Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಲಮಟ್ಟಿ: ಅನ್ನ ಪ್ರಾಣಕ್ಕೆ ಆಧಾರವಾದರೆ, ಶಿಕ್ಷಣ ಜ್ಞಾನ ಸಂಸ್ಕಾರಕ್ಕೆ ಆಧಾರ, ಹಿಂದೆ ತಾವು ಮಾಡಿದ ಕರ್ಮದ ಪರಿಣಾಮವೇ ಈಗ ನೀವು ಅನುಭವಿಸುತ್ತಿರುವ ಜೀವನ, ಹೀಗಾಗಿ ಸದಾ ಒಳ್ಳೆಯದನ್ನೇ ಮಾಡಿ, ಒಳ್ಳೆಯದನ್ನೇ ಬಯಸಿ, ಇದೇ ಬದುಕಿನ ಯಶಸ್ಸಿನ ಮಂತ್ರ ಎಂದು ನಿವೃತ್ತ ಶಿಕ್ಷಕ ೮೦ ರ ವಯಸ್ಸಿನ ವಿ.ಎ. ಭಾಂಡವಳಕರ ಅಭಿಪ್ರಾಯಪಟ್ಟರು.ಶನಿವಾರ ಇಲ್ಲಿಯ ಸಮುದಾಯ ಭವನದಲ್ಲಿ ನಡೆದ ೧೯೯೮-೯೯ ನೇ ಸಾಲಿನಲ್ಲಿ ಇಲ್ಲಿಯ ಎಂಪಿಎಸ್ ಶಾಲೆಯಲ್ಲಿ ೭ ನೇ ವರ್ಗ ಪಾಸಾದ, ೨೦೦೧-೦೨ ರಲ್ಲಿ ಎಂಎಚ್ ಎಂ ಹಾಗೂ ಆರ್ ಬಿಪಿಜಿ ಹಳಕಟ್ಟಿ ಪ್ರೌಡಶಾಲೆಯಲ್ಲಿ ಎಸ್ಸೆಸ್ಸೆಎಲ್ಸಿ ಪಾಸಾದ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಆಲಮಟ್ಟಿ ಎಂಬುದು ಆಲ್ ಮೈಟಿ, ಇಲ್ಲಿ ಎಲ್ಲವೂ ಇದೆ, ಇಲ್ಲಿನ ಶಾಲೆಗಳ ಕಲಿತ ವಿದ್ಯಾರ್ಥಿಗಳು ಪ್ರತಿ ವರ್ಷವೂ ಗುರುವಂದನಾ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ, ಗುರುವಿಗೆ ಶಿಷ್ಯನ ಸಾಧನೆಯೇ ಖುಷಿ ತರಿಸುತ್ತದೆ ಎಂದರು.ಶಿಕ್ಷಕಿ ವಿಜಯಲಕ್ಷ್ಮಿ ಕೌಲಗಿ ಮಾತನಾಡಿದರು.ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಪ್ರವೀಣ ಉಳ್ಳಾಗಡ್ಡಿ, ಮಮತಾ…
ಬಸವನಬಾಗೇವಾಡಿ: ಪಟ್ಟಣದ ಮಿನಿವಿಧಾನಸೌಧ ಮುಂಭಾಗದ ಕೋಣಿನವರ ತೋಟದಲ್ಲಿರುವ ಶಿವಯೋಗೇಶ್ವರ (ಶಿವಪ್ಪಮುತ್ಯಾ) ಜಾತ್ರಾಮಹೋತ್ಸವ ಡಿ. ೨೫ ರಂದು ಜರುಗಲಿದೆ. ಜಾತ್ರೆಯಂಗವಾಗಿ ಅಂದು ಬೆಳಗ್ಗೆ ೧೦ ಗಂಟೆಗೆ ಪಲ್ಲಕ್ಕಿ ಉತ್ಸವ ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಗೆ ಗಂಗಸ್ಥಳಕ್ಕೆ ತೆರಳುವುದು. ನಂತರ ಪಲ್ಲಕ್ಕಿ ಉತ್ಸವ ಮೆರವಣಿಗೆ ಮೂಲಕ ವಾದ್ಯಮೇಳದೊಂದಿಗೆ ಮರಳಿ ತೋಟಕ್ಕೆ ಮರಳುವುದು. ಮದ್ಯಾನ್ಹ ೩ ಗಂಟೆಗೆ ಅಗ್ಗಿ ಹಾಯುವುದು. ರಾತ್ರಿ ೧೦ ಗಂಟೆಗೆ ಜಿಲ್ಲೆಯ ವಿವಿಧ ಡೊಳ್ಳಿನ ವಾದ್ಯಮೇಳದಿಂದ ಡೊಳ್ಳಿನ ಹಾಡಿಕಿ ಜರುಗುವುದು ಎಂದು ಜಾತ್ರಾಮಹೋತ್ಸವ ಸಮಿತಿ ತಿಳಿಸಿದೆ.
