Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ಇಂಡಿ ಪ್ರತ್ಯೇಕ ಜಿಲ್ಲಾ ಕೂಗಿಗೆ ಬಲ ಬರುವಂತೆ ಇಂಡಿ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಇಂಡಿ ಹೋರಾಟ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಸಭೆ ಶನಿವಾರ ಪಟ್ಟಣದ ತಾಲೂಕು ತಳವಾರ ಪರಿವಾರ ಸಮಾಜ ಸೇವಾ ಸಮಿತಿ ಕಾರ್ಯಾಲಯದಲ್ಲಿ ಜರುಗಿತು.ಭೀಮಣ್ಣ ಕವಲಗಿ (ಗೌರವಾಧ್ಯಕ್ಷ), ಜಟ್ಟೆಪ್ಪ ರವಳಿ(ಅಧ್ಯಕ್ಷ),ಇಲಿಯಾಸ ಬೊರಾಮಣಿ, ತಮ್ಮಣ್ಣ ಪೂಜಾರಿ,ಅಣ್ಣಪ್ಪ ಕಲ್ಲಣ್ಣ,ಹರಿಚಂದ್ರ ಪವಾರ, ರಮೇಶ ಕಲ್ಯಾಣಿ(ಉಪಾಧ್ಯಕ್ಷರು), ಪ್ರಶಾಂತ ಕಾಳೆ(ಪ್ರ,ಕಾರ್ಯದರ್ಶಿ), ಮೈಬೂಬ ಅರಬ, ಧರ್ಮರಾಜ ವಾಲಿಕಾರ, ನೀಲಕಂಠ ರೂಗಿ, ಯಮುನಾಜಿ ಸಾಳುಂಕೆ, ಸಿದ್ದು ಕಟ್ಟಿಮನಿ(ಕಾರ್ಯದರ್ಶಿಗಳು), ಸದಾಶಿವ ಪ್ಯಾಟಿ(ಖಜಾಂಚಿ), ಜಾವೇದ ಮೋಮಿನ, ಜಟ್ಟೆಪ್ಪ ಮರಡಿ, ಲಿಂಬಾಜಿ ರಾಠೋಡ, ಮಹೇಶ ಹೊನ್ನಬಿಂದಗಿ, ಸುಭಾಷ ಬಾಬರ, ಗಿರೀಶ ಚಾಂದಕೋಟೆ, ಸಿದ್ದಪ್ಪ ಮಾನೆ, ಹುಚ್ಚಪ್ಪ ತಳವಾರ, ಶಿವಯೋಗೆಪ್ಪ ಮಾಡ್ಯಾಳ, ಆಸೀಪ್ ಕಾರಬಾರಿ, ಸತೀಶ ಕುಂಬಾರ, ಧೂಳಪ್ಪ ನಾವಿ, ರುಕ್ಮುದ್ದಿನ ತದ್ದೇವಾಡಿ, ಶಿವುಕುಮಾರ ಬಿಸನಾಳ, ರಾಜು ಪಡಗಾನೂರ, ಶ್ರೀಕಾಂತ ಕೂಡಿಗನೂರ, ಶೇಖರ ನಾಯಕ, ಎನ್.ಕೆ.ಪೂಜಾರಿ ಸದಸ್ಯರಾಗಿ ಅವಿರೋಧವಾಗಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಕೊಲ್ಹಾರ: ಭೂಮಿಯಲ್ಲಿ ಶ್ರಮದಿಂದ ಬಿತ್ತುವ ಕಾರ್ಯವನ್ನು ಮಾಡಿ ಬೆವರು ಹರಿಸಿ ಜಗತ್ತಿನಲ್ಲಿ ತನ್ನವರಿಗೂ ಮತ್ತು ಕಾಣದ ಉಳಿದ ಜನರಿಗೂ ಹೊಟ್ಟೆ ತುಂಬಿಸುವ ಜೀವಿ ಎಂದರೆ ರೈತನಾಗಿದ್ದು, ರೈತರನ್ನು ದಿನನಿತ್ಯವೂ ನಾವು ನೆನೆಯಲೇ ಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದ ಅರವಟಿಗೆ ಬಸವೇಶ್ವರ ದೇವಸ್ಥಾನದ ಹತ್ತಿರ ಜೈಕಿಸಾನ ಸಂಘದವರು ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಜಗದ ಹಸಿವು ನೀಗಿಸುವ ರೈತ ಕುಲದ ನಿಸ್ವಾರ್ಥ ಸೇವೆಯನ್ನು ಸದಾ ಕಾಲ ಸ್ಮರಿಸೋಣ. ಸರ್ವ ರೈತರಿಗೂ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ ನಾಡಿನ ಸಮಸ್ತ ಅನ್ನದಾತರ ಬಾಳು ಬಂಗಾರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.ಇದೇ ಸಂದರ್ಭದಲ್ಲಿ ಜುವಾರಿ ಪಾರ್ಮಹಬ್ ಲಿಮಿಟೆಡ್ ಅವರ ಸಹಯೋಗದಲ್ಲಿ ಜೈಕಿಸಾನ ಜಂಕ್ಷನ್ ಕೊಲ್ಹಾರ ವತಿಯಿಂದ ರೈತರಿಗೆ ವಿತರಿಸಲು ಪಾರ್ಮ ಅಫೆ ಬಿಡುಗಡೆಯ ಕಾರ್ಯಕ್ರಮವು ಜರುಗಿತು. ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮವನ್ನು ಮಾಝಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಉದ್ಘಾಟಿಸಿದರು. ಪಟ್ಟಣ ಪಂಚಾಯತ ಸದಸ್ಯ ಚನಮಲ್ಲಪ್ಪ ಗಿಡ್ಡಪ್ಪಗೋಳ…
ಚಡಚಣ: ತಾಲೂಕಿನ ನಿವರಗಿ ಗ್ರಾಮದ ದೈಹಿಕ ಶಿಕ್ಷಕ ವಿಠ್ಠಲ ಜೀರಗಾಳೆಯವರಿಗೆ ರಾಜ್ಯ ಮಟ್ಟದ ಉತ್ತಮ ದೈಹಿಕ ಶಿಕ್ಷಕ ಪ್ರಶಸ್ತಿ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ.ಶುಕ್ರವಾರದಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ದೈಹಿಕ ಶಿಕ್ಷಕರ ಸಮಾವೇಶದಲ್ಲಿ ಶಿಕ್ಷಣ ಸಚಿವ ಮಧು ಬಂಗಾರೆಪ್ಪ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು.ಇವರ ಈ ಸಾಧನೆಗೆ ನಿವರಗಿ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಹರ್ಷವ್ಯಕ್ತಪಡಿಸಿದ್ದಾರೆ.
