Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ ಪಾಟೀಲ್ಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.ವಜ್ರಾ ಆಚಾರಿ ಶೇ.೯೭.೫ ಅಂಕಗಳನ್ನು ಕಾಲೇಜಿಗೆ ಪ್ರಥಮ, ಸಾನಿಕಾ ಗೂಳಣ್ಣವರ ಶೇ.೯೭.೧೬ ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ, ಸಂಪತ್ತಕುಮಾರ ಹುಗ್ಗಿ, ಸ್ನೇಹಾ ಅಮಾತಿ ಮತ್ತು ಯಶೋಧಾ ಸೊರಕೊಪ್ಪ ತಲಾ ಶೇ.೯೬.೮೩% ಅಂಕಗಳನ್ನು ಪಡೆದು ಕಾಲೇಜಿಗೆ ತೃತಿಯ ಸ್ಥಾನ ಪಡೆದು ಸಂಭ್ರಮಿಸಿದರೆ, ಪರೀಕ್ಷಗೆ ಹಾಜರಾದ ಒಟ್ಟು ೧೧೨೦ ವಿದ್ಯಾರ್ಥಿಗಳಲ್ಲಿ ೬೫೮ ವಿದ್ಯಾರ್ಥಿಗಳು ಡಿಸ್ಟಿಂಗ್ಷನ್, ೪೩೬ ವಿದ್ಯಾರ್ಥಿಗಳು ಪ್ರಥಮ, ೪ ವಿದ್ಯಾರ್ಥಿಗಳು ದ್ವಿತಿಯ ದರ್ಜೆಯಲ್ಲಿ ಉತ್ತಿರ್ಣರಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಎಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಕೃಷ್ಣಾ ಮೇಲ್ದಂಡೆ ಅಧಿಕಾರಿಗಳಿಗೆ ಮತ್ತು ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಭೂಬಾಲನ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.ಪುರಸಭೆಯವರು ನಗರದಲ್ಲಿ ಸ್ವಚ್ಚತೆ ಕಾಪಾಡಬೇಕು ಮತ್ತು ಪಶು ಸಂಗೋಪನಾ ಇಲಾಖೆಯವರು ದನ ಮತ್ತು ಜಾನುವಾರುಗಳಿಗೆ ಮೇವಿನ ತೊಂದರೆಯಾಗದಂತೆ ನಿಗಾವಹಿಸಲು ತಿಳಿಸಿದರು.ಸಿಇಒ ರಿಷಿ ಆನಂದ, ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತçದ ತಹಸೀಲ್ದಾರ ಬಿ.ಎಸ್.ಕಡಕಬಾವಿ ಮಾತನಾಡಿದರು.ಜಿಲ್ಲಾಧಿಕಾರಿಗಳು ವಿವಿಧ ಕಾಮಗಾರಿಗಳಾದ ಮೇಘಾ ಮಾರುಕಟ್ಟೆ, ಕೃಷಿ ವಿಜ್ಞಾನ ಕೇಂದ್ರ, ತಾಲೂಕಾ ಆಸ್ಪತ್ರೆ, ಮಿನಿ ವಿಧಾನಸೌಧಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಇಂಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೆಘಾ ಮಾರುಕಟ್ಟೆ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಸಂಬಂಧಿಸಿದವರಿಗೆ ಅವರು ಸೂಚನೆ ನೀಡಿದರು.ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಲಿಂಬೆ ಅಭಿವೃದ್ದಿ ಮಂಡಳಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.ಮಹಾವೀರ ವೃತ್ತಕ್ಕೆ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ನೂತನ ಬಸ್ ನಿಲ್ದಾಣದ ನಿರ್ಮಾಣ ಹಾಗೂ ವೀರಶರಣ ಮಡಿವಾಳ ಮಾಚಿದೇವ ನಾಮಕರಣಕ್ಕೆ ಕಾರಣರಾದ ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಅರುಣ ಶಹಾಪೂರ ಅವರ ಕಾರ್ಯ ಶ್ಲಾಘನೀಯ ಎಂದು ಧುರೀಣ ಬಿ.ಕೆ.