ಬಸವನ ಬಾಗೇವಾಡಿ: ನಮ್ಮ ಬದುಕಿನಲ್ಲಿ ಧಾರ್ಮಿಕ ಆಚರಣೆಗಳು ನೆಮ್ಮದಿ ನೀಡುವಲ್ಲಿ ಬಹು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಚಿವ ಶಿವಾನಂದ ಪಾಟೀಲ ಅವರು ಅಭಿಪ್ರಾಯ ಪಟ್ಟರು.ತಾಲೂಕಿನ ಹಂಗರಗಿ ಗ್ರಾಮದಲ್ಲಿ ಮಾರುತೇಶ್ವರ ಹಾಗೂ ಈಶ್ವರ ದೇವರ ಜಾತ್ರೆಯಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಜನ ಜಾಗೃತಿ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಇತಿಹಾಸದಲ್ಲಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಗೆ ವಿಶೇಷ ಸ್ಥಾನವಿದೆ. ಇದನ್ನು ಗ್ರಾಮೀಣ ಜನತೆ ಉಳಿಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿ ಎಂದರು.ಸರ್ಕಾರಿ ಯೋಜನೆಗಳು ಗ್ರಾಮೀಣ ಪ್ರದೇಶಗಳಿಗೆ ತಲುಪುವಂತಾಗಬೇಕೆಂದರಲ್ಲದೆ, ಈ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಮುಂಬರುವ ದಿನಗಳಲ್ಲಿ ಹಂಗರಗಿ ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿಭರವಸೆ ನೀಡಿದರು.ಸಾನಿಧ್ಯ ವಹಿಸಿದ್ದ ಹತ್ತಳ್ಳಿಯ ಗುರುಪಾದೇಶ್ವರ ಸ್ವಾಮೀಜಿ ಮಾತನಾಡಿ, ಪ್ರವಚನಗಳು ಹಾಗೂ ಪುರಾಣಗಳು ನಮ್ಮ ಬದುಕನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಶರಣರು ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕೆಂದು ಹೇಳಿದರು.ಪ್ರಾಸ್ತವಿಕವಾಗಿ ಸಾಹಿತಿ ವಿವೇಕಾನಂದ ಕಲ್ಯಾಣ ಶೆಟ್ಟಿ ಮಾತನಾಡಿದರು.ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಪುರಾಣ…
ಬಸವನಬಾಗೇವಾಡಿ: ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇದೆ. ದೇಶದ ಸಂವಿಧಾನ ನಮಗೆ ಕೆಲವು ಹಕ್ಕುಗಳನ್ನು ನೀಡಿದೆ.