ವಿಜಯಪುರ: ಇಂದಿರಾ ನಗರ ಕೆ.ಎಚ್.ಬಿ , ಕಾಲೋನಿ ಹತ್ತಿರ ಜುಮ್ಮಾ ಮಸೀದಿ ಹತ್ತಿರ ವಿಜಯಪುರ ಓವರ್ ಟ್ಯಾಂಕ್ ಹೊಸದಾಗಿ ನಿರ್ಮಿಸಿದ್ದು. ಸದ್ಯ ಇದು ಲಿಕೆಜ್ ಆಗುತ್ತಿದ್ದು, ಈ ಕಳಪೆ ಕಾಮಗಾರಿಯ ನಿರ್ವಹಿಸಿದ ಜೈನ್ ಕಂಪನಿ ಗುತ್ತಿಗೆದಾರರ ಮೇಲೆ ತನಿಖೆಗೊಳಿಸುವಂತೆ ಆಗ್ರಹಿಸಿ ಮಾನವ ಹಕ್ಕು ಮಂಡಳಿಯ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾನವ ಹಕ್ಕು ಮಂಡಳಿ ಕಾರ್ಯದರ್ಶಿ ಮಾತನಾಡಿ, ನಿಜಾಮೋದ್ದೀನ ಹಿರಿಯಾಳ ಅವರು ಮಾತನಾಡಿ, ಓವರ್ ಟ್ಯಾಂಕ್ ಲಿಕೆಜ್ ಮತ್ತು ಕಾಮಾಗಾರಿ ಕಳಪೆ ಮಟ್ಟದಿಂದ ಕೂಡಿದ್ದರ ಕುರಿತು ಜಲಮಂಡಳಿಯ ಕಾರ್ಯಪಾಲಕ ಅಭಿಯಂತರರಾದ ಶಿವುಕುಮಾರ ಪಟ್ಟಣಶೆಟ್ಟಿ ಇವರಿಗೆ ಹಲವಾರು ಬಾರಿ ಈ ಕುರಿತು ಗಮನಕ್ಕೆ ತಂದರೂ ಸಹ ಇವರು ಜೈನ್ ಕಂಪನಿಯ ಮೇಲೆ ಯಾವುದೇ ಕ್ರಮ ಕೈಗೊಂಡಿರುವದಿಲ್ಲ. ಸದ್ಯ ನಿರ್ಮಾಣಗೊಂಡಿರುವ ಓವರ್ ಟ್ಯಾಂಕ್ ದಿನನಿತ್ಯ ಸೋರುತ್ತಿದ್ದು, ಇದರಿಂದ ಇಲ್ಲಿ ವಾಸವಾಗಿರುವ ಜನರಿಗೆ ತೊಂದರೆ ಉಂಟಾಗುತ್ತಿದೆ. ಕಾರಣ ಈ ಕಳಪೆ ಕಾಮಗಾರಿಯಲ್ಲಿ ಶಾಮೀಲಾಗಿರುವ ಜೈನ್ ಕಂಪನಿ ಗುತ್ತಿಗೆದಾರರ ಮೇಲೆ ಹಾಗೂ ಕಾರ್ಯಪಾಲಕ ಅಭಿಯಂತರರಾದ…
ಕಲಕೇರಿ: ಉತ್ತರಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಒಂದಾದ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಶ್ರೀ ಗುರುವೀರಘಂಟೈ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಹಾಗೂ ಜೋಡುತೇರಿನ ಉತ್ಸವ ಡಿ.೨೫ ರಿಂದ ಡಿ.೩೦ ರ ವರೆಗೆ ನಡೆಯಲಿದೆ.ಲಿಂ.ರುದ್ರಮುನಿ ಶಿವಾಚಾರ್ಯರ ಕೃಪಾಶೀರ್ವಾದದಿಂದ ಶ್ರೀಮಠದ ಪೀಠಾಧಿಪತಿ ಗುರುಮಡಿವಾಳೇಶ್ವರ ಶಿವಾಚಾರ್ಯರ ಘನ ಅಧ್ಯಕ್ಷತೆಯಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಡಿ.೨೫ ರಂದು ಸೋಮವಾರ ರಾತ್ರಿ ವೇ.ಮೂ.ಮಲ್ಲಯ್ಯಮುತ್ಯಾ ಗದ್ದಿಗಿಮಠ ಅವರ ನೇತೃತ್ವದಲ್ಲಿ ಅಗ್ಗಿ ಉತ್ಸವ ನಡೆಯಲಿದೆ, ಡಿ.೨೬ ರಂದು ಮಂಗಳವಾರ ಸಂಜೆ ೪ ಘಂಟೆಗೆ ಗುರುಶಿಷ್ಯರ ಪರಂಪರೆಗೆ ಖ್ಯಾತಿಯಾದ ಶ್ರೀಗುರುವೀರಗಂಟೈ ಮಡಿವಾಳೇಶ್ವರರ ಜೋಡುತೇರಿನ ರಥೋತ್ಸವ ನಡೆಯಲಿದೆ, ಡಿ.