಮಳೆ ನಿಂತ ನಂತರ ಮಾರುಕಟ್ಟೆ ಪ್ರದೇಶದಲ್ಲಿ ಜನರ ಸಂಚಾರ ಆರಂಭವಾಯಿತು.ತಾಲೂಕಿನ ಡೋಣೂರ ಗ್ರಾಮದ ಮಲ್ಲಪ್ಪ ಯಮನಪ್ಪ ತಳಕೇರಿ, ಬಸಪ್ಪ ಮಲ್ಲಪ್ಪ ತಳಕೇರಿ, ಬಸಪ್ಪ ಶಿವಪ್ಪ ಈರಕಾರ,ಶಂಕ್ರೆಪ್ಪ ಶಿವಲಿಂಗ ಮರನೂರ ಅವರಿಗೆ ಸೇರಿದ ನಾಲ್ಕು ಕುರಿಗಳು ಸಿಡಿಲು ಬಡಿದು ಮೃತ ಪಟ್ಟಿವೆ. ತಾಲೂಕಿನ ಉಕ್ಕಲಿ ಗ್ರಾಮದ ಯಂಕಪ್ಪ ರಾಚಪ್ಪ ಬಡಿಗೇರ ಅವರ ಮನೆಯ ತಾಡಪಾಲ ಗಾಳಿಗೆ ಹಾರಿ ಹೋಗಿದೆ. ಸಾವಿತ್ರಿ ಈಶ್ವರಪ್ಪ ಮುರಾರ್ತಿಹಾಳ ಅವರ ಜಮೀನಿನಲ್ಲಿರುವ ಮಾವಿನ ಮರಗಳು ಗಾಳಿ-ಮಳೆಗೆ ಭಾಗಶಃ ಹಾನಿಯಾಗಿವೆ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶ್ವ ಣಮೋಕಾರ ಮಹಾಮಂತ್ರ ದಿವಸದಂಗವಾಗಿ ಜೈನ ಸಮಾಜ ಬಾಂಧವರು ಬುಧವಾರ ವಿಶ್ವಶಾಂತಿಗಾಗಿ ವಿಶ್ವ ಕಲ್ಯಾಣಕಾರಿ ಣಮೋಕಾರ ಮಹಾಮಂತ್ರವನ್ನು ೧೦೮ ಸಲ ಜಪಿಸಿದರು.ಈ ಕಾರ್ಯಕ್ರಮದಲ್ಲಿ ಹೊಸಮನಿ,ದಂಡಾವತಿ, ಉಪಾಧ್ಯೆ, ಬೋಗಾರ ಪರಿವಾರ ಸೇರಿದಂತೆ ಅನೇಕ ಜೈನ ಸಮಾಜ ಬಾಂಧವರು ಭಾಗವಹಿಸಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪ್ರತಿಯೊಬ್ಬರ ಜೀವನದಲ್ಲಿ ಬರುವ ವಿವಿಧ ಸಂಸ್ಕಾರಗಳಲ್ಲಿ ಮದುವೆ ಎಂಬ ಸಂಸ್ಕಾರವು ಪ್ರಮುಖ ಘಟ್ಟವಾಗಿದೆ. ಮಠ-ಮಾನ್ಯಗಳಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಅನೇಕ ಶ್ರೀಗಳ ಸಾನಿಧ್ಯದಲ್ಲಿ ಮದುವೆಯಾಗುವ ಸೌಭಾಗ್ಯ ಸಿಗುತ್ತದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ತಾಲೂಕಿನ ಮುತ್ತಗಿ ಗ್ರಾಮದ ಸಂಸ್ಥಾನ ಹಿರೇಮಠದ ಲಿಂ.ರುದ್ರಮುನಿ ಶಿವಾಚಾರ್ಯರ ೮೭ನೇ ಪುಣ್ಯಾರಾಧನೆಯ ಜಾತ್ರಾಮಹೋತ್ಸವದಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಧರ್ಮಸಭೆ, ಸಾಮೂಹಿಕ ವಿವಾಹ ಹಾಗೂ ಪ್ರವಚನ ಮಹಾಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವನ ಬದುಕಿನಲ್ಲಿ ನಾಮಕರಣ, ಲಿಂಗಧಾರಣೆ, ಜಡೆ ತೆಗೆಯುವ ಕಾರ್ಯ, ಸೀಮಂತ ಕಾರ್ಯ, ಅಂತಿಮ ಕಾರ್ಯ ಸೇರಿದಂತೆ ವಿವಿಧ ಸಂಸ್ಕಾರಗಳು ನಿರಂತರವಾಗಿ ನಡೆಯುತ್ತವೆ. ಇದರಲ್ಲಿ ಮದುವೆ ಸಂಸ್ಕಾರ ಬಹುಪ್ರಮುಖವಾಗಿದೆ. ಸಂಸ್ಕಾರಗಳು ಹಿಂದು ಪರಂಪರೆಯಲ್ಲಿ ಶ್ರೇಷ್ಠವಾಗಿದೆ ಎಂದರು.ಹಿಂದುಗಳಿಗೆ ಮಠ-ಮಾನ್ಯಗಳು ಆತ್ಮವಿದ್ದಂತೆ. ಮಠ-ಮಾನ್ಯಗಳಿಂದ ಜನರಿಗೆ ಆಧ್ಯಾತ್ಮಿಕ ಸಿಗುವ ಮೂಲಕ ಜೀವನಕ್ಕೆ ನೆಮ್ಮದಿ-ಸುಖ ಸಿಗುತ್ತದೆ. ಯುಗಾದಿ ಹಬ್ಬದ ನಂತರ ಎಲ್ಲ ಊರಿನಲ್ಲಿ ಜಾತ್ರೆ ನಡೆಯುತ್ತವೆ. ಜಾತ್ರೆಗಳು ಎಲ್ಲರ ಬದುಕಿನ ಸ್ತಂಭವಾಗಿವೆ. ಎಲ್ಲ ಜನರಿಗೆ ಆನಂದ ತರುತ್ತವೆ ಎಂದರು.