ಪಾಟೀಲ ಹೇಳಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಸಾರ್ವಜನಿಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹಾಗೂ ವಿಧಾನ ಪರಿಷತ್ತಿನ ಮಾಜಿಸದಸ್ಯ ಅರುಣ ಶಹಾಪೂರ ಇಬ್ಬರು ನಾಯಕರು ತಾವು ನುಡಿದಂತೆ ನಡೆಯುವುದರ ಮೂಲಕ ನೂತನ ಬಸ್ ನಿಲ್ದಾಣ ನಿರ್ಮಾಣ ಹಾಗೂ ನಿಲ್ದಾಣಕ್ಕೆ ನಾಮಕರಣ ಪ್ರಕ್ರಿಯೆಯಲ್ಲಿ ಜನತೆಯ ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸಿ ಬಹುದಿನದ ಪ್ರಯತ್ನಗಳಿಗೆ ಸಹಕಾರ ನೀಡಿ ತಮ್ಮ ಕರ್ತವ್ಯಪ್ರಜ್ಞೆ ತೋರಿದ್ದಾರೆ . ಪಟ್ಟಣದ ಜನತೆ ಅವರಿಗೆ ಚಿರರುಣಿಯಾಗಿದೆ ಎಂದರು.ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಸಂಗಪ್ಪ ತಡವಲ್, ಗೋಲ್ಲಾಳ ಬಿರಾದಾರ, ರಾವುತ ಅಗಸರ, ಮಡುಗೌಡ ಬಿರಾದಾರ, ಸೋಮು ದೇವೂರ, ರಮೇಶ ಹಡಪದ, ವಿನೋದ ಚವ್ಹಾಣ, ಮಹಾಂತೇಶ ಬಿರಾದಾರ, ಮಲ್ಲಪ್ಪ…
ನೀರು ಪೋಲಾಗದಂತೆ ನಿಗಾ ವಹಿಸಿ :ಡಿಸಿ ಟಿ.ಭೂಬಾಲನ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕುಡಿಯುವ ನೀರಿಗಾಗಿ ಆಲಮಟ್ಟಿ ಜಲಾಶಯದಿಂದ ಕಾಲುವೆ ಜಾಲಗಳ ಮೂಲಕ ಕೆರೆಗಳನ್ನು ತುಂಬಿಸಲಾಗುತಿದ್ದು, ನೀರಿನ ವ್ಯಯವಾಗದಂತೆ ನೋಡಿಕೊಂಡು ನಿಗಾ ವಹಿಸಲು ರಚಿಸಲಾದ ಸಮಿತಿ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದ್ದಾರೆ.ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದ್ದ ಅವರು, ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಕುಡಿಯುವ ನೀರಿಗೆ ಪ್ರಥಮಾದ್ಯತೆ ನೀಡಬೇಕು. ಜಿಲ್ಲೆಯಾದ್ಯಂತೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಉದ್ದೇಶಕ್ಕಾಗಿ ಆಲಮಟ್ಟಿ ಜಲಾಶಯದ ಸಂಗ್ರಹಣೆಯಲ್ಲಿ ಕೆರೆಗಳನ್ನು ಭರ್ತಿಗೊಳಿಸಲು ೨.೫೦ ಟಿ.ಎಂ.ಸಿ.ನೀರು ಕಾಲುವೆ ಜಾಲಗಳ ಮೂಲಕ ಕೆರೆಗಳನ್ನು ನೀರು ತುಂಬಿಸಲಾಗುತ್ತಿದ್ದು, ಜಲಾಶಯದಿಂದ ಹರಿಬಿಡಲಾದ ನೀರು ಉದ್ದೇಶಿತ ಸ್ಥಳಕ್ಕೆ ತಲುಪುವಂತೆ ನಿಗಾವಹಿಸಬೇಕು. ಈ ಸಂದರ್ಭದಲ್ಲಿ ನೀರಿನ ವ್ಯಯವಾಗದಂತೆ ನೋಡಿಕೊಳ್ಳಲು ರಚಿಸಲಾದ ಸಣ್ಣ ನೀರಾವರಿ ಇಲಾಖೆ, ಕುಡಿಯುವ ನೀರು ಸರಬರಾಜು ಇಲಾಖೆ,…
ವಿಜಯಪುರ ಜಿಲ್ಲಾಡಳಿತದಿಂದ ಭಗವಾನ ಮಹಾವೀರರ ಜಯಂತಿ ಆಚರಣೆ | ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜೈನ ಧರ್ಮದ ೨೪ನೇ ತೀರ್ಥಂಕರಾದ ಭಗವಾನ ಮಹಾವೀರ ಅವರ ಚಿಂತನೆಯ ಸತ್ಯ,ಅಹಿಂಸೆ, ಕರುಣಾಭಾವದಂತಹ ಅವರ ಬೋಧನೆಯ ತತ್ವಗಳು ಸಾರ್ವಕಾಲಿಕವಾಗಿವೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.