೨೭ರಂದು ಬಿಂಜಲಭಾವಿ ರಸ್ತೆಗೆ ಹೊಂದಿಕೊಂಡಿರುವ ಮಲ್ಲಿಕಾರ್ಜುನ ಕೌದಿ ಅವರ ಹೊಲದಲ್ಲಿ ಗ್ರಾಮ ಪಂಚಾಯತ್ ಕಲಕೇರಿ ಹಾಗೂ ಎಪಿಎಂಸಿ ಇವರ ಸಹಯೋಗದಲ್ಲಿ ಬೃಹತ್ ಜಾನುವಾರು ಜಾತ್ರೆಗೆ ಚಾಲನೆ ನೀಡಲಾಗುವದು, ಡಿ.೨೮ ರಂದು ಗುರುವಾರ ಕಡುಬಿನ ಕಾಳಗ ನಡೆಯಲಿದ್ದು, ಡಿ.೩೦ ರಂದು ಶನಿವಾರ ಸಂಜೆ ಕಳಸ ಇಳಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಸಣ್ಣಶರಭಯ್ಯ ಗದ್ದಿಗಿಮಠ ಅವರು…
ವಿಜಯಪುರ: ಭಾರತೀಯ ಜನತಾ ಪಾರ್ಟಿ ಜಿಲ್ಲಾ ಸಭೆಯು ಪಕ್ಷದ ಕಾರ್ಯಾಲಯದಲ್ಲಿ ಜರುಗಿತು.ಈ ಸಂದರ್ಭದಲ್ಲಿ ಪಕ್ಷದ ಜಿಲ್ಲೆಯ ಅಧ್ಯಕ್ಷರಾದ ಆರ್ ಎಸ್ ಪಾಟೀಲ ಕುಚಬಾಳ್ ಮಾತನಾಡಿ, ಭಾರತೀಯ ಜನತಾ ಪಾರ್ಟಿಯ ಕೇಂದ್ರ ಸರ್ಕಾರದ ಸಾಧನೆ ನರೇಂದ್ರ ಮೋದಿಜಿ ಅವರ ಅಭಿವೃದ್ಧಿಯ ಕಾರ್ಯದ ವಿಕಸಿತ ಭಾರತ ರಥವು ಈಗಾಗಲೇ ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದು ಅದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.ವಿಕಸಿತ ಭಾರತದೊಂದಿಗೆ ಅಧಿಕಾರಿಗಳು ಆಗಮಿಸುತ್ತಿದ್ದು ವಿವಿಧ ಅರ್ಜಿಗಳನ್ನ ಸಲ್ಲಿಸುವಲ್ಲಿ ಅಲ್ಲಿ ಅವಕಾಶವಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ದಿನಾಂಕ ೩೦ ರಂದು ವಿಜಯಪುರ ಜಿಲ್ಲೆಗೆ ರಾಜ್ಯಾಧ್ಯಕ್ಷರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅದ್ದೂರಿಯಾದ ಸ್ವಾಗತವನ್ನು ಕೋರಿ ದೊಡ್ಡಮಟ್ಟದ ಜಿಲ್ಲೆಯ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಹಿಂದುಳಿದ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಮಾತನಾಡಿದರು.ಈ ಸಂದರ್ಭದಲ್ಲಿ ಜಿಲ್ಲೆಯ ಸಂಸದ ರಮೇಶ್ ಜಿಗಜಿಣಗಿ, ವಿಭಾಗ ಪ್ರಭಾರಿ ಚಂದ್ರಶೇಖರ್ ಕವಟಗಿ, ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ದೇವರ ಹಿಪ್ಪರಗಿಯ ಮಾಜಿ ಶಾಸಕ…