ಸಾನಿಧ್ಯ ವಹಿಸಿದ್ದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬುಧವಾರ ಇಂಡಿಗೆ ಭೇಟಿ ನೀಡಿ, ಮೇಘಾ ಮಾರುಕಟ್ಟೆ, ಕೃಷಿ ವಿಜ್ಞಾನ ಕೇಂದ್ರ, ತಾಲೂಕಾ ಆಸ್ಪತ್ರೆ, ಮಿನಿ ವಿಧಾನಸೌಧಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಇಂಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೆಘಾ ಮಾರುಕಟ್ಟೆ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಸಂಬಂಧಿಸಿದವರಿಗೆ ಅವರು ಸೂಚನೆ ನೀಡಿದರು.ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಲಿಂಬೆ ಅಭಿವೃದ್ದಿ ಮಂಡಳಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು. ಮಹಾವೀಕ ವೃತ್ತಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆ ಕಾಮಗಾರಿಗಳ ಕುರಿತು ಅಗತ್ಯ ಸೂಚನೆ ನೀಡಿದರು. ನಂತರ ವಾರ್ಡ ನಂ.೧೦ರಲ್ಲಿ ಗ್ರಂಥಾಲಯ ನಿರ್ಮಾಣಕ್ಕಾಗಿ ಹಳೆಯ ಗ್ರಂಥಾಲಯ ಜಾಗವನ್ನು ಪರಿಶೀಲನೆ ನಡೆಸಿ, ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಿಂದಗಿ ಪಟ್ಟಣದ ಕಲಕೇರಿ ಬೈಪಾಸ್ ಹತ್ತಿರವಿರುವ ಎಲೈಟ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ.ವಿಜ್ಞಾನ ವಿಭಾಗ: ಸ್ವಾತಿ ಬಸವರಾಜ ಕಲಶೆಟ್ಟಿ, ೬೦೦ ಅಂಕಗಳಿಗೆ ೫೭೧ (ಶೇ.೯೫.೧೬) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಚಾಂದಮಾ ಬಂದೇನವಾಜ್ ಯಡ್ರಾಮಿ ೫೬೪ (ಶೇ.೯೪.%) ಅಂಕ ಪಡೆದು ದ್ವಿತೀಯ ಸ್ಥಾನ, ಸುನಿಲ ನಾಯಕ ಹಾಗೂ ಅಶ್ವಿನಿ ಹಿಪ್ಪರಗಿ ವಿದ್ಯಾರ್ಥಿಗಳು ೫೬೦ (೯೩.೩೩%) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿನಿಗಳ ಈ ಸಾಧನೆಗೆ ಸಂಸ್ಥೆಯ ವ್ಯವಸ್ಥಾಪಕ ಅಧ್ಯಕ್ಷ ಮಹಿಬೂಬ ಅಸಂತಾಪುರ, ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದೇವತೆಗಳಲ್ಲಿ ಶಕ್ತಿಶಾಲಿ ದೇವತೆ ಎಂದರೆ ಅದು ಶ್ರೀಕಾಳಿಕಾ ದೇವಿ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.