ಈ ಹಕ್ಕುಗಳ ಸದುಪಯೋಗ ಮಾಡುವ ಜೊತೆಗೆ ಸಂವಿಧಾನ ನೀಡಿದ ಕರ್ತವ್ಯವನ್ನು ಪ್ರತಿಯೊಬ್ಬರೂ ಪಾಲಿಸುವುದು ತುಂಬಾ ಮುಖ್ಯವಾಗಿದೆ ಎಂದು ಸಿವ್ಹಿಲ್ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಮಾನವ ಹಕ್ಕುಗಳ ದಿನ ಮತ್ತು ಗ್ರಾಹಕರ ದಿನಾಚರಣೆಯಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಜನಾಂಗ ತಮ್ಮ ಜವಾಬ್ದಾರಿ ಮರೆಯುತ್ತಿರುವುದು ವಿಷಾದನೀಯ ಸಂಗತಿ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿದ್ದಾರೆ. ಯುವಜನಾಂಗವು ಕಾನೂನು ಅರಿವು ಮೂಡಿಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಕೈಜೋಡಿಸುವಂತಾಗಬೇಕೆಂದರು.ವಕೀಲ ಆರ್.ಎನ್.ಪವಾರ ಮಾತನಾಡಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಎಎಸ್ಐ ಬನಸೋಡೆ, ವಕೀಲರಾದ ಬಿ.ಆರ್.ಅಡ್ಡೋಡಗಿ, ರವಿ ರಾಠೋಡ, ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಮುಖಂಡರಾದ ಪರಶುರಾಮ ಅಡಗಿಮನಿ, ಅರವಿಂದ ಸಾಲವಾಡಗಿ, ಗುರು ಗುಡಿಮನಿ,…
ಬಸವನಬಾಗೇವಾಡಿ: ಪಟ್ಟಣದ ಇಕ್ಬಾಲ ನಗರದಲ್ಲಿರುವ ಅಮೋಘಸಿದ್ದೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಶನಿವಾರ ಸಂಭ್ರಮ,ಸಡಗರದಿಂದ ಜರುಗಿತು. ಬೆಳಗ್ಗೆ ಡೊಳ್ಳಿನ ವಾದ್ಯಮೇಳದೊಂದಿಗೆ ರಾಮನಹಟ್ಟಿಯ ಬನ್ನಿಗೊಂಡೇಶ್ವರ, ಲಕ್ಕಮ್ಮದೇವಿ ಪಲ್ಲಕ್ಕಿ ಉತ್ಸವವು ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಗೆ ಗಂಗ ಸ್ಥಳಕ್ಕೆ ತೆರಳಲಾಯಿತು. ಗಂಗಸ್ಥಳ ಪೂಜೆ ನೆರವೇರಿದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳಿನ ಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಸುಮಂಗಲೆಯರ ಆರತಿಯೊಂದಿಗೆ ಅಮೋಘಸಿದ್ದೇಶ್ವರ ದೇವಸ್ಥಾನಕ್ಕೆ ಆಗಮಿಸಿದ ನಂತರ ಅಮೋಘಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.ಪಲ್ಲಕ್ಕಿ ಉತ್ಸವದಲ್ಲಿ ಬನ್ನೆಪ್ಪ ಪೂಜಾರಿಗಳು, ಎಸ್.ಜೆ. ಹೆಗಡ್ಯಾಳ, ಅಶೋಕ ನಂದಿ, ಎಂ.ಬಿ.ವಗ್ಗರ, ವ್ಹಿ.ಎಸ್.ಕುದರಕರ, ಆರ್.ಎಂ.ಬಾಗೇವಾಡಿ, ಬಿ.ಎನ್.ಕಲಬುರ್ಗಿ, ಎಸ್.ಜೆ.ಬಡಿಗೇರ, ಮೌನೇಶ ಬಡಿಗೇರ, ಎನ್.ಎನ್.ಅಂಗಡಿ, ಬಸವರಾಜ ಹೆಗಡ್ಯಾಳ, ಸಂತೋಷ ಹೆಗಡ್ಯಾಳ, ಜಿ.ಜೆ.