ವಿಜಯಪುರ: ನಗರದ ವಿವಿಧೆಡೆ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕಟ್ಟಡಗಳು, ಶಾಲಾ ಕೊಠಡಿಗಳ ಉದ್ಘಾಟನೆ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆಯನ್ನು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಶನಿವಾರ ನೆರವೇರಿಸಿದರು.ಮಹಾನಗರ ಪಾಲಿಕೆ ವಾರ್ಡ ನಂ.೭ರಲ್ಲಿ ಬರುವ ಡೋಬಳೆಗಲ್ಲಿಯಲ್ಲಿ ಶಿವಾಜಿ ವೃತ್ತದ ಬಳಿಯ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ನಂ.೧೧ ರಲ್ಲಿ, ನೂತನವಾಗಿ ನಿರ್ಮಿಸಲಾದ ಶಾಲಾ ಕೊಠಡಿ ಮತ್ತು ಅಂಗನವಾಡಿ ಕಟ್ಟಡ ಉದ್ಘಾಟಿಸಿದರು. ನಂತರ ಅಫ್ಜಲಪುರ ಟಕ್ಕೆ ಕೇಂದ್ರಿಯ ವಿದ್ಯಾಲಯ ಹತ್ತಿರ ಲೋಕೋಪಯೋಗಿ ಇಲಾಖೆಯ ರೂ.೬.೫ ಕೋಟಿ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಿದ ಬಳಿಕ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಸಿಹಿ ತಿನಿಸಿದರು. ನಂತರ ಸಾರ್ವಜನಿಕರಿಂದ ಅಹವಾಲು ಆಲಿಸಿದ ಶಾಸಕರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಸ್ಥಳದಲ್ಲೇ ಪರಿಹರಿಸುವ ಕೆಲಸ ಮಾಡಿದರು.ಇದೇ ವೇಳೆ ಸ್ಥಳೀಯ…
ಮುದ್ದೇಬಿಹಾಳ: ರೈತ ಸಮುದಾಯವನ್ನು ಅತಂತ್ರತೆಗೆ ದೂಡಿದ ಪ್ರಸಕ್ತ ಕೃಷಿ ಬಿಕ್ಕಟ್ಟುಗಳಿಗೆ ಪರಿಹಾರ ಒದಗಿಸಬಲ್ಲ ಮಾರ್ಗಗಳನ್ನು ಗುರುತಿಸಿ ಅವುಗಳನ್ನು ಮೂಲೋತ್ಪಾದನೆ ಮಾಡಿ ರೈತರ ಬದುಕಲ್ಲಿ ನೆಮ್ಮದಿ ಮೂಡಿಸಬೇಕಿದ್ದಲ್ಲಿ ಕೃಷಿ ಸಂರಕ್ಷಿಸುವ ಜವಾಬ್ದಾರಿಯನ್ನು ಅಕ್ಷರಸ್ಥ ಯುವಜನಾಂಗ ಹೊರಬೇಕು ಎಂದು ಪರಪ್ಪ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಕರೆ ನೀಡಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ, ಬಸರಕೋಡ, ದಾಸೋಹಿ ರೈತ ಉತ್ಪಾದಕ ಕಂಪನಿ, ತಾಲೂಕಾ ರೈತ ಆಸಕ್ತಿ ಗುಂಪುಗಳ ಮಹಾಮಂಡಳ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ಸಾಧಕ ರೈತರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕರ್ಮದಲ್ಲಿ ಧರ್ಮವನ್ನು ಬೆಸೆದು ತನು, ಮನ, ಭಾವ, ನುಡಿ, ನಡೆಗಳಲ್ಲಿ ಪರಿಶುದ್ಧತೆಯನ್ನು ಅಳವಡಿಸಿಕೊಂಡು ತ್ಯಾಗಮಯ ಜೀವನದ ಬಹು ದೊಡ್ಡ ಕುರುಹಾಗಿ ಕಾಣಿಸಿಕೊಳ್ಳುವ ರೈತನಿಗೆ ಸಾಮಾಜಿಕ ಪ್ರಾಶಸ್ತ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಇಡೀ ಸಮಾಜ ಒಂದಾಗಿ ಕೈಜೋಡಿಸಬೇಕಿದೆ ಎಂದರು.