ಕಲಕೇರಿ: ಉತ್ತರಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಒಂದಾದ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಶ್ರೀ ಗುರುವೀರಘಂಟೈ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಹಾಗೂ ಜೋಡುತೇರಿನ ಉತ್ಸವ ಡಿ.೨೫ ರಿಂದ ಡಿ.೩೦ ರ ವರೆಗೆ ನಡೆಯಲಿದೆ.
ಲಿಂ.ರುದ್ರಮುನಿ ಶಿವಾಚಾರ್ಯರ ಕೃಪಾಶೀರ್ವಾದದಿಂದ ಶ್ರೀಮಠದ ಪೀಠಾಧಿಪತಿ ಗುರುಮಡಿವಾಳೇಶ್ವರ ಶಿವಾಚಾರ್ಯರ ಘನ ಅಧ್ಯಕ್ಷತೆಯಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಡಿ.೨೫ ರಂದು ಸೋಮವಾರ ರಾತ್ರಿ ವೇ.ಮೂ.ಮಲ್ಲಯ್ಯಮುತ್ಯಾ ಗದ್ದಿಗಿಮಠ ಅವರ ನೇತೃತ್ವದಲ್ಲಿ ಅಗ್ಗಿ ಉತ್ಸವ ನಡೆಯಲಿದೆ, ಡಿ.೨೬ ರಂದು ಮಂಗಳವಾರ ಸಂಜೆ ೪ ಘಂಟೆಗೆ ಗುರುಶಿಷ್ಯರ ಪರಂಪರೆಗೆ ಖ್ಯಾತಿಯಾದ ಶ್ರೀಗುರುವೀರಗಂಟೈ ಮಡಿವಾಳೇಶ್ವರರ ಜೋಡುತೇರಿನ ರಥೋತ್ಸವ ನಡೆಯಲಿದೆ, ಡಿ.೨೭ರಂದು ಬಿಂಜಲಭಾವಿ ರಸ್ತೆಗೆ ಹೊಂದಿಕೊಂಡಿರುವ ಮಲ್ಲಿಕಾರ್ಜುನ ಕೌದಿ ಅವರ ಹೊಲದಲ್ಲಿ ಗ್ರಾಮ ಪಂಚಾಯತ್ ಕಲಕೇರಿ ಹಾಗೂ ಎಪಿಎಂಸಿ ಇವರ ಸಹಯೋಗದಲ್ಲಿ ಬೃಹತ್ ಜಾನುವಾರು ಜಾತ್ರೆಗೆ ಚಾಲನೆ ನೀಡಲಾಗುವದು, ಡಿ.೨೮ ರಂದು ಗುರುವಾರ ಕಡುಬಿನ ಕಾಳಗ ನಡೆಯಲಿದ್ದು, ಡಿ.೩೦ ರಂದು ಶನಿವಾರ ಸಂಜೆ ಕಳಸ ಇಳಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಸಣ್ಣಶರಭಯ್ಯ ಗದ್ದಿಗಿಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