ಸಿಂದಗಿ ಪಟ್ಟಣದ ಕಾಳಿಕಾ ನಗರದಲ್ಲಿರುವ ಶ್ರಿ ಕಾಳಿಕಾ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಈ ಜಾತ್ರೆಯಿರುವುದು ಬೇಸಿಗೆಯ ಸಮಯದಲ್ಲಿ ಇಂತಹ ಸುಡು ಬಿಸಿಲನ್ನು ಲೆಕ್ಕಿಸದೇ ಪಟ್ಟಣದ ಸಮಸ್ತ ಕಾಳಿಕಾ ದೇವಿಯ ಭಕ್ತರು ಸೇರಿಕೊಂಡು ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸುದು ಬಹಳ ಸಂತೋಷದ ವಿಷಯವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸಿಂದಗಿ ಆಲಮೇಲ ಮುರುಝಾವದ ಮಠ ಈರಯ್ಯ ಮಹಾಸ್ವಾಮಿ, ಸೊಮನಾಥ ಹಂಚನಾಳ, ರವಿಗೌಡ ಬಿರಾದಾರ, ಕೆ.ಎಸ್.ಪತ್ತಾರ, ಲಕ್ಷಣ ಬಡಿಗೇರ, ಸಂಗು ಪತ್ತಾರ, ಚಿದಾಂದ ಆಚಾರಿ, ಬ್ರಹ್ಮಾನಂದ ಮುರುಝಾವದಮಠ, ಬಸವರಾಜ ಪತ್ತಾರ ಸೇರಿದಂತೆ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪಪೂ ಕಾಲೇಜಿನ ವಿದ್ಯಾರ್ಥಿಗಳು ಮಾರ್ಚ-೨೦೨೫ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಕಲಾ ವಿಭಾಗನಾಗೇಂದ್ರ ಮಾದರ (೫೬೩) ಶೇ.೯೩.೮೩ ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ, ಪರಶುರಾಮ ನಡುವಿನಮನಿ (೫೩೧) ಶೇ.೮೮.೫ ಅಂಕ ಪಡೆದು ದ್ವಿತೀಯ ಸ್ಥಾನ, ಶ್ರೀಧರ ಬನಸೋಡೆ (೫೨೨) ಶೇ.೮೭ ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.ವಾಣಿಜ್ಯ ವಿಭಾಗಮೌನೇಶ ನಾಯ್ಕೋಡಿ (೫೫೮) ಶೇ.೯೩ ಅಂಕ ಪಡೆದು ಪ್ರಥಮ ಸ್ಥಾನ, ಚಂದ್ರು ಬಾಗೇವಾಡಿ (೫೩೫) ಶೇ.೮೯.೧೬ ಅಂಕ ಪಡೆದು ದ್ವಿತೀಯ ಸ್ಥಾನ ಮತ್ತು ಭಾಗ್ಯಶ್ರೀ ಪತ್ತಾರ (೫೩೧) ಶೇ.೮೮.೫ ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಹಾಗೂ ವಿಜ್ಞಾನ ವಿಭಾಗದಲ್ಲಿ ಎಮ್.ಡಿ.ತಾಹಾ ಚೌಧರಿ (೪೩೫) ಶೇ.೭೨.೫ ಅಂಕ ಪಡೆದುಕೊಂಡಿರುತ್ತಾರೆ.ಒಟ್ಟು ೬ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಮತ್ತು ೨೪ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ…

Read More

ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಶೇ.೪ ಮೀಸಲಾತಿ ನೀಡುವ ವಿಧೇಯಕಕ್ಕೆ ಒಪ್ಪಿಗೆ ನೀಡದಂತೆ ರಾಜ್ಯಪಾಲರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕರ್ನಾಟಕ ಕಾಂಗ್ರೆಸ್ ಸರಕಾರ ಮುಸ್ಲಿಂ ಸಮುದಾಯಕ್ಕೆ ಶೇ.೪ರಷ್ಟು ಮೀಸಲಾತಿ ನೀಡವ ಮೂಲಕ ಮತ ಬ್ಯಾಂಕ ರಾಜಕಾರಣ ಮಾಡುತ್ತಿದೆ ಎಂದು ವ್ಹಿಎಚ್‌ಪಿ ಪ್ರಾಂತ್ಯ ಪ್ರಮುಖ ಶೇಖರಗೌಡ ಹರನಾಳ ಹೇಳಿದರು.ಸಿಂದಗಿ ವಿಶ್ವ ಹಿಂದು ಪರಿಷದ್ ವತಿಯಿಂದ ಕರ್ನಾಟಕ ಸರಕಾರವು ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಶೇ.೪ರಷ್ಟು ಮೀಸಲಾತಿ ನೀಡುವ ವಿಧೇಯಕಕ್ಕೆ ಒಪ್ಪಿಗೆ ನೀಡದಂತೆ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿ, ಕಾಂಗ್ರಸ್ ಸರಕಾರ ಮತ ಬ್ಯಾಂಕ ರಾಜಕಾರಣ ಮಾಡುಲು ಮುಂದಾಗಿದೆ. ನಾಗರಿಕ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿಯಲ್ಲಿ ಒದಗಿಸುವ ಕಾರ್ಯವು ರಾಷ್ಟ್ರೀಯ ಸಮಗ್ರತ ಏಕತೆ ಮತ್ತು ಸಾರ್ವಭೌಮತೆಗೆ ಅಪಾಯನ್ನುಂಟುಮಾಡುತ್ತದೆ ಎಂದರು.ಈ ವೇಳೆ ತಾಲೂಕ ವ್ಹಿಎಚ್‌ಪಿ ತಾಲೂಕಾಧ್ಯಕ್ಷ ಡಾ.ಶರಣಗೌಡ ಬಿರಾದಾರ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರವು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸಾರ್ವಜನಿಕ ಗುತ್ತಿಗೆಗಳಲ್ಲಿ ಮುಸ್ಲಿಂರಿಗೆ ಶೇ.೪ರಷ್ಟು ಮೀಸಲಾತಿಯನ್ನು ಪರಿಚಯಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ.…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನಮ್ಮ ಸಂಸ್ಥೆಯ ವತಿಯಿಂದ ಹೋಳ್ಕರ್ ಅವಾರ್ಡ ಪರೀಕ್ಷೆಯನ್ನು ನಡೆಸುತ್ತಿದ್ದೇವೆ ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.ಪಟ್ಟಣದ ವಿದ್ಯಾನಗರದಲ್ಲಿರುವ ಅಭ್ಯುದಯ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.ಏ.೧೦ ರಂದು ಬೆಳಿಗ್ಗೆ ೧೧-೩೦ ಕ್ಕೆ ಪಟ್ಟಣದ ಅಭ್ಯುದಯ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದ್ದು, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ ಹೊಂದಿದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ಪರೀಕ್ಷೆಯಲ್ಲಿ ಪಾಸಾದ ಮೊದಲ ೧೦ ವಿದ್ಯಾರ್ಥಿಗಳಿಗೆ ೨ ವರ್ಷಗಳ ಕಾಲ ಊಟ ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುವದು ಮತ್ತು ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳಿಗೆ ಅಂಕಗಳ ಮೇಲೆ ರಿಯಾಯತಿ ನೀಡಲಾಗುವದು. ಮತ್ತು ಈ ಪರೀಕ್ಷೆಯನ್ನು ಪ್ರಥಮ ಪಿಯುಸಿ ಪ್ರವೇಶ ಪರೀಕ್ಷೆ ಎಂದು ಪರಿಗಣಿಸಲಾಗುವದು. ಸ್ಟೇಟ್, ಸಿಬಿಎಸ್‌ಇ ಮತ್ತು ಐಸಿಎಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಬಹುದಾಗಿದ್ದು, ಆಧಾರ ಕಾರ್ಡ, ಎಸ್‌ಎಸ್‌ಎಲ್‌ಸಿ ಹಾಲ್ ಟಿಕೆಟ್ ಕಡ್ಡಾಯವಾಗಿ ತರಬೇಕು. ಆಸಕ್ತ ವಿದ್ಯಾರ್ಥಿಗಳು ಈ…

Read More