ಗುರುವಾರ ನಗರದ ಕಂದಗಲ್ ಶ್ರೀ ಹನಮಂತರಾಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಭಗವಾನ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಹಿಂಸೆಯ ಆಚರಣೆಯ ಮಾರ್ಗದಲ್ಲಿ ಜೀವನದ ಸಾಕ್ಷಾತ್ಕಾರದ ಪಥ ತೋರಿಸಿದ ಮಹಾಪುರುಷರಾಗಿದ್ದಾರೆ.ಸಕಲ ಜೀವಿಗಳಿಗೂ ಒಳಿತು ಬಯಸಿದ ಮಹಾವೀರರು, ಆ ದಿಸೆಯಲ್ಲಿ ಜೀವನ ಮುಡುಪಾಗಿಟ್ಟಿದ್ದ ಅವರು, ಅಹಿಂಸೆ, ತ್ಯಾಗ ಹಾಗೂ ವೈರಾಗ್ಯದ ಸಾಕಾರಮೂರ್ತಿಯಾಗಿದ್ದರು. ಸಂತರು, ಸತ್ಪುರುಷರು, ದಾರ್ಶನಿಕರ ಜೀವನಾದರ್ಶಗಳು ಹಾಗೂ ಅವರು ನೀಡಿದ ಸಂದೇಶಗಳನ್ನು ಅರಿತುಕೊಂಡು ಅಳವಡಿಸಿಕೊಳ್ಳಬೇಕಿದೆ ಎಂದರು.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ಭಗವಾನ ಮಹಾವೀರರ ತತ್ವ ಸಿದ್ಧಾಂತಗಳನ್ನು…
ರಚನೆ- ಡಾ. ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಜಗದ ಮೇಲೊಂದುಹಿರಿದಿಪ್ಪ ಕಲ್ಯಾಣವೆಂಬಪಟ್ಟಣದಲ್ಲಿ ನೆರೆದರಯ್ಯಅಸಂಖ್ಯಾತ ಶರಣರು ನಿತ್ಯ ಕಾಯಕ ದಾಸೋಹಲಿಂಗ ಜಂಗಮ ಸೇವೆಬರೆದರಯ್ಯ ಬಂಡಾಯದಲಕ್ಷ ಲಕ್ಷ ವಚನಗಳನ್ನು ಬಸವಣ್ಣ ಕಟ್ಟಿದನಯ್ಯಾಹಿರಿಯ ಅನುಭವ ಮಂಟಪವಚರ್ಚೆ ವಾದ ಶೂನ್ಯ ಪೀಠ ಇಲ್ಲೊಬ್ಬ ಅವಿವೇಕಿಅನುಭವ ಮಂಟಪ ಇರಲಿಲ್ಲವೆಂದುಹೇಳಿದಳುಅರೆ ಹುಚ್ಚನೊಬ್ಬ ಅವಳನ್ನುಸಮರ್ಥಿಸುತ್ತಿರುವನಯ್ಯ ಅನುಭವ ಮಂಟಪಇಲ್ಲ ಎನ್ನುವ ಭಂಡ ಮೂಳರಕರೆದು ಎಡ ಪಾದದಕೆರವ ತೆಗೆದು ಹರಿಯುವಹಾಗೆ ಹೊಡೆ ಎಂದ ನಮ್ಮಬಸವ ಪ್ರಿಯ ಶಶಿಕಾಂತ
ಹೋರಾಟಕ್ಕೆ ಸಜ್ಜಾದ ದಳಪತಿಗಳು | ಏಪ್ರಿಲ್ 12 ರಂದು ಬೃಹತ್ ಪ್ರತಿಭಟನೆ | ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವ ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಬೆಲೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಜನಕ್ರೋಶ ಅಭಿಯಾನ ನಡೆಸುತ್ತಿರುವ ವೇಳೆಯೇ, ಅದರ ಮಿತ್ರ ಪಕ್ಷ ಜೆಡಿಎಸ್ ಬುಧವಾರ ‘ಸಾಕಪ್ಪ ಸಾಕು, ಕಾಂಗ್ರೆಸ್ ಸರ್ಕಾರ’ (ಸಾಕಾದರೆ ಸಾಕು ಕಾಂಗ್ರೆಸ್ ಸರ್ಕಾರ) ಅಭಿಯಾನ ಆರಂಭಿಸಿದೆ.ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ‘ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ’ ಎಂಬ ಅಭಿಯಾನ ಆರಂಭ ಮಾಡಿದ್ದು, ಈ ಅಭಿಯಾನ ತೀವ್ರ ಸಂಚಲನ ಸೃಷ್ಟಿಸಿದೆ. ಈ ಅಭಿಯಾನದ ಬಗ್ಗೆ ಜೆಪಿ ಭವನದಲ್ಲಿ ಮಾಹಿತಿ ನೀಡಿದ ನಿಖಿಲ್ ಕುಮಾರಸ್ವಾಮಿ ಅವರು, https://www.saakappasaaku.com ಎಂಬ ನೂತನ ವೆಬ್‌ಸೈಟ್ ಲೋಕಾರ್ಪಣೆ ಮಾಡಿದರು.