ಇಂಗಳಗಿ, ರೇವಣಸಿದ್ದ ಕಾಳಗಿ, ಭಾಗ್ಯಶ್ರೀ ಬಡಿಗೇರ, ದೇವಮ್ಮ ಹೆಗಡ್ಯಾಳ, ಬೋರಮ್ಮ ಬಡಿಗೇರ, ಶಾಂತಾಬಾಯಿ ಕಾಳಗಿ, ಕಸ್ತೂರಿ ಕಲಬುರ್ಗಿ ಸೇರಿದಂತೆ ಇತರರು ಭಾಗವಹಿಸಿದ್ದರು.ಜಾತ್ರಾಮಹೋತ್ಸವದಂಗವಾಗಿ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನರಸಲಗಿಯ ಗೌರಿಶಂಕರ ಕಲಾತಂಡದಿಂದ ಮೋಡಿಕಾರ ಆಟ ಜನಮನಸೂರೆಗೊಂಡಿತ್ತು.ಮೋಡಿಕಾರ ಆಟಕ್ಕೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ…
ಬಸವನಬಾಗೇವಾಡಿ: ರಾಜ್ಯದಲ್ಲಿ ಕೋವಿಡ್ ಸೋಂಕಿನ ರೂಪಾಂತರಿಯಾದ ಜೆಎನ್ ೧ ಹರಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನರಿಗೆ ಸಾಕಷ್ಟು ಮುನ್ನಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ ನೀಡುತ್ತಿದ್ದರೂ ಬಹುತೇಕ ಜನರು ಮಾಸ್ಕ್ ಇಲ್ಲದೇ ಹೆಚ್ಚು ನಿರಾಳವಾಗಿ ಸಂಚಾರ ಮಾಡುತ್ತಿರುವುದು ನೋಡಿದರೆ ಈ ರೂಪಾಂತರಿಗೆ ಜನರು ಎದೆಗುಂದದೇ ನಿರಾಳವಾಗಿದ್ದಾರೆ. ಈ ರೂಪಾಂತರಿ ತನ್ನ ಅಟ್ಟಹಾಸ ತೋರುವ ಮುನ್ನ ಜನರು ಹೆಚ್ಚು ಮುಂಜಾಗ್ರತೆ ವಹಿಸುವದು ಮುಖ್ಯವಾಗಿದೆ.ರಾಜ್ಯ ಸರ್ಕಾರ ೬೦ ದಾಟಿದವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿದರೂ ಬಹುತೇಕರು ಮಾಸ್ಕ್ ಇಲ್ಲದೇ ಸಂಚಾರ ಮಾಡುತ್ತಿದ್ದಾರೆ. ಬಸ್ ಪ್ರಯಾಣಿಕರು ಮುನ್ನಚ್ಚರಿಕೆ ಕ್ರಮವಾಗಿ ಬಸ್ನಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವಂತೆ ಸಾರಿಗೆ ಸಚಿವರು ಮನವಿ ಮಾಡಿಕೊಂಡಿದ್ದರೂ ಬಹುತೇಕ ಬಸ್ ಪ್ರಯಾಣಿಕರು ಮಾಸ್ಕ್ ರಹಿತರಾಗಿ ಸಂಚಾರ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಶಕ್ತಿಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದ್ದರಿಂದ ಹೆಚ್ಚು ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಬಸ್ಗಳು ತುಂಬಿ ತುಳುಕುತ್ತಿವೆ. ಜನಸಂದಣಿ ಇರುವೆಡೆ ಮಾಸ್ಕ್ ಧರಿಸುವಂತೆ ಸರ್ಕಾರ ಸೂಚನೆ ನೀಡಿದರೂ ಇದಕ್ಕೆ ಜನರು…
