Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಆಯುಷ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ Global Wellbeing Confluence- ಜಾಗತಿಕ ಯೋಗಕ್ಷೇಮ ಸಂಗಮ ನಾಳೆ ದಿ. 11 ಶುಕ್ರವಾರದಿಂದ ನಾಲ್ಕು ದಿನಗಳಕಾಲ ನಡೆಯಲಿದೆ.ದಿ.11 ಶುಕ್ರವಾರ ನಡೆಯಲಿರುವ ಸಮಾವೇಶದಲ್ಲಿ ಆಯುಷ್ ವೈದ್ಯರ ವೈದ್ಯಕೀಯೇತರ ವಿಶೇಷ ಸಾಧನೆಗಾಗಿ ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಮತ್ತು ಆಲಮೇಲದ ಡಾ. ಸಮೀರ ಹಾದಿಮನಿಯವರನ್ನು ಗೌರವಿಸಲಿದೆ.ಡಾ.ಮಹಾಂತೇಶ ಬಿರಾದಾರ ವೃತ್ತಿಯಲ್ಲಿ ವೈದ್ಯರಾಗಿದ್ದು, ಹಾಫ್ ಮ್ಯಾರಥಾನ್ ಪಟುವಾಗಿ ಮತ್ತು ಸೈಕ್ಲಿಂಗ್ ಪಟುವಾಗಿ ದೇಶದಾದ್ಯಂತ ಹಲವಾರು ಸ್ಪರ್ಧೆಗಳಲ್ಲಿ, ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಫ್ರೀಲ್ಯಾನ್ಸ್ ಜರ್ನಲಿಸ್ಟ್ ಆಗಿದ್ದು ಸದ್ಯ ಬೃಹತ್ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಆಲಮೇಲದ ಡಾ. ಸಮೀರ ಹಾದಿಮನಿ ಆಯುಷ್ ವೈದ್ಯರ ವೇತನ ಪರಿಷ್ಕರಣೆ, ನೌಕರಿ ಕಾಯಂಮಾತಿ, ನೇಮಕಾತಿ, ಖಾಸಗಿ ಆಯುಷ್ ವೈದ್ಯರ ರಕ್ಣಣೆ ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಸಾರ್ವಜನಿಕ ಹಿತಾಸಕ್ತಿ ಪತ್ರಗಳನ್ನು ಬರೆಯುವುದರ ಮೂಲಕ ಜಾಗೃತಿ…
ಶಾಸಕ ಜಗದೀಶ ಗುಡಗುಂಟಿ ಯಿಂದ ಜಿಲ್ಲಾಧಿಕಾರಿ ಜಾನಕಿ ಬೇಟಿ | ನೀರು ಬಿಡುವ ಭರವಸೆ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಕ್ಷೇತ್ರದ ಕೃಷ್ಣಾ ನದಿಬತ್ತಿರುವ ಕಾರಣ ತೀರದಲ್ಲಿರುವ ಹಲವಾರು ಹಳ್ಳಿಗಳ ಜನರು ಹಾಗೂ ಜಾನುವಾರುಗಳು ಸಂಕಷ್ಟದಲ್ಲಿರುವುದನ್ನು ಕಂಡು ಶಾಸಕ ನಾಡೋಜ ಜಗದೀಶ ಗುಡಗುಂಟಿಯವರು ಹಾಗೂ ರೈತ ಮುಖಂಡರಾದ ಈಶ್ವರ ಆದೆಪ್ಪನವರ, ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಯಮನೂರ ಮೂಲಂಗಿ ಜಿಲ್ಲಾಧಿಕಾರಿ ಜಾನಕಿ ಅವರನ್ನು ಬೇಟಿಯಾಗಿ ಗಂಭೀರವಾಗಿರುವ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿ ಕೊಟ್ಟರು.ಜಿಲ್ಲಾಧಿಕಾರಿಗಳು ಪ್ರಾದೇಶಿಕ ಆಯುಕ್ತ ಶೆಟ್ಟೆನ್ನವರ ಅವರೊಂದಿಗೆ ಮಾತನಾಡುವದಾಗಿ ಹೇಳಿದರು.