ಆಲಮಟ್ಟಿ: ಅನ್ನ ಪ್ರಾಣಕ್ಕೆ ಆಧಾರವಾದರೆ, ಶಿಕ್ಷಣ ಜ್ಞಾನ ಸಂಸ್ಕಾರಕ್ಕೆ ಆಧಾರ, ಹಿಂದೆ ತಾವು ಮಾಡಿದ ಕರ್ಮದ ಪರಿಣಾಮವೇ ಈಗ ನೀವು ಅನುಭವಿಸುತ್ತಿರುವ ಜೀವನ, ಹೀಗಾಗಿ ಸದಾ ಒಳ್ಳೆಯದನ್ನೇ ಮಾಡಿ, ಒಳ್ಳೆಯದನ್ನೇ ಬಯಸಿ, ಇದೇ ಬದುಕಿನ ಯಶಸ್ಸಿನ ಮಂತ್ರ ಎಂದು ನಿವೃತ್ತ ಶಿಕ್ಷಕ ೮೦ ರ ವಯಸ್ಸಿನ ವಿ.ಎ. ಭಾಂಡವಳಕರ ಅಭಿಪ್ರಾಯಪಟ್ಟರು.
ಶನಿವಾರ ಇಲ್ಲಿಯ ಸಮುದಾಯ ಭವನದಲ್ಲಿ ನಡೆದ ೧೯೯೮-೯೯ ನೇ ಸಾಲಿನಲ್ಲಿ ಇಲ್ಲಿಯ ಎಂಪಿಎಸ್ ಶಾಲೆಯಲ್ಲಿ ೭ ನೇ ವರ್ಗ ಪಾಸಾದ, ೨೦೦೧-೦೨ ರಲ್ಲಿ ಎಂಎಚ್ ಎಂ ಹಾಗೂ ಆರ್ ಬಿಪಿಜಿ ಹಳಕಟ್ಟಿ ಪ್ರೌಡಶಾಲೆಯಲ್ಲಿ ಎಸ್ಸೆಸ್ಸೆಎಲ್ಸಿ ಪಾಸಾದ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಲಮಟ್ಟಿ ಎಂಬುದು ಆಲ್ ಮೈಟಿ, ಇಲ್ಲಿ ಎಲ್ಲವೂ ಇದೆ, ಇಲ್ಲಿನ ಶಾಲೆಗಳ ಕಲಿತ ವಿದ್ಯಾರ್ಥಿಗಳು ಪ್ರತಿ ವರ್ಷವೂ ಗುರುವಂದನಾ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ, ಗುರುವಿಗೆ ಶಿಷ್ಯನ ಸಾಧನೆಯೇ ಖುಷಿ ತರಿಸುತ್ತದೆ ಎಂದರು.
ಶಿಕ್ಷಕಿ ವಿಜಯಲಕ್ಷ್ಮಿ ಕೌಲಗಿ ಮಾತನಾಡಿದರು.
ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಪ್ರವೀಣ ಉಳ್ಳಾಗಡ್ಡಿ, ಮಮತಾ ಎಸ್.ಬಿ, ರಾಜಕುಮಾರ ಮುದ್ನಾಳ, ಸಂಗಮೇಶ ಕೊಳಗೇರಿ, ಮಂಜುನಾಥ ಪುರಂಧರೆ, ಸಾವಿತ್ರಿ ದೇಸಾಯಿ, ಜುಮೈಲಾ ಮಕಾನದಾರ ಮತ್ತೀತರರು ಮಾತನಾಡಿದರು..
ಆಲಮಟ್ಟಿ ಅನ್ನದಾನೇಶ್ವರ ಪುರವರ ಹಿರೇಮಠದ ರುದ್ರಮುನಿ ದೇವರು ಸಾನ್ನಿಧ್ಯ ವಹಿಸಿದ್ದರು.
ಶಿಕ್ಷಕರಾದ ನೀಲಾಂಬಿಕಾ ಪಾಟೀಲ, ಎಸ್.ಐ. ಹರಣಶಿಕಾರಿ, ಬಿ.ಎಚ್. ಗುಣದಾಳ, ಪಿ.ಎಲ್. ಮಿಂಚನಾಳ, ಆರ್.ಎಸ್. ಹುಣಶಿಕಟ್ಟಿ, ಪಿ.ಎಂ. ಮಹೇಂದ್ರಕರ, ಸುವರ್ಣಾ ಅಂಗಡಿ, ಬಿ.ಎಸ್. ಯರವಿನತೆಲಿಮಠ, ಎಂ.ಆರ್. ಮಕಾನದಾರ್, ಐ.ಬಿ. ಉಳ್ಳಾಗಡ್ಡಿ, ಸಿ.ಎಸ್. ಇವಣಗಿ, ವಿ.ಸಿ. ಕೋರಿ, ಎಸ್.ಎಸ್. ಹೊಸಮನಿ, ಬಿ.ಐ. ಖ್ಯಾಡಿ, ಎಸ್.ಐ. ಗಿಡ್ಡಪ್ಪಗೋಳ, ಜಿ.ಎಂ. ಕೊಟ್ಯಾಳ, ಪ್ರಾಚಾರ್ಯ ಪಿ.ಎ. ಹೇಮಗಿರಿಮಠ, ಎಸ್.ಎಚ್. ನಾಗಣಿ, ವಿ.ಎಂ. ಪಟ್ಟಣಶೆಟ್ಟಿ, ಆರ್.ಎನ್. ಮ್ಯಾಗೇರಿ, ಡಿ.ಡಿ. ಹಡಪದ, ಜಿ.ಸಿ. ಗಣಿಯವರ, ಎಸ್.ಆರ್. ಲಮಾಣಿ, ಎಸ್.ಎಚ್. ಗೋಗಿ, ಸಿ.ಎಸ್. ಹೊಸಮನಿ, ಎಸ್.ಬಿ. ನಾಗೂರ, ಆರ್.ಪಿ. ಸಂತರ, ಸಿ.ಎಸ್. ತಡಸಿ, ಕಳ್ಳಿಗುಡ್ಡ, ಬಾಬು ಲಮಾಣಿ, ಎಸ್.ಆರ್. ಕಮತಗಿ, ಸಿ.ಐ. ವಿರಕ್ತಮಠ ಅವರನ್ನು ಸನ್ಮಾನಿಸಲಾಯಿತು.
ಹಳೆ ವಿದ್ಯಾರ್ಥಿಗಳಾದ ವಿಠ್ಠಲ ಪಾಟೀಲ, ವಿಜಯಾ ನೀರಲಕೇರಿ, ತನುಜಾ ಪೂಜಾರಿ, ಸಾವಿತ್ರಿ ದೇಸಾಯಿ, ವೆಂಕಟೇಶ ರಾಠೋಡ, ಮಹಾಂತೇಶ ಬೆಳಗಲ್, ಚನ್ನಬಸು ಅಂಗಡಿ, ಮಹಾಂತೇಶ ಬಿಜಾಪುರ, ಅಲೀಮ್ ನಕೀಬ್, ವಿಜಯಕುಮಾರ ಅಂಗಡಿ, ಶರಣಯ್ಯ ಅಂಗಡಿ, ಹಾಸೀಮ್ ಪೀರ್ ಯಂಡಿಗೇರಿ, ರಫೀಕ್ ಚಪ್ಪರಬಂದ್, ಮಂಜುಳಾ ನುಗ್ಗಲಿ ಮತ್ತೀತರರು ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