ವಿಜಯಪುರ: ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ಸದಾ ನಮ್ಮ ಮನಸ್ಸಿನಲ್ಲಿ ಅಮರವಾಗಿದ್ದಾರೆ. ಅವರ ಚಿಂತನೆಗಳು, ಅವರ ಮಾತುಗಳೊಂದಿಗೆ ಇಂದಿಗೂ ಅವರು ನಮ್ಮ ಜೊತೆಯಲ್ಲಿಯೇ ಇದ್ದಾರೆ ಎಂದು ಭಾಸವಾಗುತ್ತದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಗೋಷ್ಠಿ -೧ ರಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.ಅವರ ಮಾತುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕ. ಅವರು ಅತ್ಯಂತ ಸರಳವಾಗಿ ಬದುಕುವ ಮೂಲಕ ಬದುಕು ಎಂದರೆ ಹೇಗಿರಬೇಕು ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟಂತವರು. ಅವರು ಎಂದಿಗೂ ಏನನ್ನು ಬಯಸದಂತವರು ಆದರೆ ಅವರ ಭಕ್ತರಾಗಿ ನಮ್ಮ ಕರ್ತವ್ಯವನ್ನು ನಾವು ಅವರಿಗೆ ನಮನ ಸಲ್ಲಿಸುವ ಮೂಲಕ ನಿಭಾಯಿಸಬೇಕಿದೆ ಮತ್ತು ಅವರು ಹಾಕಿ ಕೊಟ್ಟ ಹಾದಿಯಲ್ಲಿ ಸಾಗಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಅನುಭಾವವನ್ನು ಹಂಚಿಕೊಂಡ ರಾಜಶೇಖರ ಮಠಪತಿ ರಾಗಂ ಮಾತನಾಡಿ, ಇಂದಿನ ಯುವಕರು ಮೊಬೈಲ್ ಗೀಳಿಗೆ ಬಲಿಯಾಗಿದ್ದಾರೆ. ಅದರ ಬದಲಿಗೆ ಜಾನಪದ ಕಲೆಯಲ್ಲಿ ಬೆರೆತು…
ವಿಜಯಪುರ: ನಗರದಲ್ಲಿ ನಾಳೆ ದಿ.24 ರವಿವಾರ ನಡೆಯಲಿರುವ ವೃಕ್ಷೊಥಾನ್ ಹೆರಿಟೇಜ್ ರನ್-2023ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರಾದ್ಯಂತ ಓಟಗಾರರು ಸಾಗುವ ಮಾರ್ಗಗಳಲ್ಲಿ ರವಿವಾರ ಬೆಳಿಗ್ಗೆ 6 ಗಂಟೆಯಿಂದಲೆ ನಾನಾ ಸಾಂಸ್ಕೃತಿಕ ಕಲಾ ತಂಡಗಳಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.ಕರ್ನಾಟಕವೂ ಅಷ್ಟೇ ಅಲ್ಲ, ನಾನಾ ರಾಜ್ಯಗಳು ಹಾಗೂ ವಿದೇಶಗಳಿಂದ ಹೆಸರು ನೋಂದಾಯಿಸಿರುವ ಕ್ರೀಡಾಪಟುಗಳು ಗುಮ್ಮಟ ನಗರಿಗೆ ಆಗಮಿಸಿದ್ದು, ಇಂದು ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಹೆಸರು ನೋಂದಾಯಿಸಿದ ಓಟಗಾರರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಬ್ ಮತ್ತು ಟಿ ಶರ್ಟ್ ಗಳನ್ನು ವಿತರಿಸಲಾಯಿತು.