ಶಾಸಕ ಜಗದೀಶ ಗುಡಗುಂಟಿಯವರು ಆಯುಕ್ತರೊಂದಿಗೆ ಮಾತನಾಡಿ, ಪರಿಸ್ಥಿತಿಯ ಬಗ್ಗೆ ತಿಳಿಹೇಳಿದಾಗ ಅವರು ಹಿಪ್ಪರಗಿ ಡ್ಯಾಮ್ ನಿಂದ ನದಿಗೆ ನೀರನ್ನು ಬಿಡುವುದಾಗಿ ತಿಳಿಸಿದರು.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಕರ್ನಾಟಕ ಸರಕಾರ, ಕಾಲೇಜು ಮತ್ತು ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಗೃಹ ಮಂಡಳಿ ವತಿಯಿಂದ 2023-24 ನೇ ಸಾಲಿನ ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಭೋದನಾ ಕೊಠಡಿ ಮತ್ತು ಶೌಚಾಲಯ ಕಟ್ಟಡ ನಿರ್ಮಾಣದ ಗುತ್ತಿಗೆ ಮೊತ್ತ ರೂ.114.00 ಲಕ್ಷ ಕಾಮಗಾರಿ ಭೂಮಿ ಪೂಜಾ ನೇರವೇರಿಸಿದ ಶಾಸಕ ಜಗದೀಶ ಗುಡಗುಂಟಿ. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆವರಣದಲ್ಲಿ ಪೂಜಾ ನೇರವೇರಿಸಿ ಮಾತನಾಡಿದ ಅವರು ಗುತ್ತಿಗೆ ತೆಗೆದುಕೊಂಡವರು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಸರಕಾರಕ್ಕೆ ಸತತ ಒತ್ತಡ, ಪ್ರಯತ್ನದಿಂದ ವಿಶೇಷ ಅನುದಾನ ಬಂದಿದೆ. ಸರ್ಕಾರ ಆದೇಶದ ಪ್ರಕಾರ ಏ.8 ರಂದು ಬೆಳಿಗ್ಗೆ 10 ಘಂಟೆಗೆ ಸಂಸ್ಕೃತಿಕ ಜಾನಪದ ಉತ್ಸವ ಜರುಗಲಿದೆ ಎಲ್ಲರೂ ಪಾಲ್ಗೊಳ್ಳಬೇಕು. 2024-25ನೇ ಸಾಲಿನ ಎರಡನೇ ಹಂತದ 2ಕೋಟಿ ಅನುದಾನ ಮಂಜುರಾಗಿದ್ದು ಅದರ ಕಾಮಗಾರಿ ಕುರಿತು ಕಾಲೇಜು ಅಭಿವೃದ್ಧಿ ಚಟುವಟಿಕೆಗೆ ಬಳಸಲಾಗುವುದು ಮತ್ತು ಇನ್ನಷ್ಟು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ…
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಬೆಳಗಾವಿಇಂಗ್ಲೀಷ್ ಉಪನ್ಯಾಸಕರುಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗುಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆಎಲ್ಲರೊಳಗೊಂದಾಗು ಮಂಕುತಿಮ್ಮ.ಎಲ್ಲರೊಳಗೆ ಒಂದಾಗುವ ಬದುಕಿನ ಸ್ವಾರಸ್ಯಕರ ಗುಟ್ಟನ್ನು ಡಿವಿಜಿಯವರು ಈ ಕಗ್ಗದಲ್ಲಿ ಬಹು ಚೆನ್ನಾಗಿ ಹೇಳಿದ್ದಾರೆ. ಬೆಟ್ಟದ ಅಡಿಯಲ್ಲಿರುವ ಹುಲ್ಲಿನಂತಿರು. ಆ ಹುಲ್ಲನ್ನು ಹಸು ಕರುಗಳು ತಿಂದು ತೃಪ್ತಿ ಪಡುವಂತಿರಲಿ. ಮನೆಗೆ ಸುಗಂಧ ಸೂಸುವ ಮಲ್ಲಿಗೆಯಂತಿರು. ಎಲ್ಲರೂ ನಿನ್ನನ್ನು