ವಿಶ್ರಾಂತ ಡಿ.ವೈ.ಎಸ್ಪಿ ಎಸ್.ಎಸ್.ಹುಲ್ಲೂರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ…
ಮುದ್ದೇಬಿಹಾಳ: ಇಲ್ಲಿನ ೧೮ ನೇ ವಾರ್ಡ್ ನ ಉಪಚುನಾವಣೆಯ ನಿಮಿತ್ಯ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಎಲ್ಲ ಉಮೇದುದಾರರ ಹಾಗೂ ವಾರ್ಡ ನ ಪ್ರಮುಖರ ಸಮ್ಮುಖದಲ್ಲಿ ಇವಿಎಂ ಮತಯಂತ್ರದಲ್ಲಿ ಅಭ್ಯರ್ಥಿಗಳ ಜೋಡಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಮತಚಲಾಯಿಸುವ ಮೂಲಕ ಯಂತ್ರವನ್ನು ಪರೀಕ್ಷಿಸಲಾಯಿತು.ಒಟ್ಟು ೧೦೮೨ ಮತಗಳನ್ನು ಹೊಂದಿರುವ ಈ ವಾರ್ಡ್ ಗೆ ಡಿ.೨೭ ರಂದು ಚುನಾವಣೆ ನಡೆಯಲಿದೆ. ಇಲ್ಲಿ ಒಟ್ಟು ೭ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ೧ ನಾಮಪತ್ರ ತಿರಸ್ಕೃತವಾಗಿದ್ದು ಇನ್ನುಳಿದ ೬ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.ಬಿಜೆಪಿ ಅಭ್ಯರ್ಥಿಯಾಗಿ ದಯಾರಾಮಸಿಂಗ್ ರಾಯಚೂರ, ಆಪ್ ಅಭ್ಯರ್ಥಿಯಾಗಿ ನೂರಅಹಮ್ಮದ ಶಿವಣಗಿ ವಕೀಲರು, ಜೆಡಿಎಸ್ ಅಭ್ಯರ್ಥಿಯಾಗಿ ಲಾಳೇಮಶ್ಯಾಕ ನಾಯ್ಕೋಡಿ, ಕಾಂಗ್ರೇಸ್ ಅಭ್ಯರ್ಥಿಯಾಗಿ ಶಾಹಿರಾಬಾನು ಢವಳಗಿ ಸ್ಪರ್ದಿಸಿದರೆ ಪಕ್ಷೇತರರಾಗಿ ಮೊಹಮ್ಮದಸಮೀಉಲ್ಲಾ ಹುಣಚಗಿ ಮತ್ತು ಅಬ್ದುಲಅಜೀಜ ಢವಳಗಿ ಸ್ಪರ್ದಿಸಿದ್ದಾರೆ.ತಹಶೀಲ್ದಾರ ಬಲರಾಮ ಕಟ್ಟೀಮನಿ ಅವರ ಉಪಸ್ಥಿತಿಯಲ್ಲಿ ನಡೆದ ಈ ಪ್ರಕ್ರೀಯೆಯನ್ನು ಶಿಕ್ಷಕ, ಅನುಭವೀ ಮಾಸ್ಟರ್ ಟ್ರೈನರ್ ಟಿ.ಡಿ.ಲಮಾಣಿ, ಆರ್.ಓ ಎಸ್.ಎಂ.ಕಮತರ, ಸಹಾಯಕ ಚುನಾವಣಾ ಅಧಿಕಾರಿ ರಮೇಶ ಲಮಾಣಿ, ಚುನಾವಣಾ ಶಿರಸ್ತೇದಾರ ಎಸ್.ಎಂ.ಸಜ್ಜನ ಒಳಗೊಂಡ…
ಮುದ್ದೇಬಿಹಾಳ: ರಾಜ್ಯ ಬಿಜೆಪಿ ರೈತಮೋರ್ಚಾ ನೂತನ ಅಧ್ಯಕ್ಷರನ್ನಾಗಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನ ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರ ಆದೇಶಿಸಿದ್ದಾರೆ.