ಈ ಮಧ್ಯೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಐರಾನ್ಮ್ಯಾನ್, ಹಾಫ್ ಐರಾನ್ಮ್ಯಾನ್, ಅಲ್ಟ್ರಾ ಮ್ಯಾರಾಥಾನ್, ಪುಲ್ ಮ್ಯಾರಾಥಾನ್ ಮತ್ತು ಹಾಫ್ ಮ್ಯಾರಾಥಾನ್ ಗಳಲ್ಲಿ ಪಾಲ್ಗೊಂಡಿರುವವರನ್ನು ಸ್ವಾಗತಿಸಲಾಯಿತು.ನಂತರ ನಡೆದ ನಾನಾ ಗೋಷ್ಠಿಗಳಲ್ಲಿ ಪ್ರಶಾಂತ ಹಿಪ್ಪರಗಿ, ಪ್ರಮೋದ ದೇಶಪಾಂಡೆ, ಕಿರಣ ಬೇಟಗೇರಿ, ಡಾ.ಶಿವಪುತ್ರ ಯಲಗೊಂಡ, ನಿರಂಜನ ಪಾಟೀಲ, ಹರಿನಾಥ, ಡಾ.ಉದಯಕುಮಾರ ಜಾಧವ, ಬರಿಗಾಲ ಓಟಗಾರ್ತಿ ಎಂದೇ ಖ್ಯಾತರಾದ ಸುಲತಾ ಕಾಮತ, ಸೀರೆಯುಟ್ಟ ಬರಿಗಾಲಲ್ಲಿ ಓಡುವ ಖ್ಯಾತಿಯ ಪ್ರೀತಿ ಮನಿಷ, ರಾಜೇಂದ್ರ ಕೌರ,…
ಲೊಯೋಲ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಮತ್ತು ಕ್ರಿಸ್ಮಸ್ ಹಬ್ಬ ಆಚರಣೆ ವಿಜಯಪುರ: ಕಳೆದ 24 ವರ್ಷಗಳಿಂದ ಸ್ಲಮ್ ಹಾಗೂ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ನಗರದಲ್ಲಿ ಶಿಕ್ಷಣ ಕ್ರಾಂತಿ ಮಾಡುವ ಮೂಲಕ ಹೆಸರುವಾಸಿಯಾಗಿರುವ ವಿಜಯಪುರ ನಗರ ಸ್ಟೇಷನ್ ಬ್ಯಾಕ್ ರಸ್ತೆಯಲ್ಲಿರುವ ಲೊಯೋಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ಕ್ರಿಸ್ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಮುಖ್ಯ ಅತಿಥಿಯಾಗಿ ಪತ್ರಕರ್ತ ಆಸೀಫ ಬಾಗವಾನ ಮಾತನಾಡಿ, ಲೊಯೋಲ ಶಿಕ್ಷಣ ಸಂಸ್ಥೆಯು ಬಡ ಜನರ ನೋವು ನಲಿವುಗಳನ್ನು ಸ್ಪಂಧಿಸುವ ಜೊತೆಗೆ ಆ ಮಕ್ಕಳಿಗೆ ಮೌಲ್ಯಾದಾರಿತ ಶಿಕ್ಷಣ ನೀಡಿ ಉನ್ನತ ಶಿಕ್ಷಣವನ್ನು ಕೊಡಿಸುವ ಪ್ರಯತ್ನ ಮಾಡುತ್ತಿದ್ದು ಇಲ್ಲಿ ಕಲಿತ ವಿದ್ಯಾರ್ಥಿಗಳನ್ನು ಡಾಕ್ಟರ ಇಂಜನಿಯರ್ ಪೊಲೀಸ್ ಸೇರಿದಂತೆ ಉನ್ನತ ಮಟ್ಟದ ಹುದ್ದೆಗೆ ಹೋಗಲು ಅಡಿಪಾಯ ಹಾಕುತ್ತಿದ್ದು, ಬಡ ವಿಧ್ಯಾರ್ಥಿಗಳಿಗೆ ಲೊಯೋಲಾ ಶಿಕ್ಷಣ ಸಂಸ್ಥೆಯು ಬೆನ್ನೆಲುಬಾಗಿ ನಿಂತಿದೆ ಹೀಗಾಗಿ ಈ ಸಂಸ್ಥೆಗೆ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.ಕ್ರಿಸಮಸ್ ಹಬ್ಬದ ಸಂದೇಶವನ್ನು ನೀಡಿದ ಸಿಸ್ಟರ್ ನೀತಾ ಆಳ್ವಾ…
Udayarashmi kannada daily newspaper