ಎದುರು ನೋಡುವಂತಿರು. ವಿಧಿ ನಿನ್ನ ಮೇಲೆ ಕಷ್ಟಗಳ ಮಳೆ ಸುರಿಸಿದಾಗ್ಯೂ ಕುಗ್ಗದೆ, ಬಗ್ಗದೆ, ಕುಸಿಯದೆ, ಕಂಗಾಲಾಗದೇ ದೃಢವಾಗಿರು. ಕಷ್ಟಗಳು ನಿನ್ನನ್ನು ಏನೂ ಮಾಡಲಾರವು. ದೀನ ದುರ್ಬಲರಿಗೆ ಆಸರೆಯನ್ನು ಕೊಡು. ಬೆಲ್ಲ ಸಕ್ಕರೆಯಂತೆ ಸಿಹಿಯಾಗಿರು. ಯಾವುದೇ ಸಂದರ್ಭವಿರಲಿ, ಸನ್ನಿವೇಶವಿರಲಿ, ಎಲ್ಲರೊಳಗೆ ಒಂದಾಗಿ ಬಾಳು. ಪರೋಪಕಾರಿಯಾಗಿ ಜೀವನ ಸಾರ್ಥಕಗೊಳಿಸಿಕೊ ಎಂಬ ದಿವ್ಯ ಸಂದೇಶವನ್ನು ನೀಡಿದ್ದಾರೆ. ಮಹಾನ್ ಬದುಕುಮಾನವ ಜನ್ಮ ಸಿಗುವುದು ದುರ್ಲಭ. ನಮಗೆ ಮಾನವ ಜನ್ಮ ಸಿಕ್ಕಿದ್ದು ಹಿಂದಿನ ಜನ್ಮದ ಪುಣ್ಯದ ಫಲ. ‘ಮಾನವ ಜನ್ಮ ದೊಡ್ಡದು ಇದು…
ಲೇಖನ- ಶ್ರೀಮತಿ ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಗೈಡ್ ಎಂಬುದು ಕೇವಲ ಒಂದು ಗುಂಪಲ್ಲ.. ನಿರಂತರ ಕಲಿಕೆಯ ಸಾಹಸಮಯ ಮತ್ತು ಸೇವಾ ಮನೋಭಾವವನ್ನು ನಮ್ಮಲ್ಲಿ ತುಂಬುವ ಪಯಣ. ಸ್ಕೌಟ್ಸ್ ಇಲ್ಲವೇ ಗೈಡ್ ನಲ್ಲಿ ಮಕ್ಕಳನ್ನು ಭರ್ತಿ ಮಾಡಿಕೊಂಡಾಗ ಅವರಲ್ಲಿ ಕ್ರಿಯಾಶೀಲ ಚಟುವಟಿಕೆಗಳು, ಕ್ಯಾಂಪುಗಳಲ್ಲಿ ಪ್ರತಿದಿನ ಕವಾಯತುಗಳು ಬೇರೆಯವರಿಗೆ ಸಹಾಯ ಮಾಡುವುದು ಮತ್ತು ನಿಗದಿತ ದೈನಂದಿನ ಕಾರ್ಯಕ್ರಮಗಳು ನಮಗೆ ದೊರೆಯುತ್ತವೆ.ಸ್ಕೌಟ್ಸ್ ಅಂಡ್ ಗೈಡ್ಸ್ ನ ಪಯಣದ ಆರಂಭದಲ್ಲಿನಾವು ನಮಗೆ ಸಾಧ್ಯವಿದ್ದಷ್ಟು ನಿಯಮಗಳನ್ನು ಪಾಲಿಸಿ ಇತರರಿಗೆ ಸಹಾಯ ಮಾಡುವ ಪ್ರತಿಜ್ಞೆಯನ್ನು ಮಾಡಬೇಕಾಗುತ್ತದೆ.ಸ್ಕೌಟ್ಸ್ ಮತ್ತು ಗೈಡ್ ನಲ್ಲಿ ಪ್ರಾರಂಭಿಕ ಹಂತವನ್ನು ಪ್ರವೇಶ ಎಂಬ ಹೆಸರಿನಲ್ಲಿ ಆರಂಭಿಸುತ್ತಾರೆ. ನೈಜ ಜೀವನದ ವಿವಿಧ ಘಟನೆಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳುವ ಮತ್ತು ಹೊಸ ಹೊಸ ಕೌಶಲಗಳನ್ನು ಕಲಿಯುವ ರೀತಿಯಲ್ಲಿ ನಮಗೆ ತರಬೇತಿ ನೀಡಲಾಗುತ್ತದೆ. ವಿವಿಧ ಹಂತಗಳ ಪೂರೈಸುವುದುತರಗತಿಗಳಲ್ಲಿ ಪಾಸಾಗಿ ಮುಂದೆ ಹೋಗುವಂತೆ ಗೈಡ ನಲ್ಲಿಯೂ ಕೂಡ ಹಲವಾರು ಹಂತಗಳನ್ನು ಪೂರೈಸಲೇಬೇಕಾಗುತ್ತದೆ.1.ಪ್ರಥಮ ಸೋಪಾನ..ಮೂಲಭೂತವಾದ ರಕ್ಷಣಾ ಕ್ರಮಗಳು, ಪ್ರಥಮ…