ಈ ವೆಬ್ ತಾಣದಲ್ಲಿ ಜೆಡಿಎಸ್ ಕಾರ್ಯಕರ್ತರು ಮಾತ್ರವಲ್ಲ, ರಾಜ್ಯದ ಯಾರೇ ಆದರೂ ನೋಂದಣಿ ಮಾಡಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ “ಅಂಹಿಸೆಯೇ ಪರಮೋ ಧರ್ಮ” ಎಂಬ ತತ್ವವನ್ನು ಸಾರಿದ ಶ್ರೀ ಭಗವಾನ್ ಮಹಾವೀರ ಅವರ ಜಯಂತ್ಯೋತ್ಸವವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಆಡಳಿತ ವೈಧ್ಯಾಧಿಕಾರಿ ಡಾ.ಶಶಿಕಾಂತ ಭಾಗೇವಾಡಿ,ಸನೀಲ ಧನಪಾಲ, ಸಂತೋಷ ಟೆಂಗಳಿ, ಎಸ್ ಬಿ ಜೇವೂರ, ನಿಂಗಣ್ಣ ಜೀರ, ಶಿವಕುಮಾರ ತುಗಣಿ, ಪರಮಾನಂದ ಲಿಂಗದಳ್ಳಿ, ರೇಣುಕಾ ಬಡಿಗೇರ, ಶೈಲಾ ಭಜಂತ್ರಿ, ಭಾಗ್ಯಶ್ರೀ ಬೂದಿಹಾಳ, ಸಂಗೀತಾ ಪಾಸೋಡಿ, ಅಪ್ಪಾಸಾಬ್ ಮಾಂಗ್, ಸಿದ್ದು ಬೈಲಾಳ ಸೇರಿದಂತೆ ಇತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಬಸವೇಶ್ವರ ಅನುಧಾನಿತ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿಧ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಗುರುಭಾಯಿ ಕರಗಾರ ೫೫೪ ಅಂಕ ಪಡೆದು (೯೨.೩೩ %) ಕಾಲೇಜಿಗೆ ಪ್ರಥಮ, ಬಸಮ್ಮ ವಾಲಿಕಾರ ೫೩೫ ಅಂಕ ಪಡೆದು (೮೯.೧೬%) ದ್ವಿತೀಯ ಸ್ಥಾನ,ಲಕ್ಷಿö್ಮÃ ತೂಗಾಯಿ ೪೯೭ ಅಂಕ ಪಡೆದು ೮೨.೮೩% ಅಂಕ ಪಡೆದು ಕಾಲೇಜಿಗೆ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾದ ವಿಧ್ಯಾರ್ಥಿಗಳಲ್ಲಿ ೨ ವಿಧ್ಯಾರ್ಥಿಗಳು ಅತ್ಯೂನ್ನತ ಶ್ರೇಣಿ,೩೧ ವಿಧ್ಯಾರ್ಥಿಗಳು ಪ್ರಥಮ ಶ್ರೇಣಿ,೩೬ ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿ,೧೩ ವಿಧ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ, ಗುರುಭಾಯಿ ಕರಗಾರ ಕನ್ನಡ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ವಿಧ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯ ಸಿ ಎಸ್ ಹಿರೇಮಠ, ಆಡಳಿತ ಮಂಡಳಿಯ ಸದಸ್ಯರು,ಹಾಗೂ ಸಿಬ್ಬಂದ್ದಿ ವರ್ಗ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಗವಾನ್ ಮಹಾವೀರರು ಸತ್ಯ, ಅಹಿಂಸೆ, ಶಾಂತಿ ಹಾಗೂ ಸೌಹಾರ್ದತೆಯ ಮಹತ್ವವನ್ನು ಜಗತ್ತಿಗೆ ಸಾರಿದ್ದು, ಅವರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.ಗುರುವಾರ ಡೀಮ್ಡ್ ವಿವಿಯಲ್ಲಿ ನಡೆದ ಭಗವಾನ್ ಮಹಾವೀರರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಮಹಾವೀರರ ತತ್ವಾದರ್ಶಗಳು ಸಮಾಜಕ್ಕೆ ಮಾದರಿಯಾಗಿವೆ. ಎಲ್ಲರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ವೈದ್ಯಕೀಯ ವಿಭಾಗದ ಡೀನ ಡಾ. ತೇಜಸ್ವಿನಿ ವಲ್ಲಭ, ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಘುವೀರ ಕುಲಕರ್ಣಿ, ಚೀಫ್ ವಾರ್ಡನ್, ಡಾ. ಉದಯಕುಮಾರ ನುಚ್ಚಿ, ಪೆಥಾಲಾಜಿ ವಿಭಾಗದ ಮುಖ್ಯಸ್ಥ ಡಾ. ಸುರೇಖಾ…