ದಿನಕ್ಕೊಂದು ವಚನ ಚಿಂತನೆ- ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಆದಯ್ಯ ಒಬ್ಬ ಶ್ರೇಷ್ಠ ಮಟ್ಟದ ಅನುಭಾವಿ ವಚನಕಾರ ತನ್ನ ವಚನಗಳಲ್ಲಿ ಕೆಲ ಬೆಡಗುಗಳನ್ನು ಬಳಸಿ ವಚನಗಳ ಮೌಲ್ಯ ಅರ್ಥವನ್ನು ವಿಸ್ತರಿಸುವ ಮತ್ತು ಆಧ್ಯಾತ್ಮಿಕ ಅನುಭವನ್ನು ಪುಟ್ಟ ವಚನಗಳಲ್ಲಿ ಅಡಗಿಸುವ ಕಲಾ ಕೌಶಲ್ಯವನ್ನು ಹೊಂದಿದ್ದಾನೆ. ಒಬ್ಬನಿಗೆ ರೂಹಿಲ್ಲ, ಒಬ್ಬನಿಗೆ ರೂಹುಂಟು,ಒಬ್ಬನ ರೂಹು ಹೋಗುತ್ತ ಬರುತ್ತದೆಮೂವರನೊಂದೆಡೆಗೆ ತಂದಡೆ ಏನಹರೆಂಬುದ ನೋಡಿಕೊಳ್ಳಿರಣ್ಣಾ. ಕಂಡಡೆ ಉಣಲಿಲ್ಲ ಕಾಣದಿರ್ದಡೆ ಉಣದಿರಲಿಲ್ಲ. ಇದೇನು ಸೋಜಿಗವಯ್ಯಾ ಸೌರಾಷ್ಟ್ರ ಸೋಮೇಶ್ವರಾ. ಒಬ್ಬನಿಗೆ ರೂಹಿಲ್ಲ, ಒಬ್ಬನಿಗೆ ರೂಹುಂಟು,ಒಬ್ಬನ ರೂಹು ಹೋಗುತ್ತ ಬರುತ್ತದೆ. ಪ್ರಸಕ್ತ ಈ ವಚನದಲ್ಲಿ ನಿರಾಕಾರ ಸಾಕಾರದ ರೂಪಗಳ ಮಧ್ಯ ಲಿಂಗವೆಂಬ ಆಕಾರವು ನಿರಾಕರವಾಗುತ್ತ ತನ್ನ ರೂಪದ ಹಂಗು ಹರಿದುಕೊಳ್ಳುತ್ತಾ ಮತ್ತೆ ಮತ್ತೆ ಆಕಾರವಾಗಿ ಕರಸ್ಥಲಕ್ಕೆ ಬಂದು ನಿರಾಕಾರದ ತತ್ವಕ್ಕೆ ಸಾಗುವ ಸುಂದರ ಪಯಣವು ಅದ್ಭುತವಾಗಿದೆ ಎಂದಿದ್ದಾನೆ ಆದಯ್ಯ. ಮೂವರನೊಂದೆಡೆಗೆ ತಂದಡೆ ಏನಹರೆಂಬುದ ನೋಡಿಕೊಳ್ಳಿರಣ್ಣಾ. ಇಂತಹ ಆಕಾರ ಸಾಕಾರ ಮತ್ತು ನಿರಾಕಾರ ರೂಪದಲ್ಲಿ ಕಂಡು ಕಾಣದರಿಯದೇ ಕೂಡುವ ಮೂರು ಸ್ಥಿತಿಗಳನ್ನು ಒಂದೆಡೆ…
ಉದಯರಶ್ಮಿ ದಿನಪತ್ರಿಕೆ ಹೊನವಾಡ: ಗ್ರಾಮದ ಕು.ಶಿವರಾಜ ಬಾಳಪ್ಪ ಸಿದ್ನಾಥಇಂಡಿ ತಾಲ್ಲೂಕಿನ ಗೋಳಸಾರ ಸರಕಾರಿ ಪ್ರಥಮ ದರ್ಜೆ ಕಾಲೇಜು ಗೋಳಸಾರ ಕಲಾ ವಿಭಾಗದಲ್ಲಿ 494 ಅಂಕಗಳನ್ನು ಪಡೆದು (ಶೇ.82%) ತೇರ್ಗಡೆಯಾಗಿ ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಅಹಮದಾಬಾದ್: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧದ ಹೋರಾಟವನ್ನು ‘ಎರಡನೇ ಸ್ವಾತಂತ್ರ್ಯ ಸಂಗ್ರಾಮ’ ಎಂದು ಕರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರ ಕೋಮುವಾದ, ಅನ್ಯಾಯ ಮತ್ತು ಅಸಮಾನತೆಯನ್ನು ಶಾಶ್ವತಗೊಳಿಸುತ್ತಿದೆ ಎಂದು ಆರೋಪಿಸಿದರು.ಎಐಸಿಸಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಮೋದಿ ಸರ್ಕಾರವನ್ನು ವಸಾಹತುಶಾಹಿ ಆಡಳಿತದೊಂದಿಗೆ ಹೋಲಿಸಿದರು. ಈ ಹಿಂದೆ ಬ್ರಿಟಿಷರು ಮಾಡಿದಂತೆ ಈ ಸರ್ಕಾರವೂ ಕೋಮುವಾದವನ್ನು ಬಳಸಿಕೊಳ್ಳುತ್ತಿದೆ. ಆದರೆ ಇದರ ವಿರುದ್ಧ ಕಾಂಗ್ರೆಸ್ ಹೋರಾಡಿ ಗೆಲ್ಲುತ್ತದೆ ಎಂದು ಪ್ರತಿಜ್ಞೆ ಮಾಡಿದರು.ಬಿಜೆಪಿಯ ಹನ್ನೊಂದು ವರ್ಷಗಳ ಆಡಳಿತವನ್ನು ಟೀಕಿಸಿದ ಅವರು, ಸಂವಿಧಾನದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ವಿರೋಧ ಪಕ್ಷಗಳ ಧ್ವನಿ ಹತ್ತಿಕ್ಕಲಾಗುತ್ತಿದೆ. ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನಿರಾಕರಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಚುನಾವಣಾ ಆಯೋಗ(ಇಸಿ) ಸೇರಿದಂತೆ ಯಾವುದೇ ಸಂಸ್ಥೆಯೂ ಪ್ರಧಾನಿಯಡಿ ಸುರಕ್ಷಿತವಾಗಿಲ್ಲ. ವಿರೋಧ ಪಕ್ಷಗಳನ್ನು ಸೋಲಿಸಲು ಸಂಪೂರ್ಣ ಇವಿಎಂ ವ್ಯವಸ್ಥೆಯನ್ನು ಬಿಜೆಪಿ ವಿನ್ಯಾಸಗೊಳಿಸಿದೆ. ಚುನಾವಣಾ ವಂಚನೆ ನಡೆಯುತ್ತಿದೆ.…
ಉದಯರಶ್ಮಿ ದಿನಪತ್ರಿಕೆ ಚಡಚಣ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯರಾದ ಹೀನಾ ಎಸ್ ಸೈಯದರವರು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿದ್ದಾರೆ.ವಿಜಯಪುರ ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ೧೦೦ ಮೀಟರ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಹೀನಾ ಸೈಯದರವರು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಶಿಕ್ಷಕಿಯ ಈ ಸಾಧನೆಗೆ ಶಾಲಾ ಮುಖ್ಯ ಗುರುಗಳಾದ ಆರ್.ಎನ್.ಹತ್ತಳ್ಳಿ, ಎಸ್ಡಿಎಂಸಿ ಅಧ್ಯಕ್ಷರಾದ ಅಶೋಕ ಬಿಜ್ಜರಗಿ, ಸದಸ್ಯರುಗಳು, ಸಹ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸರಣಿ ಅಪಘಾತದಲ್ಲಿ ತಾಲೂಕಿನ ಕಾಳಗಿ ತಾಂಡಾದ ಬಿಎಸ್ಎಫ್ ಯೋಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಬಸ್ ನಿಲ್ದಾಣ ಬಳಿ ನಡೆದಿದೆ.ಮೃತ ಯೋಧನನ್ನು ಮೌನೇಶ ರಾಠೋಡ(೩೫)ಎಂದು ಗುರುತಿಸಲಾಗಿದೆ. ಕಳೆದ ೧೩ ವರ್ಷಗಳಿಂದ ಸೇವೆಯಲ್ಲಿದ್ದ ಮೌನೇಶ ರಜೆಯ ಮೇಲೆ ಬಂದಿದ್ದರು ಎನ್ನಲಾಗಿದೆ. ಮೃತರು ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ.ಮೃತ ಯೋಧನ ಅಂತ್ಯಕ್ರೀಯೆ ಎ೧೦ ರಂದು ಬೆಳಿಗ್ಗೆ ಸ್ವಗ್ರಾಮ ಕಾಳಗಿ ತಾಂಡಾದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವದಾಗಿ ಮೂಲಗಳಿಂದ ತಿಳಿದು ಬಂದಿದೆ.